Just In
Don't Miss
- Automobiles
ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
- News
ನಮ್ಮ ಪಕ್ಷದಲ್ಲಿ ಯಾರ ಮನೆ ಗೇಟನ್ನು ಕಾಯಬೇಕಿಲ್ಲ; ಭವಾನಿ ರೇವಣ್ಣ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ: ಅಶ್ವಥ್ ನಾರಾಯಣ್
- Finance
Multibagger stock: 1 ವರ್ಷದಲ್ಲೇ ಶೇ.1000 ರಿಟರ್ನ್ ಪಡೆಯಿರಿ!
- Technology
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- Sports
IND vs AUS Test : ಫೆಬ್ರವರಿ 1 ರಂದು ಭಾರತಕ್ಕೆ ಆಸ್ಟ್ರೇಲಿಯಾ ತಂಡ : ಬೆಂಗಳೂರಿನಲ್ಲಿ ಅಭ್ಯಾಸ
- Movies
ಗಾಯಕನಾಗುವ ಆಸೆಯಿಂದ ಬಂದು ನಟನಾದ ಯಶವಂತ್ ಕಿರುತೆರೆ ಪಯಣ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈಕುಂಠ ಚತುರ್ದಶಿ ಯಾವಾಗ? ಇದು ಹರಿ-ಹರನ ಆರಾಧನೆಗೆ ತುಂಬಾ ಮುಖ್ಯವಾದ ದಿನ, ಏಕೆ?
ಹಿಂದೂಗಳಿಗೆ ವೈಕುಂಠ ಚತುರ್ದಶಿ ತುಂಬಾ ಪ್ರಮುಖವಾದ ದಿನವಾಗಿದೆ. ಪ್ರತೀ ವರ್ಷ ಕಾರ್ತಿಕ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುವುದು. ಈ ದಿನ ಶಿವ ಹಾಗೂ ವಿಷ್ಣುವಿನ ಆರಾಧನೆಗೆ ಮೀಸಲಾಗಿರುವ ದಿನವಾಗಿದೆ. ದೇಶದೆಲ್ಲಡೆ ಈ ವೈಕುಂಠ ಚತುರ್ದಶಿಯಂದು ಹರಿ-ಹರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಯಾರು ವೈಕುಂಠ ಚತುರ್ದಶಿಯನ್ನು ಉಪವಾಸವಿದ್ದು ಶ್ರದ್ಧಾ- ಭಕ್ತಿಯಿಂದ ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗುವುದು, ಜೀವನದಲ್ಲಿನ ಕಷ್ಟಗಳು ದೂರಾಗಲಿದೆ ಎಂಬ ನಂಬಿಕೆ ಇದೆ.
ಈ ವರ್ಷ ವೈಕುಂಠ ಚತುರ್ದಶಿ ಯಾವಾಗ ಆಚರಿಸಲಾಗುವುದು, ಆಚರಣೆಯ ವಿಧಿ-ವಿಧಾನಗಳೇನು ಎಂದು ತಿಳಿಯೋಣ ಬನ್ನಿ:

ವೈಕುಂಠ ಚತುರ್ದಶಿ ದಿನಾಂಕ
ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನಾಂಕ ಪ್ರಾರಂಭವಾಗುತ್ತದೆ: ಅಂದರೆ ನವೆಂಬರ್ 6 2022, ಭಾನುವಾರ, ಸಂಜೆ 4:28 ಕ್ಕೆ ಪ್ರಾರಂಭವಾಗಿ
ನವೆಂಬರ್ 7,2022, ಸೋಮವಾರ ಸಂಜೆ 4:15 ಕ್ಕೆ ಮುಕ್ತಾಯವಾಗುತ್ತದೆ.
ಧರ್ಮಗ್ರಂಥಗಳ ಪ್ರಕಾರ, ನಿಶಿತಾ ಅವಧಿಯಲ್ಲಿ ಭಗವಾನ್ ವಿಷ್ಣುವನ್ನು ವೈಕುಂಠ ಚತುರ್ದಶಿಯಂದು ಪೂಜಿಸಲಾಗುತ್ತದೆ, ಆದ್ದರಿಂದ ವೈಕುಂಠ ಚತುರ್ದಶಿಯನ್ನು ನವೆಂಬರ್ 6 ರಂದು ಆಚರಿಸಲಾಗುತ್ತದೆ.

ವೈಕುಂಠ ಚತುರ್ದಶಿ 2022 ಮುಹೂರ್ತ
ನಿಶಿತಕಾಲ ಪೂಜೆ ಮುಹೂರ್ತ - 06 ನವೆಂಬರ್ 2022, ರಾತ್ರಿ 11:45 ರಿಂದ 12:37 ರವರೆಗೆ
ಬೆಳಗಿನ ಪೂಜಾ ಸಮಯ - 06 ನವೆಂಬರ್ 2022, ಬೆಳಗ್ಗೆ 11.48 - ಮಧ್ಯಾಹ್ನ 12.32 ರವರೆಗೆ

ವೈಕುಂಠ ಚತುರ್ದಶಿ ಮಹತ್ವ
ವೈಕುಂಠ ಚತುರ್ದಶಿಯನ್ನು ಕಾರ್ತಿಕ ಪೂರ್ಣಿಮೆಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನಾಂಕವು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ಬೈಕುಂಠ ಅಥವಾ ವೈಕುಂಠ ಚತುರ್ದಶಿ ಎನ್ನುತ್ತಾರೆ.
ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ, ಸಾಧಕರು ವೈಕುಂಠಧಾಮವನ್ನು ಪಡೆಯುತ್ತಾರೆ ಮತ್ತು ಶಿವನ ಕೃಪೆಯಿಂದ ಪಾಪಗಳನ್ನು ತೊಡೆದುಹಾಕುತ್ತಾರೆ ಎಂದು ನಂಬಲಾಗಿದೆ. ದೇವ್ ದೀಪಾವಳಿಯ ಒಂದು ದಿನ ಮೊದಲು ಆಚರಿಸಲಾಗುವುದು. ವಾರಣಾಸಿ, ಋಷಿಕೇಶ, ಮುಂತಾದ ಪುಣ್ಯ ಕ್ಷೇತ್ರದಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುವುದು.
ವೈಕುಂಠ ಚತುರ್ದಶಿ ತುಂಬಾ ವಿಶೇಷವಾದ ದಿನ, ಏಕೆಂದರೆ ಈ ದಿನ ವಿಷ್ಣು ಮತ್ತು ಶಿವ ದೇವರನ್ನು ಪೂಜಿಸಲಾಗುತ್ತದೆ. ಶಿವ ಪುರಾಣದ ಪ್ರಕಾರವೈಕುಂಠ ಚತುರ್ದಶಿಯ ದಿನದಂದು ಶಿವನು ವಿಷ್ಣುವಿಗೆ ಸುದರ್ಶನ ಚಕ್ರವನ್ನು ನೀಡಿದನು.
ಧಾರ್ಮಿಕ ನಂಬಿಕೆಯ ಪ್ರಕಾರ, ಒಬ್ಬ ಭಕ್ತನು ಈ ದಿನದಂದು ಭಗವಾನ್ ವಿಷ್ಣುವನ್ನು 1000 ಕಮಲದ ಹೂವುಗಳಿಂದ ಪೂಜಿಸಿದರೆ, ಅವನು ವೈಕುಂಠಧಾಮದಲ್ಲಿ ಸ್ಥಾನ ಪಡೆಯುತ್ತಾನೆ ಎಂದು ಹೇಳಲಾಗುವುದು.

ವೈಕುಂಠ ಚತುರ್ದಶಿಯ ಪೂಜಾ ವಿಧಾನ
ಚತುರ್ದಶಿಯ ದಿನ ಪ್ರಾತಃಕಾಲ ಎದ್ದು ಸ್ನಾನ ಮಾಡಿ, ನಂತರ ಉಪವಾಸವಿದ್ದು ಸಂಕಲ್ಪ ತೆಗೆದುಕೊಳ್ಳಬೇಕು.
ಇದರ ನಂತರ ಶ್ರೀ ಹರಿ ವಿಷ್ಣುವನ್ನು 108 ಕಮಲದ ಹೂವುಗಳಿಂದ ಪೂಜಿಸಿ.
ಈ ದಿನ ಶಿವನ ಆರಾಧನೆಯನ್ನೂ ಕೂಡ ಮಾಡಬೇಕು.
ಈ ದಿನವಿಡೀ ವಿಷ್ಣು ಮತ್ತು ಶಿವನ ಹೆಸರುಗಳನ್ನು ಪಠಿಸಿ.
ಪೂಜೆಯ ಸಮಯದಲ್ಲಿ
' ವಿನಾ ಯೋ ಹರಿಪೂಜಾನ್ ತು ಕುರ್ಯಾದ್ ರುದ್ರಸ್ಯ ಚರ್ಚನಮ್. ವೃತ ತಸ್ಯ ಭವೇತ್ಪೂಜಾ ಸತ್ಯಮೇತದ್ವಚೋ ಮಾಮ್ ।।' ಮಂತ್ರ ಪಠಿಸಿ.