For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ 2019: ಹಬ್ಬದ ದಿನಾಂಕ, ಸಮಯ ಮತ್ತು ಮಹತ್ವ

|

ಅಣ್ಣ ತಂಗಿಯರ ಸಂಬಂಧದ ಶ್ರೇಷ್ಠತೆಯನ್ನು ಬಿಂಬಿಸುವ ಪವಿತ್ರ ಹಬ್ಬ ರಕ್ಷಾಬಂಧನ ಈ ಬಾರಿ ಆಗಸ್ಟ್ 15 ಸ್ವಾತಂತ್ರ ದಿನದಂದೇ ಬಂದಿರುವುದು ವಿಶೇಷ. ಶ್ರಾವಣ ಮಾಸದ ಹಬ್ಬಗಳ ಸಾಲಿನಲ್ಲಿ ಬರುವ ರಕ್ಷಾಬಂಧನವನ್ನು ಪೂರ್ಣ ಚಂದ್ರ ಮೂಡುವ ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಇದನ್ನು ರಾಕಿ ಪೂರ್ಣಿಮೆ ಎನ್ನುವ ರೂಢಿಯೂ ಇದೆ.

Rakshna Bandhan

ಈ ಹಿನ್ನೆಲೆ ರಕ್ಷಾಬಂಧನದ ಮಹತ್ವ, ಇದರ ಹಿಂದಿನ ಪೌರಾಣಿಕ ಕಥನಗಳು, ರಕ್ಷಾಬಂಧನ ಕಟ್ಟಲು ಒಳ್ಳೆಯ ಮುಹೂರ್ತ, ರಾಖಿ ಕಟ್ಟುವ ವೇಳೆ ಶ್ಲೋಕ ಕುರಿತ ಮಾಹಿತಿ ಈ ಲೇಖನದಲ್ಲಿದೆ.

ರಕ್ಷಾಬಂಧನದ ಮಹತ್ವ

ಪರಸ್ಪರ ಭ್ರಾತೃತ್ವ ಭಾವನೆಯಿಂದ ಆಚರಿಸುವ ಈ ಹಬ್ಬದಲ್ಲಿ ತಂಗಿ ಅಣ್ಣನ ಹಣೆಗೆ ಕುಂಕುಮವಿಟ್ಟು ರಕ್ಷಾಬಂಧನವನ್ನು ಮಣಿಕಟ್ಟಿಗೆ ಕಟ್ಟಿ, ಸಿಹಿ ತಿನಿಸಿ ಆರತಿ ಬೆಳಗಿ ಆಶೀರ್ವಾದ ಪಡೆಯುತ್ತಾಳೆ. ಸಮಾಜದ ಯಾವುದೇ ದುಷ್ಟ ಶಕ್ತಿಯ ಕಣ್ಣು ಸಹೋದರಿಯ ಮೇಲೆ ಬೀಳದಂತೆ ರಕ್ಷಣೆ ಮಾಡುವ ಹೊಣೆ ಸಹೋದರನ ಮೇಲಿದೆ ಎನ್ನುವ ಸಾಂಕೇತಿಕ ರೂಪ ಇದಾಗಿದ್ದು, ನಂತರ ಅಣ್ಣ ತಂಗಿಗೆ ಮೆಚ್ಚಿನ ಉಡುಗೊರೆಯನ್ನು ನೀಡುವ ಪರಿಪಾಠವಿದೆ.

2019 ರಕ್ಷಾಬಂಧನ ಕಟ್ಟಲು ಮುಹೂರ್ತ

ಈ ಸಾಲಿನ ರಕ್ಷಾಬಂಧನ ದೇಶಭಕ್ತಿ ಸಾರುವ ಸ್ವಾತಂತ್ರ ದಿನ ಆಗಸ್ಟ್ 15ರಂದು ಆಚರಿಸಲಾಗುತ್ತಿದೆ. ಪೂರ್ಣಿಮಾ ತಿಥಿ ಆಗಸ್ಟ್ 14ರ ತಡರಾತ್ರಿ 3.45ಕ್ಕೆ ಆರಂಭವಾಗಿ 5.59ಕ್ಕೆ ಅಂತ್ಯವಾಗಲಿದೆ. ರಕ್ಷಾಬಂಧನ ಕಟ್ಟಲು ಪವಿತ್ರ ಸಮಯ ಬೆಳಗ್ಗೆ 6.07ರಿಂದ ಸಂಜೆ 5.59ರವರೆಗೆ, ಮಧ್ಯಾಹ್ನದ ಮುಹೂರ್ತ 1.48ರಿಂದ 4.44ರವರೆಗೆ, ಪ್ರದೋಷ ಸಮಯ 6.55ರಿಂದ 9.10ರವರೆಗೆ ಒಳ್ಳೆಯ ಮೂಹೂರ್ತವಿದೆ.

English summary

Rakshna Bandhan 2019 Date, Time and Significance

Raksha Bandhan 2019 will be celebrated on August 15. The festival highlights the bond and beautiful relationship between brothers and sisters. Raksha Bandhan or Rakhi is celebrated on the full moon Shravan Purnima day and therefore, the festival is also called as Rakhi Poornima. As the country gears up to celebrate Rakshabandhan 2019, here's everything you need to know about the festival.
Story first published: Wednesday, August 14, 2019, 12:06 [IST]
X
Desktop Bottom Promotion