For Quick Alerts
ALLOW NOTIFICATIONS  
For Daily Alerts

ಹೇಳಬಲ್ಲಿರೇ, ಮುಕ್ಕೋಟಿ ದೇವತೆಗಳ ಹೆಸರುಗಳನ್ನು!

|

ಭಾರತದಲ್ಲಿ ಎಲ್ಲಾ ಜಾತಿ, ಧರ್ಮದವರೂ ಕೂಡ ಅವರದೇ ಆದ ದೇವರನ್ನು ಪೂಜಿಸುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ದೇಶದ ಯಾವುದೇ ಮೂಲೆಗೆ ಹೋಗಿ, ನಿಮಗೆ ಒಂದಕ್ಕಿಂತ ಒಂದು ವಿಭಿನ್ನವಾದ ದೇವರ ಆಚರಣೆಗಳು ನೋಡಸಿಗುತ್ತವೆ. ಅದರಲ್ಲೂ ಹಿಂದುಗಳು ಪೂಜಿಸದ ದೇವರುಗಳಿಲ್ಲ, ಆಚರಿಸದ ಪದ್ಧತಿಗಳಿಲ್ಲ. ನಮ್ಮಲ್ಲಿ ಇರುವ ದೇವಾನು ದೇವತೆಗಳ ಇದುವರೆಗೂ ಯಾರಿಗೂ ಸಿಕ್ಕಿಲ್ಲ. ಹಾಗಾದರೆ ಅದೇಷ್ಟಪ್ಪಾ ದೇವರುಗಳಿದ್ದಾರೆ? ಎಂದು ಯೋಚಿಸುತ್ತಿದ್ದಿರಾ? ಬನ್ನಿ ಆ ಬಗ್ಗೆ ಒಂದಿಷ್ಟು ಚರ್ಚಿಸೋಣ.

ಹಿಂದುಗಳಲ್ಲಿ ಮುಕ್ಕೋಟಿ ದೇವರುಗಳು ಅಥವಾ 33 ಕೋಟಿ ದೇವತೆಗಳಿವೆ ಎಂಬ ಅಂಬೋಣವಿದೆ. ಈ ಎಲ್ಲಾ ದೇವತೆಗಳೂ ಕಾಮದೇನುವಿನಲ್ಲಿ ನೆಲೆಸಿರುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಕಾಮಧೇನುವನ್ನು ಅತ್ಯಂತ ಪಾವಿತ್ರ್ಯತೆಯಿಂದ ಪೂಜಿಸಲಾಗುತ್ತದೆ. ನಮಗೇನೆ ಕಷ್ಟ ಬಂದರೂ ಈ ಮುಕ್ಕೋಟಿ ದೇವತೆಗಳು ಕಾಪಾಡುತ್ತವೆ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಿದೆ.

33 ಕೋಟಿ ದೇವತೆಗಳಿರುವುದೇನೋ ಸರಿ ಹಾಗಾದರೆ ಈ ಎಲ್ಲಾ ದೇವತೆಗಳ ಹೆಸರುಗಳನ್ನು ಯಾರಾದರೂ ಹೇಳಬಲ್ಲರೇ? ಅಥವಾ ಯಾವುದಾದರೂ ಶಾಸ್ತ್ರ ಪುರಾಣಗಳಲ್ಲಿ ದಾಖಲಿಸಲಾಗಿದೆಯೇ? ಇಂಥ ದಾಖಲೆಗಳ್ಯಾವುದಾದರೂ ನಮಗೆ ಲಭ್ಯವಿದೆಯೇ? ಎಂಬಿತ್ಯಾಂದಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನಾವಿಲ್ಲಿ ಕೊಡುವ ಪ್ರಯತ್ನ ಮಾಡಿದ್ದೇವೆ.

33 ಕೋಟಿಗೆ ವಿವಿಧ ಅರ್ಥಗಳಿವೆ

33 ಕೋಟಿಗೆ ವಿವಿಧ ಅರ್ಥಗಳಿವೆ

33 ಕೋಟಿ ದೇವತೆಗಳು ಎಂಬಲ್ಲಿ 'ಕೋಟಿ' ಎಂದರೆ ಸಂಖ್ಯೆಯಲ್ಲ, ಇದಕ್ಕೆ ಸಂಸ್ಕೃತದಲ್ಲಿ 'ವರ್ಗ', 'ವಿಧ' ಎಂಬ ಅರ್ಥಗಳಿವೆ. ಅಂದರೆ 33 ಕೋಟಿ ದೇವತೆಗಳು ಎಂದರೆ 33 ವಿಧದ ದೇವತೆಗಳು ಎಂದರ್ಥ! ಅದರಂತೆ ಉಚ್ಚಕೋಟಿ, ಅಂದರೆ ಉಚ್ಚ ವರ್ಗ, ಸಪ್ತ ಕೋಟಿ ಬುದ್ಧರು ಅಂದರೆ ಏಳು ಪ್ರಧಾನ ಬುದ್ಧರು ಎಂಬ ಅರ್ಥಗಳಿವೆ. ಅಂದರೆ ಕೋಟಿ ಎಂದರೆ ಸಂಖ್ಯೆ ಮಾತ್ರವಲ್ಲ ಎಂಬುದು ಇಲ್ಲಿ ಸ್ಪಷ್ಟ.

33 ವಿಧದ ದೇವತೆಗಳು

33 ವಿಧದ ದೇವತೆಗಳು

33 ಕೋಟಿ ದೇವತೆಗಳೆಂದರೆ 33 ವಿಧದ ದೇವತೆಗಳು. ಪುರಾಣಗಳಲ್ಲಿ ಹಾಗೂ ಬೃಹದಾರಣ್ಯಕ ಉಪನಿಷತ್ತಿನಲ್ಲಿ, 33 ದೇವತೆಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಪೃಥ್ವಿ ಸ್ಥಾನದ 8 ವಸುಗಳು, ಮಧ್ಯಸ್ಥಾನದ 11 ರುದ್ರರು, ಸ್ವರ್ಗಸ್ಥಾನದ 12 ಆದಿತ್ಯರು ಜೊತೆಗೆ ಪ್ರಜಾಪತಿ ಬ್ರಹ್ಮ, (ಪ್ರಥಮ ಪುರುಷ ಇಂದ್ರ ಎಂದೂ ಹೇಳಲಾಗುತ್ತದೆ) ಮತ್ತು ಶ್ರೀ ಹರಿ ವಿಷ್ಣು ಈ 33 ದೇವತೆಗಳು. 12 ಆದಿತ್ಯರು, 11 ರುದ್ರರು, 8 ವಸುಗಳು, ಪ್ರಜಾಪತಿ ಬ್ರಹ್ಮ, ಶ್ರೀಹರಿ ವಿಷ್ಣು ಇವರುಗಳನ್ನು ಒಟ್ಟಾಗಿ 33 ದೇವಕುಟುಂಬಗಳು ಎಂದು ಹೇಳಲಾಗುತ್ತದೆ.

12 ಆದಿತ್ಯರು

ತ್ವಷ್ಟ, ಪೂಷ, ವಿವಸ್ವಾನ್, ಮಿತ್ರ, ಧಾತಾ, ವಿಷ್ಣು, ಭಗ, ವರುಣ, ಸವಿತೃ, ಶಕ್ರ, ಅಂಶ ಮತ್ತು ಅರ್ಯಮ

11 ರುದ್ರರು

ಮನ್ಯು, ಮನು, ಮಹಿನಸ, ಮಹಾನ್, ಶಿವ, ಋತಧ್ವಜ, ಉಗ್ರರೇತಾ, ಭವ, ಕಾಲ, ವಾಮದೇವ ಮತ್ತು ಧೃತವೃತ

8 ವಸುಗಳು

ದ್ರೋಣ, ಪ್ರಾಣ, ಧ್ರುವ, ಅಕ, ಅಗ್ನಿ, ದೋಷ, ವಸು ಮತ್ತು ವಿಭಾವಸು

ಪ್ರಜಾಪತಿ ಬ್ರಹ್ಮ ಮತ್ತು ವಿಷ್ಣು, ಇವರುಗಳನ್ನು ದೇವಕುಟುಂಬದವರು ಎಂದು ಕರೆಯಲಾಗುತ್ತದೆ.

ಇನ್ನು ಮುಕ್ಕೋಟಿ ದೇವತೆಗಳ ಹೆಸರುಗಳನ್ನು ಹೇಳುವುದು ಸುಲಭವಲ್ಲವೇ!

ಇನ್ನು ಮುಕ್ಕೋಟಿ ದೇವತೆಗಳ ಹೆಸರುಗಳನ್ನು ಹೇಳುವುದು ಸುಲಭವಲ್ಲವೇ!

ಆದರೆ ಈ ವಾದವನ್ನು ಎಲ್ಲರೂ ಸುಲಭವಾಗಿ ಒಪ್ಪುವುದಿಲ್ಲ, ಉದಾಹರಣೆಗೆ, ಹಿಂದೂ ಸಂತ-ವಿದ್ವಾಂಸರಾದ ಶ್ರೀಭಾಗವತಾನಂದ ಗುರು ಇದನ್ನು ಇನ್ನಷ್ಟು ವಿಂಗಡಿಸುತ್ತಾರೆ. ಆದಿತ್ಯ ಎಂಬುದು ಒಂದು ವಿಧವಾಗಿದ್ದರೆ, 12 ಆದಿತ್ಯರುಗಳನ್ನು ಪ್ರತ್ಯೇಕ ವರ್ಗ ಎಂದು ಪರಿಗಣಿಸಬೇಕಾಗುತ್ತದೆ. ನಾವು 'ಪ್ರಕಾರ' ಎಂದರೆ ಅದು ಕೇವಲ 3 ವರ್ಗದ ದೇವತೆಗಳಾಗುತ್ತವೆಯೇ ಹೊರತು 33 ವರ್ಗಗಳಾಗುವುದಿಲ್ಲ.

ದೇವತೆಗಳ ಸಂಖ್ಯೆ ಇಷ್ಟೇಯೇ?

ದೇವತೆಗಳ ಸಂಖ್ಯೆ ಇಷ್ಟೇಯೇ?

ಭಾರತದಲ್ಲಿ ಮಾತ್ರವಲ್ಲದೇ ಕೆಲವು ಹೊರದೇಶಗಳಲ್ಲಿಯೂ ಕೂಡ ಹಿಂದೂ ದೇವತೆಗಳನ್ನು ಪೂಜಿಸುತ್ತಾರೆ, ಹಾಗಾಗಿ ಅವರುಗಳು 22 ವರ್ಗಗಳನ್ನು ಒಪ್ಪುವುದಿಲ್ಲ. ಇನ್ನು ಉಪ ದೇವತೆಗಳಾದ, ಯಕ್ಷರು, ಅಪ್ಸರೆಯರು, ಸಪ್ತರ್ಷಿಗಳು, ನಾಗಗಳು, ಅಗ್ನಿ ವಾಯು ಮೊದಲಾದ ನೈಸರ್ಗಿಕ ದೇವತೆಗಳು ಹೀಗೆ ಇವರುಗಳ ಹೆಸರು 33 ವರ್ಗಗಳಲ್ಲಿ ಸೇರದೇ ಇರುವುದು ಪ್ರಶ್ನಾರ್ಹವಾಗಿದೆ.

ಶ್ರೀಭಾಗವತಾನಂದ ಗುರು ಈ ವಿಭಾಗಗಳ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ವಿವರಣೆ ನೀಡುತ್ತಾರೆ. ಭಗವತಿ ದುರ್ಗೆಯಲ್ಲಿ 5 ಮುಖ್ಯ ವರ್ಗಗಳಿವೆ ಮತ್ತು ಪ್ರತಿ ವಿಭಾಗದಲ್ಲಿ 64 ಯೋಗಿನಿಗಳು, 52 ಭೈರವರೂ ಇದ್ದಾರೆ. ಅಸಂಖ್ಯಾತ ಇತರ ಯೋಗಿನಿಗಳು, ಅಪ್ಸರಗಳು, ಯಕ್ಷಿಣಿಗಳನ್ನೂ ಹೇಳಲಾಗಿದೆ. 49 ರೀತಿಯ ಮಾರುತ್ಗಾನಗಳು ಮತ್ತು 56 ರೀತಿಯ ವಿಶ್ವದೇವಗಳಿವೆ. ಶಿವ ಅಂದರೆ ರುದ್ರ ಮತ್ತು ಹನುಮನು ಸೇರಿದಂತೆ ಅವನಲ್ಲಿ ಅನೇಕ ಅವತಾರಗಳಿವೆ. ಅವುಗಳನ್ನು ಯಾವ ವಿಭಾಗಗಳಲ್ಲಿ ಸೇರಿಸಲಾಗಿದೆ ಎಂದು ಪ್ರಶ್ನಿಸುತ್ತಾರೆ ಗುರುಜಿ.

ಇತರೆ ಕತೆಗಳು

ಇತರೆ ಕತೆಗಳು

33 ಕೋಟಿ ದೇವತೆಗಳ ಬಗ್ಗೆ ಇನ್ನಷ್ಟು ಚರ್ಚಿಸುವುದಾದರೆ, ಇನ್ನೂ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹಿಂದೂ ಪುರಾಣಗಳಲ್ಲಿ ಸತಿ ಅಂದರೆ ಪಾರ್ವತಿ ಮತ್ತು ಅವಳೇ ದುರ್ಗಾ ಕೂಡ. ಒಂಬತ್ತು ದುರ್ಗೆಯಂದಿರು ಮತ್ತು ಹತ್ತು ಮಹಾವೈದ್ಯಗಳಿವೆ. ವಿಷ್ಣುವು 24 ಅವತಾರಗಳನ್ನು ಹೊಂದಿದ್ದಾನೆ. ಶೇಷಾ ನಾಗಾ ಅವರದೇ ಆದ ಅನೇಕ ಅವತಾರಗಳನ್ನು ಹೊಂದಿವೆ. ಬ್ರಹ್ಮನನ್ನು ಪ್ರಜಾಪತಿ ಎಂದೂ ಕರೆಯುತ್ತಾರೆ. ಅವನ ಅನೇಕ ಮಾನಸ ಪುತ್ರರಲ್ಲಿ ಒಬ್ಬರು ಕಶ್ಯಪ. ಅವರ ಅನೇಕ ಹೆಂಡತಿಯರಿಂದ ಕಶ್ಯಪನಿಗೆ ಅನೇಕ ಸಂತತಿಗಳು ಇದ್ದವು. ಮೇಲೆ ತಿಳಿಸಿದ ಎಲ್ಲ 12 ಆದಿತ್ಯ, 8 ವಾಸು, 11 ರುದ್ರರು ಕಶ್ಯಪನ ಸಂತತಿಯವರು ಎಂದು ಹೇಳಲಾಗುತ್ತದೆ.

ಇನ್ನು ಗ್ರಾಮ ದೇವತೆಗಳು, ಕುಲದೇವತೆಗಳು ಕ್ಷೇತ್ರಪಾಲರನ್ನೆಲ್ಲಾ ಯಾವ ವರ್ಗದಲ್ಲಿ ಸೇರಿಸಲಾಗಿದೆ ಎಂದೂ ಗಂಭೀರವಾಗಿ ವಾದ ಮಾಡಲಾಗುತ್ತದೆ.

ಒಟ್ಟಿನಲ್ಲಿ ದೇವತೆಗಳ ಬಗ್ಗೆ ತಿಳಿದವರು ಅವರದೇ ದೃಷ್ಟಿಕೋನದಲ್ಲಿ ವರ್ಗೀಕರಿಸುತ್ತಾರೆ. ಆಸ್ತಿಕರಿಗೆ ಪೂಜಾರ್ಹ ದೇವತೆಗಳಿದ್ದರೆ ನಾಸ್ತಿಕರದ್ದು ದೇವರೇ ಇಲ್ಲವೆಂಬ ವಾದ. ಅದೇನೇ ಇರಲಿ ನಾವು ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುವ ನಮಗೆ ಒಳಿತನ್ನು ಮಾಡುವ ದೇವರನ್ನೇ ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ. ದೇವತೆಗಳ ಸಂಖ್ಯೆ, ವರ್ಗಗಳು ಎಷ್ಟೇ ಇರಲಿ ನಮ್ಮೆಲ್ಲರ ನಿಶ್ಕಲ್ಮಷ ಭಕ್ತಿಗೆ ಒಲಿದು, ಒಳಿತಾಗಿಸಿದರೆ ಅಷ್ಟೇ ಸಾಕು, ಅಲ್ಲವೇ?!

English summary

What You Should Know More About 33 Crore Hindu Gods

Here we are discussing about what you should know more about 33 crore gods. How many gods are there in Hindu?, Did all the 33 crores Gods ever exist? What are the names of the 33 crore gods as per written in shastra?. Read more.
X