For Quick Alerts
ALLOW NOTIFICATIONS  
For Daily Alerts

Hanuman Jayanti 2020 : ಹನುಮಾನ್ ಚಾಲೀಸ ಪಠಿಸುವುದರ ಲಾಭಗಳು

|

ಹಿಂದೂಗಳು ಸಾವಿರಾರು ಮಂತ್ರಗಳನ್ನು ಜಪಿಸುವವರು. ಇದರಲ್ಲಿ ಒಂದೊಂದು ಮಂತ್ರವು ಕೂಡ ದೇವರಿಗೆ ಅರ್ಪಣೆ ಆಗಿರುವಂತಹ ಮಂತ್ರಗಳು. ಆದರೆ ಅತೀ ಹೆಚ್ಚು ಶಕ್ತಿಶಾಲಿ ಮಂತ್ರವೆಂದರೆ ಅದು ಹನುಮಾನ್ ಚಾಲೀಸ. ಇದನ್ನು ಪಠಿಸಿದರೆ ಅದರಿಂದ ಯಾವುದೇ ಸಂಕಷ್ಟಗಳು ದೂರವಾಗುವುದು ಎಂದು ಹೇಳಲಾಗುತ್ತದೆ.

Hanuman Jayanti 2020: Secret Benefits of Chanting Hanuman Chalisa

ಹನುಮಾನ್ ಚಾಲೀಸವನ್ನು ಬರೆದವರು ಗೋಸ್ವಾಮಿ ತುಳಸಿದಾಸ್ ಅವರು. ಈ ಮಂತ್ರವು ಒಂದು ಮಂತ್ರವಾಗಿರದೆ, ಪದ್ಯದಂತೆ ಇದೆ. ತುಳಸಿದಾಸ್ ಅವರನ್ನು ಸನ್ಯಾಸಿ ವಾಲ್ಮೀಕಿ ಅವರ ರೂಪವೆಂದು ಹೇಳಲಾಗುತ್ತದೆ.

ಹರಿದ್ವಾರದ ಕುಂಭ ಮೇಳದಲ್ಲಿ ಸಮಾಧಿ ಸ್ಥಿತಿಯಲ್ಲಿ ಧ್ಯಾನ ಮಗ್ನರಾಗಿದ್ದ ತುಳಸಿದಾಸ್ ಅವರು ಹನುಮಾನ್ ಚಾಲೀಸ ರಚಿಸಿದರು ಎಂದು ನಂಬಲಾಗಿದೆ. ಚಾಲೀಸ್ ಎಂದರೆ ಹಿಂದಿಯಲ್ಲಿ 40 ಎಂದರ್ಥ. ಇದರಲ್ಲಿ 40 ರೂಪದಲ್ಲಿರುವ ಹನುಮಂತನ ಸ್ಮರಿಸಲಾಗಿದೆ. ಹನುಮಾನ್ ಚಾಲೀಸ ಪಠಿಸಿದವರಿಗೆ ಹನಮಂತ ದೇವರ ಆಶೀರ್ವಾದ ಸಿಗುತ್ತದೆ ಎಂದು ತುಳಸಿದಾಸ್ ಅವರು ಹೇಳಿದ್ದಾರೆ.

ಹನುಮಾನ್ ಚಾಲೀಸದ ಹಿಂದಿರುವ ಕಥೆ

ಹನುಮಾನ್ ಚಾಲೀಸದ ಹಿಂದಿರುವ ಕಥೆ

ಮೊಘಲರ ಕಾಲದಲ್ಲಿ ಔರಂಗಜೇಬನು ರಾಜ್ಯವನ್ನಾಳುತ್ತಿದ್ದ ವೇಳೆ ತುಳಸಿದಾಸರು ಆತನ ಆಸ್ಥಾನಕ್ಕೆ ಹೋದ ವೇಳೆ, ನೀನು ನನಗೆ ದೇವರನ್ನು ತೋರಿಸು ಎಂದು ಔರಂಗಜೇಬ ವ್ಯಂಗ್ಯವಾಡುತ್ತಾನೆ. ನಿಜವಾದ ಭಕ್ತಿ ಇಲ್ಲದೆ ರಾಮ ದೇವರನ್ನು ನೋಡಲು ಸಾಧ್ಯವಿಲ್ಲ ಎಂದು ತುಳಸಿದಾಸರು ಹೇಳುತ್ತಾರೆ. ಇದರ ಪರಿಣಾಮವಾಗಿ ತುಳಸಿದಾಸರನ್ನು ಸೆರೆಮನೆಗೆ ತಳ್ಳಲಾಗುತ್ತದೆ. ತುಳಸಿದಾಸರು ಸೆರೆಮನೆಯಲ್ಲಿ ಕುಳಿತುಕೊಂಡು ಹನುಮಾನ್ ಚಾಲೀಸ್ ಬರೆದಿರುವರು ಎಂದು ಹೇಳಲಾಗಿದೆ. ತುಳಸಿದಾಸರು ಇದನ್ನು ಬರೆದು ಪೂರ್ತಿಗೊಳಿಸಿದ ಬಳಿಕ ಪಠಿಸಿದಾಗ ಕಪಿ ಸೈನ್ಯವು ಸಂಪೂರ್ಣ ದೆಹಲಿಯನ್ನು ಭೀತಿಗೊಳಿಸಿತು ಎಂದು ಹೇಳಲಾಗಿದೆ.

ಹನುಮಾನ್ ಚಾಲೀಸದಲ್ಲಿ ಇರುವ ದೈವಿ ಶಕ್ತಿಯ ರಹಸ್ಯ

ಹನುಮಾನ್ ಚಾಲೀಸದಲ್ಲಿ ಇರುವ ದೈವಿ ಶಕ್ತಿಯ ರಹಸ್ಯ

ಹನುಮಾನ್ ಚಾಲೀಸ ಪಠಿಸಲು ವಿಶೇಷ ಕಾರಣಗಳು ಇವೆ. ಹನುಮಾನ್ ಚಾಲೀಸವನ್ನು ಪ್ರತಿನಿತ್ಯವೂ 40 ದಿನಗಳ ಕಾಲ ಪಠಿಸಿದರೆ ಅದರಿಂದ ಪ್ರಾರ್ಥನೆ ಫಲಿಸುತ್ತದೆ ಮತ್ತು ಅಪಾರ ಶಕ್ತಿಯು ಸಿಗುವುದು ಎಂದು ನಂಬಲಾಗಿದೆ. ಸಂಪೂರ್ಣ ಭಕ್ತಿ ಹಾಗೂ ಶ್ರದ್ಧೆಯಿಂದ ಹನುಮಾನ್ ಚಾಲೀಸವನ್ನು ಪಠಿಸಿದರೆ ಅದು ತುಂಬಾ ಶಕ್ತಿಶಾಲಿ ಆಗಿರುತ್ತದೆ. ಹನುಮಾನ್ ಚಾಲೀಸವನ್ನು ತುಂಬಾ ಭಕ್ತಿಯಿಂದ ಪಠಿಸಿದರೆ ಆಗ 8 ಮೂರ್ತಿಗಳು, 12 ಜ್ಯೋರ್ತಿಲಿಂಗಗಳು, 5 ಮುಖ ಮತ್ತು 15 ಕಣ್ಣುಗಳ ದರ್ಶನವಾಗುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯದ ಪ್ರಾಮುಖ್ಯತೆ

ಜ್ಯೋತಿಷ್ಯದ ಪ್ರಾಮುಖ್ಯತೆ

ಶನಿ ಗ್ರಹದ ಪ್ರಭಾವವು ಯಾವ ರಾಶಿ ಹಾಗೂ ನಕ್ಷತ್ರದ ಮೇಲೆ ಆಗುತ್ತದೆ ಎನ್ನುವುದನ್ನು ಜ್ಯೋತಿಷ್ಯದ ಮೂಲಕ ತಿಳಿಯಬಹುದು. ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುವುದು ಕೆಲವರಿಗೆ ಶುಭ ಮತ್ತು ಇನ್ನು ಕೆಲವರಿಗೆ ಅಶುಭವಾಗಿರುತ್ತದೆ. ಶನಿಗ್ರಹದ ನಕಾರಾತ್ಮಕ ಪರಿಹಾರ ಹೊಂದಿರುವ ಜನರು ಶನಿವಾರ ಎಂಟು ಸಲ ಹನುಮಾನ್ ಚಾಲೀಸ್ ಪಠಿಸಿದರೆ ಅದರಿಂದ ಪರಿಹಾರ ಮತ್ತು ಲಾಭವಾಗಲಿದೆ.

ಮಂಗಳ ಮತ್ತು ಮಂಗಳಿಕ ದೋಷ ಇರುವಂತಹವರು ಕೂಡ ಹನುಮಾನ್ ಚಾಲೀಸವನ್ನು ಪಠಿಸಿದರೆ ಅದರಿಂದ ಪರಿಹಾರ ಸಿಗುವುದು. ಮಂಗಳ ಗ್ರಹದ ಧನಾತ್ಮಕ ಅಂಶವಾಗಿರುವಂತಹ ಶಕ್ತಿ, ಧೈರ್ಯ, ಅದಮ್ಯ ಮನೋಭಾವವು ಹನುಮಾನ್ ಚಾಲೀಸ ಪಠಣದಿಂದ ಸಿಗಲಿದೆ.

ಶನಿ ಮತ್ತು ಮಂಗಳ ದೋಷ ಇರುವಂತಹ ಜನರು ಹನುಮಾನ್ ಚಾಲೀಸವನ್ನು ಪಠಿಸಿದರೆ ಅದರಿಂದ ಪರಿಹಾರ ಸಿಗುವುದು.

ಹನುಮಾನ್ ಚಾಲೀಸವನ್ನು ಯಾವಾಗ ಪಠಿಸಬೇಕು?

ಹನುಮಾನ್ ಚಾಲೀಸವನ್ನು ಯಾವಾಗ ಪಠಿಸಬೇಕು?

ಹನುಮಾನ್ ಚಾಲೀಸವನ್ನು ಬೆಳಗ್ಗೆ ಮತ್ತು ಸಂಜೆ ವೇಳೆ ಪಠಿಸಬಹುದು. ಈ ಸುಂದರ ಪದ್ಯವನ್ನು ಪಠಿಸಲು ಹತ್ತು ನಿಮಿಷಕ್ಕಿಂತ ಹೆಚ್ಚಿನ ಸಮಯ ಬೇಕಾಗಲ್ಲ. ಪ್ರತಿಯೊಂದು ಪದ್ಯದ ಪಂಕ್ತಿಗೂ ಅದರದ್ದೇ ಆಗಿರುವ ಪ್ರಾಮುಖ್ಯತೆ ಇದೆ. 40 ಸಾಲುಗಳನ್ನು ಓದಲು ಸಾಧ್ಯವಾಗದೆ ಇದ್ದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಸಾಲುಗಳನ್ನು ಆಯ್ಕೆ ಮಾಡಿಕೊಂಡು ಪಠಿಸಿ.

ಹನುಮಾನ್ ಚಾಲೀಸ ಪಠಿಸಿದರೆ ಸಿಗುವ ಲಾಭಗಳು

ಹನುಮಾನ್ ಚಾಲೀಸ ಪಠಿಸಿದರೆ ಸಿಗುವ ಲಾಭಗಳು

ಶನಿ ಪ್ರಭಾವ ಕಡಿಮೆ ಮಾಡುವುದು

ಪುರಾಣಗಳ ಪ್ರಕಾರ ಶನಿ ದೇವರು ಹನುಮಂತ ದೇವರಿಂದ ಭಯಭೀತರಾಗಿದ್ದರು. ಇದರಿಂದ ಹನುಮಾನ್ ಚಾಲೀಸ ಪಠಿಸಿದರೆ ಅದರಿಂದ ಸಾಡೇ ಸಾತಿ ದೋಷದ ಪರಿಣಾಮವು ಕಡಿಮೆ ಆಗುವುದು. ಕುಂಡಲಿಯಲ್ಲಿ ಶನಿ ದೋಷ ಇರುವವರು ಹನುಮಾನ್ ಚಾಲೀಸವನ್ನು ಪಠಿಸಬೇಕು. ಶಾಂತಿ ಮತ್ತು ಸಮೃದ್ಧಿಗಾಗಿ ಶನಿವಾರ ಇದನ್ನು ಪಠಿಸಿದರೆ ತುಂಬಾ ಒಳ್ಳೆಯದು.

ದುಷ್ಟಶಕ್ತಿಗಳನ್ನು ದೂರ ಮಾಡಲು

ದುಷ್ಟಶಕ್ತಿಗಳನ್ನು ದೂರ ಮಾಡಲು

ಯಾವುದೇ ರೀತಿಯ ದುಷ್ಟಶಕ್ತಿಗಳನ್ನು ದೂರ ಮಾಡುವಲ್ಲಿ ಹನುಮಂತ ದೇವರನ್ನು ಸ್ಮರಿಸಬೇಕು ಎಂದು ಹೇಳಲಾಗುತ್ತದೆ. ರಾತ್ರಿ ವೇಳೆ ನಿಮಗೆ ದುಸ್ವಪ್ನ ಕಾಡುತ್ತಲಿದ್ದರೆ ಆಗ ನೀವು ಹನುಮಾನ್ ಚಾಲೀಸ ಇರುವ ಪುಸ್ತಕವನ್ನು ತಲೆದಿಂಬಿನ ಅಡಿಯಲ್ಲಿ ಇಟ್ಟುಬಿಡಿ. ಇದರಿಂದ ಶಾಂತಿಯಿಂದ ನಿದ್ರಿಸಬಹುದು. ಕೆಟ್ಟ ಆಲೋಚನೆಗಳು ಬರದಂತೆ ಇದು ತಡೆಯುತ್ತದೆ.

ಕ್ಷಮಿಸಲು ಪ್ರಾರ್ಥಿಸಿ

ಕ್ಷಮಿಸಲು ಪ್ರಾರ್ಥಿಸಿ

ಕೆಲವು ಸಲ ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡಿರುತ್ತೇವೆ. ಹಿಂದೂ ಧರ್ಮದ ಪ್ರಕಾರ ನಾವು ಮಾಡಿರುವಂತಹ ಪಾಪ ಹಾಗೂ ಪುಣ್ಯದ ಫಲವಾಗಿ ಜನ್ಮ ಹಾಗೂ ಸಾವಿನ ನಡುವೆ ಸುತ್ತುತ್ತಲಿರುತ್ತೇವೆ. ಹನುಮಾನ್ ಚಾಲೀಸ ಪಠಿಸಿದರೆ ನೀವು ಮಾಡಿರುವಂತಹ ಪಾಪಗಳು ಮತ್ತು ಹಿಂದಿನ ಜನ್ಮದ ಪಾಪಗಳು ಕೂಡ ನಿವಾರಣೆ ಆಗುವುದು.

ಅಡಚಣೆಗಳು ದೂರವಾಗಲು

ಅಡಚಣೆಗಳು ದೂರವಾಗಲು

ಗಣೇಶ ದೇವರನ್ನು ಎಲ್ಲಾ ಸಂಕಷ್ಟಗಳನ್ನು ನಿವಾರಣೆ ಮಾಡುವವರು ಎಂದು ಪರಿಗಣಿಸಲಾಗಿದೆ. ಅದೇ ರೀತಿಯಾಗಿ ಹನುಮಂತ ದೇವರು ಕೂಡ ನಮ್ಮ ಜೀವನದಲ್ಲಿ ಬರುವ ಎಲ್ಲಾ ರೀತಿ ಸಂಕಷ್ಟಗಳನ್ನು ನಿವಾರಿಸುವರು. ಹನುಮಾನ್ ಚಾಲೀಸವನ್ನು ತುಂಬಾ ಶ್ರದ್ಧೆ ಹಾಗೂ ಭಕ್ತಿಯಿಂದ ಪಠಿಸಿದರೆ ಆಗ ಖಂಡಿತವಾಗಿಯೂ ಇದು ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಬೆಳಗ್ಗೆ ನೀವು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಆ ದಿನವು ಉತ್ತಮವಾಗಿರುತ್ತದೆ. ಇದರಿಂದ ನೀವು ತುಂಬಾ ಆರಾಮ ಮತ್ತು ಜೀವನದಲ್ಲಿ ಸಂಪೂರ್ಣವಾಗಿ ನಿಯಂತ್ರಣ ಪಡೆಯಬಹುದು. ಹನುಮಾನ್ ಚಾಲೀಸವನ್ನು ಪಠಿಸಿದರೆ ಅದರಿಂದ ದೈವಿ ಶಕ್ತಿಯು ಸಿಗುತ್ತದೆ.

ಪ್ರಯಾಣ ಸುರಕ್ಷಿತವಾಗಿರಲು

ಪ್ರಯಾಣ ಸುರಕ್ಷಿತವಾಗಿರಲು

ಯಾವುದೇ ವಾಹನವಾದರೂ ಅದರಲ್ಲಿ ಹನುಮಂತ ದೇವರ ಮೂರ್ತಿ ಇರುವುದನ್ನು ನೀವು ಕಾಣಬಹುದು. ಹೆಚ್ಚಿನವರು ತಮ್ಮ ವಾಹನದಲ್ಲಿ ಇದನ್ನು ಇಟ್ಟುಕೊಳ್ಳುವರು. ಯಾಕೆಂದರೆ ಹನುಮಂತ ದೇವರು ಅಪಘಾತ ತಪ್ಪಿಸುವರು ಮತ್ತು ಪ್ರಯಾಣದಲ್ಲಿ ಯಶಸ್ಸು ನೀಡುವರು ಎಂದು ನಂಬಲಾಗಿದೆ.

ಎಲ್ಲಾ ಇಚ್ಛೆಗಳನ್ನು ಪೂರೈಸಲು

ಎಲ್ಲಾ ಇಚ್ಛೆಗಳನ್ನು ಪೂರೈಸಲು

ಹನುಮಾನ್ ಚಾಲೀಸ ಪಠಿಸುವುದು ಅಥವಾ ಕೇಳುವುದು ಒಂದು ಅದ್ಭುತ. ತುಂಬಾ ಶ್ರದ್ಧಾ ಭಕ್ತಿಯಿಂದ ನೀವು ಇದನ್ನು ಪಠಿಸಿದರೆ ಆಗ ಖಂಡಿತವಾಗಿಯೂ ಭಕ್ತರಿಗೆ ಇದರಿಂದ ಎಲ್ಲಾ ರೀತಿಯ ಇಚ್ಛೆಯು ಪೂರೈಸುವುದು ಎಂದು ನಂಬಲಾಗಿದೆ. ದಿನನಿತ್ಯವೂ ಹನುಮಾನ್ ಚಾಲೀಸ ಪಠಿಸಿದರೆ ಅದರಿಂದ ದೇವರ ಆಶೀರ್ವಾದ ಮತ್ತು ಅನುಗ್ರಹ ಸಿಗುತ್ತದೆ.

ಸ್ವತಂತ್ರ ಮತ್ತು ಶಕ್ತಿ ಪಡೆಯಲು

ಸ್ವತಂತ್ರ ಮತ್ತು ಶಕ್ತಿ ಪಡೆಯಲು

ಹನುಮಾನ್ ಚಾಲೀಸವನ್ನು ನೀವು ಪಠಿಸಿದರೆ ಆಗ ನಿಮ್ಮ ಸುತ್ತಲು ಧನಾತ್ಮಕ ಶಕ್ತಿಯು ಆವರಿಸುತ್ತದೆ ಮತ್ತು ದಿನವಿಡಿ ನೀವು ತುಂಬಾ ಉಲ್ಲಾಸದಿಂದ ಇರುವಿರಿ. ಇದು ಉದಾಸೀನತೆಯನ್ನು ಕೊಲ್ಲುತ್ತದೆ ಮತ್ತು ನಿಮ್ಮನ್ನು ತುಂಬಾ ಪ್ರಭಾವಿಯನ್ನಾಗಿಸುತ್ತದೆ. ತಲೆನೋವು, ನಿದ್ರಾಹೀನತೆ, ಆತಂಕ, ಖಿನ್ನತೆ ಇತ್ಯಾದಿಗಳನ್ನು ಇದು ನಿವಾರಣೆ ಮಾಡುವುದು.

ಆಧ್ಯಾತ್ಮಿಕ ಜ್ಞಾನ ಪಡೆಯಲು

ಆಧ್ಯಾತ್ಮಿಕ ಜ್ಞಾನ ಪಡೆಯಲು

ಹನುಮಾನ್ ಚಾಲೀಸವನ್ನು ಪಠಿಸುವ ಜನರಿಗೆ ಆಧ್ಯಾತ್ಮಿಕ ಜ್ಞಾನವು ಸಿಗುವುದು ಎಂದು ಹೇಳಲಾಗುತ್ತದೆ. ಮುಕ್ತಿ ಪಡೆಯಲು ಆಧ್ಯಾತ್ಮಿಕವಾಗಿ ಸಾಗುವಂತಹ ಜನರು ಹನುಮಂತ ದೇವರ ನೆರವನ್ನು ಪಡೆಯುವರು. ಹನುಮಂತ ದೇವರು ಸರಿಯಾದ ಮಾರ್ಗವನ್ನು ತೋರಿಸುವರು ಮತ್ತು ಭೌತಿಕತೆ ದೂರವಿಡುವಂತೆ ಮಾಡುವರು.

ವ್ಯಕ್ತಿಯ ಸುಧಾರಿಸಲು

ವ್ಯಕ್ತಿಯ ಸುಧಾರಿಸಲು

ಯಾವುದೇ ಕೆಟ್ಟ ಸಹವಾಸ ಮತ್ತು ಹವ್ಯಾಸದಲ್ಲಿ ಬಿದ್ದಿರುವ ಜನರನ್ನು ಸುಧಾರಿಸಲು ಹನುಮಾನ್ ಚಾಲೀಸವನ್ನು ಪಠಿಸಬೇಕು. ಹನುಮಾನ್ ಚಾಲೀಸದಿಂದ ಬರುವಂತಹ ಶಕ್ತಿಯು ಭಕ್ತರ ಮನಸ್ಸಿನಲ್ಲಿ ಧನಾತ್ಮಕತೆ ಮತ್ತು ಶಕ್ತಿ ತುಂಬುವುದು.

ಏಕತೆ ಉತ್ತೇಜಿಸಲು

ಏಕತೆ ಉತ್ತೇಜಿಸಲು

ಪ್ರತಿನಿತ್ಯವು ಹನುಮಾನ್ ಚಾಲೀಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪಠಿಸಿದರೆ ಅದರಿಂದ ಕುಟುಂಬದಲ್ಲಿ ಇರುವ ಎಲ್ಲಾ ರೀತಿಯ ಜಗಳವು ದೂರವಾಗುವುದು ಮತ್ತು ಏಕತೆಯು ನಿರ್ಮಾಣವಾಗುವುದು. ಇದರಿಂದ ಜೀವನದಲ್ಲಿ ಸುಖ ಹಾಗೂ ಶಾಂತಿ ನೆಲೆಸುವುದು. ಸಂಬಂಧದಲ್ಲಿ ಇರುವ ನಕಾರಾತ್ಮಕತೆ ನಿವಾರಣೆ ಮಾಡಿ ಸೌಹಾರ್ದತೆ ಉಂಟು ಮಾಡುವುದು.

ನಕಾರಾತ್ಮಕ ಶಕ್ತಿ ದೂರ ಮಾಡುವುದು

ನಕಾರಾತ್ಮಕ ಶಕ್ತಿ ದೂರ ಮಾಡುವುದು

ಹನುಮಾನ್ ಚಾಲೀಸದಲ್ಲಿ ಇರುವ ಒಂದು ಸಾಲು ಹೀಗಿದೆ..``ಭೂತ್ ಪಿಶಾಚಿ ನಿಕಟ್ ನಹಿ ಆವೇನ, ಮಹಾವಿರ್ ಜಬ್ ನಾಮ್ ಸುನಾವೆ'' ಹನುಮಂತ ದೇವರ ಹೆಸರನ್ನು ಹೇಳುವ ಮತ್ತು ಹನುಮಾನ್ ಚಾಲೀಸವನ್ನು ಪಠಿಸುವ ಜನರಿಗೆ ಯಾವುದೇ ಭೂತ ಪಿಶಾಚಿಯು ಕಾಡದು ಎಂದು ಹೇಳಲಾಗುತ್ತದೆ. ಇದು ಕುಟುಂಬ ಸದಸ್ಯರ ಮನಸ್ಸಿನಲ್ಲಿ ಇರುವ ಎಲ್ಲಾ ನಕಾರಾತ್ಮಕತೆ ದೂರ ಮಾಡುತ್ತದೆ ಮತ್ತು ಶಾಂತಿ ಹಾಗೂ ಸೌಹಾರ್ದತೆ ಉಂಟು ಮಾಡುತ್ತದೆ.

ಇದರ ಹೊರತಾಗಿ ಹನುಮಾನ್ ಚಾಲೀಸ ಪಠಿಸುವ ಕೆಲವು ಲಾಭಗಳು

ಇದರ ಹೊರತಾಗಿ ಹನುಮಾನ್ ಚಾಲೀಸ ಪಠಿಸುವ ಕೆಲವು ಲಾಭಗಳು

  • ಇದು ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುವುದು ಮತ್ತು ಆಧ್ಯಾತ್ಮಿಕತೆ ಹೆಚ್ಚಿಸುವುದು.
  • ಜೀವನದಲ್ಲಿ ಬರುವ ಎಲ್ಲಾ ಅಪಾಯಗಳಿಂದ ಕಾಪಾಡುವುದು ಮತ್ತು ಜೀವನದಲ್ಲಿ ಆಧ್ಯಾತ್ಮಿಕ ಸ್ವಾತಂತ್ರ್ಯ ಮತ್ತು ವಿಶ್ವಾಸ ಪಡೆಯಲು ನೆರವಾಗುವುದು.
  • ಉದ್ಯೋಗದ ಸಂದರ್ಶನಕ್ಕೆ ಹೋಗುವ ಮೊದಲು ನೀವು ಹನುಮಾನ್ ಚಾಲೀಸವನ್ನು ಓದಿದರೆ ಆಗ ನಿಮಗೆ ಒಳ್ಳೆಯದಾಗುತ್ತದೆ.
  • ಕಾನೂನಿನ ಸಂಕಷ್ಟ, ವ್ಯಾಜ್ಯ, ಸೆರೆವಾಸದಿಂದ ತಪ್ಪಿಸಲು ಹನುಮಾನ್ ಚಾಲೀಸವನ್ನು ದಿನದಲ್ಲಿ ನೂರು ಬಾರಿ ಓದಬೇಕು. ಇದು ನಿಮ್ಮ ಪರವಾಗಿ ಕೆಲಸ ಮಾಡುವುದು.
  • ರಾತ್ರಿ ವೇಳೆ ಹನುಮಾನ್ ಚಾಲೀಸವನ್ನು ಪಠಿಸಿದರೆ ಅದರಿಂದ ದುಷ್ಟಶಕ್ತಿಗಳನ್ನು ದೂರ ಮಾಡಬಹುದು. ಇದು ತಿಳಿದೋ ಅಥವಾ ತಿಳಿಯದೆಯೋ ಜೀವನದಲ್ಲಿ ಮಾಡಿರುವ ಪಾಪವನ್ನು ನಿವಾರಣೆ ಮಾಡುವುದು.
  • ದೊಡ್ಡ ಮಟ್ಟದ ಸಾಧನೆ ಮಾಡಬೇಕಿದ್ದರೆ ಆಗ ಹನುಮಾನ್ ಚಾಲೀಸವನ್ನು ಮಂಗಳವಾರ, ಗುರುವಾರ, ಶನಿವಾರ ಮತ್ತು ಮೂಲ ನಕ್ಷತ್ರದ ದಿನದಂದು ಪಠಿಸಬೇಕು.
  • ರಾತ್ರಿ ವೇಳೆ ಹನುಮಾನ್ ಚಾಲೀಸ ಪಠಿಸಿದರೆ ಅದರಿಂದ ಒಳ್ಳೆಯ ಜೀವನದಲ್ಲಿ ಬರುವ ಎಲ್ಲಾ ರೀತಿಯ ಸಂಕಷ್ಟಗಳು ದೂರವಾಗುವುದು.
English summary

Hanuman Jayanti 2020: Secret Benefits of Chanting Hanuman Chalisa

Here we are discussing about Hanuman Jayanti 2020:time, puja vidhi, significance. Hanuman Jayanti is one of the famous Hindu festivals. It is celebrated on full moon day during Chaitra month. Read more.
X
Desktop Bottom Promotion