Just In
- 7 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 8 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 8 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 10 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಲಕ್ಷ್ಮಿ ಸದಾ ಮನೆಯಲ್ಲೇ ನೆಲೆಸುತ್ತಾಳೆ
ದೇವಿ ಲಕ್ಷ್ಮಿಯ ಕಟಾಕ್ಷ ಒಂದಿದ್ದರೆ ಎಲ್ಲವನ್ನು ಜಯಿಸಬಹುದು ಅಲ್ಲವೆ, ಆದರೆ ಈ ಲಕ್ಷ್ಮಿಯ ಕಟಾಕ್ಷವನ್ನು ಒಲಿಸಿಕೊಳ್ಳುವುದು ಹೇಗೆ?. ಲಕ್ಷ್ಮಿ ದೇವಿ ಬಹಳ ಶಿಸ್ತಿನ ಹಾಗೂ ಶುದ್ಧತೆಯನ್ನು ಬಯಸುತ್ತಾಳೆ. ಶುದ್ಧ ಮನಸ್ಸಿನಿಂದ ಪೂಜೆ ಮಾಡಿದರೆ, ನಮ್ಮ ಪೂಜೆಯಲ್ಲಿ ನಿಷ್ಕಲ್ಮಷ ಇಲ್ಲದೆ ಇದ್ದರೆ ಖಂಡಿತವಾಗಿಯೂ ದೇವಿ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ.
ಆದರೆ ದೈನಿದಿಂದ ಬದುಕಿನಲ್ಲಿ ನಾವು ಮಾಡುವ ಕೆಲವು ಕೆಟ್ಟ ಅಭ್ಯಾಸಗಳು ಲಕ್ಷ್ಮಿಗೆ ಅವಮಾನಿಸಿದಂತಾಗುತ್ತದೆ ಅಲ್ಲದೆ ಇದರಿಂದ ಲಕ್ಷ್ಮಿಯು ಮನೆಯಲ್ಲಿ ನೆಲೆಸಲು ಸಹ ಇಷ್ಟಪಡುವುದಿಲ್ಲ. ಜ್ಯೋತಿಶಾಸ್ತ್ರದ ಪ್ರಕಾರ ನಾವು ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮಿಗೆ ಇಷ್ಟವಾಗುತ್ತದೆ, ಅವಳು ನಮ್ಮ ಪೂಜೆಗೆ ಫಲ ನೀಡುತ್ತಾಳೆ ಎನ್ನಲಾಗುತ್ತದೆ.
ಲಕ್ಷ್ಮಿ ಕೃಪೆಗಾಗಿ ಮಲಗುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಮುಂದೆ ನೋಡೋಣ:
ಮಲಗುವ ಮುನ್ನ ಕೈ, ಕಾಲು ಮತ್ತು ಬಾಯಿಯನ್ನು ತೊಳೆಯಬೇಕು
ಮಲಗುವ ಮುನ್ನ ಕೈಕಾಲು ಬಾಯಿ ತೊಳೆದರೆ ಕೆಟ್ಟ ಕನಸುಗಳು ಬರುವುದಿಲ್ಲ. ಅಲ್ಲದೆ, ನೀವು ಮಲಗುವ ಹಾಸಿಗೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಅವಶ್ಯಕ. ಹಾಳೆಗಳು, ದಿಂಬುಗಳು, ಹೊದಿಕೆಗಳು ಇತ್ಯಾದಿಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮುರಿದ ಅಥವಾ ಹಾಳಾದ ಹಾಸಿಗೆಯ ಮೇಲೆ ಎಂದಿಗೂ ಮಲಗಬೇಡಿ.
ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿಡಿ
ಯಾವಾಗಲೂ ಅಡುಗೆ ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ ಮಲಗಿ. ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಎಂದಿಗೂ ಬಿಡಬೇಡಿ. ಮಲಗುವ ಮುನ್ನ ಎಲ್ಲ ಪಾತ್ರಗಳನ್ನು ಶುದ್ಧವಾಗಿ ತೊಳೆದು ಇಡಿ.
ಬಾಗಿಲಿನ ಕಡೆಗೆ ಪಾದ ಹಾಕಬೇಡಿ
ನಿಮ್ಮ ಪಾದಗಳನ್ನು ಬಾಗಿಲಿನ ಕಡೆಗೆ ಇಟ್ಟು ಮಲಗಬೇಡಿ. ಮನೆಯ ಬಾಗಿಲನ್ನು ಲಕ್ಷ್ಮಿಯ ಪ್ರವೇಶ ಎಂದು ಪರಿಗಣಿಸಲಾಗುತ್ತದೆ. ಇದು ಲಕ್ಷ್ಮಿಯನ್ನು ಅವಮಾನಿಸಿದಂತೆ, ಎಂದಿಗೂ ಈ ತಪ್ಪನ್ನು ಮಾಡಬೇಡಿ.
ದೀಪ ಬೆಳಗಿಸಿ
ರಾತ್ರಿ ನೀರು ಕುಡಿಯುವ ಸ್ಥಳದ ಬಳಿ ದೀಪ ಬೆಳಗಿಸಿ. ಆದರೆ ಸುತ್ತಲೂ ಕರ್ಟನ್ ಇತ್ಯಾದಿ ಇಲ್ಲದಂತೆ ಚೆನ್ನಾಗಿ ಗಮನಹರಿಸಿ, ಇದರಿಂದ ಅವಘಡ ಸಂಭವಿಸುವ ಸಾಧ್ಯತೆ ಇಲ್ಲ. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ವಿಶೇಷ ಅನುಗ್ರಹ ಪಡೆಯುತ್ತಾಳೆ.
ಮಲಗುವ ಕೋಣೆಯಲ್ಲಿ ಕರ್ಪೂರ ಬೆಳಗಿ
ಮಲಗುವ ಮೊದಲು ಮಲಗುವ ಕೋಣೆಯಲ್ಲಿ ಕರ್ಪೂರ ಬೆಳಗಿಸಿ. ಈ ಕಾರಣದಿಂದ, ಕೋಣೆಯಲ್ಲಿ ಸಕಾರಾತ್ಮಕತೆ ಇರುತ್ತದೆ ಮತ್ತು ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಕೋಣೆಯಲ್ಲಿ ನವಿಲು ಗರಿ ಇದ್ದರೆ ಇನ್ನೂ ಒಳ್ಳೆಯದು.
ದೇವತೆಯನ್ನು ಸ್ಮರಿಸಿ
ಮಲಗುವ ಮುನ್ನ ನಿಮ್ಮ ಅಧಿದೇವತೆಯನ್ನು ಸ್ಮರಿಸಿ. ಹೀಗೆ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ ಮತ್ತು ದೇವ-ದೇವತೆಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ.