For Quick Alerts
ALLOW NOTIFICATIONS  
For Daily Alerts

ಮಾಡಿದ್ದೆಲ್ಲ ಸರಿ, ಆದರೂ ಏನೋ ಕೊರತೆಯಿದೆ!

By Prasad
|
Beauty of the nature
ಒಂದಾನೊಂದು ಕಾಲದಲ್ಲಿ ಒಬ್ಬ ಪಾದ್ರಿಯು, ಪ್ರಸಿದ್ಧ ಝೆನ್ ದೇವಸ್ಥಾನದ ಉದ್ಯಾನವನದ ಮೇಲ್ವಿಚಾರಕರಾಗಿದ್ದರು. ಅವರು ಹೂವು, ಗಿಡ, ಮರಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕಾರಣ ಈ ಕೆಲಸವನ್ನು ಅವರಿಗೆ ನೀಡಲಾಗಿತ್ತು. ಈ ದೇವಸ್ಥಾನದ ಪಕ್ಕದಲ್ಲಿಯೇ ಇನ್ನೊಂದು ಚಿಕ್ಕ ದೇವಸ್ಥಾನವಿತ್ತು, ಅಲ್ಲಿ ತುಂಬಾ ವಯಸ್ಸಾದ ಝೆನ್ ಗುರುಗಳು ವಾಸವಾಗಿದ್ದರು.

ಒಂದು ದಿನ, ಪಾದ್ರಿಯು ವಿಶೇಷ ಅತಿಥಿಗಳ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಉದ್ಯಾನವನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಕಳೆ ತೆಗೆದು, ಪೊದೆಗಳನ್ನು ಕತ್ತರಿಸಿ, ಪಾಚಿಯನ್ನೆಲ್ಲಾ ಬಾಚಿ ಸ್ವಚ್ಛಗೊಳಿಸಿದ್ದರು ಹಾಗೂ ಅತ್ಯಂತ ಜಾಗರೂಕತೆಯಿಂದ ಒಣಗಿದ ಎಲೆಗಳನ್ನೆಲ್ಲ ಒಟ್ಟುಗೂಡಿಸುವಲ್ಲಿ ಮತ್ತು ಅವುಗಳನ್ನು ಕ್ರಮವಾಗಿ ಜೋಡಿಸುವಲ್ಲಿ ಹೆಚ್ಚು ಸಮಯವನ್ನು ವ್ಯಯಿಸಿದ್ದರು.

ಪಾದ್ರಿಯು ಈ ಎಲ್ಲ ಕೆಲಸ ಮಾಡುತ್ತಿದ್ದಾಗ ವೃದ್ಧ ಗುರುಗಳು ದೇವಸ್ಥಾನಗಳನ್ನು ಬೇರ್ಪಡಿಸಿದ್ದ ಗೋಡೆಯ ಆಚೆಯಿಂದ ಪಾದ್ರಿ ಮಾಡುತ್ತಿದ್ದ ಸ್ವಚ್ಛಗೊಳಿಸುವ ಕೆಲಸವನ್ನು ಕುತೂಹಲದಿಂದ ಗಮನಿಸುತ್ತಿದ್ದರು. ವೃದ್ಧ ಝೆನ್ ಗುರುಗಳು ತಾವಾಗಿಯೇ ಏನನ್ನೂ ಹೇಳಲು ಹೋಗಲಿಲ್ಲ. ಪಾದ್ರಿಯೇ ಮಾತಿಗೆ ಬರಲಿ ಎಂದು ಸುಮ್ಮನಿದ್ದರು.

ತನ್ನ ಕೆಲಸಗಳನ್ನು ಮುಗಿಸಿದ ನಂತರ ಪಾದ್ರಿಯು, ಕೈ ಜಾಡಿಸುತ್ತ, ಹಿಂತಿರುಗಿ ನಿಂತು ತನ್ನ ಕೆಲಸಕ್ಕೆ ತಾನೇ ಮೆಚ್ಚುಗೆ ವ್ಯಕ್ತಪಡಿಸುತ್ತಾ "ಈಗ ಇದು ಚೆನ್ನಾಗಿದೆಯಲ್ಲವೇ?" ಎಂದು ವೃದ್ಧ ಗುರುಗಳನ್ನು ಮಾತಿಗೆಳೆದರು. "ಹೌದು" ಎಂದು ಪ್ರತಿಕ್ರಿಯಿಸಿದ ಝೆನ್ ಗುರುಗಳು "ಆದರೆ ಅಲ್ಲಿ ಏನೋ ಕೊರತೆಯಿದ್ದಂತಿದೆ. ಗೋಡೆಯ ಆಚೆ ಬರಲು ನನಗೆ ಸಹಾಯ ಮಾಡು, ಆಗ ನಾನು ಸರಿಯಾಗಿ ಗುರುತಿಸಿ ಹೇಳಬಲ್ಲೆ" ಎಂದರು.

ಹಿಂಜರಿಕೆಯಾದರೂ ಪಾದ್ರಿ ವೃದ್ಧರನ್ನು ಎತ್ತಿ ಗೋಡೆದಾಟಿಸಿ ಕೆಳಗಿಳಿಸಿದರು. ನಿಧಾನವಾಗಿ, ಉದ್ಯಾನದ ಮಧ್ಯದಲ್ಲಿರುವ ಮರದ ಹತ್ತಿರಕ್ಕೆ ನಡೆಯುತ್ತಾ ಬಂದ ಗುರುಗಳು ಮರದ ಕಾಂಡವನ್ನು ಎಳೆದು ಅಲ್ಲಾಡಿಸಿದರು. ಉದ್ಯಾನದ ತುಂಬೆಲ್ಲ ಎಲೆಗಳ ವೃಷ್ಟಿಯಾಯಿತು. "ಅಲ್ಲಿ" ಎಂದ ವೃದ್ದರು "ನನ್ನನ್ನೂ ಅದರೊಂದಿಗೆ ಸೇರಿಸು!" ಸ್ತಂಭೀಭೂತರಾದಂತೆ ನಿಂತಿದ್ದ ಪಾದ್ರಿಗೆ ತಾವು ತಪ್ಪಿದ್ದು ಎಲ್ಲಿ ಆಗ ಅರಿವಾಯಿತು.

English summary

Beauty of the nature | Kannada Zen story | Inspirational short stories | ಮಾಡಿದ್ದೆಲ್ಲ ಸರಿ, ಆದರೂ ಏನೋ ಕೊರತೆಯಿದೆ!

A priest was in-charge of a garden in famous Zen temple. There was another small temple next to it. A Zen master lived in that small temple. One day priest was expecting guests to the temple and cleaned up the garden to look beautiful. But, Zen master had another idea.
Story first published: Friday, June 15, 2012, 14:26 [IST]
X
Desktop Bottom Promotion