For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್‌ನಲ್ಲಿ ಮಾಸಿಕ ಶಿವರಾತ್ರಿ ಯಾವಾಗ? ಪೂಜಾ ವಿಧಿಗಳೇನು?

|

ಸೆಪ್ಟೆಂಬರ್‌ ತಿಂಗಳಿನಲ್ಲಿ ಮಾಸಿಕ ಶಿವರಾತ್ರಿ 5ನೇ ತಾರೀಕು, ಶನಿವಾರದಂದು ಬಂದಿದೆ. ಶಿವ ಭಕ್ತರು ತಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು. ಶಿವನ ಕೃಪೆಗೆ ಪಾತ್ರರಾಗಲು ಮಾಸಿಕ ಶಿವರಾತ್ರಿಯನ್ನು ಆಚರಿಸಲಾಗುವುದು.

ಯಾವುದು ಅಸಾಧ್ಯ ಹಾಗೂ ಕಷ್ಟಕರ ಎಂದು ಅನಿಸಿರುತ್ತದೋ ಅವೆಲ್ಲಾಮಾಸಿಕ ಶಿವರಾತ್ರಿ ಆಚರಿಸಿ ಶಿವನ ಕೃಪೆ ಪಡೆದರೆ ಸಾಧ್ಯವಾಗುವುದು ಎಂಬ ನಂಬಿಕೆ ಇದೆ.

ಮಾಸಿಕ ಶಿವರಾತ್ರಿಯಂದು ಶಿವ-ಪಾರ್ವತಿಯನ್ನು ಪೂಜಿಸಲಾಗುವುದು. ಶಿವನು ಈ ದಿನ ಸಂತೋಷದಿಂದ ಇರುತ್ತಾನೆ, ಹಾಗಾಗಿ ಭಕ್ತಿಯಿಂದ ಪೂಜೆ ಮಾಡಿದರೆ ಬೇಗನೆ ಒಲಿಯುತ್ತಾನೆ.

ಇನ್ನು ಲಗ್ನ ಯೋಗ ಕೂಡಿ ಬಾರದೇ ಇರುವವರು ಈ ದಿನ ಉಪವಾಸವಿದ್ದು ಮಾಸಿಕ ಶಿವರಾತ್ರಿ ಆಚರಿಸಿದರೆ ಕಂಕಣ ಭಾಗ್ಯ ಬೇಗನೆ ಕೂಡಿ ಬರುತ್ತದೆ ಎಂದು ಹೇಳಲಾಗುವುದು. ಆದ್ದರಿಂದ ಪ್ರತೀ ತಿಂಗಳು ಆಚರಿಸಲ್ಪಡುವ ಮಾಸಿಕ ಶಿವರಾತ್ರಿಗೆ ತುಂಬಾನೇ ಮಹತ್ವವಿದೆ.

ಸೆಪ್ಟೆಂಬರ್‌ 2021 ಮಾಸಿಕ ಶಿವರಾತ್ರಿ ಪೂಜೆಗೆ ಶುಭ ಮುಹೂರ್ತ, ಪೂಜಾ ವಿಧಿ ಇವುಗಳ ಕುರಿತ ಇಲ್ಲಿದೆ ನೋಡಿ.

ದಿನಾಂಕ:ಸೆಪ್ಟೆಂಬರ್ 5, ಭಾನುವಾರ

ದಿನಾಂಕ:ಸೆಪ್ಟೆಂಬರ್ 5, ಭಾನುವಾರ

ಶಿವನ ಆರಾಧನೆಯ ಶುಭ ಸಮಯವು ಬೆಳಗ್ಗೆ 11:57 ರಿಂದ ಪ್ರಾರಂಭವಾಗಿ ರಾತ್ರಿ 12:43ಕ್ಕೆ ಮುಕ್ತಾಯ.

ಚತುರ್ದಶಿ ದಿನಾಂಕದ ಅಂತ್ಯವು ಸೆಪ್ಟೆಂಬರ್ 06 ರಂದು ಬೆಳಗ್ಗೆ 07:38 ಕ್ಕೆ ಇರುತ್ತದೆ.

ಪೂಜೆಯ ವಿಧಾನ

ಪೂಜೆಯ ವಿಧಾನ

ಈ ದಿನ ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು. ಕೆಲವರು ಮನೆಯಲ್ಲಿಯೇ ಮಾಡಿದರೆ ಇನ್ನು ಕೆಲವರು ಶಿವನ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆರಾಧನೆ ಮಾಡಲಾಗುವುದು. ಈ ದಿನ ಜಾಗರಣೆ ಕೂಡ ಇರಲಾಗುವುದು.

ಈ ದಿನ ಶಿವ ಲಿಂಗಕ್ಕೆ ಗಂಗಾ ಜಲ, ಹಾಲು, ಮೊಸರು, ತುಪ್ಪ, ಜೇನು ತುಪ್ಪ ಇವುಗಳಿಂದ ಅಭಿಷೇಕ ಮಾಡಲಾಗುವುದು. ನಂತರ ಅರಿಶಿಣ, ವಿಭೂತಿ, ಗುಲಾಬಿ ಎಸಳುಗಳನ್ನು ಹಾಕಿರುವ ನೀರಿನಿಂದ ಅಭಿಷೇಕ ಮಾಡಿ ಒಂದು ಶುಭ್ರ ಬಟ್ಟೆಯಿಮದ ಶಿವಲಿಂಗವನ್ನು ಒರೆಸಿ, ವಿಭೂತಿ ಹಚ್ಚಿ, ಬಿಲ್ವೆಪತ್ರೆ ಎಲೆ ಇಟ್ಟು ಪೂಜೆಯನ್ನು ಮಾಡಬೇಕು.

ನಂತರ ಮಧ್ಯರಾತ್ರಿ ಶಿವನಿಗೆ ಆರತಿ ಮಾಡಬೇಕು. ವಿವಾಹಿತರು ತಮ್ಮ ಸಂಸಾರ ಸುಖಕರವಾಗಿರಲು ಪ್ರಾರ್ಥಿಸಿ ಮಾಸಿಕ ಶಿವರಾತ್ರಿ ಆಚರಿಸಿದರೆ , ಅವಾಹಿತರು ಸೂಕ್ತ ಸಂಗಾತಿ ದೊರೆಯುವಂತೆ ಮಾಡು ಎಂದು ಪ್ರಾರ್ಥಿಸಿ ಶಿವನಿಗೆ ಪೂಜೆ ಸಲ್ಲಿಸಲಾಗುವುದು.

ಮಾಸಿಕ ಶಿವ ರಾತ್ರಿ ಆಚರಿಸುವವರು ಪಾಲಿಸಬೇಕಾದ ನಿಯಮಗಳು

ಮಾಸಿಕ ಶಿವ ರಾತ್ರಿ ಆಚರಿಸುವವರು ಪಾಲಿಸಬೇಕಾದ ನಿಯಮಗಳು

* ಬೆಳಗ್ಗೆ ಬೇಗನೆ ಎದ್ದೇಳಬೇಕು.

* ಮಾಂಸ, ಮದ್ಯ ತೆಗೆದುಕೊಳ್ಳಬಾರದು

* ಇಂದ್ರೀಯಗಳ ಮೇಲೆ ನಿಯಂತ್ರಣವಿರಬೇಕು

* ಯಾರೊಂದಿಗೂ ಕೆಟ್ಟದಾಗಿ ವರ್ತಿಸಬಾರದು

* ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳಿರಬಾರದು

* ಹಗಲಿನಲ್ಲಿ ನಿದ್ದೆ ಮಾಡಬಾರದು

* ದೇಹದ ಜೊತೆಗೆ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು

ಮಾಸಿಕ ಶಿವ ರಾತ್ರಿಯಂದು ಈ ಮಂತ್ರಗಳನ್ನು ಪಠಿಸಿ

ಮಾಸಿಕ ಶಿವ ರಾತ್ರಿಯಂದು ಈ ಮಂತ್ರಗಳನ್ನು ಪಠಿಸಿ

ಮಹಾಮೃತ್ಯುಂಜಯ ಮಂತ್ರ:

"ಓಂ ಹೌಂ ಜೂಂ ಸಃ ಓಂ ಭೂರ್ಭುವಃ ಸ್ವಃ ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ

ಊರ್ವರುಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌ ಓಂ ಸ್ವಃ ಭುವಃ ಭೂಃ ಓಂ ಸಃ ಜೂಂ ಹೌ ಓಂ"

English summary

Masik Shivaratri September 2021: Date, Significance, Puja Vidhi, Shubh Muhurat and Mantra in Kannada

Shivaratri September 2021: Date, Significance, Puja Vidhi, Shubh Muhurat and Mantra in Kannada, Read on..
X
Desktop Bottom Promotion