For Quick Alerts
ALLOW NOTIFICATIONS  
For Daily Alerts

ಮಹಾಲಯ ಅಮಾವಾಸ್ಯೆ 2019: ಪೌರಾಣಿಕ ಹಿನ್ನೆಲೆ

|
Special Article On Mahlaya Amavasya
ಇಂದು ಮಹಾಲಯ ಅಮಾವಾಸ್ಯೆ. ಇದನ್ನು ಭಾದ್ರಪದ ಕೃಷ್ಣ ಅಮಾವಾಸ್ಯೆ ಎಂದೂ, ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಈ ವರ್ಷ ಅಂದರೆ 2019ರ ಸೆಪ್ಟೆಂಬರ್ 28ರಂದು ಮಹಾಲಯ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.

ಈ ದಿನದಂದು ನಮ್ಮನ್ನು ಅಗಲಿದ ಹಿರಿಯರಿಗೆ ವಂದಿಸಿ, ಅವರಿಗೆ ಇಷ್ಟವಾದ ಪದಾರ್ಥಗಳನ್ನು ಮಾಡಿ ತಿಲ ದರ್ಪಣವನ್ನು, ಜಲ ದರ್ಪಣವನ್ನು ಹಾಗೂ ಬಲಿಯನ್ನು, ಪಿಂಡವನ್ನು ನೀಡಲಾಗುವುದು. ಇದರಿಂದ ನಮ್ಮ ಪಿತೃಗಳು ತೃಪ್ತರಾಗಿ ಮುಂದಿನ ಪೀಳಿಗೆಗೆ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬುವುದು ನಂಬಿಕೆ.

ಮಹಾಲಯ ಅಮಾವಾಸ್ಯೆಯ ಪೌರಾಣಿಕ ಹಿನ್ನಲೆ:

ಮಹಾಭಾರತ ಕತೆಯಲ್ಲಿ ಕುಂತಿ ಪುತ್ರನಾದ ಕರ್ಣನು, ಕೌರವರರ ಪಡೆಯ ಕಡೆ ನಿಂತು, ಪಾಂಡವರ ವಿರುದ್ಧ ಹೋರಾಡಿದನು. ಈ ಯುದ್ಧದಲ್ಲಿ ಕರ್ಣನು ಅರ್ಜುನನಿಂದ ಹತನಾದನು. ಹೀಗೆ ಹತನಾದ ಕರ್ಣನನ್ನು ದೇವದೂತರು ಸ್ವರ್ಗಕ್ಕೆ ಕರೆದು ಕೊಂಡು ಹೋಗುವಾಗ ಕರ್ಣನಿಗೆ ತುಂಬಾ ಹಸಿವಾಗುತ್ತದೆ. ಆದರೆ ಮಾರ್ಗ ಮಧ್ಯದಲ್ಲಿ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ.

ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಆಭರಣಗಳೇ ಕಾಣುತ್ತವೆ. ಹಸಿವು ತಾಳಲಾರದೆ ಕರ್ಣನು ಯಮಧರ್ಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ.

ಯಮನ ಆದೇಶದಂತೆ ಕರ್ಣನು ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ತನ್ನ ಹಿರಿಯರಿಗೆ ಹಾಗೂ ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ. ಹಿರಿಯರ ಆರ್ಶೀವಾದ ಪಡೆದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ. ಈ ಕತೆಯ ಆಧಾರದ ಮೇಲೆ ಪ್ರತಿವರ್ಷವೂ ಮಹಾಲಯ ಅಮಾವಾಸ್ಯೆಗೆ ನಮ್ಮನ್ನು ಅಗಲಿದ ಹಿರಿಯರನ್ನು ತಪ್ತಿಪಡಿಸಲು ಅವರಿಗೆ ಇಷ್ಟವಾದ ಅಡುಗೆಗಳನ್ನು (ವೆಜ್ ಹಾಗೂ ನಾನ್ ವೆಜ್) ಹಾಗೂ ವಸ್ತ್ರಗಳನ್ನು ಇಟ್ಟು ಆರ್ಶೀವಾದ ಕೇಳುವ ಆಚರಣೆ ತಲಾತಲಾಂತರಗಳಿಂದ ಪಾಲಿಸಲಾಗುತ್ತಿದೆ.

ಈ ಅಮಾವಾಸ್ಯೆಯ ಮಾರನೆ ದಿನದಿಂದ ನಾಡಹಬ್ಬ ದಸರಾದ ಹಬ್ಬದ ಸಡಗರ ಪ್ರಾರಂಭವಾಗುವುದು.

English summary

Special Article On Mahlaya Amavasya | Ritual Things And Belief | ಮಹಾಲಯ ಅಮಾವಾಸ್ಯೆಗೆ ವಿಶೇಷ ಲೇಖನ | ಧಾರ್ಮಿಕ ಆಚರಣೆ ಮತ್ತು ನಂಬಿಕೆ

Mahalaya Amavasya or Pitra Amavasya will offer Tarpanams for ancestors .It is believed that performing Tarpanams or Tarpan during the auspicious Mahalaya Paksha will bless your ancestors and will free them from all their sins.
X
Desktop Bottom Promotion