For Quick Alerts
ALLOW NOTIFICATIONS  
For Daily Alerts

ಶರಧಿಯ ನವರಾತ್ರಿ: ದಿನಾಂಕ, ಮುಹೂರ್ತ ಮತ್ತು ಮಹತ್ವ

|

ಅಕ್ಟೋಬರ್ ತಿಂಗಳು ಬಂದಿತೆಂದರೆ ಹಬ್ಬಗಳ ಆಗಮನಕ್ಕೆ ಚಾಲನೆ ದೊರೆತಂತೆ. ಈ ಮಾಸದಲ್ಲಿ ಬರುವ ನವರಾತ್ರಿ ಹಬ್ಬವು ಅನಾದಿ ಕಾಲದಿಂದಲೂ ಪವಿತ್ರವಾದುದು ಮತ್ತು ಅದರದ್ದೇ ಆದ ವಿಶೇಷತೆಗಳನ್ನು ಪಡೆದುಕೊಂಡಿದೆ. ಈ ಬಾರಿಯ ನವರಾತ್ರಿಯು ಅಕ್ಟೋಬರ್ 10 ರಿಂದ ಆರಂಭಗೊಂಡು ಅಕ್ಟೋಬರ್ 18 2018 ರವರೆಗೆ ಮುಂದುವರಿಯಲಿದೆ. ಈ ಒಂಭತ್ತು ದಿನಗಳಲ್ಲಿ ದುರ್ಗಯೆ ಒಂಭತ್ತು ರೂಪಗಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಅಶ್ವಿನ್ ಮಾಸದಲ್ಲಿ ನವರಾತ್ರಿಯು ಬರುತ್ತಿದ್ದು ಈ ಮಾಸವನ್ನು ಮಹಾ ನವರಾತ್ರಿ ಎಂದು ಕೂಡ ಕರೆಯಲಾಗುತ್ತದೆ.

ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆಮೀರಿ, ಅನ್ಯಾಯವು ಅತಿಯಾಗಿ, ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ದುರ್ಗೆ ಮಾತೆ. ದುರ್ಗೆಯು ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳಲ್ಲಿ ಇದೆ. ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿಯ ವೇಳೆ ಪೂಜಿಸಲಾಗುವುದು. ನವರಾತ್ರಿಯು ದುಷ್ಟರನ್ನು ಸಂಹಾರಗೈದು ನ್ಯಾಯನೀತಿ ನೆಲೆ ಮಾಡಿದ ದಿನಗಳು.

Navratri Ghat Sthapana

ದೇವಿಯು ಒಂದೊಂದು ರೂಪವನ್ನು ಧರಿಸಿ ಒಬ್ಬೊಬ್ಬ ಅಸುರರನ್ನು ಹತ್ಯೆಗೈದಿದ್ದಾರೆ. ಈ ಸಮಯದಲ್ಲಿ ಬರಿಯ ದೇವಿಗೆ ಮಾತ್ರ ಅಲಂಕಾರ ಮಾಡದೆ ಸಂಪೂರ್ಣ ನಗರವನ್ನು ಅಲಂಕರಿಸಿ ಸಂಭ್ರಮಿಸಲಾಗುತ್ತದೆ. ಹೀಗೆ ನವರಾತ್ರಿಯಲ್ಲಿ ದೇವಿಯ ಒಂಭತ್ತು ರೂಪಗಳು ಮತ್ತು ಅದರದ್ದೇ ಆದ ಮಹತ್ವವನ್ನು ನವರಾತ್ರಿ ಸಾರುತ್ತದೆ.

ನವರಾತ್ರಿಯ ಮಹತ್ವ

ನವರಾತ್ರಿಯ ಮಹತ್ವ

ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವಂತೆ ನವರಾತ್ರಿ ಆಚರಣೆಗೆ ಒಂದು ಮಹತ್ವದ ಕಾರಣವಿದೆ. ಪುರಾಣದಲ್ಲಿ ದುರ್ಗ ಸಪ್ತಾಷ್ಟಿ ಒಂದು ಭಾಗವಾಗಿದೆ. ಶಕ್ತಿಯ ರೂಪವಾಗಿರುವ ಒಬ್ಬ ಹುಡುಗಿಯ ಜನನವನ್ನು ಇದು ವಿವರಿಸುತ್ತದೆ. (ಶಕ್ತಿಯನ್ನು ದುರ್ಗಾ ಮಾತೆ ಎಂದು ಕೂಡ ಕರೆಯಲಾಗುತ್ತದೆ ಹಾಗೂ ದುರ್ಗೆಗೆ ಬೇರೆ ಬೇರೆ ಹೆಸರುಗಳಿವೆ, ಹಿಂದೂ ಧರ್ಮದಲ್ಲಿ ಶಕ್ತಿ ಪದ್ಧತಿಯನ್ನು ಅನುಸರಿಸುವ ಮೊದಲ ದೇವತೆ ದುರ್ಗೆಯಾಗಿದ್ದಾರೆ).

Most Read: ಮನೆಯಲ್ಲಿ ಇಂತಹ ಪೈಂಟಿಂಗ್‪ಗಳಿದ್ದರೆ-ಮೊದಲು ಹೊರಗಡೆ ಹಾಕಿ!!

ಮಹರಾತ್ರಿ ದಿನಾಂಕಗಳು ಮತ್ತು ಗಟ್ ಸ್ತಾಪನಾ ಮುಹೂರ್ತ 2018

ಮಹರಾತ್ರಿ ದಿನಾಂಕಗಳು ಮತ್ತು ಗಟ್ ಸ್ತಾಪನಾ ಮುಹೂರ್ತ 2018

ಶರಧೀಯ ನವರಾತ್ರಿಯನ್ನು ಅಶ್ವಿನ್ ಮಾಸದ ಸಮಯದಲ್ಲಿ ಆಚರಿಸಲಾಗುತ್ತದೆ. ಸಪ್ಟೆಂಬರ್ ಮತ್ತು ಅಕ್ಟೋಬರ್ ಮಾಸದ ಮೊದಲ ದಿನ ಜೊತೆಯಾಗಿ ಇದು ಬರುತ್ತದೆ, ಪ್ರತಿಪಾದ ತಿಥಿ ( ಪೂರ್ಣ ಚಂದಿರ ರಾತ್ರಿಯ ಹದಿನೈದನೇ ದಿನ). ಪ್ರತಿಪಾದವನ್ನು ಅಕ್ಟೋಬರ್ 9 ಬೆಳಗ್ಗೆ 9:16 ರಂದು ಆರಂಭಗೊಳ್ಳುತ್ತದೆ ಮತ್ತು ಅಕ್ಟೋಬರ್ 10 ರ ಬೆಳಗ್ಗೆ 7:25 ಕ್ಕೆ ಇದು ಅಂತ್ಯಗೊಳ್ಳುತ್ತದೆ. ಅಕ್ಟೋಬರ್ 10 ರಂದು ಮುಹೂರ್ತವು ಬೆಳಗ್ಗೆ 6:22 ರಿಂದ 7: 25 ರವರೆಗೆ ಇರುತ್ತದೆ ( 1 ಗಂಟೆ 2 ನಿಮಿಷಗಳು).

ದೇವಿಯನ್ನು ಯಾವ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ತಿಥಿಗಳ ರೂಪದಲ್ಲಿ ಇದನ್ನಿಲ್ಲಿ ನೀಡಲಾಗಿದೆ.

ಅಕ್ಟೋಬರ್ 10: ಪ್ರಥಮ - ದೇವಿ ಶೈಲಪುತ್ರಿ

ಅಕ್ಟೋಬರ್11: ದ್ವಿತೀಯ- ದೇವಿ ಬ್ರಹ್ಮಚಾರಿ

ಅಕ್ಟೋಬರ್12: ತೃತೀಯ-ದೇವಿ ಚಂದ್ರಘಂಟ

ಅಕ್ಟೋಬರ್13: ಚತುರ್ಥಿ- ದೇವಿ ಕೂಷ್ಮಂಡಾ

ಅಕ್ಟೋಬರ್14: ಪಂಚಮಿ - ದೇವಿ ಸ್ಕಂದಮಾತಾ

ಅಕ್ಟೋಬರ್15: ಷಷ್ಟಿ - ದೇವಿ ಕಾತ್ಯಾಯಿನಿ

ಅಕ್ಟೋಬರ್16: ಸಪ್ತಮಿ - ದೇವಿ ಕಾಳರಾತ್ರಿ

ಅಕ್ಟೋಬರ್17: ಅಷ್ಟಮಿ - ದೇವಿ ಮಹಾಗೌರಿ

ಅಕ್ಟೋಬರ್18: ನವಮಿ - ದೇವಿ ಸಿದ್ಧಿದಾತ್ರಿ

Most Read: ಹಿಮ್ಮಡಿ ಕಾಲು ಒಡೆದಿದ್ರೆ-ಪುದೀನಾ ಎಲೆಗಳ ಫೂಟ್ ಮಸಾಜ್ ಮಾಡಿ!

ನಾಲ್ಕು ಪ್ರಕಾರಗಳ ನವರಾತ್ರಿ

ನಾಲ್ಕು ಪ್ರಕಾರಗಳ ನವರಾತ್ರಿ

ಈ ವರ್ಷದಲ್ಲಿ ನಾಲ್ಕು ಪ್ರಕಾರಗಳ ನವರಾತ್ರಿಯನ್ನು ಆಚರಿಸಲಾಗುತ್ತದೆ, ಹಿಂದೂ ಮಾಸದ ಚೈತ್ರ, ಆಹಾಡ, ಅಶ್ವಿನ್ ಮತ್ತು ಮಘಾ ತಿಂಗಳುಗಳಾಗಿವೆ. ಚೈತ್ರ ಮತ್ತು ಅಶ್ವಿನ್ ಮಾಸದಲ್ಲಿ ಬರುವ ನವರಾತ್ರಿ ಪ್ರಮುಖವಾದುದು.

ನವರಾತ್ರಿಯ ಹತ್ತನೇ ದಿನ

ನವರಾತ್ರಿಯ ಹತ್ತನೇ ದಿನ

ಒಂಭತ್ತು ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುತ್ತದೆ ಮತ್ತು ಹತ್ತನೇ ದಿನ ವಿಜಯ ದಶಮಿಯಾಗಿದೆ ಈ ದಿನ ದೇವರು ಕೆಟ್ಟದ್ದರ ಮೇಲೆ ಜಯದ ಗೆಲುವನ್ನು ಆಚರಿಸುತ್ತಾರೆ. ಅಂತೆಯೇ ರಾಮನು ಈ ದಿನ ರಾವಣನನ್ನು ಸೋಲಿಸಿದರು ಎಂದು ಹೇಳಲಾಗಿದೆ ಈ ದಿನವನ್ನು ಅದಕ್ಕಾಗಿ ದಸರಾ ಎಂದು ಕರೆಯಲಾಗುತ್ತದೆ. (ಅದೇ ರೀತಿಯಾಗಿ ಚೈತ್ರ ನವರಾತ್ರಿಯ ಹತ್ತನೇ ದಿನ ರಾಮ ನವಮಿಯನ್ನು ಆಚರಿಸಲಾಗುತ್ತದೆ). ಮಹಾನವಮಿಯಂದು ಅಕ್ಟೋಬರ್ 18 ರಂದು ಮಹಾನವಮಿ ಅಂದರೆ ಅಕ್ಟೋಬರ್ 19, 2018 ರಂದು ನವರಾತ್ರಿ ಮುಕ್ತಾಯವಾಗುತ್ತದೆ.

English summary

Sharadiya Navratri: Date, Muhurta And Significance

Navratri is going to be observed from October 10 and will continue till October 18, 2018. The nine forms of Goddess Durga are worshipped during this period of nine days. The Navratri falling during the Ashvin month is known as Maha Navratri. It is either the main festival or is celebrated as one of the most popular festivals in most of the states of India.
Story first published: Thursday, October 4, 2018, 13:00 [IST]
X
Desktop Bottom Promotion