For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಪೂಜೆ 2020: ಪೂಜೆಗೆ ಶುಭ ಮುಹೂರ್ತ, ಅದೃಷ್ಟ ಒಲಿಯಲು ಪೂಜೆಯ ವಿಧಿ ವಿಧಾನ

|

ಸಡಗರ, ಸಂಭ್ರಮದ ಹಬ್ಬ ವರಮಹಾಲಕ್ಷ್ಮಿ ಆಚರಣೆಗೆ ಈಗಾಗಲೇ ಸಿದ್ಧತೆ ಪ್ರಾರಂಭವಾಗಿದೆ. ಅಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು. ಈ ವರ್ಷ ಜುಲೈ 31ಕ್ಕೆ ಈ ಹಬ್ಬವನ್ನು ಆಚರಿಸಲಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬವನ್ನು ಪುರುಷರು-ಮಹಿಳೆಯರು ಆಚರಿಸುವುದಾದರೂ ಮಹಿಳೆಯರಿಗೇ ಈ ಹಬ್ಬ ತುಂಬಾ ವಿಶೇಷವಾದದ್ದು. ಲಕ್ಷ್ಮಿಗೆ ಅಲಂಕಾರ ಮಾಡಿ , ಲಕ್ಷ್ಮಿ ವ್ರತ ಮಾಡಿದರೆ ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಯನ್ನು ಲಕ್ಷ್ಮಿ ಕರುಣಿಸುತ್ತಾಳೆ ಎಂಬುವುದು ಆಕೆಯನ್ನು ನಂಬಿದವರ ಅಚಲ ನಂಬಿಕೆ.

ವರಮಹಾಲಕ್ಷ್ಮಿ ಆಚರಣೆಗೆ ಕಠಿಣ ನಿಯಮಗಳಿಲ್ಲ, ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಒಲಿಯುತ್ತಾಳೆ. ಲಕ್ಷ್ಮಿ ಪೂಜೆಗೆ ಗೋಧೂಳಿ ಸಮಯ ಶ್ರೇಷ್ಠವೆಂದು ಹೇಳಲಾಗುತ್ತದೆ. ಇಲ್ಲಿ ನಾವು ವರಮಹಾಲಕ್ಷ್ಮಿ ಪೂಜೆಗೆ ಶುಭ ಸಮಯ ಹಾಗೂ ಆಚರಿಸುವ ವಿಧಾನಗಳ ಬಗ್ಗೆ ಹೇಳಿದ್ದೇವೆ ನೋಡಿ:

ಪಂಚಾಂಗದ ಪ್ರಕಾರ ಲಕ್ಷ್ಮಿ ಪೂಜೆಗೆ ಸೂಕ್ತ ಸಮಯ

ಪಂಚಾಂಗದ ಪ್ರಕಾರ ಲಕ್ಷ್ಮಿ ಪೂಜೆಗೆ ಸೂಕ್ತ ಸಮಯ

ಸಿಂಗ ಲಗ್ನ ಪೂಜಾ ಮುಹೂರ್ತ (ಬೆಳಗ್ಗೆ):7.4ರಿಂದ 9 ಗಂಟೆ 7 ನಿಮಿಷದವರೆಗೆ

ಕಾಲಾವಕಾಶ: 2 ಗಂಟೆ 3 ನಿಮಿಷ

ವೃಶ್ಚಿಕ ಲಗ್ನ ಪೂಜಾ ಮುಹೂರ್ತ(ಮಧ್ಯಾಹ್ನ): 1 ಗಂಟೆ 16 ನಿಮಿಷದಿಂದ 3 ಗಂಟೆ 28 ನಿಮಿಷದವರೆಗೆ

ಕಾಲಾವಕಾಶ: 2 ಗಂಟೆ 12 ನಿಮಿಷ

ಕುಂಭ ಲಗ್ನ ಪೂಜಾ ಮುಹೂರ್ತ(ಸಂಜೆ): 7 ಗಂಟೆ 28 ನಿಮಿಷದಿಮದ 9 ಗಂಟೆ 10 ನಿಮಿಷದವರೆಗೆ

ಕಾಲಾವಕಾಶ: 1 ಗಂಟೆ 42 ನಿಮಿಷ

ವೃಷಭ ಲಗ್ನ ಪೂಜಾ ಮುಹೂರ್ತ (ಮಧ್ಯರಾತ್ರಿ): 12.37 ನಿಮಿಷದಿಂದ ರಾತ್ರಿ 2 ಗಂಟೆ 40 ನಿಮಿಷದವರೆಗೆ

ಕಾಲಾವಕಾಶ:: 2 ಗಂಟೆ 2 ನಿಮಿಷ

ಲಕ್ಷ್ಮಿ ಪೂಜೆಯ ವಿಧಿ-ವಿಧಾನ

 ಮಡಿಯುಟ್ಟು ರಂಗೋಲಿ, ತಳಿರು ತೋರಣಗಳ ಅಲಂಕಾರ

ಮಡಿಯುಟ್ಟು ರಂಗೋಲಿ, ತಳಿರು ತೋರಣಗಳ ಅಲಂಕಾರ

ಲಕ್ಷ್ಮಿ ವ್ರತ ಪಾಲಿಸುವ ಮುತ್ತೈದೆಯರು, ಹೆಣ್ಣು ಮಕ್ಕಳು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ತಳಿರು, ತೋರಣಗಳಿಂದ ಅಲಂಕರಿಸಿ, ಸ್ನಾನ ಮಾಡಿ ಮುಡಿ ಉಡುಪು ಧರಿಸಿ , ಕಲಶ ಕೂರಿಸುವ ಜಾಗದಲ್ಲಿ ರಂಗೋಲಿ ಬಿಡಿಸಿ, ದೇವಿಗೆ ನೈವೇದ್ಯ ತಯಾರಿಸಿ, ನಂತರ ಚಿಕ್ಕ ಬಿಂದಿಗೆ ಅಥವಾ ಚೊಂಬನ್ನು ಕಲಶದ ರೂಪದಲ್ಲಿ ಇಡಬೇಕು.

ಕಲಶವನ್ನು ತಾಮ್ರ ಅಥವಾ ಬೆಳ್ಳಿ ತಂಬಿಗೆಯಲ್ಲಿ ಇಡಲಾಗುವುದು, ಅವರವರ ಅನುಕೂಲಕ್ಕೆ ತಕ್ಕಂತೆ ಇಡಬಹುದು. ಕೆಲವರು ಕಲಶದಲ್ಲಿ ನೀರು ತುಂಬಿದರೆ ಇನ್ನು ಕೆಲವರು ಧಾನ್ಯ ತುಂಬುತ್ತಾರೆ. ಕಲಶವನ್ನು ಕುರಿಸುವ ಮುನ್ನ ಒಂದು ಬಾಳೆಲೆ ಹಾಕಿ ಅದರಲ್ಲಿ ಅಕ್ಕಿಯನ್ನು ಹರಡಿ, ಅದರ ಮೇಲೆ ಕಳಸ ಕೂರಿಸಬೇಕು.

ನಂತರ ಕಳಸದಲ್ಲಿ ಮಾವಿನ ಎಲೆ ಹಾಗೂ ವೀಳ್ಯೆದೆಲೆ ಇರಿಸಿ ಅರಿಶಿಣ -ಕುಂಕುಮ ಹಚ್ಚಿದ ತೆಂಗಿನಕಾಯಿ ಇಡಲಾಗುತ್ತದೆ. ನಂತರ ಲಕ್ಷ್ಮಿ ಮುಖವಾಡ ಇಡಲಾಗುವುದು. ಬಳಿಕ ಲಕ್ಷ್ಮಿ ರೇಷ್ಮೆ ಸೀರೆ ಉಡಿಸಿ ಒಡವೆಗಳಿಂದ ಅಲಂಕರಿಸುತ್ತಾರೆ.

ಲಕ್ಷ್ಮಿಗೆ ತಾವರೆ ಹೂ ಎಂದರೆ ಬಲು ಪ್ರೀತಿ, ಆದ್ದರಿಂದ ಆ ಹೂವನ್ನು ಅವಳಿಗೆ ಅರ್ಪಿಸಲಾಗುವುದು, ನಂತರ ವಿವಿಧ ಹೂಗಳಿಂದ ಅಲಂಕಾರ ಮಾಡಿ, ಹಣ್ಣುಗಳನ್ನು ಇಟ್ಟು ನೈವೇದ್ಯ ಇಡಲಾಗುವುದು.

 ಪೂಜೆಗೆ ಏನು ಇಡಬೇಕು

ಪೂಜೆಗೆ ಏನು ಇಡಬೇಕು

ಪೂಜೆಗೆ ದೇವಿಗೆ ಹಸಿರು ಬಣ್ಣದ ರವಿಕೆ, ಹಸಿರು ಬಳೆ, ಐದು ಬಗೆಯ ಹಣ್ಣುಗಳು, ನೈವೇದ್ಯ ಮಾಡಿ ಇಡಲಾಗುವುದು. ಹೀಗೆ ದೇವಿಗೆ ಪೂಜೆ ಸಲ್ಲಿಸುವಾಗ ಮಂಗಳಕರವಾದ ಲಕ್ಷ್ಮಿ ಅಷ್ಟೋತ್ತರ ಮತ್ತು ಲಕ್ಷ್ಮಿ ಸಹಸ್ರನಾಮ ಪಠಿಸಬೇಕು. ಇದರಿಂದ ಪೂಜೆಯಿಂದ ಉತ್ತಮ ಫಲ ಸಿಗುವುದು.

ಹಳದಿ ದಾರದ ಮಹಿಮೆ

ಹಳದಿ ದಾರದ ಮಹಿಮೆ

ಪೂಜೆ ನೆರವೇರಿಸುವ ಮಹಿಲೆಯರು ತಮ್ಮ ಬಲಗೈ ಮಣಿಕಟ್ಟಿನಲ್ಲಿ ನಡುವೆ ಸೇವಂತಿಗೆ ಹೂ ಇರುವ (ಹೂ ಇರುವ) ಹಳದಿ ದಾರವನ್ನು ಒಂಬತ್ತು ಗಂಟುಗಳಂತೆ ಮಾಡಿ ಕಟ್ಟಿಕೊಳ್ಳುತ್ತಾರೆ. ಪೂಜೆ ಸಂಪನ್ನಗೊಳ್ಳುವವರೆಗೆ ಆ ದಾರವನ್ನು ಬಿಚ್ಚಬಾರದು.

ನಂತರ ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅರಿಶಿಣ ಕುಂಕುಮ ನೀಡಲಾಗುವುದು.

ನೈವೇದ್ಯ ಆಗಿ ಒಬ್ಬಟ್ಟು, ಅಜ್ಜಿಗೆ, ಹೆಸರು ಬೇಳೆ ಪಾಯಸ ಹೀಗೆ ನಾನ ಬಗೆಯ ಸಿಹಿ ತಿನಿಸು ಮಾಡಲಾಗುವುದು. ಅದನ್ನು ಬಂದವರಿಗೆ ನೀಡುತ್ತಾರೆ.

ಲಕ್ಷ್ಮಿ ತೃಪ್ತಿಯಾದರೆ ಮನೆಗೆ ಸಂಪತ್ತು, ಅದೃಷ್ಟ, ಮನೆಯವರಿಗೆ ಆರೋಗ್ಯ ಲಭಿಸುವುದು.

English summary

2020 Varamahalakshmi Vrata: Date, Shubh muhurat, Significance, Puja Vidhi

Here are Varalakshmi Vratam Pooja date, time, significance and puja vidhi, Read on,
X
Desktop Bottom Promotion