For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿ 2019: ದಿನಾಂಕ, ಸಮಯ, ಹಾಗೂ ಮಹತ್ವ

|
Makar Sankranti 2019 : ಮಕರ ಸಂಕ್ರಾಂತಿ ಹಬ್ಬದ ಮಹತ್ವ ಹಾಗು ವಿಶೇಷತೆಗಳು | ಪೂಜಾ ಮುಹೂರ್ತ ಸಮಯ

ಜನವರಿ ತಿಂಗಳಲ್ಲಿ ಬರುವಂತಹ ಮಕರ ಸಂಕ್ರಾಂತಿಯನ್ನು ದೇಶದ ವಿವಿಧೆಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ ಮತ್ತು ಇದನ್ನು ತುಂಬಾ ವಿಶೇಷವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಕೂಡ ಮಕರ ಸಂಕ್ರಾಂತಿಯನ್ನು ತುಂಬಾ ಸಂಭ್ರಮದಿಂದ ಆಚರಿಸುವರು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಇದು ಜನಪ್ರಿಯವಾಗಿದೆ. ಉತ್ತರ ಕರ್ನಾಟಕದಲ್ಲಿ ನಡೆಯುವಂತಹ ಎತ್ತಗಳ ಓಟವು ತುಂಬಾ ಜನಪ್ರಿಯ. ಸೂರ್ಯನು ತನ್ನ ಪಥವನ್ನು ಮಕರ ರಾಶಿಗೆ ಬದಲಾಯಿಸುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

Makar Sankranti

ಈ ವೇಳೆ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಚಲಿಸುವನು. ಇದರ ಬಳಿಕ ಚಳಿಗಾಲವು ಕಳೆದು ನಿಧಾನವಾಗಿ ವಸಂತ ಕಾಲವು ಅಂದರೆ ಬೇಸಿಗೆ ಕಾಲವು ಆಗಮಿಸುವಂತಹ ಸಮಯವಾಗಿದೆ. ಸೂರ್ಯನ ಬಿಸಿಲು ಈ ಸಮಯದಲ್ಲಿ ಪ್ರಖರವಾಗಿರುವುದು ಮತ್ತು ಬೆಳೆಗಳ ಮೇಲೆ ಇದು ಪರಿಣಾಮ ಬೀರುವುದು. ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ವೇಳೆ ದೇಶದಲ್ಲಿ ಹಗಲು ದೀರ್ಘವಾಗಿ ಉಷ್ಣತೆಯು ಹೆಚ್ಚಾಗುತ್ತಾ ಸಾಗುವುದು. ಮಕರ ಸಂಕ್ರಾಂತಿಗೆ ತನ್ನದೇ ಆಗಿರುವಂತಹ ಮಹತ್ವವಿದೆ. ಈ ವೇಳೆ ಗದ್ದೆಯಲ್ಲಿ ಬೆಳೆದಿರುವ ಬೆಳೆಗಳಿಗೆ ಪೂಜೆ ಮಾಡಲಾಗುತ್ತದೆ. ಜಾನಪದ ಶೈಲಿಯಲ್ಲಿ ಹಾಡು ಹಾಗೂ ನೃತ್ಯಗಳೊಂದಿಗೆ ಇದನ್ನು ಆಚರಿಸಲಾಗುವುದು. ಇದರೊಂದಿಗೆ ಮಕರ ಸಂಕ್ರಾಂತಿಯಂದು ವಿಶೇಷ ಭೋಜನಗಳನ್ನು ತಯಾರಿಸಲಾಗುತ್ತದೆ.

2019ರಲ್ಲಿ ಮಕರ ಸಂಕ್ರಾಂತಿ ಯಾವಾಗ?

2019ರಲ್ಲಿ ಮಕರ ಸಂಕ್ರಾಂತಿ ಯಾವಾಗ?

*ಈ ವರ್ಷ ಮಕರ ಸಂಕ್ರಾಂತಿಯು ಜ.14 ರಂದು ಆರಂಭವಾಗಿ ಜ.15ರ ತನಕ ಇರುವುದು ಎಂದು ಹಿಂದೂ ಪಂಚಾಂಗವು ಹೇಳುತ್ತದೆ.

*ಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.20ರಿಂದ ಮಧ್ಯಾಹ್ನ 12.40(ಜ.15)

*ಅವಧಿ: 5 ಗಂಟೆ 19 ನಿಮಿಷ

*ಸಂಕ್ರಾಂತಿ ಸಮಯ: ಜ.14ರ ರಾತ್ರಿ 8.05ರಿಂದ

*ಮಹಾಪುಣ್ಯ ಕಾಲ ಮುಹೂರ್ತ: ಬೆಳಗ್ಗೆ 7.20ರಿಂದ ರಾತ್ರಿ 9.07(ಜ.15)

*ಅವಧಿ: 1 ಗಂಟೆ 46 ನಿಮಿಷ

MOst Read: ಈ ವರ್ಷ 2019ರಲ್ಲಿ ಈ ಮೂರು ರಾಶಿಯವರು ದುರಾದೃಷ್ಟದ ದಿನವನ್ನು ಎದುರಿಸಲಿದ್ದಾರಂತೆ!

ಮಕರ ಸಂಕ್ರಾಂತಿಯ ಮಹತ್ವ, ಆಚರಣೆ ಮತ್ತು ಆಹಾರ

ಮಕರ ಸಂಕ್ರಾಂತಿಯ ಮಹತ್ವ, ಆಚರಣೆ ಮತ್ತು ಆಹಾರ

ಹಿಂದೂ ಧರ್ಮದಲ್ಲಿ ಹೆಚ್ಚಿನವರು ಮಕರ ಸಂಕ್ರಾಂತಿಯನ್ನು ಆಚರಿಸುವರು. ಅಲಹಾಬಾದ್ ನಲ್ಲಿ ಸಾವಿರಾರು ಮಂದಿ ಗಂಗಾ ನದಿ ತಟದಲ್ಲಿ ಸೇರಿ ಮಾಘ ಮೇಳದಲ್ಲಿ ಭಾಗಿಯಾಗುವರು. ಈ ಜಾಗದಲ್ಲಿ ಅರ್ಚಕರು ಮತ್ತು ಸನ್ಯಾಸಿಗಳು ಕುಳಿತುಕೊಂಡು ಧಾನ್ಯ ಮಾಡುವರು. ಇವರೆಲ್ಲರು ಸೂರ್ಯ ದೇವರಿಗೆ ತಮ್ಮ ಪ್ರಾರ್ಥನೆ ಅರ್ಪಿಸುವರು. ಮಕರ ಸಂಕ್ರಾಂತಿಯು ಜ.14 ಹಾಗೂ 15ರಂದು ಆಚರಿಸಲ್ಪಡುತ್ತಿದೆ. ಇದೇ ದಿನ ಪಂಜಾಬ್ ನಲ್ಲಿ ಲೋಡಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂನಲ್ಲಿ ಮಾಘ ಬಿಹು ಮತ್ತು ಬೆಂಗಾಳದಲ್ಲಿ ಪೌಶ್ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಕೃಷಿಕರಿಗೆ ಈ ಅವಧಿಯು ತುಂಬಾ ಮಹತ್ವದ್ದಾಗಿರುವುದು. ಯಾಕೆಂದರೆ ಈ ಸಮಯದಲ್ಲಿ ಅವರು ತಮ್ಮ ಬೆಳೆ ಬಿತ್ತಲು ಆರಂಭಿಸುವರು. ಕೆಲವೊಂದು ಕಡೆಗಳಲ್ಲಿ ಜನರು ಮಕರ ಸಂಕ್ರಾಂತಿಯಂದು ಬೇಗನೆ ಎದ್ದು ಸ್ನಾನ ಮಾಡಿಕೊಂಡು ಬಳಿಕ ಗಾಳಿಪಟ ಸ್ಪರ್ಧೆಯಲ್ಲಿ ಭಾಗಿಯಾಗುವರು. ಮಧ್ಯಾಹ್ನದ ವೇಳೆ ಪ್ರತಿಯೊಬ್ಬರು ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಿಕೊಂಡು ಭೋಜನ ಮಾಡುವರು.

Most Read: ಬಡತನ ನಿವಾರಣೆ ಮಾಡಲು ಕೃಷ್ಣನ ಈ ಐದು ಸಂದೇಶಗಳನ್ನು ಪಾಲಿಸಿ

ಮಹಾರಾಷ್ಟ್ರದಲ್ಲಿ ಮಕರ ಸಂಕ್ರಾಂತಿ

ಮಹಾರಾಷ್ಟ್ರದಲ್ಲಿ ಮಕರ ಸಂಕ್ರಾಂತಿ

ಮಹಾರಾಷ್ಟ್ರದಲ್ಲಿ ಮಕರ ಸಂಕ್ರಾಂತಿಗೆ ಎಳ್ಳು ಹಾಗೂ ಬೆಲ್ಲದಿಂದ ಮಾಡಿದಂತಹ ಎಳ್ಳುಂಡೆಯನ್ನು ತಯಾರಿಸುವರು ಮತ್ತು ಇದನ್ನು ನೀಡುವಾಗ `ತಿಲ್ ಗುಲ್ ಘಾಯ, ಅನಿ ಗೂಡ್ ಗೂಡ್ ಬೋಲಾ ಎಂದು ಹೇಳುವರು. ಇದರರ್ಥವೆಂದರೆ ಎಳ್ಳು ಮತ್ತು ಬೆಲ್ಲ ತಿಂದು ಸಿಹಿ ಸಿಹಿಯಾಗಿರುವುದನ್ನು ಮಾತನಾಡಿ ಎಂದು.

ಪುರನ್ ಪೊಲಿ

ಪುರನ್ ಪೊಲಿ

ಸಂಕ್ರಾಂತಿಗೆ ಮಹಾರಾಷ್ಟ್ರದಲ್ಲಿ ಮರಾಠಿ ಸಮುದಾಯವರು ಪುರನ್ ಪೊಲಿ(ಹೋಳಿಗೆ) ತಯಾರಿಸುವರು. ದಿಲ್ಲಿ ಹಾಗೂ ಹರ್ಯಾಣದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸುವರು. ಜನರು ಕೆಲವೊಂದು ಕಡೆಗಳಲ್ಲಿ ಪಾಯಸ, ರಸಗೊಲ್ಲಾ ಮತ್ತು ಇತರ ಸಿಹಿ ತಿಂಡಿಗಳನ್ನು ತಯಾರಿಸಿಕೊಳ್ಳುವರು. ಅದರಲ್ಲೂ ಬಂಗಾಳ ಹಾಗೂ ಒಡಿಸ್ಸಾದಲ್ಲಿ ಹೆಚ್ಚಾಗಿ ಸಿಹಿ ತಿನಿಸುಗಳನ್ನು ಮಕರ ಸಂಕ್ರಾಂತಿ ವೇಳೆ ತಯಾರಿಸುವರು. ಬಿಹಾರದಲ್ಲಿ ಮಕರ ಸಂಕ್ರಾಂತಿಗೆ ಕಿಚಡಿ ತಯಾರಿಸುವರು. ಉತ್ತರಾಖಂಡದಲ್ಲಿ ಜನರು ವಿವಿಧ ರೀತಿಯಿಂದ ಸಿಹಿ ತಿಂಡಿಗಳನ್ನು ತಯಾರಿಸಿಕೊಂಡು ಅದನ್ನು ಕಾಗೆಗಳಿಗೆ ನೀಡುವರು. ಈ ಆಚರಣೆಯನ್ನು ಕಾಲ ಕೌವ ಎಂದು ಕರೆಯಲಾಗುತ್ತದೆ. ನಿಮಗೆ ಕೂಡ ಸಂಕ್ರಾಂತಿ ಹಬ್ಬರ ಶುಭಾಶಯಗಳು. ನೀವು ಸಂಕ್ರಾಂತಿ ಹಬ್ಬವನ್ನು ಸಡಗರದಿಂದ -ಸಂಭ್ರಮಿಸಿ.

Read more about: festival
English summary

Makar Sankranti 2019: Date, Time, Significance

Makar Sankranti is just around the corner and the festive vibe is hard to miss. The harvest festival is celebrated with much fervour across the country. Makar Sankranti celebrates the sun's shift into Capricorn (also called Makar in Sanksrit). It is around the same time that sun starts making transition towards North. From this point onwards, the cold, short and wintery days start giving way to slightly longer and warmer days.
X
Desktop Bottom Promotion