For Quick Alerts
ALLOW NOTIFICATIONS  
For Daily Alerts

ಚತುರ್ಥಿ ವಿಶೇಷ: ಗಣಪತಿ ದೇವನಿಗೆ ಇವುಗಳೆಂದರೆ ಬಹಳ ಇಷ್ಟವಂತೆ..

By Manu
|
Ganesh Chaturthi 2018 : ಗಣೇಶನಿಗೆ ಪ್ರಿಯವಾದ ಈ 5 ವಸ್ತುಗಳನ್ನ ಅರ್ಪಿಸಿ | Oneindia Kannada

ಡೊಳ್ಳು ಹೊಟ್ಟೆ, ಗಜಮುಖನೆಂದು ಪೂಜಿಸಲ್ಪಡುವ ಗಣೇಶ ದೇವರು ಕೆಡುಕು ಹಾಗೂ ಪಾಪ ವಿಮೋಚನೆ ಮಾಡುವ ಸ್ನೇಹಪರ ದೇವರೆಂದೇ ಪರಿಗಣಿಸಲಾಗಿದೆ. ಗಣಪತಿ ದೇವರನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ ಬೇರೆ ಧರ್ಮದವರು ಕೂಡ ಪೂಜಿಸುವುದು ಅವರ ಸುಂದರ ದೇಹ ಹಾಗೂ ಭಕ್ತರಿಗೆ ಒಲಿಯುವ ಕಾರಣಕ್ಕಾಗಿ. ಗಣೇಶ ದೇವರನ್ನು ಜನರ ಅಧಿಪತಿ ಗಣಪತಿ ಎಂದು ಕರೆಯಲಾಗುತ್ತದೆ. ಗಣೇಶ ಚತುದರ್ಶಿಯಂದು ಗಣಪತಿ ದೇವರನ್ನು ಸಂಭ್ರಮದಿಂದ ಪೂಜಿಸಲಾಗುವುದು.

ಶಕ್ತಿಶಾಲಿ ಗಣನಾಯಕ ಹಾಗೂ ಪುಕ್ಕಲ ಇಲಿಯ ಕಥೆಯಿದು!

ಹಿಂದೂ ಧರ್ಮೀಯರ ಮನೆ, ಮಠಗಳಲ್ಲಿ ಗಣೇಶ ಚತುದರ್ಶಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವ ಭಕ್ತರು ದೇವರಿಗೆ ಏನು ಇಷ್ಟ ಎಂದು ತಿಳಿದುಕೊಂಡು ಪೂಜಿಸಿದರೆ ತುಂಬಾ ಒಳ್ಳೆಯದು. ಇದರಿಂದ ಗಣೇಶ ದೇವರು ಬೇಗನೆ ಪ್ರಸನ್ನರಾಗುವರು. ಗಣಪತಿ ದೇವರಿಗೆ ಏನೆಲ್ಲಾ ಇಷ್ಟ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ತಿಳಿದುಕೊಂಡು ಗಣಪತಿ ದೇವರನ್ನು ಆರಾಧಿಸಿ...

ಮೋದಕ

ಮೋದಕ

ಗಣೇಶ ದೇವರು ತಿಂಡಿ ಪ್ರಿಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಣಪತಿ ದೇವರ ವಿಗ್ರಹದ ಕೈಗಳಲ್ಲಿ ಹಾಗೂ ಅವರ ಎದುರಿಗೆ ಇರುವಂತಹ ತಿಂಡಿಗಳನ್ನು ನೋಡಿದಾಗ ಗಣಪತಿ ದೇವರಿಗೆ ಆಹಾರ ತುಂಬಾ ಇಷ್ಟ ಎಂದು ತಿಳಿದುಬರುವುದು. ಗಣಪತಿ ದೇವರನ್ನು ಬೇಗನೆ ಪ್ರಸನ್ನರಾಗಿಸಲು ಅವರಿಗೆ ಪ್ರಿಯವಾದ ತಿಂಡಿ ಮಾಡಬೇಕು. ಮೋದಕವು ಗಣಪತಿಗೆ ತುಂಬಾ ಇಷ್ಟವಾದ ತಿಂಡಿ. ಗಣೇಶ ಚತುದರ್ಶಿಯಂದು ಮೋದಕವನ್ನು ಮಾಡಿ ಬಡಿಸಬೇಕು.

ಈ ಬಾರಿಯ ಗಣೇಶ ಹಬ್ಬವನ್ನು ಮೋದಕ ತಿನಿಸಿನೊಂದಿಗೆ ಸಿಹಿಯಾಗಿಸಿ!

ಗರಿಕೆ

ಗರಿಕೆ

ಗಣಪತಿ ದೇವರಿಗೆ ಇಷ್ಟವಾಗುವಂತಹ ಮತ್ತೊಂದು ಆಹಾರವೆಂದರೆ ಗರಿಕೆ. ಗಣಪತಿ ದೇವರಿಗೆ ಗರಿಕೆ ಯಾಕೆ ಇಷ್ಟ ಎನ್ನುವ ಬಗ್ಗೆ ಒಂದು ಕಥೆಯೇ ಇದೆ. ದೇವರುಗಳಿಗೆ ಕೆಡುಕನ್ನು ಉಂಟು ಮಾಡುತ್ತಿದ್ದ ಅನಲಾಸುರನನ್ನು ಗಣಪತಿ ದೇವರು ಒಂದು ಸಲ ತಿಂದರಂತೆ. ಅನಲಾಸುರ ಜೀರ್ಣವಾಗದೆ ಇರುವ ಕಾರಣದಿಂದ ಗಣಪತಿ ದೇವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಕೆಲವು ಋಷಿಗಳು ಗಣಪತಿ ದೇವರ ಹೊಟ್ಟೆಯ ಮೇಲೆ ಗರಿಕೆ ಹುಲ್ಲನ್ನು ಹಾಕುತ್ತಾರೆ. ಈ ವೇಳೆ ಗಣಪತಿ ದೇವರ ಹೊಟ್ಟೆ ನೋವು ಶಮನವಾಗುತ್ತದೆ. ಇದರ ಬಳಿಕ ಗಣಪತಿ ದೇವರಿಗೆ ಗರಿಕೆ ಹುಲ್ಲು ತುಂಬಾ ಇಷ್ಟ.

ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಚೆಂಡು ಹೂ

ಚೆಂಡು ಹೂ

ಗಣೇಶನನ್ನು ಮನೆಗೆ ತರುವಾಗ ಹೆಚ್ಚಿನ ಮನೆಗಳಲ್ಲಿ ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂಗಳಿಂದ ಮನೆಯನ್ನು ಅಲಂಕಾರ ಮಾಡಲಾಗುತ್ತದೆ. ಗಣಪತಿಗೆ ಚೆಂಡು ಹೂ ತುಂಬಾ ಇಷ್ಟ. ಗಣಪತಿ ದೇವರು ಯಾವಾಗಲು ಚೆಂಡು ಹೂವು ಮತ್ತು ಗರಿಕೆ ಹುಲ್ಲಿನ ಮಾಲೆ ಹಾಕಿರುತ್ತಾರೆ.

ಶಂಖ

ಶಂಖ

ಗಣಪತಿಗೆ ನಾಲ್ಕು ಕೈಗಳಿವೆ ಮತ್ತು ಒಂದು ಕೈಯಲ್ಲಿ ಶಂಖವನ್ನು ಹಿಡಿದುಕೊಂಡಿರುತ್ತಾರೆ. ಹೆಚ್ಚಿನ ಹಿಂದೂ ಹಬ್ಬಗಳ ವೇಳೆ ಶಂಖನಾದ ಮೊಳಗಿಸಲಾಗುತ್ತದೆ. ಶಂಖನಾದವೆಂದರೆ ಗಣಪತಿ ದೇವರಿಗೆ ತುಂಬಾ ಇಷ್ಟವಂತೆ. ಗಣಪತಿ ಆರತಿ ಮಾಡುವಾಗ ಹೆಚ್ಚಿನವರು ಶಂಖನಾದ ಮೊಳಗಿಸುವರು. ಶಂಖನಾದವು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.

ಹಣ್ಣುಗಳು

ಹಣ್ಣುಗಳು

ತೆಂಗಿನಕಾಯಿ ಮತ್ತು ಬಾಳೆಹಣ್ಣು ಗಣಪತಿ ದೇವರಿಗೆ ತುಂಬಾ ಪ್ರಿಯವಾಗಿರುವ ಹಣ್ಣುಗಳು. ಗಣಪತಿ ದೇವರ ತಲೆಯು ಆನೆಯದ್ದಾಗಿರುವ ಕಾರಣದಿಂದ ಬಾಳೆಹಣ್ಣು ಗಣೇಶ ದೇವರಿಗೆ ತುಂಬಾ ಇಷ್ಟ. ಗಣೇಶನ ಮೂರ್ತಿಯ ಸುತ್ತ ಬಾಳೆಎಲೆಗಳು ಹಾಗೂ ಬಾಳೆಗಿಡಗಳಿಂದ ಶೃಂಗರಿಸಲಾಗುತ್ತದೆ.

ಹಣ್ಣುಗಳು

ಹಣ್ಣುಗಳು

ಕೆಲವು ಕಡೆಗಳಲ್ಲಿ ಬಾಳೆ ಹೂವುಗಳನ್ನು ಸಮರ್ಪಿಸಲಾಗುತ್ತದೆ. ಈ ಐದು ವಸ್ತುಗಳು ಗಣಪತಿ ದೇವರಿಗೆ ತುಂಬಾ ಇಷ್ಟ. ಗಣಪತಿ ಸಸ್ಯಹಾರಿ ಮತ್ತು ಅವರನ್ನು ಬುಧವಾರದಂದು ಪೂಜಿಸಿದರೆ ಒಳ್ಳೆಯದು.

English summary

Things That Lord Ganesha Loves

Lord Ganesha is known for his elephant head and his enormous belly. He is one of friendliest Hindu Gods who is bereft of malice and curses. The cute and cuddly image of Ganesha inspires lots of love among his devotees. That is why he is called 'Ganapati', the lord of the people. Ganesh Chatuthi is special festival meant to celebrate the glory of Lord Ganesha and is due in a week's time. So, let us find out what are the things that Ganesha loves the most to please him on this special day.
X
Desktop Bottom Promotion