For Quick Alerts
ALLOW NOTIFICATIONS  
For Daily Alerts

ವಯಸ್ಸಾದ ಮಹಿಳೆಯ ಬಳಿ ಪಾಯಸ ಮಾಡಿಕೊಡಲು ಬೇಡಿಕೆಯಿಟ್ಟ ಭಗವಾನ್ ಗಣೇಶ!

|

ಗಣಪತಿ ದೇವರು ಹಲವಾರು ರೀತಿಯಿಂದ ತನ್ನ ಭಕ್ತರ ಪರೀಕ್ಷೆ ಮಾಡುವರು. ಯಾಕೆಂದರೆ ಅವರ ಭಕ್ತಿ ನಿಜ ಆಗಿರುವುದೇ ಅಥವಾ ಢಾಂಬಿಕವೇ ಎಂದು ತಿಳಿಯಲು. ಇದಕ್ಕಾಗಿ ಗಣಪತಿ ದೇವರು ಭಕ್ತರ ಪರೀಕ್ಷೆ ಮಾಡಲು ವಿವಿಧ ರೂಪಗಳಲ್ಲಿ ಭೂಲೋಕದ ಮೇಲೆ ಬಂದಿರುವರು. ಇಂತಹ ಒಂದು ಕಥೆಯ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಒಂದು ಗ್ರಾಮವು ಸಂಪೂರ್ಣವಾಗಿ ಗಣಪತಿ ದೇವರ ಪ್ರೀತಿ ಹಾಗೂ ಭಕ್ತಿಯಲ್ಲಿ ಮುಳುಗಿ ಹೋಗಿತ್ತು.

Lord Ganesha

ಈ ಗ್ರಾಮದ ಪ್ರತಿಯೊಬ್ಬರು ಗಣಪತಿ ದೇವರನ್ನು ಪೂಜಿಸುತ್ತಿದ್ದರು ಮತ್ತು ಅವರ ಭಕ್ತರಾಗಿದ್ದರು. ಈ ಗ್ರಾಮದವರ ಭಕ್ತಿಯ ಪರೀಕ್ಷೆ ಮಾಡಬೇಕೆಂದು ಬಯಸಿದ ಗಣಪತಿ ದೇವರು ಬಾಲಕನ ರೂಪ ತಾಳಿ ಅಲ್ಲಿಗೆ ಬರುವರು. ಒಂದು ಚಿಟಿಕೆ ಅಕ್ಕಿ ಕಾಳುಗಳು ಮತ್ತು ಒಂದು ಚಮಚ ಹಾಲಿನೊಂದಿಗೆ ಜನರ ಬಳಿಗೆ ಹೋದ ಬಾಲಕನ ರೂಪದಲ್ಲಿದ್ದ ಗಣಪತಿ ದೇವರು ಪಾಯಸ ಮಾಡಲು ಜನರಿಗೆ ಹೇಳುವರು.

ಎಲ್ಲರೂ ಕಡೆಗಣಿಸಿದರು

ಎಲ್ಲರೂ ಕಡೆಗಣಿಸಿದರು

ಅವರು ಒಂದು ಮನೆಯಿಂದ ಮತ್ತೊಂದು ಮನೆಗೆ ಮತ್ತು ಒಬ್ಬರಿಂದ ಮತ್ತೊಬ್ಬರ ಬಳಿಗೆ ಹೋಗುವರು. ಆದರೆ ಯಾರೂ ಅವರನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಬಾಲಕನನ್ನು ನೋಡಿ ತಮಾಷೆ ಮಾಡಿದ ಕೆಲವರು, ಇಷ್ಟು ಸ್ವಲ್ಪ ಅಕ್ಕಿ ಮತ್ತು ಹಾಲಿನಿಂದ ಪಾಯಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು. ಆದರೆ ಗಣಪತಿ ದೇವರು ಮಾತ್ರ ಪಾಯಸ ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಇದು ಮಕ್ಕಳಾಟಿಕೆ ಎಂದು ಕೆಲವು ಜನರು ಭಾವಿಸಿದರು.

ಹೆಣೆದ ನೂಲು ಹಿಡಿದ ಮಹಿಳೆಯ ನೋಡಿದರು

ಹೆಣೆದ ನೂಲು ಹಿಡಿದ ಮಹಿಳೆಯ ನೋಡಿದರು

ಈ ವೇಳೆ ಹೆಣೆದ ನೂಲು ಹಿಡಿದುಕೊಂಡು ಮನೆಯಿಂದ ಹೊರಗಡೆ ಹೋಗುತ್ತಿರುವ ಮಹಿಳೆಯನ್ನು ಗಣಪತಿ ದೇವರು ಕಂಡರು. ಅವರಲ್ಲಿಗೆ ಹೋದ ಬಾಲಕನ ರೂಪದಲ್ಲಿದ್ದ ಗಣಪತಿ ದೇವರು, ತಾಯಿ ದಯವಿಟ್ಟು ನೀನು ನನಗೆ ಪಾಯಸ ಮಾಡಿಕೊಡುತ್ತೀಯಾ? ನಾನು ಅಕ್ಕಿ ಮತ್ತು ಹಾಲು ತಂದಿದ್ದೇನೆ. ಉಳಿದಿರುವುದನ್ನು ನೀನೇ ಹಾಕಿ ಮಾಡು ಎಂದು ಹೇಳುವರು. ನೀನು ಇಲ್ಲೇ ನಿಲ್ಲು ಎಂದು ತುಂಬಾ ವಿನಮ್ರತೆಯಿಂದ ಹೇಳಿದ ಮಹಿಳೆ, ಮನೆಯ ಒಳಗಡೆ ಹೋಗುವಳು. ಸಣ್ಣ ಪಾತ್ರೆಯನ್ನು ಮನೆಯ ಒಳಗಡೆಯಿಂದ ಹಿಡಿದುಕೊಂಡ ಬಂದ ಮಹಿಳೆಯು ಹಾಲು ಮತ್ತು ಅಕ್ಕಿಯನ್ನು ಅದಕ್ಕೆ ಹಾಕುವಂತೆ ಸೂಚಿಸುವಳು. ತುಂಬಾ ಮುಗ್ದ ಬಾಲಕನಂತೆ ವರ್ತಿಸಿದ ಗಣಪತಿ ದೇವರು ದೊಡ್ಡ ಪಾತ್ರೆ ತರುವಂತೆ ಸೂಚಿಸುವರು. ಮಹಿಳೆಯು ನಗುವಳು ಮತ್ತು ಹೀಗೆ ಕೇಳುವಳು, ನೀನು ನನಗೆ ಕೂಡ ತಿನ್ನಲು ಸ್ವಲ್ಪ ಪಾಯಸ ಕೊಡುವುದಿದ್ದರೆ ಮಾತ್ರ ದೊಡ್ಡ ಪಾತ್ರೆಯನ್ನು ನಾನು ತರುತ್ತೇನೆ ಮತ್ತು ನಿನಗೆ ಪಾಯಸ ಮಾಡಿಕೊಡುತ್ತೇನೆ. ಆಗ ಬಾಲಕ ಸಂತೋಷದಿಂದ ಒಪ್ಪಿಕೊಂಡ.

ಸ್ನೇಹಿತರಿಗೂ ಸ್ವಲ್ಪ ಪಾಯಸ ತಯಾರಿಸುತ್ತೀರಾ!

ಸ್ನೇಹಿತರಿಗೂ ಸ್ವಲ್ಪ ಪಾಯಸ ತಯಾರಿಸುತ್ತೀರಾ!

ಮಹಿಳೆ ಮನೆಯ ಒಳಗಡೆ ಹೋಗಿ ದೊಡ್ಡ ಪಾತ್ರೆ ತೆಗೆದುಕೊಂಡು ಬಂದಳು ಮತ್ತು ಗಣಪತಿ ದೇವರು ಅದಕ್ಕೆ ಹಾಲು ಮತ್ತು ಅಕ್ಕಿಯನ್ನು ಹಾಕುವರು ಮತ್ತು ಪಾಯಸ ತಯಾರಾಗಲು ಅಲ್ಲೇ ಮನೆಯ ಹೊರಗಡೆ ಕಾಯುತ್ತಾ ಕುಳಿತುಕೊಳ್ಳುವರು. ಮಹಿಳೆಯು ತನಗೆ ತೋರಿಸಿದ ಕಾಳಜಿ ಬಗ್ಗೆ ಗಣಪತಿ ದೇವರಿಗೆ ತುಂಬಾ ಸಂತೋಷವಾಗಿತ್ತು ಮತ್ತು ಅವರು ಈ ಪರೀಕ್ಷೆಯನ್ನು ಮತ್ತಷ್ಟು ಕಠಿಣ ಮಾಡಬೇಕೆಂದು ಸಮೀಪದ ಮಕ್ಕಳನ್ನು ಕರೆದುಕೊಂಡು ಬಂದು ಪಾಯಸ ನೀಡುವುದಾಗಿ ಹೇಳಿದರು. ಗಣಪತಿ ದೇವರು ಮನೆಯ ಒಳಗಡೆ ಬಂದು ತಾನು ಕೆಲವು ಸ್ನೇಹಿತರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ ಮತ್ತು ಅವರಿಗಾಗಿಯೂ ಪಾಯಸ ತಯಾರಿಸುತ್ತೀರಾ ಎಂದು ಹೇಳುವರು.

ಜನರು ತಮಾಷೆ ಮಾಡಿದರು!

ಜನರು ತಮಾಷೆ ಮಾಡಿದರು!

ತನ್ನ ದಿನನಿತ್ಯದ ಊಟಕ್ಕಾಗಿ ಸರಿಯಾದ ಆಹಾರವಿಲ್ಲದೆ ಪರದಾಡುವಂತಹ ಮಹಿಳೆಯು ಹಲವಾರು ಮಕ್ಕಳಿಗೆ ಪಾಯಸ ಮಾಡಲು ಕುಳಿತುಕೊಂಡಿದ್ದಾಳೆ ಎಂದು ತಮಾಷೆ ಮಾಡಿ ಅಲ್ಲಿಂದ ಹಾದು ಹೋಗುವವರು ತುಂಬಾ ನಗುವರು. ಅದಾಗ್ಯೂ, ಆಕೆ ತನ್ನಲ್ಲಿ ಇರುವಂತಹ ಎಲ್ಲಾ ಅಕ್ಕಿ ಮತ್ತು ಹಾಲನ್ನು ಸೇರಿಸಿಕೊಂಡು ಪಾಯಸ ತಯಾರು ಮಾಡುವಳು. ಆಕೆ ಪಾಯಸ ತಯಾರು ಮಾಡಿದ ಬಳಿಕ ಮೊದಲಿಗೆ ಪೂಜಾ ಕೊಠಡಿಯಲ್ಲಿ ಗಣಪತಿ ಮತ್ತು ಇತರ ದೇವರಿಗೆ ಇದನ್ನು ನೈವೇದ್ಯವಾಗಿ ಅರ್ಪಣೆ ಮಾಡುವಳು. ಇದರ ಬಳಿಕ ಅದರ ರುಚಿ ನೋಡಿ ಮಕ್ಕಳಿಗೆ ಇದು ರುಚಿಸಬಹುದೇ ಎಂದು ಪರೀಕ್ಷೆ ಮಾಡುವಳು.

ಇದನ್ನು ಪರೀಕ್ಷೆ ಮಾಡಿದ ಬಳಿಕ ಮಹಿಳೆಯು ಮನೆಯ ಹೊರಗಡೆ ಬಂದು ಬಾಲಕನ ರೂಪದಲ್ಲಿದ್ದ ಗಣಪತಿ ದೇವರಿಗೆ ಪಾಯಸ ನೀಡುವಳು. ಅದಾಗ್ಯೂ, ಬಾಲಕನು ಈ ವೇಳೆ ನಾನು ಈಗಾಗಲೇ ಪಾಯಸ ತಿಂದಿದ್ದೇನೆ ಮತ್ತು ಹೊಟ್ಟೆ ಕೂಡ ತುಂಬಿದೆ. ಪಾಯಸ ತುಂಬಾ ರುಚಿಯಾಗಿತ್ತು ಎಂದು ಹೇಳುವನು. ಅಲ್ಲಿದ್ದ ಬೇರೆ ಮಕ್ಕಳಿಗೆ ಪಾಯಸ ನೀಡುವಂತೆ ಬಾಲಕನ ರೂಪದಲ್ಲಿ ಗಣಪತಿ ಹೇಳುವರು. ಇದರಿಂದ ಮಹಿಳೆಗೆ ತುಂಬಾ ಗೊಂದಲ ಉಂಟಾಯಿತು. ಪಾಯಸ ತಿನ್ನದೆ ಹೊಟ್ಟೆ ತುಂಬಿರುವುದು ಹೇಗೆ ಮತ್ತು ಪಾಯಸವು ತುಂಬಾ ರುಚಿಯಾಗಿತ್ತು ಎಂದು ಹೇಳಲು ಹೇಗೆ ಸಾಧ್ಯ ಎಂದು ಆಕೆ ಕೇಳುವಳು.

ಬಾಲಕನ ರೂಪದಲ್ಲಿ ಇರುವುದು ಬೇರಾರು ಅಲ್ಲ, ಅದು ಗಣಪತಿ ದೇವರು

ಬಾಲಕನ ರೂಪದಲ್ಲಿ ಇರುವುದು ಬೇರಾರು ಅಲ್ಲ, ಅದು ಗಣಪತಿ ದೇವರು

ಪೂಜಾ ಕೊಠಡಿಯಲ್ಲಿ ಗಣಪತಿ ದೇವರಿಗೆ ನೈವೇದ್ಯವಾಗಿ ನೀಡಿದ ವೇಳೆ ನಾನು ತಿಂದೆ ಎಂದು ಬಾಲಕ ಉತ್ತರಿಸುವನು. ಈ ವೇಳೆ ಮಹಿಳೆಗೆ ಎಲ್ಲವೂ ಅರ್ಥ ಆಗುವುದು. ಬಾಲಕನ ರೂಪದಲ್ಲಿ ಇರುವುದು ಬೇರಾರು ಅಲ್ಲ, ಗಣಪತಿ ದೇವರು ಎಂದು ಆಕೆಗೆ ಮನವರಿಕೆ ಆಗುತ್ತದೆ. ಆಕೆ ಮೊಣಕಾಲು ಊರಿಕೊಂಡು ಗಣಪತಿ ದೇವರಿಗೆ ನಮಿಸುವರು ಮತ್ತು ಗಣಪತಿ ದೇವರು ಆಕೆಗೆ ಆಶೀರ್ವಾದ ನೀಡುವರು. ಉಳಿದ ಮಕ್ಕಳಿಗೆ ಪಾಯಸವನ್ನು ಮಹಿಳೆಯು ನೀಡುವಳು. ಅಡುಗೆ ಮನೆಗೆ ಬಂದಾಗ ಪಾತ್ರೆಯು ಮತ್ತೆ ತುಂಬಿರುವುದು ಮಹಿಳೆಗೆ ಕಾಣಿಸುವುದು. ಇದನ್ನು ಆಕೆ ಗಣಪತಿ ದೇವರ ಪ್ರಸಾದವೆಂದು ಹೇಳಿ ಸಂಪೂರ್ಣ ಗ್ರಾಮದ ಜನರಿಗೆ ಹಂಚುವಳು. ಮಹಿಳೆಯ ವಿನಮ್ರ ನಡೆಯಿಂದಾಗಿ ಸಂಪೂರ್ಣ ಗ್ರಾಮವು ಪಾಠ ಕಲಿತುಕೊಂಡಿತು ಮತ್ತು ಎಲ್ಲಾ ಗ್ರಾಮಸ್ಥರಿಗೂ ದೇವರು ಆಶೀರ್ವಚಿಸಿದರು.

English summary

The Story Of Lord Ganesha And The Old Lady

There was a village very popular for the villagers' devotion towards Lord Ganesha. Once Lord decided to test them. He took the form of a child and went around the village asking people to prepare rice for him. While he carried a few grains of rice and a spoonful of milk with him, everybody knew that the rice was not sufficient to prepare kheer.
X
Desktop Bottom Promotion