For Quick Alerts
ALLOW NOTIFICATIONS  
For Daily Alerts

ನವರಾತ್ರಿ: ಮನೆಯಲ್ಲಿ ಅಖಂಡ ಜ್ಯೋತಿ ಬೆಳಗಲು ಪಾಲಿಸಬೇಕಾದ ನಿಯಮಗಳಿವು

|

ಮನೆಯಲ್ಲಿ ದೇವರ ದೀಪ ಇಡಬೇಕು, ಅದುವೇ ಮನೆಗೆ ಐಶ್ವರ್ಯ ಎಂದು ಹೇಳಲಾಗುವುದು, ಆದ್ದರಿಂದ ಬೆಳಗ್ಗೆ-ಸಂಜೆ ಮನೆಗಳಲ್ಲಿ ದೇವರಿಗೆ ದೀಪ ಹಚ್ಚಿಡಲಾಗುವುದು. ದೇವಾಲಯಗಳಲ್ಲಿ ದೀಪವನ್ನು ಪ್ರತಿದಿನ ದೀಪವನ್ನು ಹಚ್ಚಲಾಗುವುದು. ಆ ದೀಪದ ಪ್ರಭೆ ಮನೆಯೊಳಗೆ, ದೇವಾಲಯದಲ್ಲಿ ಒಂದು ಧನಾತ್ಮಕ ಶಕ್ತಿ ಪಸರಿಸುವುದು. ಆದ್ದರಿಂದ ದೇವರಿಗೆ ದೀಪ ಬೆಳಗಲಾಗುವುದು.

ದೀಪ ಕತ್ತಲನ್ನು ಹೋಗಲಾಡಿಸುತ್ತೆ. ಇದು ಬದುಕಿನಲ್ಲಿರುವ ಕತ್ತಲು ಹೋಗಲಾಡಿಸುತ್ತೆ, ದೀಪ ಶುದ್ಧತೆ, ಅದೃಷ್ಟದ ಪ್ರತೀಕವಾಗಿದೆ. ಇದೇ ದೀಪವನ್ನು ಕೆಡದಂತೆ ಕೆಲವು ದಿನಗಳವರೆ ಬೆಳಗಿದರೆ ಅದನ್ನು ಅಖಂಡ ಜ್ಯೋತಿ ಎಂದು ಹೇಳಲಾಗುವುದು. ನವರಾತ್ರಿಯಲ್ಲಿ ಈ ರೀತಿಯ ಅಖಂಡ ಜ್ಯೋತಿ ಬೆಳಗಲಾಗುವುದು. ಅಖಂಡ ಜ್ಯೋತಿ ಹಚ್ಚಿ ದುರ್ಗೆಯನ್ನು ಪೂಜಿಸಲಾಗುವುದು.

ನವರಾತ್ರಿ ಪ್ರಾರಂಭದ ದಿನದಂದು ಬೆಳಗುವ ಈ ಜ್ಯೋತಿ 9 ದಿನಗಳವರೆಗೆ ನಂದಬಾರದು. ನಿರಂತರವಾಗಿ ಉರಿಯುತ್ತಲೇ ಇರಬೇಕು. ಗಾಳಿ ಬೀಸಿದಾಗ ಕೂಡ ಆ ದೀಪಾ ಕೆಡದಂತೆ ನೋಡಿಕೊಳ್ಳಬೇಕು. ಅಖಂಡ ಜ್ಯೋತಿಯನ್ನು ಬೆಳಗುವಾಗ ಪಾಲಿಸಬೇಕಾದ ನಿಯಮಗಳು ಹಾಗೂ ದೀಪ ಆರಿ ಹೋಗದಂತೆ ನೋಡಿಕೊಳ್ಳುವುದು ಹೇಗೆ ಎಂದು ನೋಡೋಣ:

ನವರಾತ್ರಿ ಅಖಂಡ ಜ್ಯೋತಿ ನಿಯಮ

ನವರಾತ್ರಿ ಅಖಂಡ ಜ್ಯೋತಿ ನಿಯಮ

* ದೀಪ ಬೆಳಗಲು ಕಂಚು, ಬೆಳ್ಳಿ ಅಥವಾ ಮಣ್ಣಿನ ದೀಪ ಬಳಸಿ.

* ಮಣ್ಣಿನ ದೀಪ ಬಳಸುವುದಾದರೆ ಮಣ್ಣಿನ ದೀಪವನ್ನು ನೀರಿನಲ್ಲಿ ಒಂದು ದಿನ ನೆನೆ ಹಾಕಿ ನಂತರ ಬಳಸಿ, ಇದರಿಂದ ದೀಪ ಎಣ್ಣೆ ತುಂಬಾ ಹೀರಿಕೊಳ್ಳುವುದಿಲ್ಲ. * ಅಕ್ಕಿ ಹಿಟ್ಟಿನಿಂದ ಅಷ್ಟದಳ ಮಾಡಿ.

* ಅದರೊಳಗೆ ದೀಪವನ್ನು ಇಡಿ.

* ದೊಡ್ಡ ಬತ್ತಿಯನ್ನು ತಯಾರಿಸಿ ಇಡಿ.

* ದೀಪಕ್ಕೆ ಸಾಸಿವೆಯೆಣ್ಣೆ, ಎಳ್ಳೆಣ್ಣೆ ಅಥವಾ ತುಪ್ಪ ಬಳಸಿ.

* ಗಾಳಿ ತುಂಬಾ ಬೀಸುವ ಕಡೆ ದೀಪವನ್ನು ಇಡಬೇಡಿ. ಏಕೆಂದರೆ ಇದ್ದಕ್ಕಿದ್ದಂತೆ ಗಾಳಿ ಬೀಸಿ ದೀಪ ಆರಿ ಹೋಗಬಾರದು.

ದೀಪ ಆರಿ ಹೋಗದಿರಲು ಟಿಪ್ಸ್

ದೀಪ ಆರಿ ಹೋಗದಿರಲು ಟಿಪ್ಸ್

* ಅದರ ಗ್ಲಾಸ್‌ ಸಿಲಿಂಡರ್ ಇಡಿ, ಇದರಿಂದ ಗಾಳಿಯಿಂದ ದೀಪ ಆರುವುದನ್ನು ತಪ್ಪಿಸಬಹುದು.

* ದೀಪಕ್ಕೆ ಗುಣಮಟ್ಟದ ಎಣ್ಣೆ ಹಾಕಿ.

* ಇನ್ನು ದೀಪಕ್ಕೆ ಎಣ್ಣೆ ಹಾಕುವಾಗ ಬತ್ತಿಯ ತುದಿ ಮುಳುಗುವ ರೀತಿಯಲ್ಲಿ ಹಾಕಬೇಡಿ.

* ಒಂದು ವೇಳೆ ಬತ್ತಿ ಮುಗಿಯುತ್ತಾ ಬಂದರೆ ಅದೇ ಬತ್ತಿಗೆ ಬತ್ತಿ ಹಿಡಿದು ದೀಪ ಹಚ್ಚಿಡಿ. ಯಾವುದೇ ಕಾರಣಕ್ಕೆ ದೀಪ ಆರಿ ಹೋಗಬಾರದು.

* ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದು ಆರಿ ಹೋಗದಿರಲು ಗಮನಿಸುತ್ತಲೇ ಇರಬೇಕು.

ಅಖಂಡ ಜ್ಯೋತಿಯ ಪ್ರಾಮುಖ್ಯತೆ

ಅಖಂಡ ಜ್ಯೋತಿಯ ಪ್ರಾಮುಖ್ಯತೆ

ಭಕ್ತರು ದುರ್ಗೆಗೆ ಅಖಂಡ ಜ್ಯೋತಿ ಹಚ್ಚಿ ಪ್ರಾರ್ಥಿಸುತ್ತಾರೆ. ಈ ದೀಪ ಜ್ಞಾನ, ಶುದ್ಧತೆ, ಅದೃಷ್ಟ, ಸಂಪತ್ತು ಇವುಗಳ ಸಂಕೇತವಾಗಿದೆ. ಈ ದೀಪ ಕತ್ತಲು ನೀಗುವುದರಿಂದ ... ಈ ಜ್ಯೋತಿಯಂತೆಯೇ ಬದುಕಿನಲ್ಲಿಯೂ ಒಳ್ಳೆಯದಾಗುವುದು. ಆ ದೇವಿ ಸಂತೋಷ, ಆರೋಗ್ಯ, ಐಶ್ವರ್ಯ ಕರುಣಿಸುತ್ತಾಳೆ. ಹೀಗಾಗಿ ದೇವಿಗೆ ಅಖಂಡ ಜ್ಯೋತಿ ಬೆಳಗಿ ಪೂಜೆ ಮಾಡಲಾಗುವುದು.

English summary

Navratri Akhand Jyoti : Know the rules and how to keep the lamp lit for nine days in Kannada

Navratri Akhand Jyoti : Know the rules and how to keep the lamp lit for nine days in Kannada....
Story first published: Wednesday, October 6, 2021, 17:10 [IST]
X
Desktop Bottom Promotion