For Quick Alerts
ALLOW NOTIFICATIONS  
For Daily Alerts

ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಹೆಚ್ಚಿನವರಿಗೆ ತಿಳಿಯದ ಸಂಗತಿಗಳಿವು

|

ಇಂದು ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮರವರ ಹುಟ್ಟುಹಬ್ಬ. ಬ್ರಿಟಿಷರ ವಿರುದ್ಧ ಸಿಂಹಿಣಿಯಂತೆ ಹೋರಾಡಿದ ರಾಣಿ ಚೆನ್ನಮ್ಮರ ವೀರಗಾತೆ ಎಲ್ಲರಿಗೂ ಗೊತ್ತು. 1778 ಅಕ್ಟೋಬರ್‌ 23ರಂದು ಜನಿಸಿದರು. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು.

Kittur Rani Chennamma birth anniversary; Interesting Facts about the Indias Valiant Freedom Fighter in Kannada

ಕಿತ್ತೂರು ರಾಣಿ ಹುಟ್ಟು ಹಬ್ಬದ ದಿನದಂದು ಅವರ ಕುರಿತ ಕೆಲವೊಂದು ಮಾಹಿತಿ ಬಗ್ಗೆ ಹೇಳಲಾಗಿದೆ ನೋಡಿ:

* ರಾಣಿ ಚೆನ್ನಮ್ಮ 1778ರಲ್ಲಿ ಜನಿಸಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಅಂದ್ರೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಸಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಇವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 56 ವರ್ಷಗಳ ಮುಂಚೆಯೇ ಬ್ರಿಟಿಷರ ವಿರುದ್ಧ ಹೋರಾಡಿದ್ದರು.

* ಕಿತ್ತೂರಿನ ರಾಣಿಯಾದ ಚೆನ್ನಮ್ಮ ದೇಸಾಯಿ ಕುಟುಂಬದ ಮಲ್ಲಸರ್ಜಾ ಎಂಬವರನ್ನು ಮದುವೆಯಾದರು, ಅವರಿಗೊಬ್ಬ ಮಗ ಜನಿಸಿದ್ದ. 1824ರಲ್ಲಿ ಮಗ ತೀರಿ ಹೋದ ಬಳಿಕ ಶಿವಲಿಂಗಪ್ಪನನ್ನು ದತ್ತು ಪಡೆದು ಅವನನ್ನು ಉತ್ತರಾಧಿಕಾರಿಯಾಗಿ ನೇಮಿಸಿದರು.

* ಕಿತ್ತೂರು ಹಾಗೂ ಬ್ರಿಟಿಷರ ನಡುವಿನ ಮೊದಲಿನ ಹೋರಾಟದಲ್ಲಿ ಬ್ರಿಟಿಷ್‌ ಸೇನೆ ದೊಡ್ಡ ನಷ್ಟವನ್ನು ಅನುಭವಿಸಿತ್ತು. ಸೇಂಟ್. ಜೀನ್ ಥಾಕೆರೆ, ಬ್ರಿಟಿಷ್ ಕಲೆಕ್ಟರ್, ಪೊಲಿಟಿಕಲ್ ಏಜೆಂಟ್ ಈ ಯುದ್ಧದಲ್ಲಿ ಸಾವನ್ನಪ್ಪದ್ದರು.

* ತನ್ನ ರಾಜ್ಯವನ್ನು ಉಳಿಸಲು ಕಿತ್ತೂರು ಹೋರಾಡಿದ ಪರಿ ನೋಡಿ ಸ್ಪೂರ್ತಿ ಪಡೆದ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿದರು. ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸಂಗೊಳ್ಳಿ ರಾಯಣ್ಣ ಕೂಡ ಒಬ್ಬರು.

* ಕೊನೆಯ ಯುದ್ಧದಲ್ಲಿ ಚೆನ್ನಮ್ಮ ಸೋತರೂ ಆಕೆ ಧೈರ್ಯ, ಶೌರ್ಯವನ್ನು ಈ ದೇಶ ಎಂದಿಗೂ ಮರೆಯಲ್ಲ. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಸೇನೆಯೇ ಕಿತ್ತೂರು ರಾಣಿ ಚೆನ್ನಮ್ಮರ ಸೇನೆಯಾಗಿದೆ.

* ಆಕೆಯ ಪರಂಪರೆ, ಜಯ, ಶೌರ್ಯವನ್ನು ಕೊಂಡಾಡುತ್ತಾ ಪ್ರತೀವರ್ಷ ಅಕ್ಟೋಬರ್ 22-24ರವರೆಗೆ ಕಿತ್ತೂರು ಉತ್ಸವ ಮಾಡಲಾಗುವುದು.

* 2007, ಸೆಪ್ಟೆಂಬರ್ 11ರಂದು ಭಾರತೀಯ ಸಂಸದೀಯ ಭವನದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪ್ರತಿಮೆಯನ್ನು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಟೇಲ್ ಅನಾವರಣಗೊಳಿಸಿದರು.

* ರಾಣಿ ಚೆನ್ನಮ್ಮರವರ ಸಮಾಧಿ ಬೈಲ್‌ಹೊಂಗಲ್‌ ತಾಲೂಕಿನಲ್ಲಿದೆ. ಆದರೆ ಈ ಸ್ಥಳವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅಲ್ಲಿ ಚಿಕ್ಕದೊಂದು ಪಾರ್ಕ್‌ ಇದೆ....ಈ ಸ್ಥಳವನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ ಅಲ್ಲಿಗೆ ಪ್ರವಾಸಿಗರು ಭೇಟಿ ನಿಡುವವರು, ಮುಂದಿನ ಪೀಳಿಗೆಗೆ ನಮ್ಮ ಇತಿಹಾಸದ ಸ್ಪಷ್ಟ ಚಿತ್ರಣ ಸಿಗುವಂಥಾಗುವುದು.

English summary

Kittur Rani Chennamma birth anniversary; Interesting Facts about the India's Valiant Freedom Fighter in Kannada

Kittur Rani Chennamma birth anniversary; Interesting Facts about the India's Valiant Freedom Fighter in Kannada, read on..
X
Desktop Bottom Promotion