ಕೃಷ್ಣ ಜನ್ಮಾಷ್ಟಮಿಯಂದು ಈ 6 ಸ್ಥಳಗಳಿಗೆ ಭೇಟಿ ನೀಡಿದರೆ ಕಷ್ಟ ನಿವಾರಣೆಯಾಗುವುದು

By: Jaya subramanya
Subscribe to Boldsky

ಜನ್ಮಾಷ್ಟಮಿಯನ್ನು ಕೃಷ್ಣನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಬಾದ್ರಪದ ಮಾಸದ ಶುಕ್ಷ ಪಕ್ಷದಂದು ಜನ್ಮಾಷ್ಟಮಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಜನ್ಮಾಷ್ಟಮಿಯು ಆಗಸ್ಟ್ 14 ರಂದು ಬರುತ್ತಿದ್ದು ವೈಷ್ಣವ ಜನ್ಮಾಷ್ಟಮಿಯನ್ನು 15 ರಂದು ಆಚರಿಸಲಾಗುತ್ತದೆ.

ಕೃಷ್ಣ ಭಗವಾನರ 5244 ನೇ ಹುಟ್ಟುಹಬ್ಬ ಇದಾಗಿದೆ. ಕೃಷ್ಣನು ತನ್ನ ಬಾಲ್ಯದ ದಿನಗಳನ್ನು, ಯವ್ವೌನದ ದಿನಗಳನ್ನು ಈ ಸ್ಥಳಗಳಲ್ಲಿ ಕಳೆದಿದ್ದಾರೆ. ಅದರ ದ್ಯೋತಕವಾಗಿ ಇಲ್ಲಿ ವಾಸಿಸುವ ಜನರು ಕೃಷ್ಣನ ಕುರಿತಾಗಿ ಅನೇಕ ಕಥಾವಳಿಗಳನ್ನು ನಡೆಸಿ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಜನ್ಮಾಷ್ಟಮಿ ವಿಶೇಷ- ರಾಧಾ-ಕೃಷ್ಣರ ಪ್ರೇಮ ಕಥೆ

ಕೃಷ್ಣ ಭಕ್ತರಿಗೆ ಜನ್ಮಾಷ್ಟಮಿಯು ಹೆಚ್ಚು ಮುಖ್ಯ ಆಚರಣೆಯಾಗಿದೆ. ಕೃಷ್ಣಾಷ್ಟಮಿಯನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮನೆಯಲ್ಲಿಯೇ ವೃತ ಮತ್ತು ಪೂಜೆಗಳನ್ನು ನಡೆಸುವುದರ ಮೂಲಕ ಜನರು ಅಷ್ಟಮಿಯನ್ನು ಆಚರಿಸುತ್ತಾರೆ. ಆದರೆ ಕೃಷ್ಣನ ತವರೂರು ಮತ್ತು ಅವರಿಗೆ ಸಂಬಂಧಿತವಾಗಿರುವ ಊರುಗಳನ್ನು ಭೇಟಿ ನೀಡುವ ಮೂಲಕ ಅಲ್ಲಿನ ಪ್ರಾಮುಖ್ಯತೆಗಳನ್ನು ಅರಿತುಕೊಂಡು ಹಬ್ಬ ನಡೆಸುವವರಿದ್ದಾರೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ..... 

ಮಥುರಾ

ಮಥುರಾ

ಇಲ್ಲಿ ಕೃಷ್ಣನು ಜನ್ಮತಾಳಿದ್ದಾರೆ. ಕಂಸದ ಅರಮನೆಯ ಖಾರಾಗೃಹದಲ್ಲಿ ಕೃಷ್ಣನು ದೇವಕಿಯ ಗರ್ಭದಲ್ಲಿ ಜನ್ಮತಾಳುತ್ತಾರೆ. ಹುಟ್ಟಿದ ನಂತರ ತಂದೆ ವಾಸುದೇವನು ಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ಯುತ್ತಾರೆ. ಈ ದಿನ ಮಥುರಾ ನಗರಿ ಸಂಪೂರ್ಣ ದೀಪಗಳಿಂದ ಅಲಂಕೃತವಾಗಿರುತ್ತದೆ. ಕೃಷ್ಣನ ವಿಶೇಷತೆಗಳನ್ನು ತಿಳಿಸುವ ಟ್ಯಾಬ್ಲೋಗಳು ನಗರದಲ್ಲಿ ಸಂಚರಿಸುತ್ತವೆ. ಮಥುರಾದಲ್ಲಿ ನಡೆಯುವ ಇನ್ನೊಂದು ಹಬ್ಬವೆಂದರೆ ಜುಲಾನ್ ಉತ್ಸವವಾಗಿದೆ. ಈ ನಗರದಲ್ಲಿ ನೀವು ಭೇಟಿ ನೀಡಲೇಬೇಕಾದ ದೇವಸ್ಥಾನವಾಗಿದೆ ಬಾಂಕೆ ಬಿಹಾರಿ ದೇವಸ್ಥಾನ, ದ್ವಾರಕಾದಿಶ ದೇವಸ್ಥಾನ, ಶ್ರೀಕೃಷ್ಣ ಜನ್ಮ ಭೂಮಿ ದೇವಸ್ಥಾನ, ಪ್ರಖ್ಯಾತ ಇಸ್ಕಾನ್ ಮಂದಿರ ಇಲ್ಲಿದೆ. ವಿಶ್ರಾಮ ಘಾಟ್, ಮಹಾಬನ್ ಮತ್ತು ಪೊತಾರಾ ಕುಂಡ್‌ಗೆ ನೀವು ಭೇಟಿ ನೀಡಲೇಬೇಕು.

ವೃಂದಾವನ

ವೃಂದಾವನ

ಮಥುರಾದಿಂದ ಇಲ್ಲಿಗೆ 15 ಕಿ.ಮೀ ದೂರವಿದ್ದು ಇಲ್ಲಿ ಕೃಷ್ಣನು ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದಾರೆ. ಕೃಷ್ಣನ ಲೀಲೆಗಳಲ್ಲಿ ಒಂದಾಗಿರುವ ರಾಸ ಕ್ರೀಡೆ ಇಲ್ಲಿ ನಡೆದಿದೆ. ಇಲ್ಲಿರುವ ಗೋವಿಂದ ದೇವ ದೇವಸ್ಥಾನಕ್ಕೆ ನೀವು ಭೇಟಿ ನೀಡಲೇಬೇಕು. ಇದು ಇಲ್ಲಿರುವ ಹಳೆಯ ದೇವಾಲಯವಾಗಿದೆ. ನಿಧಿ ವನ ಇನ್ನೊಂದು ದೇವಾಲಯವಾಗಿದ್ದು ಇದು ಶ್ರೀಕೃಷ್ಣನಿಗೆ ಅರ್ಪಿತವಾಗಿದೆ. ತಮ್ಮ ಸಖಿ ಮತ್ತು ರಾಧೆ ಮತ್ತು ಇತರ ಗೋಪಿಕಾ ಸ್ತ್ರೀಯರೊಂದಿಗೆ ಕೃಷ್ಣನು ಭೇಟಿ ನೀಡುತ್ತಿದ್ದ ದೇವಾಲಯ ಇದಾಗಿದೆ. ವೃಂದಾವನದಲ್ಲಿರುವ ಇನ್ನೊಂದು ದೇವಾಲಯವಾಗಿದೆ ತುಳಸಿ ವನ.

ಗೋಕುಲ

ಗೋಕುಲ

ತಮ್ಮ ಬಾಲ್ಯದ ಹೆಚ್ಚು ದಿನಗಳನ್ನು ಶ್ರೀಕೃಷ್ಣನು ಇಲ್ಲಿಯೇ ಕಳೆದಿರುವುದು ಎಂಬುದಾಗಿ ಪುರಾಣಗಳು ಹೇಳುತ್ತವೆ. ಕಾಡಿನಿಂದ ಆವೃತವಾಗಿರುವ ಸ್ಥಳ ಇದಾಗಿದೆ ಮತ್ತು ಕೃಷ್ಣನು ತನ್ನ ಗೋವುಗಳನ್ನು ಇಲ್ಲಿಯೇ ಮೇಯಿಸುತ್ತಿದ್ದರು ಎಂಬುದಾಗಿ ವ್ಯಾಖ್ಯಾನಗೊಂಡಿದೆ. ಸರಿಯಾದ ಜನ್ಮಾಷ್ಟಮಿಯ ನಂತರದ ದಿನ ಇಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಮಧ್ಯರಾತ್ರಿ ಕಳೆದ ನಂತರ ಕೃಷ್ಣನನ್ನು ಗೋಕುಲಕ್ಕೆ ಕರೆದುಕೊಂಡು ಬಂದಿರುವುದರಿಂದ ಇಲ್ಲಿ ಅಷ್ಟಮಿ ಆಚರಣೆ ಮರುದಿನವಾಗಿದೆ. ಇಲ್ಲಿ ಜನ್ಮಾಷ್ಟಮಿಯ ಆಚರಣೆ ಅನನ್ಯವಾಗಿರುತ್ತದೆ. ಇಲ್ಲಿನ ಜನರು ಮೊಸರು ಅರಶಿನದಿಂದ ಪರಸ್ಪರ ಮುಳುಗೇಳುತ್ತಾರೆ. ಗೋಕುಲದಲ್ಲಿರುವ ದೇವಸ್ಥಾನಗಳೆಂದರೆ ರಾಧಾ ದಾಮೋದರ ದೇವಸ್ಥಾನವಾಗಿದೆ.

ದ್ವಾರಕಾ

ದ್ವಾರಕಾ

ತಮ್ಮ ಯವ್ವೌನದ ದಿನಗಳನ್ನು ಕೃಷ್ಣನು ದ್ವಾರಕಾದಲ್ಲಿ ಕಳೆದಿದ್ದಾರೆ. ಗುಜರಾತ್ ತೀರದಲ್ಲಿ ಮೂಲ ದ್ವಾರಕಾ ನೆಲೆಗೊಂಡಿತ್ತು. ಕೃಷ್ಣನ ಮರಣಾನಂತರ ದ್ವಾರಕೆಯನ್ನು ಸಮುದ್ರದಲ್ಲಿ ಶೋಧಿಸಲಾಗಿದೆ. ಈಗ ಆಧುನಿಕ ದ್ವಾರಕೆಯು ಕಚ್‌ನಲ್ಲಿದೆ. ಕೃಷ್ಣನಿಗೆ ಅರ್ಪಿತವಾಗಿರುವ ದೇವಸ್ಥಾನಗಳಲ್ಲಿ ದ್ವಾರಕಾಧೀಶ ದೇವಸ್ಥಾನ ಕೂಡ ಒಂದಾಗಿದ್ದು ಇದು ಇಲ್ಲಿ ನೆಲೆಗೊಂಡಿದೆ. ಇನ್ನೊಂದು ಇಲ್ಲಿರುವ ದೇವಸ್ಥಾನವೆಂದರೆ ಅದು ರುಕ್ಮಿಣಿ ದೇವಾಲಯವಾಗಿದೆ. ಇಲ್ಲಿ ಅಷ್ಟಮಿಯಂದು ರಾಸ್ ಮತ್ತು ಗರ್ಭಾ ನೃತ್ಯವನ್ನು ಮಾಡಲಾಗುತ್ತದೆ. ಭಜನೆ ಮತ್ತು ಸತ್ಸಂಗವನ್ನು ಏರ್ಪಡಿಸಲಾಗುತ್ತದೆ ರಾತ್ರಿ ಪೂರ್ತಿ ಇಲ್ಲಿ ಅಷ್ಟಮಿಯ ಆಚರಣೆಯನ್ನು ನಡೆಸುತ್ತಿದ್ದು ಮನಕ್ಕೆ ಮುದವನ್ನು ನೀಡುತ್ತದೆ.

ಪುರಿ

ಪುರಿ

ಜಗನ್ನಾಥ ದೇವಸ್ಥಾನವಿರುವ ಸ್ಥಳ ಇದಾಗಿದೆ. ಜಗನ್ನಾಥ ಅಥವಾ ಕೃಷ್ಣ ದೇವರು ತಮ್ಮ ಸಹೋದರರೊಂದಿಗೆ ಇಲ್ಲಿ ನೆಲೆಸಿದ್ದಾರೆ. ಬಲರಾಮ ಮತ್ತು ಸುಭದ್ರ ದೇವರ ಜೊತೆಗೆ ಇಲ್ಲಿದ್ದಾರೆ. ಪ್ರತೀ ವರ್ಷ ಪುರಿ ನಗರವು ಜನ್ಮಾಷ್ಟಮಿಯಂದು ಆಧ್ಯಾತ್ಮಿಕೆ ಮತ್ತು ಆಚರಣೆಗಳಿಂದ ಮೈತಳೆಯುತ್ತದೆ. ರಾತ್ರಿ ಪೂರ್ತಿ ಭಜನೆಗಳನ್ನು ಇಲ್ಲಿ ನಡೆಸಲಾಗುತ್ತದೆ ಮತ್ತು ಕೃಷ್ಣ ಮತ್ತು ಬಲರಾಮರ ಬಾಲ್ಯದ ದಿನಗಳಲ್ಲಿ ಇಲ್ಲಿ ಆಡಿ ತೋರಿಸುತ್ತಾರೆ. ಅಂತೆಯೇ ಕಂಸ ವಧೆಯಂತಹ ನಾಟಕಗಳನ್ನು ಜನರು ಇಲ್ಲಿ ಆಡಿ ತೋರಿಸುತ್ತಾರೆ.

ಉಡುಪಿ

ಉಡುಪಿ

ದಕ್ಷಿಣ ಭಾರತದಲ್ಲಿರುವ ಪವಿತ್ರ ಯಾತ್ರಾ ಸ್ಥಳವಾಗಿದೆ ಉಡುಪಿ. ನೀವು ಭೇಟಿ ನೀಡಲೇಬೇಕಾದ ಸ್ಥಳ ಇದಾಗಿದೆ. ಇಲ್ಲಿರುವ ಉಡುಪಿ ಕೃಷ್ಣ ಮಠವು ಇತರ ಎಂಟು ಧಾರ್ಮಿಕ ಮಂದಿರಗಳಿಗೆ ಮುಖ್ಯ ದೇವಸ್ಥಾನವಾಗಿದೆ. ಇಲ್ಲಿ ಕೂಡ ಅಷ್ಟಮಿಯ ದಿನ ಸಂಭ್ರಮಾಚರಣೆಗಳು ಇಲ್ಲಿ ನಡೆಯುತ್ತವೆ. ಉಡುಪಿಯ ರಥ ಬೀದಿಗಳಲ್ಲಿ ಕೃಷ್ಣನ ಕುರಿತಾಗಿ ಸಾಂಸ್ಕೃತಿಕ ಆಚರಣೆಗಳು ನಡೆಯುತ್ತವೆ. ಅಂತೆಯೇ ಇಲ್ಲಿನ ವಿಶೇಷವಾದ ನಾಟ್ಯ ಯಕ್ಷಗಾನವನ್ನು ಈ ದಿನ ಪ್ರದರ್ಶಿಸಲಾಗುತ್ತದೆ.

English summary

Six Places Of Worship That You Must Visit On Janmashtami

Janmashtami is one of the most important festivals for the devotees of Lord Sri Krishna and Lord Maha Vishnu. It is celebrated with great pomp and show all over India. People observe Janmashtami at homes by performing poojas and vrats. There are others who choose to spend the day at temples and places of worship. Among the many places that dot the country, there are a few that are truly special. These places inspire intense devotion and love in the minds of the devotees.
Story first published: Wednesday, August 9, 2017, 23:55 [IST]
Subscribe Newsletter