For Quick Alerts
ALLOW NOTIFICATIONS  
For Daily Alerts

ಪತಿಯ ಆಯುಷ್ಯಕ್ಕಾಗಿ ವಟ ಸಾವಿತ್ರಿ ವ್ರತ, ಆಚರಣೆ ಹೇಗೆ?

|

ಪತಿಯ ದೀರ್ಘಾಯುಷ್ಯಕ್ಕಾಗಿ ಆಚರಿಸಲ್ಪಡುವ ಆಚರಣೆಯೇವಟ ಸಾವಿತ್ರಿ . ಈ ವರ್ಷ ಇದನ್ನು ಕರ್ನಾಟಕದಲ್ಲಿ ಜೂನ್‌ 5ರಂದು ಆಚರಿಸಲಾಗುವುದು. ಹಿಂದೂ ಪುರಾಣದಲ್ಲಿ ಸತ್ಯವಾನ್‌ ಸಾವಿತ್ರಿ ಕತೆಯಿದೆ. ಅದರಲ್ಲಿ ಸಾವಿತ್ರಿಯ ಪತಿ ಸತ್ಯವಾನ್‌ನನ್ನು ಯಮನ ಪಾಶದಿಂದ ರಕ್ಷಿಸಲು ಸಾವಿತ್ರ ವ್ರತ ಮಾಡುತ್ತಾಳೆ. ಆಕೆಯ ವ್ರತದ ಫಲವಾಹಿ ಸತ್ಯವಾನ್ ಸಾವಿತ್ರಿ ಬದುಕುಳಿತ್ತಾನೆ.

Vat Savitri Vrat 2020: Date, Muhurat, History, Significance

ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದೂ ಆತನನ್ನೇ ವರಿಸಿ, ನಂತರ ತನ್ನ ಸಚ್ಚಾರಿತ್ರ್ಯ, ಚತುರ ಮಾತುಗಳಿಂದ ಯಮನನ್ನೇ ಗೆದ್ದು ಪತಿಯನ್ನು ಉಳಿಸಿಕೊಂಡ ಮಹಾನ್ ಸ್ತ್ರೀ ಸಾವಿತ್ರಿ. ವ್ರತದ ಮೂಲಕ ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಈ ದಿನವನ್ನು ವಟ ಸಾವಿತ್ರಿ ವ್ರತವನ್ನಾಗಿ ಆಚರಿಸಲಾಗುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷ ಜ್ಯೇಷ್ಠ ಮಾಸದ ಶುದ್ಧ ಹುಣ್ಣಿಮೆಯಂದು ಈ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಆಚರಣೆಗೆ ಹೇಗೆ, ಈ ವ್ರತದ ಫಲವೇನು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಎಲ್ಲೆಲ್ಲಿ ಆಚರಿಸಲಾಗುವುದು?

ಎಲ್ಲೆಲ್ಲಿ ಆಚರಿಸಲಾಗುವುದು?

ಇದನ್ನು ಕರ್ನಾಟಕ ಹಾಗೂ ಉತ್ತರ ಭಾರತದಲ್ಲಿ ಆಚರಿಸುತ್ತಾರೆ. ಕೆಲವರು ವಟ ಸಾವಿತ್ರಿ ವ್ರತಕ್ಕೆ ಮೂರು ದಿನವಿರುವಾಗಲೇ ಮಡಿಯಿಂದ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಆ ದಿನ ಉಪವಾಸ ಮಾಡಿ, ಹುಣ್ಣಿಮೆ ಮುಗಿದು ಪಾಡ್ಯ ಶುರುವಾದ ಮೇಲೆಯೇ ಆಹಾರ ಸೇವಿಸುತ್ತಾರೆ.

ವಟ ಸಾವಿತ್ರಿ ವ್ರತ ಆಚರಣೆ ಹೇಗೆ?

ವಟ ಸಾವಿತ್ರಿ ವ್ರತ ಆಚರಣೆ ಹೇಗೆ?

ವ್ರತದ ದಿನ ಬೆಳಿಗ್ಗೆ ನಸುಕಿನಲ್ಲೇ ಎದ್ದು ತಲೆಸ್ನಾನ ಮಾಡಿ, ಮಡಿಬಟ್ಟೆ ಧರಿಸಿ ವ್ರತ ಮಾಡಬೇಕು. ಈ ವ್ರತ ಆಚರಣೆ ಮಾಡುವವರು ಮಣೆಯ ಮೇಲೆ ಅಥವಾ ಮನೆಯ ಗೋಡೆಯ ಮೇಲೆ ಯಮ, ಸಾವಿತ್ರಿ, ಸತ್ಯವಾನ, ಆಲದ ಮರಗಳನ್ನು ಗಂಧದಲ್ಲಿ ಬರೆಯುತ್ತಾರೆ. ನಂತರ ನೆಲದ ಮೇಲೆ ಅಕ್ಕಿಯನ್ನು ಹರವುತ್ತಾರೆ. ಸಾವಿತ್ರಿ ಮತ್ತು ಸತ್ಯವಾನನ ಬೊಂಬೆ ಅಥವಾ ಮೂರ್ತಿಯನ್ನು ಬಟ್ಟಲಿನಲ್ಲಿಟ್ಟು ಪೂಜಿಸುತ್ತಾರೆ. ಈ ಪೂಜೆಗೆ ಗಂಧದ ಬಟ್ಟಲಾದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಟ್ಟಲಿನಲ್ಲಿ ಆಲದ ಮರದ ಎಲೆಗಳನ್ನು ಇಟ್ಟು ಮಂತ್ರ ಹೇಳುತ್ತಾ ಪೂಜಿಸುತ್ತಾರೆ.

ಆಲದ ಮರಕ್ಕೆ ಪೂಜೆ

ಆಲದ ಮರಕ್ಕೆ ಪೂಜೆ

ಮನೆಯ ಒಳಗಡೆ ಪೂಜೆ ಮಾಡಿದ ಬಳಿಕ ಹೊರಗಿರುವ ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರದ ಸುತ್ತ ದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುತ್ತಾರೆ. ಹಿರಿಯ ಮಹಿಳೆಯರು ಕಿರಿಯ ಮಹಿಳೆಯರಿಗೆ, 'ನೀನೂ ಸಾವಿತ್ರಿಯಂತಾಗು' ಎಂದು ಹಾರೈಸುತ್ತಾರೆ. ಈ ವ್ರತವನ್ನು ಪ್ರತಿವರ್ಷ ಶ್ರದ್ಧೆ ಭಕ್ತಿಯಿಂದ ಮಾಡಿದರೆ ಪತಿಯ ಆರೋಗ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ಆಲದ ಮರಕ್ಕೆ ಏಕೆ ಈ ವ್ರತದಲ್ಲಿ ವಿಶೇಷ ಸ್ಥಾನ?

ಆಲದ ಮರಕ್ಕೆ ಏಕೆ ಈ ವ್ರತದಲ್ಲಿ ವಿಶೇಷ ಸ್ಥಾನ?

ವಟ ಸಾವಿತ್ರಿ ವ್ರತ ಇದರಲ್ಲಿಯೇ ಆಲದ ಮರದ ಮಹತ್ವ ಅಡಗಿದೆ. ವಟ ವೃಕ್ಷ ಎಂದರೆ ಆಲದ ಮರ. ಯಮ ಸತ್ಯವಾನ್‌ ಪ್ರಾಣ ತೆಗೆಯಲು ಬಂದಾಗ ಸಾವಿತ್ರಿ ಸತ್ಯವಾನ್‌ನ ದೇಹವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಆಲದ ಮರದ ಕೆಳಗಡೆ ಕೂತಿದ್ದಳು. ಈ ಮರದ ಅಡಿಯಲ್ಲಿಯೇ ಯಮನ ಬಳಿ ತನ್ನ ಪ್ರಾಣವನ್ನು ಹಿಂತಿರುಗಿಸಿ ಕೊಡುವಂತೆ ಬೇಡುತ್ತಾಳೆ. ಆಕೆಯ ಚತುರ ಮಾತುಗಳಿಗೆ ಸೋತ ಯಮ ಸತ್ಯವಾನನಿಗೆ ದೀರ್ಘಾಯುಷ್ಯ ನೀಡಿ, ದಂಪತಿಯನ್ನು ಹರಿಸುತ್ತಾನೆ.

English summary

Vat Savitri Vrat 2020: Date, Muhurat, History, Significance

Vat Savitri vrat celebrated on June 5th, 2020. Married woman do this vrat for long life of husband, here are how to celebrate vat savitri vrat.
Story first published: Thursday, May 21, 2020, 15:47 [IST]
X
Desktop Bottom Promotion