For Quick Alerts
ALLOW NOTIFICATIONS  
For Daily Alerts

ಬುಡಕಟ್ಟು ಜನಾಂಗದ ಮೊದಲ ಐಎಎಸ್‌ ಅಧಿಕಾರಿಗೆ ದೇಶವೇ ಹೇಳುತ್ತಿದೆ ಸಲಾಂ

|

ಸಾಧನೆಯ ಮನಸ್ಸು ಇದ್ದರೆ ಸಾಕು ಎಂಥ ಕಷ್ಟಗಳು, ಅಡಚಣೆಗಳಿದ್ದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆ ಕೇರಳದ ಶ್ರೀಧನ್ಯಾ ಸುರೇಶ್‌.

ಇರಲು ಸರಿಯಾದ ಸೂರು ಇರಲಿಲ್ಲ, ಮುರುಕುಲು ಮನೆ, ದಿನಗೂಲಿ ಮಾಡಿ ಮಕ್ಕಳ ಹೊಟ್ಟೆ ತುಂಬಿಸುವ ಅಪ್ಪ-ಅಮ್ಮ ತನ್ನನ್ನು ಶಾಲೆಗೆ ಕಳುಹಿಸುವಾಗ ಆಕೆಯ ಕಣ್ಣಲ್ಲಿ ಇದ್ದದ್ದು ಮಾತ್ರ ಮುಂದೆ ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಆಸೆ.

ಐಎಎಸ್‌ ಅಧಿಕಾರಿಯಾಗಲು ಪ್ರತಿಷ್ಠಿತ ಶಾಲೆಗೆ ಕಳುಹಿಸಬೇಕು, ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸಬೇಕು ಎಂದು ಭಾವಿಸುವ ಪೋಷಕರಿಗೆ ನಿಮ್ಮ ಊಹೆ ತಪ್ಪು, ನಿಮ್ಮ ಮಕ್ಕಳಲ್ಲಿ ಓದಿನ ಛಲವಿದ್ದರಷ್ಟೇ ಸಾಕು ನೀವೇನು ಮಾಡಬೇಕಾಗಿಲ್ಲ ಅವರೇ ಅವರ ಬದುಕಿನ ದಾರಿ ರೂಪಿಸಿಕೊಳ್ಳುತ್ತಾರೆ ಎಂಬುವುದಕ್ಕೆ ಸಾಕ್ಷಿ ಇಪ್ಪತ್ತಾರರ ಹರೆಯದ ಶ್ರೀಧನ್ಯಾ ಸುರೇಶ್‌.

ಈ ಹುಡುಗಿ ಸಾಧನೆಗೆ ದೇಶವೇ ಹೇಳುತ್ತಿದೆ ಭೇಷ್‌

ಈ ಹುಡುಗಿ ಸಾಧನೆಗೆ ದೇಶವೇ ಹೇಳುತ್ತಿದೆ ಭೇಷ್‌

Image Courtesy

ಇಂದು ಇಡೀ ಭಾರತ ದೇಶದ ಜನತೆ ಈ ಹುಡುಗಿಯ ಸಾಧನೆ ನೋಡಿ ಅಚ್ಚರಿ ಜೊತೆಗೆ ಹೆಮ್ಮೆ ಪಡುತ್ತಿದ್ದಾರೆ. ವಯನಾಡು ಜಿಲ್ಲೆಯ ಪೊಝುತ್ತಾನ ಪಂಚಾಯಿತಿಯ ಶ್ರೀಧನ್ಯಾ ಇಂದು ಅಂಥ ಸಾಧನೆ ಮಾಡಿದ್ದಾರೆ. ಕೇರಳದ ಕುರಿಚಿಯಾ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಶ್ರೀಧನ್ಯಾ 2018ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇದೀಗ ಕೋಝಿಕೋಡ್ ಜಿಲ್ಲೆಯ ಸಹಾಯಕ ಜಿಲ್ಲಾಧಿಕಾರಿ. ನಾಗರೀಕ ಸೇವೆ ಪರೀಕ್ಷೆಯಲಿ 410ನೇ ರ್‍ಯಾಂಕ್ ಪಡೆದುಕೊಂಡಿದ್ದರು.

ಸಾಧನೆಗೆ ಅಡೆತಡೆ ಲೆಕ್ಕಕ್ಕಿಲ್ಲ

ಸಾಧನೆಗೆ ಅಡೆತಡೆ ಲೆಕ್ಕಕ್ಕಿಲ್ಲ

Image Courtesy

ಶ್ರೀಧನ್ಯಾ ಓದಿದ್ದು ಮಲಯಾಳಂ ಮಾಧ್ಯಮದಲ್ಲಿ. ಪ್ರಾಣಿಶಾಸ್ತ್ರದಲ್ಲಿ ಪದವಿ ಶಿಕ್ಷಣವನ್ನು ಕೋಝಿಕೋಡ್‌ನ ಸೇಂಟ್‌ ಜೋಸೆಫ್‌ ಕಾಲೇಜ್‌ನಲ್ಲಿ ಪಡೆದರು, ನಂತರ ಸ್ನಾತಕೋತರ ವಿದ್ಯಾಭ್ಯಾಸವನ್ನು ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಪಡೆದರು.

ವಿದ್ಯಾಭ್ಯಾಸದ ನಂತರ ಕೇರಳದ ಬುಡಕಟ್ಟು ಸಮುದಾಯ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ವಯನಾಡ್‌ನ ಆದಿವಾಸಿ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿ ಕಾರ್ಯ ನಿರ್ವಹಿಸಿದರು. ಅಲ್ಲಿ ಅವರ ಬದುಕು ಬದಲಾಯಿಸುವ ದೃಷ್ಟಿಕೋನಕ್ಕೆ ಒಂದು ಹೊಸ ಆಯಾಮ ದೊರೆಯಿತು.

ಅವರು ವಯನಾಡ್‌ನಲ್ಲಿರುವ ಅಲ್ಲಿಯ ಜಿಲ್ಲಾಧಿಕಾರಿ ಶ್ರೀರಾಮ್‌ ಸಮಾಶಿವ ರಾವ್ ಅವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು, ಅವರು ಇವರಲ್ಲಿರುವ ಐಎಎಸ್‌ ಓದುವ ಆಸೆಯನ್ನು ಗುರುತಿಸಿ ಓದುವಂತೆ ಪ್ರೇರೇಪಿಸಿದರು. ಅವರ ಪ್ರೋತ್ಸಾಹದಿಂದಾಗಿ ಶ್ರೀಧನ್ಯಾ ತಿರುವಂತಾಪುರದ ನಾಗರಿಕಾ ಸೇವಾ ಕೋಚಿಂಗ್‌ಗೆ ಸೇರಿದರು,

ದೆಹಲಿಗೆ ಹೋಗಲು ಹಣವಿರಲಿಲ್ಲ

ದೆಹಲಿಗೆ ಹೋಗಲು ಹಣವಿರಲಿಲ್ಲ

Image Courtesy

ಅವರು ಫೇಸ್ ಟು ಫೇಸ್‌ ಇಂಟರ್‌ವ್ಯೂನಲ್ಲಿ ಪಾಸಾಗಿದ್ದರು, ನಂತರ ದೆಹಲಿಗೆ ತೆರಳಬೇಕಾಗಿತ್ತು. ಆದರೆ ಅವರಲ್ಲಿ, ಅವರ ಕುಟುಂಬದವರಲ್ಲಿ ದೆಹಲಿಗೆ ಹೋಗಲು ಹಣವಿರಲಿಲ್ಲ. ಆಗ ಅವರ ನೆರವಿಗೆ ಬಂದಿದ್ದು ಸ್ನೇಹಿತರು. ಅವರು ಹಣ ಸಂಗ್ರಹ ಮಾಡಿ 40, 000 ಒಟ್ಟು ಮಾಡಿ ಕೊಟ್ಟಿದ್ದರು. ಇದರಿಂದಾಗಿ ಮುಂದಿನ ಹಂತದ ಸಂದರ್ಶನಕ್ಕೆ ಹೋಗಲು ಸಾಧ್ಯವಾಯಿತು. ಇದೀಗ ಶ್ರೀಧನ್ಯಾ ಕನಸ್ಸನ್ನು ಕಟ್ಟಿಕೊಂಡು ಓದುತ್ತಿರುವ ಬಡಮಕ್ಕಳಿಗೆ ರೋಲ್‌ ಮಾಡೆಲ್‌ ಆಗಿ ಹೊರಹೊಮ್ಮಿದ್ದಾರೆ. ಇದೀಗ ಕೇರಳ ಮಾತ್ರವಲ್ಲ, ಇಡೀ ದೇಶವೇ ಇವರ ಸಾಧನೆಯನ್ನು ಕೊಂಡಾಡುತ್ತಿದೆ.

 ಶ್ರೀಧನ್ಯಾ ಅವರ ಮಾತುಗಳು...

ಶ್ರೀಧನ್ಯಾ ಅವರ ಮಾತುಗಳು...

Image Courtesy

'ನಾನು ರಾಜ್ಯದ ಅತ್ಯಂತ ಹಿಂದುಳಿದ ಬುಡಕಟ್ಟು ಸಮಯದಾಯಕ್ಕೆ ಸೇರಿದವಳು. ಯಾವುದೇ ಬುಡಕಟ್ಟು ಐಎಎಸ್‌ ಆಫೀಸರ್‌ ಇದುವರೆಗೆ ಇಲ್ಲಿಂದ ಬಂದಿರಲಿಲ್ಲ. ನಮ್ಮಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯುವವರು ತುಂಬಾ ಕಡಿಮೆ. ಆದರೆ ಇನ್ನು ಮುಂದೆ ಈ ರೀತಿಯ ಪರೀಕ್ಷೆ ಬರೆಯಲು ಮುಂದೆ ಬರುತ್ತಾರೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಗಮನ ಸೆಳೆದ ಸ್ಪೂರ್ತಿದಾಯಕ ಕತೆ

ಕೊರೊನಾ ವೈರಸ್ ಸೋಂಕು ವಿರುದ್ಧ ಪ್ರತಿರೋಧ ಚಟುವಟಿಕೆ ನಡೆಸುವ ಮೂಲಕ ಕೇರಳ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಸಂದರ್ಭದಲ್ಲಿ ಮೈಸೂರಿನಲ್ಲಿ ತರಬೇತಿಯನ್ನು ಪೂರ್ತಿಗೊಳಿಸಿದ ಕೂಡಲೇ ಕೋಝಿಕೋಡ್ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ. ಸೇರ್ಪಡೆಗೊಳ್ಳುವ ಮೊದಲು ಎರಡು ವಾರಗಳ ತನಕ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಸಹಾಯಕ ಜಿಲ್ಲಾಧಿಕಾರಿ ಶ್ರೀಧನ್ಯಾ ಅವರ ಅಧೀನದಲ್ಲಿ ಕೆಲಸ ನಿರ್ವಹಿಸಲು ನಿಯೋಜನೆಗೊಂಡಿರುವುದು ವಿಶೇಷವಾಗಿದೆ.

ಈಕೆಯ ತಂದೆ ಸುರೇಶ್ ಮತ್ತು ತಾಯಿ ಕಮಲಾ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಾಗಿದ್ದಾರೆ. ಆಕೆಯ ಅಕ್ಕ ಸರಕಾರಿ ಇಲಾಖೆಯ ಲಾಸ್ಟ್‌ಗ್ರೇಡ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಸಹೋದರ ಪಾಲಿಟೆಕ್ನಿಕ್ ವಿದಾರ್ಥಿಯಾಗಿದ್ದಾನೆ.

English summary

Kerala's First Tribal Girl to Crack Civil Service to Join as Assistant Collector in Kozhikode

Sreedhanya, belonging to Wayanad, Kerala, is the first tribal woman from Kerala to have cleared Civil exam. She secured the 410th rank in her third attempt.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X