For Quick Alerts
ALLOW NOTIFICATIONS  
For Daily Alerts

ಜುಲೈನಲ್ಲಿ ನಾಗರ ಪಂಚಮಿ ಜೊತೆಗೆ ಇವೆ ಸಾಲು ಸಾಲು ಹಬ್ಬಗಳ ಸಡಗರ

|

ಈ ಜುಲೈನಲ್ಲಿ ಹಬ್ಬಗಳು ಸಾಲುಗಟ್ಟಿ ನಿಂತಿವೆ. ಒಂದು ಲೆಕ್ಕದಲ್ಲಿ ನೋಡುವುದಾದರೆ ಜುಲೈ ತಿಂಗಳಿನ ಬಹುತೇಕ ದಿನಗಳಲ್ಲಿ ಒಂದೆಲ್ಲಾ ಒಂದು ವಿಶೇಷಗಳಿವೆ. ಜುಲೈ 1ರಂದು ದೇವಶಯನಿ ಏಕಾದಶಿ/ಆಷಾಢ ಏಕಾದಶಿ ಆಚರಿಸಲಾಯಿತು. ಈ ಅಲ್ಲದೆ ಈ ಏಕಾದಶಿಯೊಂದಿಗೆ ಚಾತುರ್ಮಾಸ ಕೂಡ ಆರಂಭವಾಗಿದೆ.

July 2020 Festivals And Vrats

ಜುಲೈ 2ರಂದು ಪ್ರದೋಷ ವ್ರತ ಕೂಡ ಇತ್ತು, ಪ್ರದೋಷ ವ್ರತವನ್ನು ಕೃಷ್ಣ ಅಥವಾ ಶುಕ್ಲ ಪಕ್ಷದ 13ನೇ ದಿನದಂದು ಆಚರಿಸಲಾಗುತ್ತದೆ, ಈಗ ಗುರು ಪೂರ್ಣಿಮಾ, ಕರ್ಕ ಸಂಕ್ರಾಂತಿ ಅಷ್ಟೇ ಸಡಗರದ ಹಬ್ಬವಾದ ನಾಗರಪಂಚಮಿ ಕೂಡ ಇದೇ ತಿಂಗಳಿದ್ದು, ಇಲ್ಲಿ ನಾವು ಈ ತಿಂಗಳಿನಲ್ಲಿ ಧಾರ್ಮಿಕವಾಗಿ ಯಾವೆಲ್ಲಾ ವಿಶೇಷ ದಿನಗಳಿವೆ, ಆ ದಿನಗಳ ಮಹತ್ವವೇನು ಎಂಬೆಲ್ಲಾ ಮಾಹಿತಿಯನ್ನು ನೀಡಿದ್ದೇವೆ ನೋಡಿ:
 ಜುಲೈ 5ಕ್ಕೆ ಗುರು ಪೂರ್ಣಿಮಾ

ಜುಲೈ 5ಕ್ಕೆ ಗುರು ಪೂರ್ಣಿಮಾ

ಗುರು ಪೂರ್ಣಿಮಾ ಅದ್ಭುತ ಅರ್ಥ ಹಾಗೂ ಹಿನ್ನೆಲೆಯನ್ನು ಹೊಂದಿದೆ. ಈ ಆಚರನೆಯನ್ನು ಹಿಂದೂಗಳು, ಜೈನರು ಹಾಗೂ ಬೌದ್ಧರು ಮಾಡುತ್ತಾರೆ. ಗುರುವಿಗೆ ಯಾರು ಗೌರವ ಸಲ್ಲಿಸುತ್ತಾರೋ ಅವರು ಬದುಕಿನಲ್ಲಿ ಬೆಳೆಯುತ್ತಾರೆ, ಉತ್ತಮ ವ್ಯಕ್ತಿಗಳಾಗುತ್ತಾರೆ, ಯಾರು ಗುರುವನ್ನು ಅವಮಾನಿಸಿತ್ತಾನೋ ಅವನಿಗೆ ಸರಿಯಾದ ಸಂಸ್ಕಾರವಾಗಲಿ, ಜ್ಞಾನವಾಗಲಿ ಪಡೆದುಕೊಳ್ಳಲು ಸಾಧ್ಯವಿಲ್ಲ.ಆತ ಜೀವನದಲ್ಲಿ ತೊಂದರೆಗಳಿಗೆ ಸಿಲುಕುತ್ತಾನೆ.

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯಂದು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮಾ ಆಚರಿಸುತ್ತಾರೆ. ಈ ದಿನ ಗುರುವಿಗೆ ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ತಮಗೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ನಮಸ್ಕರಿಸಿ ಧನ್ಯವಾದಗಳನ್ನು ಹೇಳುತ್ತಾರೆ.

​ಆಷಾಢ ಹುಣ್ಣಿಮೆಯಂದು ಕೋಕಿಲ ವ್ರತ

​ಆಷಾಢ ಹುಣ್ಣಿಮೆಯಂದು ಕೋಕಿಲ ವ್ರತ

ಜುಲೈ ತಿಂಗಳಿನಲ್ಲಿ ಆಷಾಢ ಹುಣ್ಣಿಮೆ ಜುಲೈ 5ರಂದು ಆಚರಿಸಲಾಗುವುದು. ಈ ದಿನ ಮುತ್ತೈದೆಯರು ಕೋಲಿಲ ವ್ರತವನ್ನು ಗೌರಿಯ ರೂಪವೆಂದು ಆಚರಿಸುತ್ತಾರೆ. ಈ ದಿನ ಉಪವಾಸವಿದ್ದು ಗೌರಿಯನ್ನು ಪೂಜಿಸಿ ಮತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡುವುದರಿಂದ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.

 ಜುಲೈ 8ಕ್ಕೆ ​ಸಂಕಷ್ಟ ಚತುರ್ಥಿ

ಜುಲೈ 8ಕ್ಕೆ ​ಸಂಕಷ್ಟ ಚತುರ್ಥಿ

ಈ ದಿನ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನ, ಸಂಕಷ್ಟ ಚತುರ್ಥಿಗೆ ಉಪವಾಸವಿದ್ದು ವಿಘ್ನ ನಿವಾರಕ ಗಣೇಶನ ಆರಾಧನೆ ಮಾಡಿದರೆ ಸಕಲ ವಿಘ್ನಗಳು ದೂರವಾಗುವುದು. ಸಂಕಷ್ಟಿಯಂದು ಉಪವಾಸ ಮಾಡಬೇಕು. ಸಂಜೆ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ಪೂಜೆ ಅಂತ್ಯವಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನವನ್ನು ಮಾಡಬೇಕು.

ಜುಲೈ 16ಕ್ಕೆ ಕಾಮಿಕ ಏಕಾದಶಿ, ಕರ್ಕ ಸಂಕ್ರಾಂತಿ

ಜುಲೈ 16ಕ್ಕೆ ಕಾಮಿಕ ಏಕಾದಶಿ, ಕರ್ಕ ಸಂಕ್ರಾಂತಿ

ಕಾಮಿಕ ಏಕಾದಶಿಯಂದು ವಿಷ್ಣು ದೇವನನ್ನು ಆರಾಧಿಸುತ್ತಾರೆ. ಅಲ್ಲದೆ ಈ ದಿನ ಗಂಧರ್ವರನ್ನು, ಸೂರ್ಯನನ್ನೂ ಕೂಡ ಪೂಜಿಸಲಾಗುವುದು. ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ದೊರೆಯುತ್ತದೆ ಎಂದು ಹೇಳಲಾಗುವುದು.

ಕರ್ಕ ಸಂಕ್ರಾಂತಿ

ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಆಭೂಷಣಗಳು, ಶಸ್ತ್ರಗಳು, ಚಲಿಸುವ ದಿಕ್ಕು ಇತ್ಯಾದಿಗಳ ಬಗ್ಗೆ ವರ್ಣನೆಯಿದೆ. ಸಂಕ್ರಾಂತಿಗೆ ಧರಿಸಿದ ಬಣ್ಣದ ಉಡುಪು ಧರಿಸಬಾರದು ಎನ್ನುತ್ತಾರೆ. ಸಂಕ್ರಾಂತಿಯು ಚಲಿಸುವ ಹಾಗೂ ನೋಡುವ ದಿಕ್ಕುಗಳಲ್ಲಿರುವ ರಾಜ್ಯ ದೇಶಾದಿಗಳಿಗೂ ಅಲ್ಲಿನ ಪ್ರಜೆಗಳಿಗೂ ವಿಶೇಷ ಕಷ್ಟನಷ್ಟಗಳು ಪ್ರಾಪ್ತವಾಗುತ್ತವೆಯೆಂದೂ ಎಂದು ಕೂಡ ಹೇಳಲಾಗುತ್ತದೆ.

ಜುಲೈ 18ಕ್ಕೆ ಮಾಸಿಕ ಶಿವರಾತ್ರಿ

ಜುಲೈ 18ಕ್ಕೆ ಮಾಸಿಕ ಶಿವರಾತ್ರಿ

ಪ್ರತಿ ತಿಂಗಳೂ ಮಾಸಿಕ ಶಿವರಾತ್ರಿ ಆಚರಿಸಲಾಗುವುದು. ಅದರಲ್ಲೂ ಶ್ರಾವಣ ಮಾಸದಲ್ಲಿ ಬರುವ ಮಾಸಿಕ ಶಿವರಾತ್ರಿ ತುಂಬಾ ವಿಶೇಷಾದದ್ದು. ಕನ್ಯೆಯರು ಬಯಸಿದ ಗಂಡನನ್ನು ಪಡೆಯಲು ಹುಡುಗಿಯರ ಉಪವಾಸ ಮಾಡುವಾಗ ಮಹಿಳೆಯರು ತಮ್ಮ ಗಂಡಂದಿರ ದೀರ್ಘಾವಧಿಯ ಜೀವನಕ್ಕಾಗಿ ವೃತ ಮಾಡುತ್ತಾರೆ. ಕುಟುಂಬದ ಯೋಗಕ್ಷೇಮಕ್ಕಾಗಿ ಪುರುಷರು ಕೂಡ ಉಪವಾಸವನ್ನು ಮಾಡುತ್ತಾರೆ. ಇದಲ್ಲದೆ, ವೃತ್ತಿಜೀವನದಲ್ಲಿ ಅವರು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನಮ್ಮ ಗ್ರಂಥಗಳು ಶ್ರಾವಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಮತ್ತು ಈ ತಿಂಗಳಿನಲ್ಲಿ ಬೀಳುವ ಶಿವರಾತ್ರಿಗೆ ಹೆಚ್ಚು ಮಹತ್ವವಿದೆ. ಶಿವಲಿಂಗಕ್ಕೆ ಗಂಗಾ ನದಿಯ ನೀರನ್ನು ನೀಡುವುದರಿಂದ ಭಕ್ತರಿಗೆ ಭಾರಿ ಅದೃಷ್ಟವನ್ನು ತಂದುಕೊಡುತ್ತದೆ ಎಂದು ನಂಬಲಾಗಿದೆ.

 ಜುಲೈ 20ಕ್ಕೆ ​ಶ್ರಾವಣ ಅಮಾವಾಸ್ಯೆ

ಜುಲೈ 20ಕ್ಕೆ ​ಶ್ರಾವಣ ಅಮಾವಾಸ್ಯೆ

ಶ್ರಾವಣ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಶ್ರಾವಣ ಅಮವಾಸ್ಯೆಯೆಂದು ಆಚರಿಸಲಾಗುವುದು. ಇದು ಶ್ರಾವಣ ಮಾಸದ ಆರಂಭವನ್ನುಸುಚಿಸುವ ಅಮವಾಸ್ಯೆಯಾಗಿದ್ದು ಈ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಯುತ್ತವೆ.

 ಜುಲೈ 25ಕ್ಕೆ ನಾಗರ ಪಂಚಮಿ

ಜುಲೈ 25ಕ್ಕೆ ನಾಗರ ಪಂಚಮಿ

ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿಯನ್ನು ದೇಶದ ಎಲ್ಲೆಡೆ ಆಚರಿಸಲಾಗುವುದು. ಮಹಿಳೆಯರಿಗಂತೂ ವಿಶೇಷವಾದ ಹಬ್ಬ ಇದಾಗಿದೆ. ಈ ದಿನ ನಾಗರ ಹಾವಿಗೆ, ನಾಗರ ಕಲ್ಲಿಗೆ ನೀರೆಯುತ್ತಾರೆ. ಈ ಹಬ್ಬ ಬಂತೆಂದರೆ ಸಾಲು-ಸಾಲು ಹಬ್ಬಗಳು ಶುರು ಎಂದೇ ಲೆಕ್ಕ.

 ಜುಲೈ 30ಕ್ಕೆ ಶ್ರಾವಣ ಪುತ್ರದ ಏಕಾದಶಿ

ಜುಲೈ 30ಕ್ಕೆ ಶ್ರಾವಣ ಪುತ್ರದ ಏಕಾದಶಿ

ಈ ಆಚರಣೆ ದೇಶದ ಕೆಲವು ಭಾಗದಲ್ಲಿ ಮಾತ್ರ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಸಂತಾನ ಭಾಗ್ಯ ಅಪೇಕ್ಷಿಸುವವರು ಈ ವ್ರತ ಮಾಡುತ್ತಾರೆ. ಈದಿನ ಉಪವಾಸವಿದ್ದು ಪೂಜೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದು, ಸಂತಾನವಿಲ್ಲದವರಿಗೆ ಮಕ್ಕಳಾಗುವುದು ಎಂಬ ನಂಬಿಕೆಯಿದೆ.

English summary

List of July 2020 Month Poojas, Vratas and Festivals

uly 2020 is month of festival, here is a list of famous festivals and vrats celebrated in this month, have a look
X
Desktop Bottom Promotion