For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಮಮಿ 2019: ಕೃಷ್ಣನಿಗೆ ಕೃಷ್ಣ ಎನ್ನುವ ಹೆಸರು ಯಾಕಿಟ್ಟರು ಗೊತ್ತಾ?

|

ಪವಿತ್ರ ಹಬ್ಬಗಳಲ್ಲಿ ಒಂದಾದ ಕೃಷ್ಣ ಜನ್ಮಾಷ್ಟಮಿಯ 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಕೃಷ್ಣನ ಹೆಸರಿನ ಕುರಿತು ಕೆಲವು ಪೌರಾಣಿಕ ಸಂಗತಿಗಳನ್ನು ತಿಳಿಯೋಣ.

ಹುಟ್ಟಿದ ಮಗುವಿಗೆ ಹೆಸರನ್ನು ಇಡುವುದು ಎಲ್ಲಾ ಧರ್ಮ ಹಾಗೂ ಜಾತಿಗಳಲ್ಲಿ ರೂಢಿಯಲ್ಲಿ ಇರುವ ಒಂದು ಪದ್ಧತಿ. ಹೆತ್ತವರು, ಆ ಕುಟುಂಬಸ್ಥರು ಅಥವಾ ಬಂಧು ಬಾಂಧವರು ಸೇರಿ ಹೆಸರನ್ನು ಆಯ್ಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿಯೇ ನಾಮಕರಣ ಎಂದು ಒಂದು ಸಂಸ್ಕಾರದ ರೂಪದಲ್ಲಿ ಹೆಸರನ್ನು ಇಡುತ್ತಾರೆ.

ನಿಮ್ಮ ಹೆಸರೇನು? ಯಾರು ಇಟ್ಟಿದ್ದಾರೆ? ಎನ್ನುವ ಪ್ರಶ್ನೆಯನ್ನು ಕೇಳಿದರೆ ಸಾಮಾನ್ಯವಾಗಿ ನಮ್ಮ ಹೆಸರಿಗೆ ಕಾರಣರಾದವರ ಹೆಸರನ್ನು ಹೇಳುತ್ತೇವೆ. ಅದೇ ನಮ್ಮ ದೇವತೆಗಳಿಗೆ ಯಾರು ಹೆಸರನ್ನು ಇಟ್ಟರು ಎನ್ನುವ ಪ್ರಶ್ನೆ ಒಮ್ಮೆಯಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ. ಆದರೆ ಅದಕ್ಕೆ ಸೂಕ್ತ ಉತ್ತರ ದೊರೆಯದೆ ಇದ್ದಾಗ ಸುಮ್ಮನಾಗಿ ಬಿಟ್ಟಿರುತ್ತೀರಿ ಅಲ್ಲವೇ?

ಹೌದು, ಸೃಷ್ಟಿಯ ಪಾಲಕನಾದ ವಿಷ್ಣುವಿನ ಎಂಟನೇ ಅವತಾರ ಶ್ರೀಕೃಷ್ಣನ ಅವತಾರ. ಶ್ರೀಕೃಷ್ಣನ ಅವತಾರದಲ್ಲಿ ಕೃಷ್ಣನ್ನು ಹೆತ್ತವರು ಒಬ್ಬರಾದರೆ ಆತನನ್ನು ಲಾಲಿಸಿ ಪಾಲನೆ ಮಾಡಿದವರು ಮತ್ತೊಬ್ಬರು. ಹೀಗಿರುವಾಗ ಅವನಿಗೆ ಶ್ರೀಕೃಷ್ಣ ಎನ್ನುವ ಹೆಸರು ಹೇಗೆ ಬಂತು? ಎನ್ನುವುದು ಕಾಡುವ ಪ್ರಶ್ನೆ. ಹುಟ್ಟಿದ ಘಳಿಗೆಯಿಂದಲೂ ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರ ಪಾಲನೆ ಮಾಡುತ್ತಾ ಬಂದ ಶ್ರೀಕೃಷ್ಣನ ಅವತಾರ ಬಹಳ ಶ್ರೇಷ್ಠವಾದದ್ದು. ಈ ಅವತಾರದಲ್ಲಿ ಸೃಷ್ಟಿಯ ಪಾಲನೆ ಮಾಡಲು ಯಾರು ಶ್ರೀಕೃಷ್ಣ ಎನ್ನುವ ಹೆಸರನ್ನು ಇಟ್ಟರು? ಆ ಹೆಸರು ಹೇಗೆ ಬಂತು ಎನ್ನುವುದನ್ನು ತಿಳಿಯೋಣ ಬನ್ನಿ...

ಕೃಷ್ಣನ ಸೋದರಮಾವ ಕಂಸ

ಕೃಷ್ಣನ ಸೋದರಮಾವ ಕಂಸ

ಶ್ರೀಕೃಷ್ಣನ ಸೋದರ ಮಾವನಾದ ಕಂಸನು ಬಹಳ ದುಷ್ಟ ರಾಜನಾಗಿದ್ದ. ಅವನು ತನ್ನ ರಾಜ್ಯದಲ್ಲಿ ಮಾಡದೆ ಇದ್ದ ದುಷ್ಕೃತ್ಯಗಳು ಇರಲಿಲ್ಲ. ತಂಗಿಯಾದ ದೇವಕಿಯ ವಿವಾಹದ ನಂತರ ಗಂಡನ ಮನೆಗೆ ಕಳುಹಿಸಿ ಕೊಡುವಾಗ, ದೇವಕಿಗೆ ಹುಟ್ಟುವ 8ನೇ ಮಗುವಿನಿಂದ ಕಂಸನು ಕೊಲ್ಲಲ್ಪಡುತ್ತಾನೆ ಎಂದು ಭವಿಷ್ಯವಾಣಿ ಆಯಿತು. ಅದನ್ನು ಕೇಳುತ್ತಿದ್ದಂತೆ ದುಷ್ಟನಾದ ಕಂಸನು ದೇವಕಿ ಮತ್ತು ಆಕೆಯ ಗಂಡನನ್ನು ಸೆರೆಮನೆಗೆ ತಳ್ಳಿದನು. ಜೊತೆಗೆ ಮಗು ಹುಟ್ಟಿದ ತಕ್ಷಣ ಅದನ್ನು ಸಾಯಿಸುವುದಾಗಿ ಯೋಜಿಸಿಕೊಂಡಿದ್ದನು.

ಕೃಷ್ಣ ಹುಟ್ಟಿದಾಗ

ಕೃಷ್ಣ ಹುಟ್ಟಿದಾಗ

ಕೃಷ್ಣ ಹುಟ್ಟಿದ ತಕ್ಷಣ ಮಗುವನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗಿ ಇಡಬೇಕು. ಅಲ್ಲಿರುವ ಒಂದು ನವಜಾತ ಶಿಶುವನ್ನು ತರಬೇಕು ಎಂದು ವಾಸುದೇವನು ಮೊದಲೇ ಯೋಜಿಸಿದ್ದನು. ಅವನ ಯೋಜನೆಯಂತೆಯೇ ಕೃಷ್ಣನು ಹುಟ್ಟಿದ ತಕ್ಷಣ ಅಳುವುದರ ಬದಲು ಮಾತನಾಡಿದನು. ಜೊತೆಗೆ ಸೆರೆಯಿಂದ ಬಿಡಿಸಿಕೊಂಡು ಗೋಕುಲಕ್ಕೆ ಹೋಗಲು ಬೇಕಾದ ಅನುಕೂಲತೆಗಳು ನೆರವೇರಿದವು. ಸೇವಕರೆಲ್ಲಾ ಗಾಢವಾದ ನಿದ್ರೆಗೆ ಜಾರಿದ್ದರು, ವಾಸುದೇವನ ಕೈಕಾಲಿಗೆ ಹಾಕಿದ ಕೋಳಗಳೆಲ್ಲವೂ ತನ್ನಿಂದ ತಾನೆ ಕಳಚಿಕೊಂಡವು, ಜೊತೆಗೆ ಬಾಗಿಲುಗಳು ತೆರೆದವು, ಅತಿಯಾದ ಮಳೆ ಸುರಿಯುತ್ತಿದ್ದರೂ ನದಿ ನೀರುಗಳೆಲ್ಲವೂ ವಾಸುದೇವನಿಗೆ ದಾರಿ ಮಾಡಿಕೊಟ್ಟವು, ವಾಸುದೇವನು ಮಗುವನ್ನು ಗೋಕುಲಕ್ಕೆ ತೆಗೆದುಕೊಂಡು ಹೋಗಿ ಇಟ್ಟನು.

ವಾಸುದೇವನು ನವಜಾತ ಮಗುವನ್ನು ಬದಲಾಯಿಸಿದನು

ವಾಸುದೇವನು ನವಜಾತ ಮಗುವನ್ನು ಬದಲಾಯಿಸಿದನು

ಗೋಕುಲ ಗ್ರಾಮದ ಮುಖ್ಯಸ್ಥನಾದ ನಂದಾ ಹಾಗೂ ಯಶೋದೆಗೆ ಹೆಣ್ಣು ಮಗುವಿನ ಜನನವಾಗಿತ್ತು. ವಾಸು ದೇವನು ಭಾರಿ ಮಳೆಯ ನಡುವೆ ಎಲ್ಲಾ ಅಡೆತಡೆಗಳನ್ನು ದಾಟಿ ನಂದನ ಮನೆಯಲ್ಲಿದ್ದ ಹೆಣ್ಣು ಮಗುವಿನ ಜಾಗದಲ್ಲಿ ತನ್ನ ಮಗುವನ್ನು ಇಟ್ಟು ಅಲ್ಲಿದ್ದ ಹೆಣ್ಣು ಮಗುವನ್ನು ತನ್ನೊಡನೆ ಕರೆದುಕೊಂಡು ಬಂದನು.

ಕಂಸ ಮಗುವನ್ನು ಕೊಲ್ಲಲು ಪ್ರಯತ್ನಿಸಿದನು

ಕಂಸ ಮಗುವನ್ನು ಕೊಲ್ಲಲು ಪ್ರಯತ್ನಿಸಿದನು

ನವಜಾತ ಹೆಣ್ಣು ಮಗುವನ್ನು ಸೆರೆಮನೆಗೆ ತಂದ ಬಳಿಕ ಮಗು ಅಳಲು ಪ್ರಾರಂಭಿಸಿತು. ಮಗುವಿನ ಧ್ವನಿ ಕೇಳುತ್ತಿದ್ದಂತೆ ಕಂಸನು ಅಲ್ಲಿಗೆ ಬಂದನು. ಇದು ಎಂಟನೇ ಮಗು ಎಂದು ಭಾವಿಸಿದನು. ಜೊತೆಗೆ ಅದನ್ನು ಕೊಲ್ಲಲು ಪ್ರಯತ್ನಿಸಿದನು. ಆಶ್ಚರ್ಯ ಎನ್ನುವಂತೆ ಕೊಲ್ಲಲು ಮಗುವನ್ನು ಎತ್ತುತ್ತಿದ್ದಂತೆಯೇ ಮಗು ಮಿಂಚಿನ ರೂಪದಲ್ಲಿ ಆಕಾಶದಲ್ಲಿ ಕಣ್ಮರೆಯಾಯಿತು. ಮಗುವನ್ನು ಕೊಲ್ಲಲು ಸಾಧ್ಯವಾಗಲಿಲ್ಲ ಎನ್ನುವ ಆತಂಕಕ್ಕೆ ಒಳಗಾದನು. ವಾಸ್ತವವಾಗಿ ಆ ಮಗು ದುರ್ಗಾ ದೇವಿಯ ಅವತಾರವಾಗಿತ್ತು.

ನಂದ ಮತ್ತು ಯಶೋದೆ ಭಯಪಟ್ಟಿದ್ದರು

ನಂದ ಮತ್ತು ಯಶೋದೆ ಭಯಪಟ್ಟಿದ್ದರು

ನಂದ ಮತ್ತು ಯಶೋದೆ ಹುಡುಗ ಹುಟ್ಟಿರುವುದಕ್ಕೆ ಬಹಳ ಖುಷಿ ಪಟ್ಟಿದ್ದರು. ಆದರೆ ಅಷ್ಟೇ ಭಯಕ್ಕೂ ಒಳಗಾಗಿದ್ದರು. ಏಕೆಂದರೆ ಕಂಸನು ಹುಡುಗಿ ತಪ್ಪಿಸಿಕೊಂಡಿದ್ದಾಳೆ, ಅವಳು ಎಲ್ಲಿದ್ದಾಳೆ ಎನ್ನುವುದು ತಿಳಿಯದೇ ಇದ್ದ ಕಾರಣ ಗೋಕುಲದಲ್ಲಿ ಇದ್ದ ಮಗುವನ್ನೆಲ್ಲಾ ಕೊಲ್ಲುತ್ತಿದ್ದನು. ಇವರ ಸಹೋದರನ ಮನೆಯಲ್ಲೂ ಸೋದರಳಿಯನಿಗೊಂದು ಮಗುವಾಗಿತ್ತು. ಹಾಗಾಗಿ ಎರಡು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಗುಪ್ತವಾಗಿ ಇಟ್ಟಿದ್ದರು. ಯಾರಿಗೂ ತಿಯದಂತೆ ಹೇಗೆ ನಾಮಕರಣ ಮಾಡುವುದು? ಎಂದು ಚಿಂತಿಸಿದರು.

ಆಚಾರ್ಯ ಋಷಿಮುನಿಗಳು

ಆಚಾರ್ಯ ಋಷಿಮುನಿಗಳು

ಆಚಾರ್ಯರಾದ ಗಾರ್ಗ್ ಆಗ ಅತ್ಯಂತ ಪ್ರಸಿದ್ಧ ಋಷಿಮುನಿಗಳಾಗಿದ್ದರು. ಅವರು ಆ ಸಮಯಕ್ಕೆ ಗ್ರಾಮದ ಮುಖ್ಯಸ್ಥರಾದ ನಂದನನ್ನು ಭೇಟಿ ಮಾಡಿ ಮಥುರಾಕ್ಕೆ ಹೋಗುವವರಾಗಿದ್ದರು. ಆಗ ನಂದನು ವಿಚಾರವನ್ನೆಲ್ಲಾ ಋಷಿಗಳಿಗೆ ತಿಳಿಸಿದರು. ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಆಚಾರ್ಯ್ ಗಾರ್ಗ್ ಮೊದಲು ಅವರನ್ನು ಅಭಿನಂದಿಸಿದರು. ನಂತರ ಇಬ್ಬರು ಮಕ್ಕಳನ್ನು ಹಸುವಿನ ಕೊಟ್ಟಿಗೆಗೆ ತರಲು ಹೇಳಿದರು.

ಕೃಷ್ಣ ಮತ್ತು ಬಲರಾಮನನ್ನು ಹೆಸರಿಸಿದರು

ಕೃಷ್ಣ ಮತ್ತು ಬಲರಾಮನನ್ನು ಹೆಸರಿಸಿದರು

ಎರಡು ಮಕ್ಕಳ ಭವಿಷ್ಯವನ್ನು ನೋಡಿದಾಗ ಭವಿಷ್ಯದಲ್ಲಿ ಇವರು ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಮನಗಂಡರು. ನಂದನ ಸೋದರಳಿಯನ ಮಗನ ಭವಿಷ್ಯವನ್ನು ನೋಡಿ, ರಾಮನಂತೆ ತನ್ನ ಸದ್ಗುಣಗಳಿಂದ ಕುಟುಂಬಕ್ಕೆ ಘನತೆ ಹಾಗೂ ಸಂತೋಷವನ್ನು ತರುತ್ತಾನೆ ಎಂದು ಹೇಳಿದರು. ಅಲ್ಲದೆ ಬೃಹತ್ ದೈವ ಶಕ್ತಿ ಹಾಗೂ ಅದ್ಭುತ ದೈಹಿಕ ನೋಟವನ್ನು ಪಡೆದುಕೊಳ್ಳುತ್ತಾರೆ ಎಂದುಕೊಂಡರು. ಹಾಗಾಗಿ ಅವರು ಬಾಲ, ಶಕ್ತಿ ಮತ್ತು ರಾಮ ಎನ್ನುವ ಪದಗಳನ್ನು ಸಂಯೋಜಿಸಿ ಬಲರಾಮ ಎನ್ನುವ ಹೆಸರನ್ನು ಸೂಚಿಸಿದರು.

ನಂದನ ಸ್ವಂತ ಮಗನ ಬಳಿಗೆ ಬಂದಾಗ, ಈ ಮಗುವು ವಿಷ್ಣುವಿನ ಅವತಾರ ಎಂದು ತಿಳಿದರು. ಜೊತೆಗೆ ಇದು ವಿಷ್ಣುವಿನ 8ನೇ ಅವತಾರ ಎಂದು ತಿಳಿದರು. ಈ ರೂಪ, ಉದ್ದೇಶ ಹಾಗೂ ಗುರಿ ಏನು ಎನ್ನುವುದನ್ನು ಅರಿತರು.

ಭಗವಂತನಾದ ವಿಷ್ಣು

ಭಗವಂತನಾದ ವಿಷ್ಣು

ಭೂಮಿಯ ಮೇಲೆ ಅನಿಯಂತ್ರಿತ ದುಷ್ಕøತ್ಯಗಳು ಮತ್ತು ದುಷ್ಟತೆಗಳಿಂದಾಗಿ ಅಸಮತೋಲನ ಉಂಟಾದಾಗ ವಿಷ್ಣು ಅದನ್ನು ಸಮತೋಲನ ರೂಪಕ್ಕೆ ತರಲು ಅವತಾರವನ್ನು ಎತ್ತಿ ಬರುತ್ತಾನೆ. ಅದರಂತೆಯೇ ಈ ಮಗು ವಿಷ್ಣುವಿನ ಅವತಾರವಾಗಿದೆ. ಆಚಾರ್ಯ ಗಾರ್ಗ್ ಹೇಳುತ್ತಾರೆ" ಈ ಹಿಂದೆ ವಿಷ್ಣು ಬಿಳಿ, ಕೆಂಪು ಮತ್ತು ಹಳದಿ ಬಣ್ಣಗಳನ್ನು ತೆಗೆದುಕೊಂಡಿದ್ದಾನೆ. ಈ ಬಾರಿ ಕಪ್ಪು ಬಣ್ಣವನ್ನು ಹೊಂದುತ್ತಾನೆ. ಹಾಗಾಗಿ ಈ ಮಗುವಿಗೆ ಕೃಷ್ಣ ಎಂದು ಸೂಚಿಸಿದರು.

ಆದ್ದರಿಂದಲೇ ವಿಷ್ಣುವಿನ ಹೆಸರಿನೊಂದಿಗೆ ಜನಪ್ರಿಯ ಅವತಾರಕ್ಕೆ ಶ್ರೀಕೃಷ್ಣ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ.

English summary

HOW KRISHNA GOT HIS NAME?

We are often asked the question- ''who gave you your name?'' And the answers are filled with joy when we tell the name of that family member who loves us so much and gave us his favorite name. But don't you ever wonder who named the deities who are loved by all?
X
Desktop Bottom Promotion