For Quick Alerts
ALLOW NOTIFICATIONS  
For Daily Alerts

ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡ್ರೆ ನೀವೇನು ಮಾಡಬೇಕು?

|

ಒಂದು ಕೆಲಸಕ್ಕೆ ಸೇರಿ ಸಂಬಳ ಬರಲು ಆರಂಭಿಸಿದ ಮೇಲೆ ನಿಧಾನಕ್ಕೆ ಬದುಕಿನಲ್ಲಿ ಅದು ಬೇಕು, ಇದು ಬೇಕು ಎಂದು ಅನಿಸಲಾರಂಭಿಸುತ್ತದೆ. ಒಂದು ಗಾಡಿ, ನಂತರ ಮನೆ ಹೀಗೆ ನಮ್ಮ ಲಿಸ್ಟ್‌ ಬೆಳೆಯುತ್ತಾ ಹೋಗುತ್ತದೆ.

How to cope with stress of Job Loss

ಪ್ರತಿ ತಿಂಗಳು ಸಂಬಳ ಬರುತ್ತದೆ ಎಂಬ ಧೈರ್ಯದಲ್ಲಿ ಲೋನ್‌ ತಗೊಂಡು EMI ಪಾವತಿಸುತ್ತಾ ಜೀವನ ಸಾಗುತ್ತಾ ಇರುತ್ತದೆ. ಹೀಗಿರುವಾಗ ಯಾವುದೇ ಮುನ್ಸೂಚನೆ ಇಲ್ಲದೆ ಒಂದು ಕಂಪನಿ ಕೆಲಸದಿಂದ ತೆಗೆದು ಹಾಕಿದಾಗ ಆಕಶವೇ ಕಳಚಿ ತಲೆ ಮೇಲೆ ಬಿದ್ದಂತಾಗುವುದು.

ಅದು ತಂದ ಆಘಾತ, ಮುಂದೇನು ಎಂದು ದಿಕ್ಕು ತೋಚದ ಸ್ಥಿತಿ ಆ ಪಾಡು ಶತ್ರುಗೂ ಬೇಡ, ಆ ಮಾನಸಿಕ ಒತ್ತಡ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಎಲ್ಲವೂ ನಾವಂದುಕೊಂಡಂತೆ ಆದರೆ ಅದು ಬದುಕಾಗಲ್ಲ, ಅನಿರೀಕ್ಷಿತ ತಿರುವುಗಳು ಇದ್ದೇ ಇರುತ್ತದೆ. ಹಾಗಂತ ಕಷ್ಟ ನಿರಂತರವಲ್ಲ, ಒಂದಲ್ಲ ಒಂದು ದಾರಿ ನಮ್ಮ ಮುಂದೆ ತೆರೆದುಕೊಳ್ಳುವುದು...

ಇಲ್ಲಿ ಕೆಲಸ ಕಳೆದುಕೊಂಡಾಗ ಅಥವಾ ಕ ಕೈಯಲ್ಲಿ ಕೆಲಸ ಇಲ್ಲದಿದ್ದಾಗ ಆ ಖಿನ್ನತೆ ಏನೆಲ್ಲಾ ಆಗುವುದು, ಅದರಿಂದ ಹೊರಬರಲು ಏನು ಮಾಡಬೇಕೆಂದು ಹೇಳಲಾಗಿದೆ ನೋಡಿ:

ಕೆಲಸ ಕಳೆದುಕೊಂಡಾಗ ಆ ನಷ್ಟ ನಮ್ಮಲ್ಲಿ ಮೂಡಿಸುವ ಚಿಂತೆಗಳು

ಕೆಲಸ ಕಳೆದುಕೊಂಡಾಗ ಆ ನಷ್ಟ ನಮ್ಮಲ್ಲಿ ಮೂಡಿಸುವ ಚಿಂತೆಗಳು

* ಬದುಕಿನಲ್ಲಿ ಮುಂದೇನು ಎಂಬ ಚಿಂತೆ

* ವೃತ್ತಿ ಏನು ಮಾಡುತ್ತಿದ್ದೀಯ ಎಂದು ಕೇಳಿದಾಗ ಏನು ಹೇಳುವುದು

* ಆತ್ಮ ವಿಶ್ವಾಸ, ಪ್ರತಿಷ್ಠೆ ಕುಂದುವುದು

* ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು

* ಕುಟುಂಬದ ಬಗ್ಗೆ ಚಿಂತೆ ಕಾಡುವುದು

 ಇದರಿಂದ ಹೊರಬರಲು ಏನು ಮಾಡಬೇಕು?

ಇದರಿಂದ ಹೊರಬರಲು ಏನು ಮಾಡಬೇಕು?

ಪರಿಸ್ಥಿತಿಗೆ ಹೊಂದುಕೊಳ್ಳಲು ಪ್ರಯತ್ನಿಸಿ: ನೀವು ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು, ಆದರೆ ಪ್ರಯತ್ನಿಸಿ. ನಿಮ್ಮ ಭಾವನೆಗಳನ್ನು, ದುಃಖವನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟುಕೊಳ್ಳಬೇಡಿ, ಆಪ್ತರೊಂದಿಗೆ ಹಂಚಿಕೊಳ್ಳಿ, ಇದು ಮನಸ್ಸನ್ನು ಹಗುರ ಮಾಡುತ್ತದೆ, ಇದರಿಂದ ಬೇಸರ, ಕೆಟ್ಟ ಆಲೋಚನೆ ದೂರವಾಗುವುದು.

 ಸತ್ಯವನ್ನು ಸ್ವೀಕರಿಸಿ:

ಸತ್ಯವನ್ನು ಸ್ವೀಕರಿಸಿ:

ಕೈಯಲ್ಲಿ ಕೆಲಸ ಇಲ್ಲ ಅನ್ನುವುದು ಸತ್ಯ, ಅದನ್ನು ಸ್ವೀಕರಿಸಿ, ಇದರಿಂದ ಹೊಸ ಕೆಲಸ ಹುಡುಕುವಿರಿ. ಈ ಪ್ರಪಂಚ ತುಂಬಾ ವಿಶಾಲವಾಗಿದೆ. ಖಂಡಿತ ಹಿಂದೆ ಇರುವ ಕೆಲಸಕ್ಕಿಂತ ಉತ್ತಮ ಕೆಲಸ ಸಿಗಬಹುದು ಅಥವಾ ಹೊಸ ಮಾರ್ಗ ಸಿಗಬಹುದು.

 ಸ್ನೇಹಿತರನ್ನು ಸಂಪರ್ಕಿಸಿ

ಸ್ನೇಹಿತರನ್ನು ಸಂಪರ್ಕಿಸಿ

ಈ ಸಮಯದಲ್ಲಿ ಮನಸ್ಸಿಗೆ ತುಂಬಾ ಸಮಧಾನ ನೀಡುವವರು ಸ್ನೇಹಿತರಾಗಿರುತ್ತಾರೆ, ಅಲ್ಲದೆ ನಿಮಗೆ ತಿಳಿದವರಲ್ಲಿ ಹಾಗೂ ಎಲ್ಲಾ ಕಡೆ ಕೆಲಸಕ್ಕೆ ಅರ್ಜಿ ಸಲ್ಲಿಸಿ, ಒಂದು ಮಾವಿನಕಾಯಿಗೆ 10 ಕಲ್ಲು ಹೊಡೆದರೆ ಒಂದು ಕಲ್ಲು ತಾಗಿಯಾದರೂ ಅದು ಬೀಳುತ್ತೆ, ಹಾಗೇ ನಿಮ್ಮ ಕೆಲಸ ಹುಡುಕುವ ಪ್ರಯತ್ನವನ್ನು ಮುಂದುವರೆಸಿ.

ಪ್ರಕೃತ್ತಿಯೊಂದಿಗೆ ಸಮಯ ಕಳೆಯಿರಿ

ಪ್ರಕೃತ್ತಿಯೊಂದಿಗೆ ಸಮಯ ಕಳೆಯಿರಿ

ಪ್ರಕೃತಿಯೊಂದಿಗೆ ಸಮಯ ಕಳೆಯಿರಿ ಎಂದಾಗ ಕೈಯಲ್ಲಿ ದುಡ್ಡಿಲ್ಲದೆ ಟ್ರಕ್ಕಿಂಗ್‌ ಎಲ್ಲಾ ಹೋಗುವುದು ಹೇಗೆ ಎಂದು ಕೇಳಬೇಡಿ, ಮನೆಯಲ್ಲಿ ಗಾರ್ಡಿನಿಂಗ್ ಮಾಡುವುದು, ತರಕಾರಿ ಬೆಳೆಸುವುದು ಹೀಗೆ ಏನಾದರೂ ಮಾಡಿ. ಅವು ಮನಸ್ಸಿನ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವುದು ಮಾತ್ರವಲ್ಲ, ತೃಪ್ತಿಯ ಭಾವನೆ ಮೂಡಿಸುವುದು.

 ಪಾಸಿಟಿವ್ ಆಗಿ ಚಿಂತಿಸಿ

ಪಾಸಿಟಿವ್ ಆಗಿ ಚಿಂತಿಸಿ

ನೀವು ಎಲ್ಲಾ ಸರಿ ಹೋಗುತ್ತೆ ಎಂದು ಪಾಸಿಟಿವ್ ಆಗಿ ಚಿಂತಿಸಿ ನೋಡಿ ಎಲ್ಲವೂ ಸರಿ ಹೋಗುವುದು, ಅದೇ ನೀವು ನೆಗೆಟಿವ್ ಆಗಿ ಯೋಚಿಸಿದರೆ ಅದೇ ರೀತಿ ಆಗುವುದು, ಆದ್ದರಿಂದ ಒಳ್ಳೆಯದೇ ಚಿಂತಿಸಿ, ನಿಮ್ಮ ಗುರಿಯತ್ತ ಮಾತ್ರ ಗಮನ ಇರಲಿ. ಇನ್ನು ಒಂದು ವೇಳೆ ಕೆಲಸ ಸಿಗದಿದ್ದರೆ ನೀವು ನಿಮ್ಮ ಸ್ವಂತದ್ದು ಏನಾದ್ರೂ ಪ್ರಯತ್ನಿಸಿ, ನನ್ನಿಂದ ಸಾಧ್ಯವಿಲ್ಲ ಎಂದು ಕುಳಿತರೆ ಖಂಡಿತ ಸಾಧ್ಯವಾಗುವುದಿಲ್ಲ, ಸೋ ಬಿ ಪಾಸಿಟಿವ್, ಆಲ್‌ ದಿ ಬೆಸ್ಟ್....

Read more about: work life ಕೆಲಸ ಜೀವನ
English summary

How To Cope With Stress Of Job Loss And Unemployment in Kannada

How to cope with stress of Job Loss and Unemployment, Read on,
Story first published: Friday, May 28, 2021, 20:19 [IST]
X
Desktop Bottom Promotion