ನವರಾತ್ರಿ ವಿಶೇಷ: ಒಂಬತ್ತು ದಿನ ಬರೋಬ್ಬರಿ ಒಂಬತ್ತು ಅವತಾರವೆತ್ತುವ ದುರ್ಗೆ

By Hemanth
Subscribe to Boldsky

ನವರಾತ್ರಿ ಸಡಗರದಲ್ಲಿ ಹೊಸ ಹೊಸ ಬಟ್ಟೆಬರೆ ಧರಿಸಿಕೊಂಡು ಓಡಾಡುವಂತಹ ಸೊಬಗೇ ಬೇರೆ. ಅದರಲ್ಲೂ ಮಹಿಳೆಯರು ನವರಾತ್ರಿ ಸಂದರ್ಭದಲ್ಲಿ ಒಂದೊಂದು ದಿನ ಒಂದೊಂದು ಬಣ್ಣ ಸೀರೆ ಉಡುವರು. ಅದರಲ್ಲೂ ಗುಜರಾತ್‍ನಲ್ಲಿ ಗರ್ಭಾ ನೃತ್ಯದ ಸಂದರ್ಭದಲ್ಲಿ ವಿವಿಧ ರೀತಿಯ ಉಡುಗೆ ಧರಿಸುವರು. ಇದರಿಂದ ಅಲ್ಲಿನ ಆಕರ್ಷಣೇಯೇ ಬೇರೆ.

ನವರಾತ್ರಿ ವಿಶೇಷ: ಒಂಬತ್ತು ದಿನ ತಪ್ಪದೇ ಪಠಿಸಿ ಈ ಪೂಜಾ ಮಂತ್ರಗಳು

ಮಹಿಳೆಯರು ಪ್ರತೀ ದಿನ ಹೊಸ ಬಣ್ಣದ ಬಟ್ಟೆ ಧರಿಸುವರು. ನವರಾತ್ರಿ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ದುರ್ಗೆಯ ಪೂಜೆಯ ವೇಳೆ ದುರ್ಗೆಗೆ ಪ್ರತೀದಿನವೂ ಒಂದೊಂದು ಬಣ್ಣದ ಸೀರೆಯಿರುವುದು. 9 ದಿನಗಳಲ್ಲಿ ಬರುವ ಒಂಬತ್ತು ಬಣ್ಣಗಳಿಗೆ ಯಾವುದಾದರೂ ಕಾರಣಗಳು ಇದೆಯಾ ಎಂದು ತಿಳಿದುಕೊಳ್ಳಿ. ಈ ಲೇಖನದಲ್ಲಿ ಒಂಬತ್ತು ದಿನಗಳ 9 ಬಣ್ಣಗಳ ಬಗ್ಗೆ ತಿಳಿಸಲಿದೆ...

 ಮೊದಲ ದಿನ (ಕೆಂಪು)

ಮೊದಲ ದಿನ (ಕೆಂಪು)

ನವರಾತ್ರಿಯ ಮೊದಲ ದಿನವನ್ನು ಪ್ರತಿಪಾದ ಎಂದು ಕರೆಯುವರು. ಈ ದಿನ ದೇವಿಯ ಶೈಲಪುತ್ರಿ ರೂಪವನ್ನು ಪೂಜಿಸಲಾಗುವುದು. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು. ಈ ರೂಪವು ದುರ್ಗೆ ದೇವಿಯ ಪರಿಗಣಿಸುವ ರೂಪವಾಗಿದೆ. ಈಶ್ವರನ ಪತ್ನಿಯಾಗಿಯೂ ಪೂಜಿಸಲಾಗುತ್ತದೆ. ಪ್ರತಿಪಾದದ ಕೆಂಪು ಬಣ್ಣವು ಸತ್ವ ಮತ್ತು ಕ್ರಿಯೆಯ ಸಂಕೇತವಾಗಿದೆ. ಈ ಶಕ್ತಿಯುತ ಬಣ್ಣವು ದೇಹಕ್ಕೆ ಉಷ್ಣತೆ ನೀಡುವುದು. ಇದು ನವರಾತ್ರಿಗೆ ತಯಾರಾಗುವ ಸರಿಯಾದ ವಿಧಾನ.

ಎರಡನೇ ದಿನ (ನವಿಲು ನೀಲಿ)

ಎರಡನೇ ದಿನ (ನವಿಲು ನೀಲಿ)

ಎರಡನೇ ದಿನ ಅಥವಾ ದ್ವಿತೀಯದಂದು ದುರ್ಗೆಯು ಬ್ರಹ್ಮಚಾರಿಣಿ ಅವತಾರ ಪಡೆಯುವಳು. ಬ್ರಹ್ಮಚಾರಿಣಿ ಅವತಾರದಲ್ಲಿ ದುರ್ಗೆಯು ಸಮೃದ್ಧಿ ಹಾಗೂ ಸಂತೋಷ ನೀಡುವಳು. ನವಿಲಿನ ನೀಲಿ ಬಣ್ಣವು ಈ ದಿನದ ಬಣ್ಣವಾಗಿದೆ. ನೀಲಿ ಬಣ್ಣವು ಶಾಂತಿಯ ಸಂಕೇತವಾದರೂ ಶಕ್ತಿಶಾಲಿ.

ಮೂರನೇ ದಿನ (ಹಳದಿ)

ಮೂರನೇ ದಿನ (ಹಳದಿ)

ಮೂರನೇ ಅಥವಾ ತೃತೀಯ ದಿನವು ದುರ್ಗೆಯನ್ನು ಚಂದ್ರಘಾತ ರೂಪದಲ್ಲಿ ಪೂಜಿಸಲಾಗುವುದು. ದುರ್ಗೆಯ ಹಣೆಯಲ್ಲಿ ಅರ್ಧ ಚಂದ್ರನ ಆಕೃತಿಯಿರುವುದು. ಇದು ಧೈರ್ಯ ಹಾಗೂ ಸೌಂದರ್ಯದ ಸಂಕೇತ. ಚಂದ್ರಘಾತ ದುಷ್ಟಶಕ್ತಿಗಳ ವಿರುದ್ಧ ಹಲವಾರು ಯುದ್ಧಗಳನ್ನು ಮಾಡಿರುವಾಕೆ. ಮೂರನೇ ದಿನದ ಬಣ್ಣ ಹಳದಿ. ಇದು ಉತ್ಸಾಹಭರಿತ ಬಣ್ಣ ಮತ್ತು ಪ್ರತಿಯೊಬ್ಬರ ಮನೋಸ್ಥಿತಿಯನ್ನು ಉತ್ತಮಪಡಿಸುವುದು.

ನಾಲ್ಕನೇ ದಿನ (ಹಸಿರು)

ನಾಲ್ಕನೇ ದಿನ (ಹಸಿರು)

ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿ ದುರ್ಗೆಯು ಕುಸುಮಾಂದ ಅವತಾರವೆತ್ತುವಳು. ಈ ದಿನದ ಬಣ್ಣವು ಹಸಿರು. ಕುಸುಮಾಂದ ದೇವಿಯು ಈ ಭೂಮಿಯ ಸೃಷ್ಟಿಕೃರ್ತೆ ಎಂದು ಹೇಳಲಾಗುತ್ತದೆ. ಆಕೆ ನಗುವಿನಿಂದ ಈ ಭೂಮಿ ತುಂಬಾ ಹಚ್ಚಹಸಿರು ತುಂಬಿದಾಕೆ ಎಂದು ಹೇಳಲಾಗುತ್ತದೆ.

ಐದನೇ ದಿನ (ಕಂದು)

ಐದನೇ ದಿನ (ಕಂದು)

ಐದನೇ ದಿನ ಅಥವಾ ಪಂಚಮಿಯಂದು ದೇವಿಯು ಸ್ಕಂದ ಮಾತೆಯ ಅವತಾರವೆತ್ತುವಳು. ಈ ದಿನದಂದು ದೇವಿಯು ಕಾರ್ತಿಕ(ದೇವರು) ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಬರುವಳು. ದುರ್ಬಲ ತಾಯಿಯು ತನ್ನ ಮಗನನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುವ ಸಲುವಾಗಿ ಚಂಡಮಮಾರುತವಾಗಬಲ್ಲಲು ಎನ್ನುವುದು ಈ ಕಂದು ಬಣ್ಣದ ಪ್ರತೀಕ.

ಆರನೇ ದಿನ(ಕಿತ್ತಳೆ)

ಆರನೇ ದಿನ(ಕಿತ್ತಳೆ)

ಆರನೇ ದಿನವಾದ ಸಷ್ಠಿಯಂದು ದೇವಿ ದುರ್ಗೆಯು ಕಾತ್ಯಾಯಿನಿ ರೂಪ ಪಡೆದುಕೊಳ್ಳುವಳು. ಶ್ರೇಷ್ಠ ಸನ್ಯಾಸಿ ಕತಾನು ದುರ್ಗೆಯು ತನ್ನ ಮಗಳಾಗಿ ಬರಬೇಕೆಂದು ಆಕಾಂಕ್ಷೆಯೊಂದಿಗೆ ಘೋರ ತಪಸ್ಸು ಮಾಡುವನು. ಕತಾನ ತಪಸ್ಸಿಗೆ ಒಲಿದ ದುರ್ಗೆಯು ಆತನ ಮಗಳಾಗಿ ಬರುವಳು. ಈ ದಿನವು ಕಿತ್ತಳೆ ಬಣ್ಣದ್ದಾಗಿದ್ದು, ಇದು ಶ್ರೇಷ್ಠ ಸಾಹಸದ್ದಾಗಿದೆ.

ಏಳನೇ ದಿನ(ಬಿಳಿ)

ಏಳನೇ ದಿನ(ಬಿಳಿ)

ದೇವಿ ದುರ್ಗೆಯ ಕಾಳರಾತ್ರಿ ಅವತಾರವನ್ನು ಆರಾಧಿಸುವ ದಿನವೇ ಸಪ್ತಮಿ ಅಥವಾ ಏಳನೇ ದಿನ. ಇದು ದುರ್ಗೆಯ ತುಂಬಾ ಹಿಂಸಾರೂಪವಾಗಿದೆ. ಸಪ್ತಮಿಯಂದು ದೇವಿಯು ಬಿಳಿ ಬಣ್ಣದಲ್ಲಿ ಅವತಾರವೆತ್ತುವಳು. ಆದರೆ ಆಕೆಯ ಕಣ್ಣುಗಳು ಉಗ್ರತ್ವದಿಂದ ಕೆಂಪಾಗಿರುವುದು. ಬಿಳಿ ಬಣ್ಣವು ಪ್ರಾರ್ಥನೆ ಹಾಗೂ ಶಾಂತಿಯ ಸಂಕೇತ. ಎಲ್ಲಾ ರೀತಿಯ ಸಂಕಷ್ಟಗಳಿಂದ ದೇವಿಯು ಭಕ್ತರನ್ನು ಪಾರು ಮಾಡುವಳು ಎನ್ನುವುದು ಇದರ ಸೂಚಕ.

ಎಂಟನೇ ದಿನ(ಗುಲಾಬಿ)

ಎಂಟನೇ ದಿನ(ಗುಲಾಬಿ)

ಗುಲಾಬಿಯು ಎಂಟನೇ ಅಥವಾ ಅಷ್ಟಮಿಯ ಬಣ್ಣವಾಗಿದೆ. ಈ ದಿನ ದುರ್ಗೆಯು ಎಲ್ಲಾ ರೀತಿಯ ದುಷ್ಟಶಕ್ತಿಗಳನ್ನು ದೂರ ಮಾಡುವಳು. ಗುಲಾಬಿ ಬಣ್ಣವು ನಿರೀಕ್ಷೆ ಮತ್ತು ಹೊಸ ಆರಂಭದ ಸಂಕೇತ.

ಒಂಬತ್ತನೇ ದಿನ(ತಿಳಿ ನೀಲಿ)

ಒಂಬತ್ತನೇ ದಿನ(ತಿಳಿ ನೀಲಿ)

ನವಮಿ ಅಥವಾ 9ನೇ ದಿನದಂದು ದೇವಿಯು ಸಿದ್ಧಿದಾತ್ರಿ ಅವತಾರದಲ್ಲಿರುವಳು. ಈ ದಿನ ಆಕೆಯ ಬಟ್ಟೆಯ ಬಣ್ಣವು ಆಕಾಶ ನೀಲಿಯಾಗಿರುವುದು. ಸಿದ್ಧಿದಾತ್ರಿ ರೂಪವು ಅತಿಮಾನುಷ ಶಮನಕಾರಿ ಗುಣ ಹೊಂದಿದೆ ಎಂದು ನಂಬಲಾಗಿದೆ. ತಿಳಿ ನೀಲಿ ಬಣ್ಣವು ಸ್ವಾಭಾವಿಕ ಸೌಂದರ್ಯದ ಪ್ರತೀಕ.

For Quick Alerts
ALLOW NOTIFICATIONS
For Daily Alerts

    English summary

    Significance Of Each Colour In Navratri

    Navratri is just around the corner and everyone seems to be very excited for this festival. Navratri means donning a vibrant attire and dancing "Garba" along with family and friends; and hence, women and young girls specially look forward to it throughout the year. During the 9 days of Navratri, there is a particular colour code for each day. Women dress up in that specific colour and admire the beautiful costumes of each other.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more