Just In
- 44 min ago
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- 2 hrs ago
Beauty tips: ಪದೇ ಪದೇ ಬ್ಲೀಚ್ ಮಾಡುವ ಅಭ್ಯಾಸ ಇದ್ದರೆ ಇಂದೇ ಇದನ್ನು ತಪ್ಪಿಸಿ
- 4 hrs ago
ಕೊರಿಯನ್ನರಂತೆ ಗ್ಲಾಸಿ ತ್ವಚೆಯನ್ನು ಮನೆಯಲ್ಲೇ ಹೊಂದುವುದು ಹೇಗೆ? ಇಲ್ಲಿದೆ ಬೆಸ್ಟ್ ಟಿಪ್ಸ್
- 6 hrs ago
ಈ ಹಾರಾಡುವ ಹೋಟೆಲ್ ಬಗ್ಗೆ ಗೊತ್ತಿದೆಯೇ? ಇದರ ಡೆಮೋ ವೀಡಿಯೋ ಅಂತೂ ವಾವ್!
Don't Miss
- Movies
ಶಕ್ತಿಧಾಮ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಸೆಂಚುರಿ ಸ್ಟಾರ್: 'ಬೈರಾಗಿ' ಭರ್ಜರಿ ಡ್ಯಾನ್ಸ್
- News
ಹರ್ಯಾಣ ಮೊದಲೋ ಕರ್ನಾಟಕ ಮೊದಲೋ..! ಇಲ್ಲಿದೆ ರೆಸಾರ್ಟ್ ರಾಜಕಾರಣದ ಇತಿಹಾಸ
- Automobiles
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- Finance
ಗಮನಿಸಿ: ಸದ್ಯಕ್ಕಿಲ್ಲ ಆನ್ಲೈನ್ ಗೇಮಿಂಗ್ ಜಿಎಸ್ಟಿ ಏರಿಕೆ
- Sports
ICC T20 Ranking: ಹೂಡಾ, ಸ್ಯಾಮ್ಸನ್ ಭಾರೀ ಜಿಗಿತ; ಟಾಪ್ 10ರಲ್ಲಿ ಏಕೈಕ ಭಾರತೀಯ!
- Technology
ನೂತನ ಲ್ಯಾಪ್ಟಾಪ್ ಸರಣಿ ಪರಿಚಯಿಸಿದ ಡೆಲ್: ಗಮನ ಸೆಳೆವ ಫೀಚರ್ಸ್!
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
2022: ಹಿಂದೂ ಪಂಚಾಂಗದ ಪ್ರಕಾರ ಯಾವ ಮಾಸ ಯಾವ ಹಬ್ಬ ಹಾಗೂ ವಿಶೇಷ ದಿನಗಳು
ಹಬ್ಬ, ವ್ರತ, ಪೂಜೆ, ಸಂಪ್ರದಾಯ ಎಲ್ಲವೂ ಹಿಂದೂ ಧರ್ಮದ ಪ್ರಮುಖ ಭಾಗವಾಗಿದೆ. ಇದರ ಹಿಂದೆ ಸಾಕಷ್ಟು ವೈಜ್ಞಾನಿಕ ಕಾರಣಗಳು ಇದ್ದರೂ ಹಿಂದೂ ಧರ್ಮದ ನಂಬಿಕೆ ಎಂಬ ತಳಹದಿಯಲ್ಲಿ ಇವುಗಳ ಆಚರಣೆ ಸಾರ್ವಕಾಲಿಕ. ಹಿಂದೂ ಧರ್ಮದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯಗಳಿವೆ, ಅಲ್ಲದೆ ಹಬ್ಬಗಳನ್ನು ನಿಗದಿತ ಮಾಸದಲ್ಲಿ ಮಾತ್ರ ಆಚರಿಸುವ ಪದ್ಧತಿಗೂ ಒಂದು ಅರ್ಥವಿದೆ.
ಹಬ್ಬ ಎಂದರೆ ಸಂಭ್ರಮ, ಸಡಗರ, ಹೊಸತುಗಳ ಆರಂಭ. ನಮ್ಮ ಕನ್ನಡದ ಅದರೆ ಹಿಂದೂ ಧರ್ಮದ 12 ಮಾಸಗಳ ಪ್ರಕಾರ ಯಾವ ಮಾಸದಲ್ಲಿ ಯಾವೆಲ್ಲಾ ಹಬ್ಬಗಳಿವೆ ಮುಂದೆ ತಿಳಿಯೋಣ.

ಚೈತ್ರ ಮಾಸ - ವಸಂತ ಋತು -ಉತ್ತರಾಯಣ
ಚಂದ್ರಮಾನ ಯುಗಾದಿ -ಶುಕ್ಲ ಪಕ್ಷ - ಪಾಡ್ಯ
ಶ್ರೀ ರಾಮ ನವಮಿ- ಶುಕ್ಲ ಪಕ್ಷ - ನವಮಿ
ಹನುಮ ಜಯಂತಿ -ಹುಣ್ಣಿಮೆ
ಮತ್ಸ್ಯ ಜಯಂತಿ - ಕೃಷ್ಣ ಪಕ್ಷ - ಪಂಚಮಿ
ವರಾಹ ಜಯಂತಿ - ಕೃಷ್ಣ ಪಕ್ಷ - ತ್ರಯೋದಶಿ

ವೈಶಾಖ ಮಾಸ - ವಸಂತ ಋತು -ಉತ್ತರಾಯಣ
ಅಕ್ಷಯ ತೃತೀಯ -ಶುಕ್ಲ ಪಕ್ಷ - ತದಿಗೆ
ಗಂಗಾ ಪೂಜ -ಶುಕ್ಲ ಪಕ್ಷ - ಸಪ್ತಮಿ
ಮೋಹಿನೀ ಏಕಾದಶಿ - ಶುಕ್ಲ ಪಕ್ಷ - ಏಕಾದಶಿ
ಬುದ್ಧ ಜಯಂತಿ; ವೈಶಾಖ ಸ್ನಾನ ಸಮಾಪ್ತಿ ಹುಣ್ಣಿಮೆ
ಅಪರಾ ಏಕಾದಶಿ- ಕೃಷ್ಣ ಪಕ್ಷ - ಏಕಾದಶಿ
ನರಸಿಂಹ ಜಯಂತಿ
ವೇದವ್ಯಾಸ ಜಯಂತಿ
ಕೂರ್ಮ ಜಯಂತಿ
ಶಂಕರಾಚಾರ್ಯ ಜಯಂತಿ
ಬಸವ ಜಯಂತಿ
ರಾಮಾನುಜ ಜಯಂತಿ

ಜ್ಯೇಷ್ಠ ಮಾಸ - ಗ್ರೀಷ್ಮ ಋತು - ಉತ್ತರಾಯಣ
ನಿರ್ಜಲಾ ಏಕಾದಶಿ- ಶುಕ್ಲ ಪಕ್ಷ - ಏಕಾದಶಿ
ವಟ ಸಾವಿತ್ರಿ ವ್ರತ - ಹುಣ್ಣಿಮೆ
ಯೋಗಿನೀ ಏಕಾದಶಿ- ಕೃಷ್ಣ ಪಕ್ಷ - ಏಕಾದಶಿ
ಕಾರ ಹುಣ್ಣಿಮೆ

ಆಷಾಢ ಮಾಸ - ಗ್ರೀಷ್ಮ ಋತು - ಉತ್ತರಾಯಣ
ಪ್ರಥಮಾ/ಶಯನೀ ಏಕಾದಶಿ
ಚಾತುರ್ಮಾಸಾರಂಭ- ಶುಕ್ಲ ಪಕ್ಷ - ಏಕಾದಶಿ
ಗುರು ಪೂರ್ಣಿಮ / ವ್ಯಾಸ ಪೂರ್ಣಿಮ- ಹುಣ್ಣಿಮೆ
ಕಾಮಿಕಾ ಏಕಾದಶಿ - ಕೃಷ್ಣ ಪಕ್ಷ - ಏಕಾದಶಿ
ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ
ಭೀಮನ ಅಮವಾಸ್ಯೆ
ಶುಕ್ರವಾರ ಲಕ್ಷ್ಮೀ ಪೂಜೆ

ಶ್ರಾವಣ ಮಾಸ - ವರ್ಷ ಋತು - ಉತ್ತರಾಯಣ
ನಾಗ ಚೌತಿ -ಶುಕ್ಲ ಪಕ್ಷ - ಚೌತಿ
ನಾಗ ಪಂಚಮಿ -ಶುಕ್ಲ ಪಕ್ಷ - ಪಂಚಮಿ
ಪುತ್ರದಾ ಏಕಾದಶಿ - ಶುಕ್ಲ ಪಕ್ಷ - ಏಕಾದಶಿ
ರಕ್ಷಾಬಂಧನ ಹುಣ್ಣಿಮೆ
ರಾಘವೇಂದ್ರ ಸ್ವಾಮಿಗಳ ಆರಾಧನೆ - ಕೃಷ್ಣ ಪಕ್ಷ - ಬಿದಿಗೆ
ಗೋಕುಲಾಷ್ಟಮಿ - ಕೃಷ್ಣ ಪಕ್ಷ - ಅಷ್ಟಮಿ
ಅಜ ಏಕಾದಶಿ -ಕೃಷ್ಣ ಪಕ್ಷ - ಏಕಾದಶಿ
ಕಲ್ಕಿ ಜಯಂತಿ
ಶ್ರೀ ವರಮಹಾಕ್ಷ್ಮೀ ಪೂಜೆ
ಮಂಗಳ ಗೌರಿ ವ್ರತ
ಶ್ರಾವಣ ಶನಿವಾರ
ಋಗುಪಾಕರ್ಮ
ಯಜುರುಪಾಕರ್ಮ
ಶಿರಿಯಾಳ ಷಷ್ಠೀ
ಶ್ರೀ ಕೃಷ್ಣ ಜನ್ಮಾಷ್ಟಮಿ

ಭಾದ್ರಪದ ಮಾಸ - ವರ್ಷ ಋತು - ಉತ್ತರಾಯಣ
ಶ್ರೀ ವಿನಾಯಕ ಚತುರ್ಥಿ -ಶುಕ್ಲ ಪಕ್ಷ - ಚೌತಿ
ಋಷಿ ಪಂಚಮಿ- ಶುಕ್ಲ ಪಕ್ಷ - ಪಂಚಮಿ
ಶ್ರೀ ಸ್ವರ್ಣಗೌರಿ ಪೂಜೆ
ಪರಿವರ್ತಿನೀ ಏಕಾದಶಿ- ಶುಕ್ಲ ಪಕ್ಷ - ಏಕಾದಶಿ
ಅನಂತಪದ್ಮನಾಭ ವ್ರತ -ಶುಕ್ಲ ಪಕ್ಷ - ಚತುರ್ದಶಿ
ಉಮಾಮಹೇಶ್ವರ ವ್ರತ - ಹುಣ್ಣಿಮೆ
ಪಿತೃಪಕ್ಷ - ಕೃಷ್ಣಪಕ್ಷ
ಮಹಾಭರಣೀ -ಕೃಷ್ಣ ಪಕ್ಷ - ಚೌತಿ
ಮಧ್ಯಾಷ್ಟಮಿ -ಕೃಷ್ಣ ಪಕ್ಷ - ಅಷ್ಟಮಿ
ಅವಿಧವಾ ನವಮಿ - ಕೃಷ್ಣ ಪಕ್ಷ - ನವಮಿ
ಇಂದಿರಾ ಏಕಾದಶಿ - ಕೃಷ್ಣ ಪಕ್ಷ - ಏಕಾದಶಿ
ಕಲಿಯುಗಾರಂಭ -ಕೃಷ್ಣ ಪಕ್ಷ - ತ್ರಯೋದಶಿ
ಘಾತ ಚತುರ್ದಶಿ - ಕೃಷ್ಣ ಪಕ್ಷ - ಚತುರ್ದಶಿ
ಸರ್ವಪಿತೃ ಅಮಾವಾಸ್ಯೆ / ಮಹಾಲಯ ಅಮಾವಾಸ್ಯೆ
ಆಶ್ವಯಜ ಮಾಸ - ಶರದ್ ಋತು - ದಕ್ಷಿಣಾಯನ
ಶರನ್ನವರಾತ್ರಿ - ಶುಕ್ಲ ಪಕ್ಷ - ಪಾಡ್ಯ- ನವಮಿ
ಸರಸ್ವತಿ ಪೂಜೆ (ಶುಕ್ಲ ಸಪ್ತಮಿ
ದುರ್ಗಾಷ್ಟಮಿ
ಮಹಾನವಮಿ, ಆಯುಧಪೂಜೆ - ಶುಕ್ಲ ಪಕ್ಷ - ನವಮಿ
ವಿಜಯದಶಮಿ / ಬನ್ನಿವೃಕ್ಷ ಪೂಜೆ ಶುಕ್ಲ ಪಕ್ಷ - ದಶಮಿ
ಮಧ್ವ ಜಯಂತಿ
ಪಾಶಾಂಕುಶಾ ಏಕಾದಶಿ - ಶುಕ್ಲ ಪಕ್ಷ - ಏಕಾದಶಿ
ಶರತ್ ಪೂರ್ಣಿಮ / ಸೀಗೆ ಹುಣ್ಣಿಮೆ / ಕಾರ್ತಿಕ ಸ್ನಾನಾರಾಂಭ - ಹುಣ್ಣಿಮೆ
ರಮಾ ಏಕಾದಶಿ -ಕೃಷ್ಣ ಪಕ್ಷ - ಏಕಾದಶಿ
ಧನ ತ್ರಯೋದಶಿ -ಕೃಷ್ಣ ಪಕ್ಷ - ತ್ರಯೋದಶಿ
ಜಲಪೂರ್ಣ ತ್ರಯೊದಶಿ - ಕೃಷ್ಣ ಪಕ್ಷ - ತ್ರಯೊದಶಿ
ನರಕ ಚತುರ್ದಶಿ, ಯಮ ತರ್ಪಣ - ಕೃಷ್ಣ ಪಕ್ಷ - ಚತುರ್ದಶಿ
ದೀಪಾವಳಿ ಅಮಾವಾಸ್ಯೆ - ಅಮಾವಾಸ್ಯೆ

ಕಾರ್ತೀಕ ಮಾಸ - ಶರದ್ ಋತು - ದಕ್ಷಿಣಾಯನ
ಬಲಿಪಾಡ್ಯ - ಶುಕ್ಲ ಪಕ್ಷ - ಪಾಡ್ಯ
ಕೃತಯುಗಾರಂಭ - ಶುಕ್ಲ ಪಕ್ಷ - ನವಮಿ
ಪ್ರಬೋಧಿನೀ ಏಕಾದಶಿ; ಭೀಷ್ಮಪಂಚಕ ವ್ರತಾರಂಭ; ಚಾತುರ್ಮಾಸ ಸಮಾಪ್ತಿ - ಶುಕ್ಲ ಪಕ್ಷ - ಏಕಾದಶಿ
ಉತ್ಥಾನ ದ್ವಾದಶಿ; ತುಳಸಿ ಪೂಜೆ - ಶುಕ್ಲ ಪಕ್ಷ - ದ್ವಾದಶಿ
ವೈಕುಂಠ ಚತುರ್ದಶಿ - ಶುಕ್ಲ ಪಕ್ಷ - ಚತುರ್ದಶಿ
ಭೀಷ್ಮಪಂಚಕವ್ರತ ಸಮಾಪ್ತಿ; ಕಾರ್ತಿಕಸ್ನಾನ ಸಮಾಪ್ತಿ - ಹುಣ್ಣಿಮೆ
ಉತ್ಪತ್ತಿ ಏಕಾದ - ಕೃಷ್ಣ ಏಕಾದಶಿ
ಧಾತ್ರಿ ಪೂಜ
ಕಾಳಭೈರವ ಜಯಂತಿ
ಕನಕದಾಸ ಜಯಂತಿ
ಧನ್ವಂತರಿ ಜಯಂತಿ

ಮಾರ್ಗಶಿರ ಮಾಸ - ಹೇಮಂತ ಋತು - ದಕ್ಷಿಣಾಯನ
ಮೋಕ್ಷದಾ ಏಕಾದಶಿ, ಗೀತಾ ಜಯಂತಿ - ಶುಕ್ಲ ಪಕ್ಷ - ಏಕಾದಶಿ
ದತ್ತಾತ್ರೇಯ ಜಯಂತಿ - ಹುಣ್ಣಿಮೆ
ಸಫಲಾ ಏಕಾದಶಿ - ಕೃಷ್ಣ ಪಕ್ಷ - ಏಕಾದಶಿ
ಸ್ಕಂದ ಷಷ್ಠೀ
ಧನುರ್ಮಾಸಾರಂಭ
ವಿಷ್ಣು ದೀಪೋತ್ಸವ
ಹುತ್ತರೀ ಹಬ್ಬ - ಧಾನ್ಯಲಕ್ಷ್ಮೀ ಪೂಜೆ
ಕಾಲಭೈರವಾಷ್ಟಮಿ
ಎಳ್ಳು ಅಮವಾಸ್ಯೆ - ಧನುರ್ಮಾಸ

ಪುಷ್ಯ ಮಾಸ - ಹೇಮಂತ ಋತು - ದಕ್ಷಿಣಾಯನ
ಪುತ್ರದಾ ಏಕಾದಶಿ; ವೈಕುಂಠ ಏಕಾದಶಿ - ಶುಕ್ಲ ಪಕ್ಷ - ಏಕಾದಶಿ
ಮುಕ್ಕೋಟಿ ದ್ವಾದಶಿ - ಶುಕ್ಲ ಪಕ್ಷ - ದ್ವಾದಶಿ
ಬನದ ಹುಣ್ಣಿಮೆ / ಮಾಘಸ್ನಾನಾರಂಭ - ಹುಣ್ಣಿಮೆ
ತ್ಯಾಗರಾಜ ಆರಾಧನ - ಕೃಷ್ಣ ಪಕ್ಷ - ಪಂಚಮಿ
ಷಟ್ತಿಲಾ ಏಕಾದಶಿ - ಕೃಷ್ಣ ಪಕ್ಷ - ಏಕಾದಶಿ
ಮಕರ ಸಂಕ್ರಾಂತಿ
ಉತ್ತರಾಯಣ ಪರ್ವಕಾಲ
ಧನುರ್ಮಾಸ ಸಮಾಪ್ತಿ

ಮಾಘ ಮಾಸ - ಶಿಶಿರ ಋತು - ದಕ್ಷಿಣಾಯನ
ಸೂರ್ಯನಾರಾಯಣ ಪೂಜೆ
ರಥ ಸಪ್ತಮಿ
ವಸಂತ ಪಂಚಮಿ - ಶುಕ್ಲ ಪಕ್ಷ - ಪಂಚಮಿ
ಭೋಗೀ - ಶುಕ್ಲಪಕ್ಷ - ಷಷ್ಠಿ
ಭೀಷ್ಮಾಷ್ಟಮಿ - ಶುಕ್ಲ ಪಕ್ಷ - ಅಷ್ಟಮಿ
ಜಯ ಏಕಾದಶಿ - ಶುಕ್ಲ ಪಕ್ಷ - ಏಕಾದಶಿ
ಮಾಘಸ್ನಾನ ಸಮಾಪ್ತಿ; ದ್ವಾಪರಯುಗಾದಿ -ಹುಣ್ಣಿಮೆ
ಸೀತ ಜತಂತಿ - ಕೃಷ್ಣ ಪಕ್ಷ - ಅಷ್ಟಮಿ
ವಿಜಯ ಏಕಾದಶಿ - ಕೃಷ್ಣ ಪಕ್ಷ - ಏಕಾದಶಿ
ಮಧ್ವ ನವಮಿ
ಮಹಾಶಿವರಾತ್ರಿ - ಕೃಷ್ಣ ಪಕ್ಷ - ತ್ರಯೋದಶಿ

ಫಾಲ್ಗುಣ ಮಾಸ - ಶಿಶಿರ ಋತು - ದಕ್ಷಿಣಾಯನ
ಆಮಲಕೀ ಏಕಾದಶಿ - ಶುಕ್ಲ ಪಕ್ಷ - ಏಕಾದಶಿ
ಕಾಮದಹನ - ಶುಕ್ಲ ಪಕ್ಷ - ಚತುರ್ದಶಿ
ಹೋಳಿ ಹುಣ್ಣಿಮೆ
ತಿರುಪತಿಯಲ್ಲಿ ತೆಪ್ಪೋತ್ಸವ - ಹುಣ್ಣಿಮೆ
ರಂಗ ಪಂಚಮಿ - ಕೃಷ್ಣ ಪಕ್ಷ - ಪಂಚಮಿ
ಪಾಪಮೋಚನಿ ಏಕಾದಶಿ - ಕೃಷ್ಣ ಪಕ್ಷ - ಏಕಾದಶಿ
ಯುಗಾದಿ ಅಮಾಮಸ್ಯ - ಅಮಾವಾಸ್ಯ

ಅಧಿಕ ಮಾಸ
ಅಧಿಕ ಮಾಸದಲ್ಲಿ ಎಲ್ಲಾ ದಿನಗಳಲ್ಲಿ ದಾನ ಕೊಡುವುದು ಹಿಂದೂ ಪದ್ಧತಿ.