For Quick Alerts
ALLOW NOTIFICATIONS  
For Daily Alerts

Papmochani Ekadashi 2021 : ಎಲ್ಲಾ ಪಾಪಕರ್ಮದಿಂದ ಮೋಕ್ಷ ನೀಡುವ ಪಾಪ ವಿಮೋಚನಾ ಏಕಾದಶಿ

|

ಏಪ್ರಿಲ್ 7ಕ್ಕೆ ಅಂದ್ರೆ ಇಂದು ಪಾಪ ವಿಮೋಚನಾ ಏಕಾದಶಿ ಇದೆ. ಒಂದೊಂದು ಏಕಾದಶಿಗೆ ಅದರದೇ ಆದ ಮಹತ್ವವಿದೆ. ಈ ಏಕಾದಶಿ ಹೆಸರೇ ಸೂಚಿಸುವಂತೆ ನಮ್ಮೆಲ್ಲಾ ಪಾಪ ಕರ್ಮಗಳಿಂದ ವಿಮೋಚನೆ ನೀಡುವ ಏಕಾದಶಿಯಾಗಿದೆ.

ಪಾಪವಿಮೋಚನಾ ಏಕಾದಶಿಯ ಶುಭ ಮುಹೂರ್ತ

ಪಾಪವಿಮೋಚನಾ ಏಕಾದಶಿಯ ಶುಭ ಮುಹೂರ್ತ

ಏಕಾದಶಿ ತಿಥಿ ಆರಂಭ: ಏಪ್ರಿಲ್ 6 ರಾತ್ರಿ 2 ಗಂಟೆ 9 ನಿಮಿಷಕ್ಕೆ

ಏಕಾದಶಿ ತಿಥಿ ಮುಕ್ತಾಯ: ಏಪ್ರಿಲ್ 7 ಮಧ್ಯರಾತ್ರಿ 2 ಗಂಟೆ 28 ನಿಮಿಷಕ್ಕೆ

ಪಾರಣ ಸಮಯ: ಗುರುವಾರ ಮಧ್ಯಾಹ್ನ 01:39ರಿಂದ 04:11ರವರೆಗೆ

ಪೂಜಾ ವಿಧಿ

ಪೂಜಾ ವಿಧಿ

ಮೊದಲನೆಯದಾಗಿ, ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಬೇಕು. ಹೀಗೆ ವಿಷ್ಣುವನ್ನು ಪೂಜಿಸುವಾಗ ಹಳದಿ ವಸ್ತ್ರವನ್ನು ಅರ್ಪಿಸಬೇಕು ಹಾಗೂ 11 ಹಳದಿ ಹೂಗಳು, 11 ಹಳದಿ ಹಣ್ಣುಗಳು ಹಾಗೂ 11 ಬಗೆಯ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು ಪೂಜಿಸಿಬೇಕು.

ಈ ದಿನ ಉಪವಾಸವಿದ್ದು ಪಾರಣ ಸಮಯದಲ್ಲಿ ಉಪವಾಸ ಮುರಿಯಬೇಕು.

ಪೌರಾಣಿಕ ಕತೆ

ಪೌರಾಣಿಕ ಕತೆ

ಒಂದು ದಿನ ಧರ್ಮರಾಜನು ಶ್ರೀಕೃಷ್ಣನ ಬಳಿ ಪಾಪವನ್ನು ಕಳೆಯುವ ವ್ರತ ಯಾವುದು ಎಂದು ಕೇಳುತ್ತಾನೆ. ಆಗ ಶ್ರೀಕೃಷ್ಣನು "ಪಾಪವಿಮೋಚನಿ ಏಕಾದಶಿ" ಯ ಬಗ್ಗೆ ಹೇಳುತ್ತಾನೆ. ಈ ಏಕಾದಶಿ ಮಾಡುವುದರಿಂದ ಎಲ್ಲಾ ಪಾಪ ಕರ್ಮಗಳಿಂದ ಮೋಕ್ಷ ಸಿಗುವುದು ಎಂದು ಹೇಳುತ್ತಾನೆ.

ಮತ್ತೊಂದು ಕತೆಯೆಂದರೆ ಕುಬೇರನ ಆಸ್ಥಾನದಲ್ಲಿರುವ "ಚೈತ್ರರಥ" ಎಂಬ ವನದಲ್ಲಿ ಋಷಿಗಳು ತಪ್ಪಸ್ಸು ಮಾಡುತ್ತಿದ್ದರು. ಅಲ್ಲಿಗೆ ಬಂದ ಅಪ್ಸರೆಯರಲ್ಲಿ ಮಂಜುಗೋಷ ಎಂಬ ಅಪ್ಸರೆಗೆ ಅಲ್ಲಿ ತಪಸ್ಸು ಮಾಡುತ್ತಿದ್ದ "ಮೇಧಾವಿ" ಎಂಬ ಋಷಿಯ ಮೇಲೆ ಮೋಹಾ ಉಂಟಾಗುತ್ತದೆ. ಆಕೆ ಋಷಿ ಬಳಿ ಬಂದು ಅವರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುವಾಗ ಮನ್ಮಥ ತನ್ನ ಬಾಣವನ್ನು ಆ ಋಷಿ ಮೇಲೆ ಪ್ರಯೋಗಿಸುತ್ತಾನೆ. ಋಷಿ ತನ್ನ ಕರ್ಮ ಮರೆತು ಈಕೆಯ ಮೋಹಕ್ಕೆ ಒಳಗಾಗುತ್ತಾನೆ. ಇಬ್ಬರು ಮೈ ಮರೆತೂ ರತಿ ಕ್ರೀಡೆಯಲ್ಲಿ ಮುಳುಗುತ್ತಾರೆ, ವರ್ಷಗಳು ಕಳೆದಿದ್ದೇ ಗೊತ್ತಾಗಲ್ಲ. ಒಂದು ದಿನ ಅಪ್ಸರೆ ತಾನು ತನ್ನ ಲೋಕಕ್ಕೆ ಹಿಂತಿರುಗುವುದಾಗಿ ಹೇಳುತ್ತಾಳೆ, ಆಗ ಋಷಿಯು ಅವಳು ಹೋಗಲು ಸಮ್ಮತಿಸುವುದಿಲ್ಲ. ಆಗ ಕೋಪಗೊಂಡ ಅಪ್ಸರೆ 'ಎಲೈಬ್ರಾಹ್ಮಣನೆ! ನಿನ್ನಮೇಲೆ ಕೃಪೆ ಮಾಡಿದೆ ಅಂದಿನಿಂದಾ ಇಂದಿನವರೆಗೆ ಎಷ್ಟು ಕಾಲಕಳೆಯುತು ಎಂಬುದನ್ನು ಸ್ವಲ್ಪ ವಿಚಾರಮಾಡು" ಎಂದು ಹೇಳುತ್ತಾಳೆ.

ಆಗ ಋಷಿಗೆ ಎಲ್ಲವೂ ಅರಿವಾಗುವುದು, ತನ್ನ ತಪಸ್ಸು ಮರೆತು ಮೈ ಮರೆತೆನ್ನೆಲ್ಲಾ ಎಂದು ಬೇಸರವಾಗುತ್ತದೆ, ಅದಕ್ಕೆ ಕಾರಣಳಾದ ಅಪ್ಸರೆ ಮೇಲೆ ಕೋಪಗೊಂಡು ಆಕೆಗೆ ಪಿಶಾಚಿಯಾಗಿ ಹುಟ್ಟು ಎಂದು ಶಾಪ ನೀಡುತ್ತಾರೆ. ಆಗ ಆಕೆ ತನ್ನ ಪಾಪ ವಿಮೋಚನೆ ಮಾಡುವಂತೆ ಕೇಳುತ್ತಾಳೆ, ಆಗ ಆ ಋವನ ಋಷಿ ಬಳಿ ಪರಿಹಾರ ಕೇಳಲು ಸೂಚಿಸುತ್ತಾನೆ, ಅದರಂತೆ ಆಕೆ ಚವನ ಋಷಿಗಳ ಬಳಿ ಏನು ಮಾಡಬೇಕೆಂದು ಕೇಳುತ್ತಾಳೆ, ಮೇಧಾವಿ ಋಷಿ ಕೂಡ ಚವನ ಋಷಿ ಬಳಿ ತನ್ನ ತಪ್ಪಿಗೆ ಪ್ರಾಯಶ್ಚಿ ಕೇಳುತ್ತಾರೆ. ಆಗ ಚವನ ಋಷಿ "ಪಾಪವಿಮೋಚನಿ ಏಕದಾಶಿ" ಮಾಡುವಂತೆ ಸೂಚಿಸಿರುತ್ತಾರೆ. ಹಾಗೇ ಅವರಿಬ್ಬರು ತಮ್ಮ ಪಾಪಗಳನ್ನು ಕಳೆದುಕೊಂಡು ಸ್ವರ್ಗಲೋಕಕ್ಕೆ ಹೋದರು.

English summary

Papmochani Ekadashi 2021 Date, Shubh Muhurat, Puja Vidhi, Vrat and Significance in Kannada

Papmochani Ekadashi 2021 date, shubh muhurat, puja vidhi, vrat and significance, Read on.
X
Desktop Bottom Promotion