For Quick Alerts
ALLOW NOTIFICATIONS  
For Daily Alerts

ಗುರು ದ್ರೋಣಾಚಾರ್ಯ ಮತ್ತು ಏಕಲವ್ಯನ ನಡುವಿನ ಇಂಟರೆಸ್ಟಿಂಗ್ ಕಹಾನಿ

|

ಮಹಾಭಾರತವನ್ನು ಓದಿರುವಂತಹವರಿಗೆ ಖಂಡಿತವಾಗಿಯೂ ಅದರಲ್ಲಿ ಇರುವಂತಹ ಕಥೆಗಳು ಹಾಗೂ ಉಪಕಥೆಗಳು ತುಂಬಾ ಇಷ್ಟವಾಗಿರಬಹುದು. ಆದರೆ ಇದು ನೆನಪಿನಲ್ಲಿ ಉಳಿಯುವುದೇ ಎನ್ನುವುದು ಬೇರೆ ಪ್ರಶ್ನೆ. ಮಹಾಭಾರತದಲ್ಲಿರುವ ಪ್ರತಿಯೊಂದು ಪಾತ್ರದ ಹಿಂದೆ ಒಂದು ಕಥೆಯಿದೆ. ಅದೇ ಕಥೆಯು ಹಲವು ಕವಲುಗಳನ್ನು ಒಡೆದಿರುವುದು. ಈ ಲೇಖನದಲ್ಲಿ ನಾವು ನಿಮಗೆ ಹೇಳು ಹೊರಟಿರುವುದು ಗುರು ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಬಗ್ಗೆ. ಇದು ಗುರು ಹಾಗೂ ಶಿಷ್ಯರ ಅದ್ಭುತ ಕಥೆಯಾಗಿದೆ. ಗುರುವಾಗಿ ದ್ರೋಣಾಚಾರ್ಯರು ಮತ್ತು ಶಿಷ್ಯನಾಗಿ ಏಕಲವ್ಯ ಎಲ್ಲರಿಗೂ ಮಾದರಿಯಾಗಿರುವಂತಹ ವ್ಯಕ್ತಿತ್ವ. ಇದು ಯಾರೇ ಆದರೂ ಗುರುಶಿಷ್ಯರ ಬಗ್ಗೆ ಮಾತನಾಡುವ ವೇಳೆ ಏಕಲವ್ಯನ ತ್ಯಾಗವನ್ನು ಖಂಡಿತವಾಗಿಯೂ ನೆನಪಿನಲ್ಲಿ ಇಟ್ಟುಕೊಳ್ಳುವರು. ತುಂಬಾ ಬಡತನದಿಂದ ಬಂದ ಏಕಲವ್ಯ ರಾಜಮನೆತನದ ಅರ್ಜುನನಿಗೆ ಸರಿಸಾಟಿ ಆಗುವಂತಹ ಬಿಲ್ವಿದ್ಯೆ ಕಲಿತ್ತಿದ್ದ. ಅದು ಕೂಡ ಗುರು ದ್ರೋಣಾಚಾರ್ಯರ ನೆರವಿಲ್ಲದೆ, ಇದನ್ನು ನೀವು ಓದುತ್ತಾ ಸಾಗಿ....

ಏಕಲವ್ಯ ಅರಣ್ಯದಲ್ಲಿ ಚಿರತೆಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸುವ ಸಲುವಾಗಿ ಬಿಲ್ವಿದ್ಯೆ ಕಲಿಯಲು ಬಯಸಿದ್ದ. ಜಿಂಕೆಗಳ ಅಸಾಯಕತೆಯಿಂದ ಮನನೊಂದಿದ್ದ ಏಕಲವ್ಯ, ಅವುಗಳಿಗೆ ನೆರವು ನೀಡಬೇಕೆಂದು ಬಯಸಿದ. ಗುರು ದ್ರೋಣಾಚಾರ್ಯವು ಬಿಲ್ವಿದ್ಯೆಯಲ್ಲಿ ದೊಡ್ಡ ಪರಿಣತರು ಹಾಗೂ ಅವರ ಸಾಮರ್ಥ್ಯ ಮತ್ತು ಕಲಿಸುವ ವಿಧಾನವು ನಾಲ್ಕು ದಿಕ್ಕಿಗೂ ಪಸರಿಸಿತ್ತು.

Mahabharata

ಏಕಲವ್ಯನು ಗುರು ದ್ರೋಣಾಚಾರ್ಯ ಬಳಿಗೆ ಹೋದ ಮತ್ತು ತನ್ನನ್ನು ಶಿಷ್ಯನಾಗಿ ಸ್ವೀಕರಿಸಬೇಕು ಎಂದು ಆತ ಮನವಿ ಮಾಡಿಕೊಂಡ. ಅದಾಗ್ಯೂ, ಗುರುವ ದ್ರೋಣಾಚಾರ್ಯರು ರಾಜ ಮನೆತನದವರಿಗೆ ಮಾತ್ರ ವಿದ್ಯೆ ಹೇಳಿಕೊಡುತ್ತಿದ್ದರು. ಅವರು ಅರ್ಜುನನಿಗೆ ಬಿಲ್ವಿದ್ಯೆ ಕಲಿಸಿಕೊಟ್ಟಿದ್ದರು. ಅರ್ಜುನನು ಬಿಲ್ವಿದ್ಯೆಯಲ್ಲಿ ತುಂಬಾ ಪ್ರವೀಣನಾಗಿದ್ದ ಮತ್ತು ಆತನ ಸಾಮರ್ಥ್ಯವನ್ನು ಮೀರಿಸುವವರು ಮತ್ತೊಬ್ಬರು ಇರಲಿಲ್ಲ. ಅರ್ಜುನನ್ನು ಸರ್ವಶ್ರೇಷ್ಠ ಧನುರ್ಧಾರಿ''ಎಂದು ಕರೆಯಲಾಗುತ್ತಿತ್ತು. ಇದರ ಅರ್ಥ ಶ್ರೇಷ್ಠ ಬಿಲ್ಲುಗಾರ.

ರಾಜಮನೆತನದ ಗುರು ಸಾಮಾನ್ಯರಿಗೆ ವಿದ್ಯೆ ಕಲಿಸುತ್ತಿರಲಿಲ್ಲ

ರಾಜಮನೆತನದ ಗುರು ಸಾಮಾನ್ಯರಿಗೆ ವಿದ್ಯೆ ಕಲಿಸುತ್ತಿರಲಿಲ್ಲ

ರಾಜಮನೆತನದಲ್ಲಿ ಗುರುವಾಗಿರುವಂತಹವರು ರಾಜಮನೆತನದವರನ್ನು ಬಿಟ್ಟು ಹೊರಗಿನವರಿಗೆ ವಿದ್ಯೆ ಹೇಳಿಕೊಡುವುದು ನಿಯಮಗಳಿಗೆ ವಿರುದ್ಧವಾಗಿತ್ತು. ಇದರ ಉದ್ದೇಶವೆಂದರೆ ಬೇರೆ ಯಾರು ಕೂಡ ರಾಜ ಅಥವಾ ರಾಜಕುಮಾರನಷ್ಟು ಬಿಲ್ವಿದ್ಯೆ ಅಥವಾ ಯುದ್ಧ ವಿಧಾನಗಳನ್ನು ಕಲಿಯಬಾರದು ಎನ್ನುವುದು. ರಾಜನು ತನ್ನ ಪ್ರಜೆಗಳ ರಕ್ಷನಾಗಿರುವ ಕಾರಣದಿಂದಾಗಿ ಇದನ್ನು ಸುರಕ್ಷತೆ ದೃಷ್ಟಿಯಿಂದ ಮಾಡಲಾಗುತ್ತಿತ್ತು. ಆದರೆ ಏಕಲವ್ಯನು ಒಬ್ಬ ಬಡ ಬೇಡನ ಮಗನಾಗಿದ್ದ. ಇದರಿಂದಾಗಿ ಗುರು ದ್ರೋಣಾಚಾರ್ಯರು ಏಕಲವ್ಯನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸಿದರು.

Most Read: ಅಂಗುಲಿಮಾಲಾ ಮತ್ತು ಭಗವಾನ್ ಬುದ್ಧನ ಕಥೆ

ಗುರು ದ್ರೋಣಾಚಾರ್ಯರ ಮೂರ್ತಿ ಮಾಡಿದ ಏಕಲವ್ಯ

ಗುರು ದ್ರೋಣಾಚಾರ್ಯರ ಮೂರ್ತಿ ಮಾಡಿದ ಏಕಲವ್ಯ

ದ್ರೋಣಾಚಾರ್ಯರು ತನ್ನ ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಏಕಲವ್ಯ ತುಂಬಾ ಬೇಸರಿಂದ ಹಿಂತಿರುಗಿದ. ಆದರೆ ಗುರು ದ್ರೋಣಾಚಾರ್ಯರು ತನ್ನ ಗುರು ಎಂದು ಅದಾಗಲೇ ಆತ ಸ್ವೀಕರಿಸಿಕೊಂಡಿದ್ದ. ಆತ ಒಂದು ಕಲ್ಲಿನಿಂದ ಗುರು ದ್ರೋಣಾಚಾರ್ಯರ ಮೂರ್ತಿಯನ್ನು ತಯಾರಿಸಿದ ಮತ್ತು ಅದನ್ನು ಒಂದು ಅರಣ್ಯ ಪ್ರದೇಶದಲ್ಲಿ ಇಟ್ಟ ಮತ್ತು ಆ ಮೂರ್ತಿಯ ಮುಂದೆ ನಿಂತು ಪ್ರತಿನಿತ್ಯವು ಅಭ್ಯಾಸ ಮಾಡಲು ಆರಂಭಿಸಿದ. ಅಭ್ಯಾಸವು ಮನುಷ್ಯನನ್ನು ಪರಿಪೂರ್ಣಗೊಳಿಸುವುದು ಎನ್ನುವಂತೆ ಏಕಲವ್ಯ ಪ್ರತಿನಿತ್ಯ ಹೆಚ್ಚಿನ ಬದ್ಧತೆಯಿಂದ ಅಭ್ಯಾಸ ನಡೆಸಿದ. ಇದರಿಂದ ಆತನಲ್ಲಿನ ಕೌಶಲ್ಯವು ಪರಿಪೂರ್ಣವಾಗಲು ಆರಂಭವಾಯಿತು. ಒಂದು ದಿನ ಆತನ ಬಿಲ್ಲುಗಾರಿಕೆಯು ಅರ್ಜುನನಿಗಿಂತಲೂ ತುಂಬಾ ಶ್ರೇಷ್ಠವಾಯಿತು.

ಏಕಲವ್ಯನ ಭೇಟಿಯಾದ ಅರ್ಜುನ

ಏಕಲವ್ಯನ ಭೇಟಿಯಾದ ಅರ್ಜುನ

ಏಕಲವ್ಯನ ಬಿಲ್ವಿದ್ಯೆ ಬಗ್ಗೆ ಕೇಳಿದ ಅರ್ಜುನ ಒಂದು ದಿನ ಆತನ ಭೇಟಿ ಮಾಡಲು ಹೋಗುತ್ತಾನೆ ಮತ್ತು ತನಗಿಂತ ಏಕಲವ್ಯ ಒಳ್ಳೆಯ ಬಿಲ್ಲುಗಾರ ಎಂದು ನೋಡಿ ಆತನಿಗೆ ತುಂಬಾ ಅಚ್ಚರಿಯಾಗುವುದು. ಈ ವೇಳೆ ನಿನಗೆ ಗುರು ಯಾರು ಎಂದು ಏಕಲವ್ಯನಲ್ಲಿ ಕೇಳುತ್ತಾನೆ. ಇದಕ್ಕೆ ಏಕಲವ್ಯನು ತನ್ನ ಗುರು ದ್ರೋಣಾಚಾರ್ಯರು ಎನ್ನುತ್ತಾನೆ. ಇದರಿಂದ ಕೋಪಗೊಂಡ ಅರ್ಜುನ, ತನ್ನ ಗುರುಗಳ ಬಳಿ ತೆರಳಿ, ಮೋಸ ಮಾಡಿರುವ ಬಗ್ಗೆ ಆರೋಪ ಮಾಡುವನು. ಏಕಲವ್ಯನ ಬಗ್ಗೆ ಅವನು ವಿವರ ನೀಡುವನು. ಅದಾಗ್ಯೂ, ಇದರಿಂದ ಗೊಂದಲಕ್ಕೆ ಒಳಗಾದ ಗುರು ದ್ರೋಣಾಚಾರ್ಯರಿಗೆ ಏನೂ ಅರ್ಥವಾಗದೆ ಆ ಬಾಲಕನನ್ನು ಭೇಟಿಯಾಗಲು ಹೋಗುವರು. ಆತನ ಬಗ್ಗೆ ದ್ರೋಣಾಚಾರ್ಯರಿಗೆ ಸ್ವಲ್ಪವೂ ತಿಳಿದಿರಲಿಲ್ಲ.

ಗುರು ದ್ರೋಣಾಚಾರ್ಯರು ಗುರು ದಕ್ಷಿಣೆ ಕೇಳಿದರು

ಗುರು ದ್ರೋಣಾಚಾರ್ಯರು ಗುರು ದಕ್ಷಿಣೆ ಕೇಳಿದರು

ಗುರು ದ್ರೋಣಾಚಾರ್ಯ ಮತ್ತು ಅರ್ಜುನ ಏಕಲವ್ಯನ ಮನೆಗೆ ತೆರಳಿದರು. ಏಕಲವ್ಯ ಅವರಿಬ್ಬರನ್ನು ತುಂಬಾ ಆತ್ಮೀಯವಾಗಿ ಸ್ವಾಗತ ಮಾಡುವನು. ತಾನು ಅಭ್ಯಾಸ ಮಾಡುತ್ತಿದ್ದ ಜಾಗಕ್ಕೆ ಆತನು ಅವರಿಬ್ಬರನ್ನು ಕರೆದುಕೊಂಡು ಹೋಗುವನು. ಆ ದಿನಗಳಲ್ಲಿ ಗುರು ಕಲಿಸಿದ ವಿದ್ಯೆಗೆ ಗುರು ದಕ್ಷಿಣೆ ನೀಡುವುದು ಒಂದು ಸಂಪ್ರದಾಯವಾಗಿತ್ತು. ಗುರುವಿನಿಂದ ಪಡೆದಿರುವ ಜ್ಞಾನಕ್ಕೆ ನೀಡುವಂತಹ ಶುಲ್ಕವು ಅದಾಗಿತ್ತು. ಇದರಿಂದ ಗುರು ದ್ರೋಣಾಚಾರ್ಯರು ಗುರು ದಕ್ಷಿಣೆ ರೂಪದಲ್ಲಿ ಏಕಲವ್ಯನಿಂದ ಬಲದ ಹೆಬ್ಬೆರಳನ್ನು ಕೇಳುವರು.

Most Read: ಭಗವಾನ್ ಕೃಷ್ಣನ ಭಕ್ತೆ ಮೀರಾ ಭಾಯಿ ಜೀವನದ ಬಗ್ಗೆ ಒಂದಿಷ್ಟು...

ಏಕಲವ್ಯ ಗುರು ದಕ್ಷಿಣೆ ನೀಡಿದ

ಏಕಲವ್ಯ ಗುರು ದಕ್ಷಿಣೆ ನೀಡಿದ

ಬಲಕೈ ಹೆಬ್ಬೆರಳಿನ ಹೊರತಾಗಿ ಬಿಲ್ವಿದ್ಯೆಯು ಅಪೂರ್ಣ ಎಂದು ಏಕಲವ್ಯನಿಗೆ ತಿಳಿದಿತ್ತು. ಆದರೂ ಆತ ತನ್ನ ಹೆಬ್ಬೆರಳನ್ನು ಕತ್ತರಿಸಿ, ಗುರುವಿಗೆ ದಕ್ಷಿಣೆಯಾಗಿ ನೀಡುವನು. ಹೀಗೆ ಮಾಡುವ ಮೂಲಕ ಆತ ಶಿಷ್ಯ ವರ್ಗಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿದ್ದಾನೆ. ಗುರು ದ್ರೋಣಾಚಾರ್ಯರು ಇಲ್ಲಿ ತುಂಬಾ ಸ್ವಾರ್ಥಿ ಮತ್ತು ಕ್ರೂರಿ ಎಂದು ಅನಿಸಿದರೂ ಇದಕ್ಕೆ ಮತ್ತೊಂದು ಕಥೆಯು ಇದೆ. ಗುರು ದ್ರೋಣಾಚಾರ್ಯರು ಎಲ್ಲಾ ಆರೋಪಗಳನ್ನು ತನ್ನ ಮೇಲೆ ಹಾಕಿಕೊಂಡು ಶಿಷ್ಯನ ಘನತೆಯನ್ನು ಹೆಚ್ಚು ಮಾಡಿದ್ದಾರೆ ಎಂದು ಶ್ರೀ ಶ್ರೀ ರವಿ ಶಂಕರ್ ಅವರು ಹೇಳಿದ್ದರು. ಏಕಲವ್ಯನ ನಿಜವಾದ ಭಕ್ತಿಯು ಅದ್ಭುತವಾಗಿರುವುದು. ಗುರು ದ್ರೋಣಾಚಾರ್ಯರು ಆತನ ಹೆಬ್ಬೆರಳನ್ನು ಕೇಳುವ ಮೂಲಕ ಆತನ ಘನತೆ ಹೆಚ್ಚು ಮಾಡಿರುವುದು ಮಾತ್ರವಲ್ಲದೆ, ಏಕಲವ್ಯ ಎಂದಿಗೂ ಅಮರನಾಗುವಂತೆ ಮಾಡಿರುವರು. ಯಾಕೆಂದರೆ ಬಿಲ್ವಿದ್ಯೆಯ ಸಾಮರ್ಥ್ಯದಿಂದ ಇಂದು ಎಲ್ಲರಿಗೂ ಮಾದರಿಯಾಗಿರುವಂತಹ ಏಕಲವ್ಯ, ಶಿಷ್ಯವರ್ಗವು ಹೇಗಿರಬೇಕು ಎನ್ನುವುದಕ್ಕೆ ಕೂಡ ಒಂದು ಒಳ್ಳೆಯ ಉದಾಹರಣೆ. ಗುರು ಶಿಷ್ಯರ ಬಗ್ಗೆ ಮಾತನಾಡುವ ವೇಳೆ ಯಾವಾಗಲೂ ಏಕಲವ್ಯನ ಹೆಸರನ್ನು ಹೇಳಲಾಗುತ್ತದೆ.

English summary

Interesting Story between Eklavya-Guru Dronacharya in Mahabharata

Eklavya wanted to save the deer which were hunted by leopards in the forest. So he requested Guru Drona to teach him archery. Since it was against the rules for a teacher of the royal princes to teach the commoners, he rejected the request. However, Eklavya considering him Guru from his heart, practised aggressively and perfected himself at the skill.
Story first published: Saturday, March 30, 2019, 11:57 [IST]
X
Desktop Bottom Promotion