For Quick Alerts
ALLOW NOTIFICATIONS  
For Daily Alerts

ಮೌನಿ ಅಮವಾಸ್ಯೆ: ಈ ದಿನ ಏನು ಮಾಡಿದರೆ ಒಳಿತಾಗುತ್ತದೆ, ಯಾವ ವಸ್ತುಗಳನ್ನು ದಾನ ಮಾಡಬೇಕು?

|

ಫೆಬ್ರವರಿ ಹನ್ನೊಂದಕ್ಕೆ ಮೌನಿ ಅಮವಾಸ್ಯೆ. ಹಿಂದೂಗಳಿಗೆ ತುಂಬಾ ವಿಶೇಷವಾದ ದಿನ ಇದಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಅಮವಾಸ್ಯೆಯನ್ನು ಮೌನಿ ಅಮವಾಸ್ಯೆಯಂದು ಆಚರಿಸಲಾಗುವುದು.

Mauni Amavasya

ಮೌನಿ ಅಮವಾಸ್ಯೆಯ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಶ್ರೇಯಸ್ಸು ಉಂಟಾಗುತ್ತದೆ. ಅಲ್ಲದೆ ಈ ದಿನ ಮಾಡುವ ದಾನವು ತುಂಬಾ ಶ್ರೇಷ್ಠವಾದದ್ದು. ಮೌನಿ ಅಮವಾಸ್ಯೆಯಂದು ಕೆಲವೊಂದು ಕಾರ್ಯಗಳನ್ನು ಮಾಡಬೇಕು, ಇನ್ನು ಕೆಲವೊಂದು ಮಾಡಬಾರದು.

ನಾವು ಈ ಇಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು, ಯಾವ ಕಾರ್ಯಗಳನ್ನು ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಮೌನಿ ಅಮವಾಸ್ಯೆಯ ವಿಶೇಷತೆ

ಮೌನಿ ಅಮವಾಸ್ಯೆಯ ವಿಶೇಷತೆ

ಮಹಾ ಶಿವರಾತ್ರಿ ಮೊದಲು ಇರುವ ಕೊನೆಯ ಅಮವಾಸ್ಯೆ ಇದಾಗಿದೆ. ಈ ದಿನ ಮೌನವ್ರತ ಮಾಡಿದರೆ ಮನಸ್ಸನ್ನು ನಿಗ್ರಹಿಸಬಹುದು, ಜ್ಞಾನ ಹೆಚ್ಚುವುದು ಅಲ್ಲದೆ ಮನಸ್ಸಿಗೆ ನೆಮ್ಮದಿ ಸಿಗುವುದು.

ಭಗವದ್ಗೀತೆ (ಅಧ್ಯಾಯ ೬.೫) ಪ್ರಕಾರ ಮನುಷ್ಯ ಮನಸ್ಸು ಅನೇಕ ಆಲೋಚನೆಗಳು, ಗೊಂದಲಗಳಿಂದಾಗಿ ತುಂಬಾ ದಣಿದಿರುತ್ತದೆ. ಈ ದಿನ ಮೌನವಾಗಿದ್ದರೆ ಮನಸ್ಸಿನ ನೆಮ್ಮದಿ ಹಾಳು ಮಾಡುವ ಮಾತುಗಳನ್ನು ನಿಯಂತ್ರಿಸುವ ಶಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಏನು ಮಾಡಬೇಕು?

ಏನು ಮಾಡಬೇಕು?

* ಸೂರ್ಯಾದಯದಿಂದ ಸೂರ್ಯಾಸ್ತಮವಾಗುವವರೆಗೆ ಮೌನವಾಗಿರಬೇಕು.

* ಬೆಳಗ್ಗೆ ಪುಣ್ಯ ನದಿಯಲ್ಲಿ ಮುಳುಗಿ ಏಳಬೇಕು.

* ಈ ದಿನ ಉಪವಾಸ ಇರಬೇಕು.

* ಬಡವರಿಗೆ ದಾನ ಮಾಡಬೇಕು

 ಯಾವ ವಸ್ತುಗಳನ್ನು ದಾನ ಮಾಡಬೇಕು?

ಯಾವ ವಸ್ತುಗಳನ್ನು ದಾನ ಮಾಡಬೇಕು?

ಮೌನ ಅಮವಾಸ್ಯೆಯ ಸಂಪ್ರದಾಯದ ಪ್ರಕಾರ ಎಳ್ಳು, ಕಪ್ಪು ಬಟ್ಟೆ, ಎಣ್ಣೆ, ಹೊದಿಕೆ, ಚಪ್ಪಲಿ, ಬೆಚ್ಚಗಿನ ಉಡುಪುಗಳು ಮುಂತಾದವುಗಳನ್ನು ಅಗತ್ಯ ಇರುವವರಿಗೆ ದಾನ ಮಾಡಬೇಕು. ಇನ್ನು ಹಾಲು, ಅಕ್ಕಿ, ಧಾನ್ಯಗಳನ್ನು ದಾನ ಮಾಡಬಹುದು.

ಈ ದಿನ ದಾನ ಮಾಡುವುದರಿಂದ ಸಿಗುವ ಫಲವೇನು?

ಈ ದಿನ ದಾನ ಮಾಡುವುದರಿಂದ ಸಿಗುವ ಫಲವೇನು?

ಈ ದಿನ ದಾನ ಮಾಡಿದರೆ ತುಂಬಾ ಶುಭ ಫಲ ಉಂಟಾಗುವುದು. ಈ ದಿನ ಪುಣ್ಯ ಸ್ನಾನ ಮಾಡಿದ ಬಳಿಕ ಪೂಜೆ ಮಾಡಿ, ನಂತರ ದಾನ ಮಾಡಬೇಕು. ಹೀಗೆ ಮಾಡಿದರೆ ಪಾಪ ಕರ್ಮಗಳು ನಾಶವಾಗುವುದು, ಅಲ್ಲದೆ ಮನೋಕಾಮನೆಗಳು ನೆರವೇರುವುದು, ಒಳಿತಾಗುತ್ತದೆ ಎಂದು ಹೇಳಲಾಗಿದೆ.

ಮೌನಿ ಅಮವಾಸ್ಯೆ ದಿನ ಏನು ಮಾಡಬಾರದು?

ಮೌನಿ ಅಮವಾಸ್ಯೆ ದಿನ ಏನು ಮಾಡಬಾರದು?

* ಸಮಾಧಿ ಬಳಿ ಸುತ್ತಾಡಬಾರದು

* ಬಡವರು ಹಾಗೂ ನಿರ್ಗತಿಕರಿಗೆ ಅವಮಾನ ಮಾಡಬಾರದು, ಒಂದು ವೇಳೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸುವಿರಿ.

* ಸಂಗಾತಿ ಜೊತೆ ದೈಹಿಕ ಸಂಪರ್ಕ ನಡೆಸಬಾರದು.

* ಈ ದಿನ ಮಾಂಸಾಹಾರ ಸೇವಿಸಬಾರದು, ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಬೇಕು.

English summary

Mauni Amavasya Do's, Don'ts and What to Donate on Magh Amavasya

Mauni Amavasya Do's, Don'ts and What to Donate on Magh Amavasya, read on.
X
Desktop Bottom Promotion