For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜಾ 2019 ದಿನಾಂಕ, ಮುಹೂರ್ತ ಮತ್ತು ಆಚರಣೆ

ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಶುಭ ಮುಹೂರ್ತ ಯಾವಾಗೆಲ್ಲಾ ಇದೆ ಅನ್ನೋದನ್ನು ತಿಳಿಯಲು ಇದನ್ನು ಓದಿ.

|

ಸಂಪತ್ತು ಮತ್ತು ಸಮೃದ್ಧಿಯ ಸ್ವರೂಪ ವರಮಹಾಲಕ್ಷ್ಮಿ ದೇವಿಯನ್ನು ಪ್ರಮುಖವಾಗಿ ಮಹಾಲಕ್ಷ್ಮಿ ವ್ರತದಂದು ಪೂಜಿಸಿ ಧನ್ಯತೆ ಪಡೆಯುತ್ತಾರೆ. ಅದೃಷ್ಟ ಲಕ್ಷ್ಮಿಯಾಗಿ ಪೂಜಿಸಲ್ಪಡುವ ವಿಷ್ಣುವಿನ ಪತ್ನಿ ಲಕ್ಷ್ಮಿ ಕ್ಷೀರ ಸಾಗರದಿಂದ ಅವತರಿಸಿದ್ದಾಳೆ ಎನ್ನಲಾಗುತ್ತದೆ, ಅಲ್ಲದೇ, ಹಾಲ್ನೊರೆಯಂಥ ಮೈಬಣ್ಣವುಳ್ಳ ಲಕ್ಷ್ಮಿ ಶ್ವೇತವಸ್ತ್ರಧಾರಿಯಾಗಿದ್ದಾಳೆ.

ಲಕ್ಷ್ಮೀ ಆರಾಧನೆಗೆ ಶುಭ ಮುಹೂರ್ತ

ಲಕ್ಷ್ಮೀ ಆರಾಧನೆಗೆ ಶುಭ ಮುಹೂರ್ತ

ಈ ವರ್ಷದ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್ ಎರಡನೇ ಶುಕ್ರವಾರ 9 ರಂದು, ಅಂದರೆ ಪವಿತ್ರ ಶ್ರಾವಣಮಾಸ ಶುಕ್ಲ ಪಕ್ಷದ ನವಮಿ 2076 ಪರಿಧವಿ ವಿಕ್ರಮ ಸಂವಾತದಂದು ಆಚರಿಸಲಾಗುತ್ತಿದೆ. ಹಿಂದೂ ಪಂಚಾಗದ ಪ್ರಕಾರ ವರಮಹಾಲಕ್ಷ್ಮಿ ವ್ರತದ ಪೂಜೆಯನ್ನು ಈ ಶುಭ ಮೂಹೂರ್ತಗಳಲ್ಲಿ ಮಾಡಿದರೆ ಅಷ್ಟೈಶ್ವರ್ಯಗಳು ನಮ್ಮದಾಗುತ್ತದೆ.

ಈ 4 ಶುಭ ಮುಹೂರ್ತಗಳಲ್ಲಿ ಪೂಜೆ ಮಾಡಿದರೆ ಫಲದಾಯಕ

ಈ 4 ಶುಭ ಮುಹೂರ್ತಗಳಲ್ಲಿ ಪೂಜೆ ಮಾಡಿದರೆ ಫಲದಾಯಕ

ಸಿಂಹ ಲಗ್ನ: ಸಿಂಹ ಲಗ್ನದಲ್ಲಿ ಬೆಳಿಗ್ಗೆ 6.43ರಿಂದ 8 ಗಂಟೆ 46 ನಿಮಿಷದವರೆಗೂ ವರಲಕ್ಷ್ಮಿ ಪೂಜಾ ಮುಹೂರ್ತವಿದೆ. ಒಟ್ಟು 2 ಗಂಟೆ ಮೂರು ನಿಮಿ‌ಷದ ಶುಭಗಳಿಗೆಯಲ್ಲಿ ಪೂಜೆಯನ್ನು ನೆರೆವೇರಿಸಬಹುದಾಗಿದೆ.

ವೃಶ್ಚಿಕ ಲಗ್ನ: ವೃಶ್ಚಿಕ ಲಗ್ನದಲ್ಲಿ ಕಮಲಜೆ ಮಹಾಲಕ್ಷ್ಮಿ ಪೂಜಾ ಮುಹೂರ್ತ ಮಧ್ಯಾಹ್ನ 12:54 ರಿಂದ 3 ಗಂಟೆ 06 ನಿಮಿಷದವರೆಗೂ ಇದೆ. ಒಟ್ಟು 2 ಗಂಟೆ 12 ನಿಮಿ‌ಷದವರೆಗೂ ಪೂಜಾ ಕೈಂಕರ್ಯ ಮಾಡಬಹುದು.

ಕುಂಭ ಲಗ್ನ: ಕುಂಭ ಲಗ್ನದಲ್ಲಿ ಹರಿಪ್ರಿಯೆ ಲಕುಮಿಯನ್ನು ಆರಾಧಿಸಲು ಸಂಜೆ 7:06 ರಿಂದ 8 ಗಂಟೆ 48 ನಿಮಿಷದವರೆಗೂ ಮೂಹೂರ್ತವಿದೆ. ಒಟ್ಟು 1 ಗಂಟೆ 42 ನಿಮಿ‌ಷದವರೆಗೂ ಪೂಜಾ ವಿಧಿ ವಿಧಾನಗಳನ್ನು ಸಾಂಗವಾಗಿ ನೆರೆವೇರಿಸಬಹುದು.

ವೃಷಭ ಲಗ್ನ: ವೃಷಭ ಲಗ್ನದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸಲು ತಡರಾತ್ರಿ 12:16ರಿಂದ 2 ಗಂಟೆ 18ನಿಮಿಷದವರೆಗೂ ಒಳ್ಳೆಯ ಮುಹೂರ್ತವಿದೆ. ತಡರಾತ್ರಿಯಲ್ಲೂ 2 ಗಂಟೆ 2 ನಿಮಿ‌ಷದಲ್ಲಿ ಪೂಜೆಯನ್ನು ಮಾಡಬಹುದಾಗಿದೆ.

ಸೂರ್ಯೋದಯ-ಸೂರ್ಯಾಸ್ತ:ವರಮಹಾಲಕ್ಷ್ಮಿ ವ್ರತದಂದು ಸೂರ್ಯೋದಯ ಬೆಳಿಗ್ಗೆ 6.10ಕ್ಕೆ ಮತ್ತು ಸೂರ್ಯಾಸ್ತ ಸಂಜೆ 6.40ಕ್ಕೆ ಆಗಲಿದೆ.

ನಿಶ್ಚಿತ ಲಗ್ನದಲ್ಲಿ ಪೂಜಿಸಿದರೆ ಉತ್ತಮ

ನಿಶ್ಚಿತ ಲಗ್ನದಲ್ಲಿ ಪೂಜಿಸಿದರೆ ಉತ್ತಮ

ಹಿಂದೂ ಪಂಚಾಂಗದ ಪ್ರಕಾರ ವರಮಹಾಲಕ್ಷ್ಮಿಯನ್ನು ನಿಶ್ಚಿತ ಲಗ್ನ ಪೂಜಿಸಬೇಕು. ಹೀಗೆ ನಿಶ್ಚಿತ ಲಗ್ನದಲ್ಲಿ ಪೂಜಿಸಿದರೆ ಬೇಡಿಕೆ, ಸಂಪತ್ತು ದೀರ್ಘಕಾಲ ನಮ್ಮದಾಗುತ್ತದೆ. ನಾಲ್ಕು ಲಗ್ನಗಳಲ್ಲಿ ಲಕ್ಷ್ಮಿಯನ್ನು ಪೂಜಿಸಬಹುದೆಂದು ನಿಶ್ಚಯಿಸಲಾಗುತ್ತದೆ. ಇವುಗಳಲ್ಲಿ ನಮಗೆ ಅನುಕೂಲಕರ ಸಮಯದಲ್ಲಿ ಲಕ್ಷ್ಮಿಯನ್ನು ಆರಾಧಿಸಬಹುದು. ಅದರಲ್ಲೂ ಸಂಜೆಯ ಪ್ರದೋಷ ಸಮಯ ಲಕ್ಷ್ಮಿಯನ್ನು ಪೂಜಿಸಲು ಬಹಳ ಸೂಕ್ತ ಸಮಯ ಎನ್ನಲಾಗುತ್ತದೆ.

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ವರಮಹಾಲಕ್ಷ್ಮಿ?

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ವರಮಹಾಲಕ್ಷ್ಮಿ?

ಶ್ರಾವಣ ಶುಕ್ಲ ಪಕ್ಷದ ಶುಕ್ರವಾರ ಮತ್ತು ರಕ್ಷಾಬಂಧನ ಅಥವಾ ಶ್ರಾವಣ ಪೂರ್ಣಿಮೆಗೂ ಮುನ್ನ ವರಮಹಾಲಕ್ಷ್ಮಿ ಪೂಜೆಗೆ ಉಪವಾಸವನ್ನು ಆಚರಿಸಲಾಗುತ್ತದೆ.

ವರಮಹಾಲಕ್ಷ್ಮಿ ಭಕ್ತರ ಬೇಡಿಕೆ, ಹಾರೈಕೆಗಳನ್ನು ಈಡೇರಿಸುತ್ತಾಳೆ, ಕೇಳಿದ ವರವನ್ನು ಕರುಣಿಸುತ್ತಾಳೆ. ವರ+ಮಹಾಲಕ್ಷ್ಮಿ ಎಂದರೆ ವರವನ್ನು ನೀಡುವ ಲಕ್ಷ್ಮಿ ಎಂದು.

ವರಮಹಾಲಕ್ಷ್ಮಿ ವ್ರತ ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರೂ ಸಹ ಆಚರಿಸುತ್ತಾರೆ. ಆದರೆ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವರಮಹಾಲಕ್ಷ್ಮಿ ವ್ರತವನ್ನು ವಿವಾಹಿತ ಮಹಿಳೆಯರು ಮಾತ್ರ ಮಾಡುತ್ತಾರೆ. ಈ ವ್ರತವನ್ನು ಆಚರಿಸುವ ಉದ್ದೇಶ ಐಹಿಕ ಸಂತೋಷದ ಜತೆಗೆ ಮಕ್ಕಳು, ಸಂಗಾತಿ, ಸಂಪತ್ತು ಮತ್ತು ಎಲ್ಲಾ ಬಗೆಯ ಆನಂದ, ನೆಮ್ಮದಿ ನಮ್ಮದಾಗಲಿ ಎಂದು ಲಕ್ಷ್ಮಿಯನ್ನು ಆರಾಧಿಸುತ್ತಾರೆ.

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವರಮಹಾಲಕ್ಷ್ಮಿ ವ್ರತದ ಉಪವಾಸ ಮತ್ತು ಪೂಜಾ ವಿಧಿ-ವಿಧಾನ ಸಾಕಷ್ಟು ಮನ್ನಣೆ ಪಡೆದಿದೆ. ಈ ಎಲ್ಲಾ ರಾಜ್ಯಗಳಲ್ಲೂ ವಿವಾಹಿತ ಮಹಿಳೆಯರು ಪತಿ ಮತ್ತು ತನ್ನ ಕುಟುಂಬಸ್ಥರ ಶ್ರೇಯೋಭಿವೃದ್ಧಿಗಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

ಈ ಪವಿತ್ರ ದಿನದಂದು ವರಲಕ್ಷ್ಮಿಯನ್ನು ಪೂಜಿಸಿದರೆ ಅಷ್ಟಲಕ್ಷ್ಮಿಯರಾದ ಧನ ಲಕ್ಷ್ಮಿ, ಭೂ ಲಕ್ಷ್ಮಿ, ಸರಸ್ಪ್ವತಿ, ಪ್ರೀತಿ ಲಕ್ಷ್ಮಿ, ಕೀರ್ತಿ ಲಕ್ಷ್ಮಿ, ಶಾಂತಿ ಲಕ್ಷ್ಮಿ, ತುಷ್ಟಿ ಲಕ್ಷ್ಮಿ ಹಾಗೂ ಪುಷ್ತಿ ಲಕ್ಷ್ಮಿಯರನ್ನು ಪೂಜಿಸಿದಷ್ಟು ಫಲ ಸಿಗುತ್ತದೆ ಎಂದು ನಂಬಲಾಗಿದೆ.

ದಕ್ಷಿಣ ಭಾರತದಲ್ಲಿ ವರಮಹಾಲಕ್ಷ್ಮಿ ವ್ರತಕ್ಕೆ ಇರುವ ಪ್ಪ್ರಾಮುಖ್ಯತೆ ಉತ್ತರ ಭಾರತದಲ್ಲಿಲ್ಲ. ಲಕ್ಷ್ಮಿಯ ಕಟಾಕ್ಷ ನಮ್ಮದಾಗಬೇಕೆಂದರೆ ಈ ಪವಿತ್ರ ದಿನದಂದು ಪೂಜಿಸುವುದು ಫಲದಾಯಕ.

English summary

Varamahalakshmi Vrata 2019 Puja Date,Time and Significance

Given below are the Varalakshmi Puja Muhuratam, which is the the most appropriate time to worship Goddess Lakshmi. It is believed that if Lakshmi Puja is done during fixed Lagna would bestow long-lasting prosperity.Hence we have given four Puja timing in a day when fixed Lagna prevails. Any suitable time can be chosen for Varalakshmi Puja. However, evening time which overlaps with Pradosh is considered the most appropriate to worship Goddess Lakshmi.
X
Desktop Bottom Promotion