ಶಿವನು ಆನಂದದಿಂದ ನರ್ತಿಸಿದ 'ಶಿವ ತಾಂಡವ' ನೃತ್ಯ

By: Jaya subramanya
Subscribe to Boldsky

ಹಿಂದೂ ಶಾಸ್ತ್ರದಲ್ಲಿ ನಟರಾಜ ಭಂಗಿಗೆ ಹೆಚ್ಚಿನ ಮಹತ್ವವಿದ್ದು ಇದು ಶಿವನ ನಾಟ್ಯ ರೂಪದ ಭಂಗಿ ಎಂದೆನಿಸಿದೆ. ನಟರಾಜ ಎಂಬ ಪದವು ನಾಟ್ಯ ಅಂದರೆ ನೃತ್ಯದಿಂದ ವಿಭಜಿಸಲ್ಪಟ್ಟಿದ್ದು ರಾಜ ಎಂದರೆ ಅರಸ ಎಂದಾಗಿದೆ. ನೃತ್ಯಕ್ಕೆ ಅರಸ ಎಂಬುದು ನಟರಾಜ ಪದದ ಅರ್ಥವಾಗಿದೆ. ಚೋಳರ ಕಂಚಿನ ಪ್ರತಿಮೆಗಳಲ್ಲಿ ನಟರಾಜನನ್ನು ಮೊದಲು ಚಿತ್ರಿಸಲಾಗಿದೆ.

ಜ್ವಾಲೆಗಳಲ್ಲಿ ಶಿವನು ನರ್ತಿಸುತ್ತಿರುವ ಭಂಗಿಯಲ್ಲಿ ಈ ಪ್ರತಿಮೆ ಇದ್ದು ಅವರ ಎಡಗಾಲು ಅಪಸ್ಮಾರ ಅಸುರನ ತಲೆಯ ಮೇಲೆ ಹತೋಟಿಯನ್ನಿಟ್ಟು ನಿಂತತಿದೆ. ಈ ಅಸುರನು ಅಜ್ಞಾನದ ಪ್ರತೀಕವೆಂದೆನಿಸಿದ್ದಾನೆ. ಒಂದು ಕೈಯಲ್ಲಿ ಡಮರು ಇದ್ದು ಇದು ಸ್ತ್ರೀ ಪುರುಷ ತತ್ವವನ್ನು ಎತ್ತಿಹಿಡಿದಿದೆ. ಯಾವುದೇ ಭಯವಿಲ್ಲದೆ ಶಿವನು ನರ್ತಿಸುತ್ತಿರುವುದನ್ನು ಸಂಪೂರ್ಣ ವಿಗ್ರಹ ಪ್ರತಿನಿಧಿಸುತ್ತಿದೆ. ಓಂ ನಮಃ ಶಿವಾಯ ಪಠಿಸಿ ಸಮಸ್ಯೆಗಳಿಂದ ದೂರವಿರಿ    

Dancing Shiva
 

ನಾಶಕ್ಕೆ ಸಂಬಂಧಿಸಿದ ಅಂಶಗಳಲ್ಲಿ ಶಿವನನ್ನು ಹೆಚ್ಚು ಬಿಂಬಿಸಲಾಗಿದ್ದು ಯಾವಾಗಲೂ ಕೋಪದಲ್ಲಿರುವಂತೆಯೇ ಅವರನ್ನು ತೋರಿಸಲಾಗಿದೆ. ಆದರೆ ಶಿವನು ನಾಟ್ಯ ಮತ್ತು ಸಂಗೀತ ಪ್ರಿಯ ಎಂಬುದು ಬಹಳ ಕಡಿಮೆ ಜನರಿಗೆ ಮಾತ್ರ ಗೊತ್ತಿರುವ ಸಂಗತಿಯಾಗಿದೆ. ಅಜ್ಞಾನವನ್ನು ಜ್ಞಾನ ನೃತ್ಯ ಮತ್ತು ಸಂಗೀತದಿಂದಲೇ ಮಾತ್ರವೇ ಮೆಟ್ಟಿ ನಿಲ್ಲಲು ಸಾಧ್ಯ ಎಂಬುದನ್ನು ತಮ್ಮ ನಟನಾ ಭಂಗಿಯಲ್ಲಿ ಶಿವನು ತೋರಿಸಿದ್ದಾರೆ. ನಟರಾಜ ಭಂಗಿಯಲ್ಲಿ ಶಿವನು ನರ್ತಿಸುತ್ತಿರುವ ಕಥಾನಕವನ್ನು ಇಂದಿಲ್ಲಿ ಅರಿತುಕೊಳ್ಳೋಣ. ಶಿವನ ಶಕ್ತಿ ಸ್ವರೂಪ ಎಂಟು ಆಭರಣಗಳ ಪರಮ ರಹಸ್ಯ 

ಅಪಸ್ಮಾರ ಮತ್ತು ನಟರಾಜ

ಅಜ್ಞಾನ ಮತ್ತು ಅಪಸ್ಮಾರವನ್ನು ಪ್ರತಿಬಿಂಬಿಸುವ ಕುಬ್ಜನಾಗಿದ್ದಾನೆ ಅಪಸ್ಮಾರ ಅಸುರ. ಜ್ಞಾನವನ್ನು ಜಗತ್ತಿನಲ್ಲಿ ಕಾಪಾಡಲು ಅಪಸ್ಮಾರನನ್ನು ಕೊಲ್ಲಬೇಕಾಗಿತ್ತು. ಆದರೆ ಅಜ್ಞಾನ ಮತ್ತು ಅಂಧತೆಯನ್ನು ಮೆಟ್ಟಿ ನಿಂತಲ್ಲಿ ಮಾತ್ರವೇ ಈ ಅಸುರನ ನಾಶ ಸಾಧ್ಯವಿತ್ತು. ಆದರೆ ಈ ರೀತಿ ಜ್ಞಾನವನ್ನು ಬಳಸಿಕೊಂಡು ಅಸುರನ ವಧೆ ಅಸಾಧ್ಯವಾಗಿದ್ದ ಸಮಯದಲ್ಲೇ ಅಪಸ್ಮಾರ ಬಲಶಾಲಿಯಾಗಿ ಬೆಳೆಯುತ್ತಾನೆ. ಆರೋಗ್ಯದ ಗುಟ್ಟು-ಸರ್ವಂ ಶಿವ ಮಯಂ  

Dancing Shiva
 

ತನ್ನ ವರದಿಂದ ಸರ್ವದಿಕ್ಕಿನಲ್ಲೂ ಪ್ರಾಬಲ್ಯವನ್ನು ಪಡೆದುಕೊಂಡು ಮೆರೆಯುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ತನ್ನ ಪರಾಕ್ರಮದ ಸೊಕ್ಕಿನಿಂದ ಮೆರೆಯುತ್ತಿದ್ದ ಅಸುರ ಅಪಸ್ಮಾರನು ಶಿವನಿಗೆ ಸವಾಲೊಡ್ಡುತ್ತಾನೆ. ಶಿವನು ನಟರಾಜ ರೂಪವನ್ನು ಪಡೆದುಕೊಂಡು ತಾಂಡವ ನೃತ್ಯವನ್ನು ನಡೆಸಿ ಅಪಸ್ಮಾರನನ್ನು ತನ್ನ ಕಾಲುಗಳ ಅಡಿಯಲ್ಲಿ ಮೆಟ್ಟಿ ನಿಂತು ಅವನನ್ನು ವಧಿಸುತ್ತಾರೆ.

ನಟರಾಜ ನೃತ್ಯದ ಸಂಕೇತ

ವಿಶ್ವದ ನಿರ್ಮಾತೃರೊಂದಿಗೆ ಒಂದುಗೂಡುವಿಕೆಯನ್ನು ಈ ನೃತ್ಯ ಬಿಂಬಿಸಿದೆ. ನೃತ್ಯವೆಂಬ ದೈವೀ ಶಕ್ತಿಯ ಮೂಲಕ ದೇವರು ತಮ್ಮ ಶಕ್ತಿಯನ್ನು ಬಿಂಬಿಸಿದ್ದಾರೆ. ಇದನ್ನು 'ಆನಂದತಾಂಡನೃತ್ಯ' ವೆಂದೂ ಕರೆದಿದ್ದು, ರಚನೆ ಮತ್ತು ನಾಶದ ಸಂಕೇತವಾಗಿ ಇದನ್ನು ತೋರ್ಪಡಿಸಲಾಗಿದೆ.  ತ್ರಿಮೂರ್ತಿಗಳ ಒಡೆಯ ಪರಶಿವನ ನಾನಾ ರೂಪಗಳ ಅವತಾರ

ಆನಂದದಿಂದ ಶಿವನು ತಾಂಡವ ನೃತ್ಯವನ್ನಾಡಿದರು ಎಂಬುದನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಜನನ ಮತ್ತು ಮರಣದ ದೈನಂದಿನ ಕ್ರಿಯೆಯನ್ನೂ ಈ ನೃತ್ಯವು ಸಂಕೇತಿಸುತ್ತಿದೆ. ಹೀಗೆ ಶಿವನು ತಮ್ಮ ತಾಂಡವ ನೃತ್ಯದ ಮೂಲಕ ನಮ್ಮ ಮನಸ್ಸಿನಲ್ಲಿರುವ ಅಜ್ಞಾನ, ಭೀತಿಯನ್ನು ಹೊಡೆದೋಡಿಸುತ್ತಿದ್ದಾರೆ.

English summary

Nataraja: Story Of Dancing Shiva

Nataraja is a popular figure in Hindu mythology. It is the depiction of Lord Shiva in a dancing pose. The word Nataraja is derived from 'Natya' which means dance and 'Raja' which means King. So, Nataraja basically means King of Dance.
Subscribe Newsletter