For Quick Alerts
ALLOW NOTIFICATIONS  
For Daily Alerts

ವರುಥಿನಿ ಏಕಾದಶಿ 2020: ಶುಭ ಮುಹೂರ್ತ, ಉಪವಾಸ ಮತ್ತು ಪೂಜಾ ವಿಧಾನ

|

ವರುಥಿನಿ ಏಕಾದಶಿಯು ಧಾರ್ಮಿಕವಾಗಿ ಬಹಳ ಮಹತ್ವ ಪಡೆದಿರುವ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ ವರುಥಿನಿ ಏಕಾದಶಿಯು ವೈಶಾಖ ಮಾಸದಲ್ಲಿ ಬರುತ್ತದೆ. ಇದೀಗ ವೈಶಾಖ ಮಾಸವು ಚಾಲ್ತಿಯಲ್ಲಿದೆ.

ವೈಶಾಖ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ವರುಥಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ವ್ರತ ಅಥವಾ ಪುಣ್ಯದ ಕೆಲಸ ಮಾಡುವುದರಿಂದಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಅಚಲವಾಗಿದೆ.

ವಿಶೇಷ ರೂಪದಲ್ಲಿ ಏಕಾದಶಿ ತಿಥಿಯಂದು ವಿಷ್ಣು ಪರಮಾತ್ಮನನ್ನು ಆರಾಧನೆ ಮಾಡಲಾಗುತ್ತದೆ. ವರುಥಿನಿ ಶಬ್ದವು ಸಂಸ್ಕೃತದ ವರುಥಿನ್ ಶಬ್ದದಿಂದ ಬಂದಿದೆ. ಇದರರ್ಥ ಕವಚ ಎಂದಾಗಿದೆ. ಇಲ್ಲಿ ಕವಚವು ಕಷ್ಟಕಾರ್ಪಣ್ಯಕ್ಕಾಗಿರುತ್ತದೆ. ನಂಬಿಕೆಯ ಪ್ರಕಾರ ಈ ವ್ರತವನ್ನು ಆಚರಿಸುವುದರಿಂದಾಗಿ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತರಾಗುವುದಕ್ಕೆ ಸಾಧ್ಯವಿದೆ ಎನ್ನಲಾಗುತ್ತದೆ.

ಯಾವಾಗ ವರುಥಿನಿ ಏಕಾದಶಿ ?

ಯಾವಾಗ ವರುಥಿನಿ ಏಕಾದಶಿ ?

ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿ ಅಂದರೆ ಏಪ್ರಿಲ್ 18ನೇ ತಾರೀಕಿನಿಂದು ಈ ವರ್ಷ ಬರುತ್ತದೆ. ಹಾಗಾಗಿ ವರುಥಿನಿ ಏಕಾದಶಿ ವ್ರತವನ್ನು ಏಪ್ರಿಲ್ 18 ನೇ ತಾರೀಕಿನಂದು ಆಚರಿಸಬೇಕು.

ವರುಥಿನಿ ಏಕಾದಶಿಯ ವ್ರತದ ಮುಹೂರ್ತ

ವರುಥಿನಿ ಏಕಾದಶಿಯ ವ್ರತದ ಮುಹೂರ್ತ

ಏಕಾದಶಿ ತಿಥಿ ಪ್ರಾರಂಭ: ಏಪ್ರಿಲ್ 17 ನೇ ತಾರೀಕು ರಾತ್ರಿ 08:07 ಘಂಟೆಯಿಂದ ಪ್ರಾರಂಭವಾಗುತ್ತದೆ.

ಏಕಾದಶಿ ತಿಥಿ ಮುಕ್ತಾಯವಾಗುವ ಸಮಯ: ಏಪ್ರಿಲ್ 18 ರಂದು ರಾತ್ರಿ 10:19 ಘಂಟೆಗೆ ಮುಕ್ತಾಯ

ವರುಥಿನಿ ಏಕಾದಶಿ ಪರಾನ ಮುಹೂರ್ತ: ಏಪ್ರಿಲ್ 19 ರಂದು ಬೆಳಿಗ್ಗೆ 05:51 ಯಿಂದ 08:26 ರ ತನಕ

ಅವಧಿ: 2 ಘಂಟೆ 35 ನಿಮಿಷ

ವರುಥಿನಿ ಏಕಾದಶಿಯ ವ್ರತದ ವಿಧಿವಿಧಾನ

ವರುಥಿನಿ ಏಕಾದಶಿಯ ವ್ರತದ ವಿಧಿವಿಧಾನ

ದಶಿಮಿ ತಿಥಿಯ ರಾತ್ರಿ ಸಾತ್ವಿಕ ಆಹಾರವನ್ನು ಸೇವಿಸಿ.

ಏಕಾದಶಿ ತಿಥಿಯ ಬೆಳಿಗ್ಗೆ ಸೂರ್ಯೋದಯವಾಗುವುದಕ್ಕೂ ಮುನ್ನವೇ ಎದ್ದೇಳಿ.

ಶೌಚ ಮತ್ತು ನಿತ್ಯಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ.

ಇದಾದ ನಂತರ ಏಕಾದಶಿ ವ್ರತದ ಸಂಕಲ್ಪ ಮಾಡಿಕೊಳ್ಳಿ. ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪೂಜೆ ಮತ್ತು ಅರ್ಚನೆಗಳನ್ನು ಕೈಗೊಳ್ಳಿ.

ಇಡೀ ದಿನ ಸಮಯವಾದಾಗಲೆಲ್ಲಾ ವಿಷ್ಣು ದೇವನ ಸ್ಮರಣೆಯನ್ನು ಮಾಡುತ್ತಿರಬೇಕು.

ರಾತ್ರಿಯ ವೇಳೆ ಪೂಜಾ ಸ್ಥಳದ ಬಳಿ ಕುಳಿತು ಜಾಗರಣೆ ಕೈಗೊಳ್ಳಿ.

ಏಕಾದಶಿಯ ಮರುದಿನ ದ್ವಾದಶಿ ಉಪವಾಸವನ್ನು ಪ್ರಾರಂಭಿಸಿ. ಪರಾನ ಮುಹೂರ್ತದಲ್ಲಿ ಈ ಉಪವಾಸವನ್ನು ತೆರೆಯಿರಿ.

ಬ್ರಾಹ್ಮಣರಿಗೆ ಆಹಾರವನ್ನು ಅರ್ಪಿಸಿ ಮತ್ತು ಅವರಿಗೆ ದಾನ-ದಕ್ಷಿಣೆಯನ್ನು ನೀಡಿ.

ವರುಥಿನಿ ಏಕಾದಶಿಯ ಮಹತ್ವ

ವರುಥಿನಿ ಏಕಾದಶಿಯ ಮಹತ್ವ

ಶಾಸ್ತ್ರದಲ್ಲಿ ವರುಥಿನಿ ಏಕಾದಶಿಯನ್ನು ಸೌಭಾಗ್ಯ ಮತ್ತು ಪುಣ್ಯ ಪ್ರಾಪ್ತಿ ಮಾಡುವ ಏಕಾದಶಿ ದಿನ ಎಂದು ಕರೆಯಲಾಗಿದೆ. । ಈ ದಿನ ವ್ರತ ಆಚರಣೆ ಮಾಡುವವರ ಸಾವಿರ ಪಾಪವು ನಾಶವಾಗುತ್ತದೆ ಮತ್ತು ಕಷ್ಟದಿಂದ ಅವರು ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ. ವರುಥಿನಿ ಏಕಾದಶಿ ವ್ರತ ಮಾಡುವುದರಿಂದಾಗಿ ಪುಣ್ಯ ಸಿಗುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ ಒಬ್ಬ ವ್ಯಕ್ತಿಯು ವರುಥಿನಿ ಏಕಾದಶಿಯನ್ನು ಆಚರಣೆ ಮಾಡಿದರೆ ಮತ್ತು ಅವನು ಬ್ರಾಹ್ಮಣರಿಗೆ ದೇಣಿಗೆ ನೀಡಿದರೆ ಅವನು ಲಕ್ಷಾಂತರ ವರ್ಷದಿಂದ ಧ್ಯಾನ ಮಾಡಿದ ಫಲವನ್ನು ಮತ್ತು ಕನ್ಯಾ ದಾನದಿಂದ ಬರುವ ಸದ್ಗುಣವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

ವರುಥಿನಿ ಏಕಾದಶಿ ದಿನದ ಮುನ್ನೆಚ್ಚರಿಕೆಗಳು

ವರುಥಿನಿ ಏಕಾದಶಿ ದಿನದ ಮುನ್ನೆಚ್ಚರಿಕೆಗಳು

ವರುಥಿನಿ ಏಕಾದಶಿ ದಿನದಂದು ಉಪವಾಸ ಆಚರಿಸುವ ವ್ಯಕ್ತಿಯು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ದಿನ ವ್ರತಾಚರಣೆ ಮಾಡುವವರು ಸತ್ಯವನ್ನೇ ನುಡಿಯಬೇಕು. ಈ ದಿನದಂದು ಕೋಪಗೊಳ್ಳಬಾರದು ಮತ್ತು ದೈಹಿಕ ಸಂಬಂಧವನ್ನು ಹೊಂದಬಾರದು. ಈ ಸಮಯದಲ್ಲಿ ಉಪವಾಸ ಕೈಗೊಳ್ಳದೇ ಇರುವವರು ಅಕ್ಕಿ ಅಥವಾ ಅನ್ನದ ಸೇವನೆ ಮಾಡಬಾರದು ಎಂಬ ಪ್ರತೀತಿ ಇದೆ.

English summary

Varuthini Ekadashi 2020: Pooja Time, Fasting And Pooja Vidhi

Here we are discussing about Varuthini Ekadashi 2020: Pooja Time, Fasting And Pooja Vidhi. Varuthini Ekadashi is observed during the Krishna Paksha of Vaishakha month. The best part of this Ekadashi is that both North India and South India follow the same date for this Ekadashi, unlike other Ekadashis. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X