For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್ ಲಾಕ್‌ಡೌನ್‌: ಈ ಬಾರಿ ಗುಡ್‌ ಫ್ರೈಡೇ ಆಚರಣೆ ಹೇಗಿರಲಿದೆ?

|

ಗುಡ್‌ ಫ್ರೈಡೇ ಅಂದರೆ ಶುಭಶುಕ್ರವಾರ ಕ್ರೈಸ್ತ ಸಮುದಾಯದವರಿಗೆ ತುಂಬಾ ಪವಿತ್ರವಾದ ದಿನ. ಇದನ್ನು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿ ಆಚರಣೆ ಮಾಡಲಾಗುವುಉದ. ಆ ದಿನ ಬೆಳಗ್ಗೆಯೇ ಎಲ್ಲರೂ ಚರ್ಚ್‌ಗೆ ಹೋಗಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಕ್ವಾರೆಂಟೈನ್ ಚರ್ಚ್‌ಗಳು ಆನ್‌ಲೈನ್ ಮೂಲಕ ಪ್ರಾರ್ಥನೆ ಮಾಡಲು ತೀರ್ಮಾನಿಸಿದ್ದು ಜನರು ತಮ್ಮ-ತಮ್ಮ ಮನೆಗಳಲ್ಲಿಯೇ ಆನ್‌ಲೈನ್‌ ಮೂಲಕ ಪ್ರಾರ್ಥನೆ ಮಾಡುತ್ತಾರೆ.

ಗುಡ್‌ ಫ್ರೈಡೇ ಎನ್ನುವುದು ಶಾಂತಿ, ಪ್ರೀತಿ, ಕ್ಷಮೆಯ ಸಂದೇಶವಾಗಿದೆ. ಈಸ್ಟರ್ ಹಬ್ಬಕ್ಕೆ ಮುಂಚೆ ಬರುವ ಶುಕ್ರವಾರವನ್ನು ಗುಡ್‌ ಫ್ರೈಡೇ ಎಂದು ಆಚರಿಸಲಾಗುವುದು.

ಗುಡ್‌ ಫ್ರೈಡೇ ಹಿಂದಿರುವ ಕತೆ

ಗುಡ್‌ ಫ್ರೈಡೇ ಹಿಂದಿರುವ ಕತೆ

ಹಿಂದಿನಿಂದಲೂ ಪಾಪ ಪ್ರಾಯಶ್ಚಿತ್ತಕ್ಕಾಗಿ ಒಂದು ಪ್ರಾಣಿಯನ್ನು ಬಲಿ ಕೊಡುವ ಪದ್ಧತಿ ಇಸ್ರೇಲ್ ಜನಾಂಗದಲ್ಲಿತ್ತು. ಆದರೆ ಮಾನವನಿಗೆ ಪಾಪಗಳಿಗೆ ಕೇವಲ ಒಂದು ಪ್ರಾಣಿಯ ರಕ್ತ ಸಾಲದು, ಪರಿಶುದ್ಧವಾದ ರಕ್ತ ಬೇಕಿತ್ತು. ಅದೇ ತಂದೆಯಾದ ದೇವರ ಚಿತ್ತವಾಗಿತ್ತು. ಆಗ ತಂದೆಯ ಚಿತ್ತವನ್ನು ನೆರವೇರಿಸಲು ದೇವರ ಮಗನಾದ ಯೇಸುಕ್ರಿಸ್ತನು ಮುನುಷ್ಯಕುಮಾರನಾಗಿ ಜನಿಸುತ್ತಾನೆ. ತಂದೆಯಾದ ದೇವರ ಚಿತ್ತವನ್ನು ನೆರವೇರಿಸಲು ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ತನ್ನ ಮರಣಕ್ಕೆ ಒಪ್ಪುತ್ತಾನೆ. ಈ ಮೂಲಕ ಮನುಷ್ಯರನ್ನು ಪಾಪದಿಂದ ವಿಮೋಚನೆ ಮಾಡುತ್ತಾನೆ. ಆದ್ದರಿಂದ ಯೇಸು ಶಿಲುಬೆಗೆ ಏರಿದ ದಿನವನ್ನು ಗುಡ್‌ ಫ್ರೈಡೇ ಎಂದು ಆಚರಿಸುತ್ತಾರೆ.

ಯೇಸು ಅಪಾರವಾದ ನೋವು ಸಹಿಸಿ, ಸಾವಿನ ಸಮಯದಲ್ಲೂ ತನ್ನ ಆ ಸ್ಥಿತಿಗೆ ಕಾರಣರಾದರವನ್ನು ಕ್ಷಮಿಸಿ ಸಾಂತಿಯ ದೂತನಾಗುತ್ತಾನೆ. ಹಲವಾರು ಉನ್ನತ ಸಂದೇಶಗಳಿಗೆ ಸಾಕ್ಷಿಯಾದ ಸಾವು, ನೋವು ಮೀರಿದ ಮಾನವೀಯ ಆಯಾಯ ದೊರೆತ ಈ ದಿನವನ್ನು ಶುಭಶುಕ್ರವಾರವೆಂದು ಆಚರಿಸಲಾಗುವುದು.

ಆಚರಣೆ ಹೇಗಿರುತ್ತದೆ

ಆಚರಣೆ ಹೇಗಿರುತ್ತದೆ

ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಯ ಮೇಲೆ ಸಾಯುವ ತನಕದ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನು ಅವಲೋಕಿಸುತ್ತಾ ಪ್ರಾರ್ಥನೆ ಸಲ್ಲಿಸಲಾಗುವುದು. ಬಹುತೇಕ ಕ್ರೈಸ್ತರು ಬೂದಿ ಬುಧವಾರದಿಂದ ಇಲ್ಲಿಯವರೆಗೆ ಮಾಂಸ, ಪಾರ್ಟಿ ಇವುಗಳೆನ್ನೆಲ್ಲಾ ಬಿಟ್ಟು ಉಪವಾಸ ಮಾಡುತ್ತಾರೆ.

ಮನೆಯಲ್ಲಿಯೇ ಇದ್ದರೂ ಗುಡ್‌ಫ್ರೈಡೇ ಆಚರಣೆ ಹೇಗಿರಬೇಕು.

ಮನೆಯಲ್ಲಿಯೇ ಇದ್ದರೂ ಗುಡ್‌ಫ್ರೈಡೇ ಆಚರಣೆ ಹೇಗಿರಬೇಕು.

ಮನೆಯಲ್ಲಿಯೇ ಇದ್ದರೂ ಗುಡ್‌ ಫ್ರೈಡೇ ಆಚರಣೆಯ ಸಂದರ್ಭದಲ್ಲಿ ಒಳ್ಳೆಯ ಉಡುಪು ಧರಿಸಿರಬೇಕು. ಟಿವಿ ಸ್ವಿಚ್ಡ್‌ ಆಫ್‌ ಆಗಿರಬೇಕು, ಮೊಬೈಲ್‌ನಲ್ಲಿ ಯಾವುದೇ ಕರೆ ಸ್ವೀಕರಿಸಬಾರದು. ಧರ್ಮ ಗುರುಗ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದು ಚರ್ಚ್‌ನ ಧರ್ಮಗುರುಗಳು ಕ್ರೈಸ್ತ ಧರ್ಮದವರಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಆಚರಣೆಗಳನ್ನು ಆನ್‌ಲೈನ್ ಮೂಲಕ ನೋಡಿ ಪಾಲಿಸಬಹುದು. ಆದರೆ ಈ ಬಾರಿ ಪ್ರಸಾದ ಸಿಗುವುದಿಲ್ಲ.

ಈಸ್ಟರ್ ಹಬ್ಬ

ಈಸ್ಟರ್ ಹಬ್ಬ

ಗುಡ್‌ ಫ್ರೈಡೇ ಆದ ಮೂರನೇಯ ದಿನಕ್ಕೆ ಈಸ್ಟರ್ ಹಬ್ಬವನ್ನು ಆಚರಿಸಲಾಗುವುದು. ಯೇಸು ಶಿಲುಬೆಯಿಂದ ಎದ್ದುಬಂದ ದಿನವನ್ನು ಈಸ್ಟರ್‌ ದಿನವೆಂದು ಆಚರಿಸಲಾಗುವುದು. ಈಸ್ಟರ್ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ಈ ಬಾರಿ ಎಲ್ಲರೂ ತಮ್ಮ-ತಮ್ಮ ಮನೆಯಲ್ಲಿಯೇ ಆಚರಿಸಬೇಕಾಗುವುದು.

English summary

How To Follow Good Friday Rituals In This Quarantine

Good Friday is a special day observed by the Christians for commemorating the crucifixion of Jesus Christ. It is also known as the Holy Friday, Great Friday or the Black Friday. Good Friday is observed on the Friday prior to the Easter Sunday.
Story first published: Friday, April 10, 2020, 9:08 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X