Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮುಂಜಾನೆ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವಿಧಾನಗಳು
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವದೇವತೆಗಳು ಇದ್ದಾರೆ ಎನ್ನುವ ನಂಬಿಕೆಯಿದೆ. ಇದರಲ್ಲಿ ಮುಖ್ಯವಾಗಿ ಹಾಗೂ ನಮಗೆ ದಿನಾಲೂ ಕಾಣುವಂತಹ ದೇವರು ಎಂದರೆ ಅದು ಸೂರ್ಯ ದೇವರು. ಸೂರ್ಯ ದೇವರು ನಮಗೆ ಪ್ರತಿನಿತ್ಯವು ದರ್ಶನ ನೀಡುವರು. ಯಾವುದೇ ಯುಗ ಬಂದರೂ ಸೂರ್ಯ ದೇವರು ಮಾತ್ರ ಭೂಮಿ ಮೇಲಿನ ಮನುಷ್ಯರಿಗೆ ದರ್ಶನ ನೀಡುವರು. ಹಿಂದೂ ಧರ್ಮದಲ್ಲಿ ಪ್ರತಿನಿತ್ಯ ಎದ್ದ ಬಳಿಕ ನಿತ್ಯ ಕರ್ಮಗಳನ್ನು ಪೂರೈಸಿಕೊಂಡು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವಂತಹ ಕ್ರಮವಿದೆ.
ಈ ವೇಳೆ ಹಿಂದೂಗಳು ಒಂದು ತಾಮ್ರದ ಪಾತ್ರೆ ಅಥವಾ ಲೋಟದಲ್ಲಿ ನೀರು ಹಿಡಿದುಕೊಂಡು ಸೂರ್ಯ ದೇವರ ಮಂತ್ರ ಪಠಿಸುತ್ತಾ ಅದನ್ನು ನೆಲಕ್ಕೆ ಅರ್ಪಿಸುವರು. ಇದರಿಂದ ಜೀವನದಲ್ಲಿ ಒಳ್ಳೆಯ ಅದೃಷ್ಟ ಸಿಗುವುದು ಎಂದು ನಂಬಲಾಗಿದೆ. ಇಷ್ಟು ಮಾತ್ರವಲ್ಲದೆ ಇದರಿಂದ ಆತ್ಮಾಭಿಮಾನ ಹೆಚ್ಚಾಗುವುದು ಮತ್ತು ಸಮಾಜದಲ್ಲಿ ಪ್ರತಿಷ್ಠೆಯು ವೃದ್ಧಿಸುವುದು.

ಸೂರ್ಯ ದೇವರನ್ನು ಪೂಜಿಸುವ ಮೂಲಕ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಸೂರ್ಯ ದೇವರ ಪೂಜೆ ಮಾಡುವವರಿಗೆ ಕಣ್ಣಿನ ದೃಷ್ಟಿ ಒಳ್ಳೆಯದಾಗುವುದು ಮತ್ತು ಚರ್ಮವು ಆರೋಗ್ಯವಾಗಿರುವುದು. ಅದಾಗ್ಯೂ, ಸೂರ್ಯ ದೇವರ ಆಶೀರ್ವಾದ ಪಡೆದುಕೊಳ್ಳಲು ಅವರನ್ನು ಪೂಜಿಸುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳು ಯಾವುದು ಎಂದು ತಿಳಿಯಿರಿ.

ಮುಂಜಾನೆ ವೇಳೆ…
ನಾವು ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಎದ್ದೇಳಬೇಕು ಎಂದು ಹೇಳಲಾಗುತ್ತದೆ. ಇದು ತುಂಬಾ ಶುಭ ಸಮಯ ಎಂದು ನಂಬಲಾಗಿದೆ. ಯಾಕೆಂದರೆ ಈ ವೇಳೆ ಸುತ್ತಲಿನ ಧನಾತ್ಮಕವಾದ ಶಕ್ತಿಗಳು ದೇಹಕ್ಕೆ ಸಿಗುವುದು. ಇದರಿಂದ ಪ್ರಾರ್ಥನೆ ಮಾಡುವ ವೇಳೆ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಬಹುದು. ಬೆಳಗ್ಗೆ ಎದ್ದು ಸ್ನಾನ ಮಾಡಿದ ಬಳಿಕ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡಬೇಕು. ನೀವು ಪೂರ್ವಾಭಿಮುಖವಾಗಿ ನಿಂತುಕೊಂಡು ಜಲವನ್ನು ಅರ್ಪಿಸಬೇಕು. ಕೆಲವೊಂದು ಸಲ ಮೋಡ ಮತ್ತು ಮಂಜಿನಿಂದಾಗಿ ಸೂರ್ಯ ಕಾಣದೆ ಇದ್ದರೂ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ಜಲ ಅರ್ಪಣೆ ಮಾಡಿ. ಆದರೆ ಸೂರ್ಯ ಉದಯಿಸಿದ ಬಳಿಕ ಹೀಗೆ ಮಾಡಬೇಕು.

ತಾಮ್ರದ ಪಾತ್ರೆ
ಜ್ಯೋತಿಷ್ಯದ ಪ್ರಕಾರ ಸೂರ್ಯನು ತಾಮ್ರ ಲೋಹಕ್ಕೆ ಸಂಬಂಧಪಟ್ಟವನೆಂದು ಹೇಳಲಾಗಿದೆ. ಇದರಿಂದಾಗಿ ನಾವು ತಾಮ್ರದ ಪಾತ್ರೆಯಲ್ಲೇ ಸೂರ್ಯನಿಗೆ ಜಲ ಅರ್ಪಣೆ ಮಾಡಬೇಕು. ಇದಕ್ಕಾಗಿ ನೀವು ಗಾಜು, ಸ್ಟೀಲ್ ಇತ್ಯಾದಿ ಪಾತ್ರೆಗಳನ್ನು ಬಳಸಿಕೊಳ್ಳಬಾರದು. ನೀವು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕವಾದ ಪಾತ್ರೆಯನ್ನು ಬಳಸಿಕೊಳ್ಳಿ. ಅಡುಗೆ ಮನೆಯಲ್ಲಿ ಆಹಾರ ತಯಾರಿಸಲು ಬಳಸುವ ಅಥವಾ ಬೇರೆ ಯಾವುದೇ ರೀತಿಯ ಉದ್ದೇಶಕ್ಕೆ ಬಳಸಿರುವಂತಹ ಪಾತ್ರೆಯನ್ನು ನೀವು ಇದಕ್ಕೆ ಬಳಕೆ ಮಾಡಲೇಬಾರದು.

ಎರಡು ಕೈಗಳನ್ನು ಜತೆಯಾಗಿ ಬಳಸಿ
ಕೇವಲ ಒಂದು ಕೈ ಅಥವಾ ಎಡದ ಕೈಯನ್ನು ಬಳಸಿಕೊಂಡು ನೀವು ನೀರು ಅರ್ಪಣೆ ಮಾಡಲೇಬಾರದು. ಯಾವಾಗಲೂ ದೇವರ ಪ್ರಾರ್ಥನೆ ಮತ್ತು ಇತರ ಪವಿತ್ರ ಕೆಲಸಗಳಿಗೆ ಬಲದ ಕೈಯನ್ನು ಬಳಸಲಾಗುತ್ತದೆ. ಜಲ ಅರ್ಪಣೆ ಮಾಡುವ ವೇಳೆ ನೀವು ಎರಡು ಕೈಗಳನ್ನು ಎತ್ತರಕ್ಕೆ ಎತ್ತಬೇಕು. ಇದರಿಂದ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವಂತಾಗಬೇಕು. ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವೇಳೆ ಎಲ್ಲಾ ಒಂಭತ್ತು ಗ್ರಹಗಳು ಒಲಿಯುತ್ತವೆ ಎಂದು ಹೇಳಲಾಗಿದೆ. ಜಲ ಅರ್ಪಣೆ ಮಾಡಿದ ಬಳಿಕ ನೀವು ಮೂರು ಪ್ರದಕ್ಷಿಣೆ ಹಾಕಲು ಮರೆಯಬೇಡಿ.

ನೀರಿಗೆ ಏನು ಬೆರೆಸಬೇಕು?
ನೀರನ್ನು ಅರ್ಪಣೆ ಮಾಡುವ ವೇಳೆ ನೀವು ಅದಕ್ಕೆ ಹೂ, ಅಕ್ಕಿ, ಒಂದು ಚಿಟಿಕೆ ಕುಂಕುಮ ಮತ್ತು ಸ್ವಲ್ಪ ಬೆಲ್ಲ ಹಾಕಿಕೊಳ್ಳಬಹುದು. ಇದರ ಬಳಿಕ ನೀವು ಈ ನೀರನ್ನು ಸೂರ್ಯ ದೇವರಿಗೆ ಅರ್ಪಣೆ ಮಾಡಬೇಕು. ಬೆಲ್ಲ, ಕುಂಕುಮ, ಅಕ್ಕಿ ಮತ್ತು ಕೆಂಪು ಹೂಗಳು ಸೂರ್ಯ ದೇವರಿಗೆ ತುಂಬಾ ಇಷ್ಟದ ಸಾಮಗ್ರಿಗಳು ಎಂದು ಹೇಳಲಾಗಿದೆ.

ನೇರವಾಗಿ ಸೂರ್ಯ ದೇವರನ್ನು ನೋಡಬೇಡಿ
ನೀವು ಪ್ರತಿನಿತ್ಯ ಸೂರ್ಯ ದೇವರಿಗೆ ಜಲ ಅರ್ಪಣೆ ಮಾಡುವ ವೇಳೆ ನೇರವಾಗಿ ಸೂರ್ಯ ದೇವರನ್ನು ನೋಡಬಾರದು. ಪಾತ್ರೆಯಿಂದ ಬೀಳುತ್ತಿರುವಂತಹ ನೀರಿನ ಮೂಲಕವಾಗಿ ನೀವು ಸೂರ್ಯ ದೇವರನ್ನು ಕಾಣಬಹುದು. ಸೂರ್ಯ ದೇವರಿಗೆ ಕೆಂಪು ಬಣ್ಣವು ತುಂಬಾ ಇಷ್ಟವಾಗಿರುವ ಕಾರಣದಿಂದ ನೀವು ಕೆಂಪು ಬಟ್ಟೆ ಧರಿಸಿಕೊಂಡು ಜಲ ಅರ್ಪಣೆ ಮಾಡಿದರೆ ಅದರಿಂದ ನಿಮಗೆ ತುಂಬಾ ಶುಭವಾಗುವುದು ಎಂದು ಹೇಳಲಾಗುತ್ತದೆ.



Click it and Unblock the Notifications
