For Quick Alerts
ALLOW NOTIFICATIONS  
For Daily Alerts

ಫೆ.27ಕ್ಕೆ ಮಾಘ ಪೂರ್ಣಿಮೆ: ತುಂಬಾ ಶ್ರೇಷ್ಠ ಎಂದು ಹೇಳುವ ಈ ದಿನ ಮಾಘ ಸ್ನಾನದ ಮಹತ್ವವೇನು?

|

ಮಾಘ ಮಾಸದಲ್ಲಿ ಪುಣ್ಯ ಸ್ನಾನ ಮಾಡಿದರೆ ಪಾಪಕರ್ಮಗಳು ನಿವಾರಣೆಯಾಗುವುದು ಎಂಬ ನಂಬಿಕೆ ಇದೆ. ಮಾಘ ಮಾಸದಲ್ಲಿ ಪ್ರತಿಯೊಂದು ಜಲಮೂಲವೂ ಗಂಗೆಯಷ್ಟೇ ಪವಿತ್ರವಾಗಿರುತ್ತದೆ.

ಮಾಘ ಸ್ನಾನಕ್ಕೆ ಉತ್ತರ ಭಾರತದಲ್ಲಿರುವ ಪ್ರಯಾಗ, ವಾರಾಣಸಿ, ಹರಿದ್ವಾರ, ನಾಸಿಕ್ , ಪುಷ್ಕರ ಸರೋವರ ಪ್ರಸಿದ್ಧವಾಗಿದ್ದರೆ ದಕ್ಷಿಣ ಭಾರತದಲ್ಲಿ ಕನ್ಯಾಕುಮಾರಿ, ರಾಮೇಶ್ವರಂ, ಕಾವೇರಿ, ತುಂಭದ್ರಾ, ಕೃಷ್ಣ, ನೇತ್ರವಾತಿ ಹೀಗೆ ಪುಣ್ಯ ನದಿಗಳಲ್ಲಿ ಸಂಗಮ ಸ್ಥಳಗಳಲ್ಲಿ ಸ್ನಾನ ಮಾಡಿದರೆ ತುಂಬಾ ಪುಣ್ಯ ಸಿಗುವುದು.

ಮಾಘ ಮಾಸದ ಪೂರ್ಣಿಮೆ

ಮಾಘ ಮಾಸದ ಪೂರ್ಣಿಮೆ

ಅದರಲ್ಲೂ ಮಾಘ ಮಾಸದ ಪೂರ್ಣಿಮೆ ತುಂಬಾ ವಿಶೇಷವಾದ ದಿನವಾಗಿದೆ, ಇದನ್ನು ಮಾಘಿ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು. ಇದು ಮಾಘ ಮಾಸದ ಕೊನೆಯ ದಿನವೂ ಹೌದು. ಈ ದಿನ ಪುಣ್ಯ ಸ್ನಾನ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳನ್ನು ಮಾಡಲಾಗುವುದು.

ಮಾಘ ಪೂರ್ಣಿಮೆ ಬೌದ್ಧ ಧರ್ಮದವರಿಗೂ ವಿಶೇಷವಾದ ದಿನವಾಗಿದ್ದು, ಈ ದಿನ ಗೌತಮ ಬುದ್ಧ ತಮ್ಮ ಸಾವಿನ ಬಗ್ಗೆ ಹೇಳಿದರು. ಮಾಘ ಪೂರ್ಣಿಮೆಯನ್ನು ಫೆಬ್ರವರಿ ತಿಂಗಳ 27ನೇ ತಾರೀಕಿನಲ್ಲಿ ಆಚರಿಸಲಾಗುವುದು.

ನಾವಿಲ್ಲಿ ಮಾಘ ಪೂರ್ಣಿಮೆಯ ಮಹತ್ವದ ಬಗ್ಗೆ ಹೇಳಿದ್ದೇವೆ ನೋಡಿ:

ನಾವಿಲ್ಲಿ ಮಾಘ ಪೂರ್ಣಿಮೆಯ ಮಹತ್ವದ ಬಗ್ಗೆ ಹೇಳಿದ್ದೇವೆ ನೋಡಿ:

* ಈ ದಿನ ಭಕ್ತರು ಬೆಳಗ್ಗೆ ಬೇಗನೆ ಎದ್ದು ನದಿಯಲ್ಲಿ, ಸಂಗಮದಲ್ಲಿ ಮುಳುಗಿ ಏಳುತ್ತಾರೆ. ಯಾರಿಗೆ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲವೂ ಅವರು ಮನೆಯಲ್ಲಿ ತಾವು ಸ್ನಾನ ಮಾಡುವ ನೀರಿಗೆ ಗಂಗಾ ಜಲ ಹಾಕಿ ಸ್ನಾನ ಮಾಡುತ್ತಾರೆ.

* ಪುಣ್ಯ ಸ್ನಾನದ ಬಳಿಕ ಭಕ್ತರು ಪೂಜೆಗೆ ಅಣಿಯಾಗುತ್ತಾರೆ. ಈ ದಿನ ವಿಷ್ಣು ಹಾಗೂ ಹನುಮಾನ್‌ಗೆ ಪೂಜೆ ಸಲ್ಲಿಸಲಾಗುವುದು ಜೊತೆಗೆ ಇಷ್ಟ ದೇವರುಗಳಿಗೆ ಪೂಜೆ ಸಲ್ಲಿಸಲಾಗುವುದು. ಈ ದಿನ ಪಾರ್ವತಿ, ಬೃಹಸ್ಪತಿಯನ್ನು ಪೂಜಿಸಬೇಕು.

* ಈ ದಿನ ಸತ್ಯನಾರಾಯಣ ಪೂಜೆ ಮಾಡಲಾಗುವುದು. ವಿಷ್ಣು ದೇವಾಲಯಗಳಲ್ಲಿ ಬಾಳೆ ಎಲೆಯಲ್ಲಿ ಗಂಧ, ಎಳ್ಳು, ವೀಳ್ಯೆ, ಹಣ್ಣುಗಳನ್ನು ಇಟ್ಟು ಪೂಜಿಸಲಾಗುವುದು. ಭಾರತದಲ್ಲಿ ಎಲ್ಲಾ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಿಸಲಾಗುವುದು.

* ಈ ದಿನ ಉಪವಾಸ ವ್ರತ ಮಾಡುವುದರಿಂದ ಒಳಿತಾಗುತ್ತದೆ. ಚಂದ್ರನ ನೋಡಿದ ಬಳಿಕ ಒಂದು ಹೊತ್ತು ಊಟ ಸಲ್ಲಿಸಲಾಗುವುದು.

* ಈ ದಿನ ಬಟ್ಟೆ, ಆಹಾರ, ಧಾನ್ಯಗಳು, ತುಪ್ಪ, ಬೆಲ್ಲ, ಹಣ್ಣುಗಳು ಇವುಗಳನ್ನು ದಾನ ಮಾಡುವುದರಿಂದ ಒಳಿತಾಗುತ್ತದೆ. ಅಗ್ಯತವಿರುವ ಬ್ರಾಹ್ಮಣರಿಗೆ ದಾನ ಮಾಡಿ. ಈ ಮಾಘ ಮಾಸದಲ್ಲಿ ಪ್ರತಿದಿನ ಎಳ್ಳು ದಾನ ಮಾಡುವುದು ತುಂಬಾ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

* ಕೆಲವು ಕಡೆ ಈ ದಿನ ಹಿರಿಯರಿಗೆ ತರ್ಪಣ ನೀಡಲಾಗುವುದು.

2021ರ ಮಾಘ ಪೂರ್ಣಿಮೆಯ ಮಹತ್ವದ ಸಮಯ

2021ರ ಮಾಘ ಪೂರ್ಣಿಮೆಯ ಮಹತ್ವದ ಸಮಯ

ಸೂರ್ಯೋದಯ: ಫೆಬ್ರವರಿ 27, 6:53ಕ್ಕೆ

ಸೂರ್ಯಾಸ್ತ:ಫ್ರಬ್ರವರಿ 27, 6:25ಕ್ಕೆ

ಪೂರ್ಣಿಮೆ ತಿಥಿ ಪ್ರಾರಂಭ: ಫೆಬ್ರವರಿ 26, ಸಂಜೆ 3:50ಕ್ಕೆ

ಪೂರ್ಣಿಮೆ ತಿಥಿ ಮುಕ್ತಾಯ: ಫೆಬ್ರವರಿ 27, ಮಧ್ಯಾಹ್ನ 1:47ಕ್ಕೆ

ಮಾಘ ಪೂರ್ಣಿಮೆಯಂದು ಪುಣ್ಯಸ್ನಾನದ ಮಹತ್ವ

ಮಾಘ ಪೂರ್ಣಿಮೆಯಂದು ಪುಣ್ಯಸ್ನಾನದ ಮಹತ್ವ

ಈ ದಿನ ಜ್ಯೋತಿಷ್ಯ ಪ್ರಕರವೂ ತುಂಬಾ ಮಹತ್ವವಾದ ದಿನವಾಗಿದೆ. ಈ ದಿನ ಸೂರ್ಯ ಮಕರಕ್ಕೆ ಸಂಚಾರ ಮಾಡುತ್ತಾನೆ, ಚಂದ್ರ ಕರ್ಕ ರಾಶಿಗೆ ಚಲಿಸುತ್ತಾನೆ. ಆದ್ದರಿಂದ ಈ ದಿನ ಪುಣ್ಯ ಸ್ನಾನ ಮಾಡಿದರೆ ಎಲ್ಲಾ ಪಾಪಕರ್ಮಗಳು ದೂರವಾಗುವುದು, ಪುಣ್ಯ ಲಭಿಸುವುದು.

ಅಲ್ಲದೆ ಈ ಪುಣ್ಯ ಸ್ನಾನ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದೇ ಆಗಿದೆ. ಮಾಘ ಪೂರ್ಣಿಮೆಯಂದು ಸ್ನಾನ ಮಾಡುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.

English summary

Magha Purnima 2021 Vrat Date, Puja Timing and Significance in Kannada

Magha Purnima 2021 Vrat Date, Puja Timing and Significance, Read on...
Story first published: Tuesday, February 9, 2021, 17:12 [IST]
X
Desktop Bottom Promotion