For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ:ಇಷ್ಟಾರ್ಥ ಸಿದ್ಧಿಗಾಗಿ ವಿಘ್ನವಿನಾಶಕನಿಗೆ ಈ ಫಲ-ಪುಷ್ಪಗಳನ್ನು ಅರ್ಪಿಸಿ

|

ವಿಘ್ನವಿನಾಶಕ ಗಣೇಶ, ಜ್ಞಾನದ ಅಧಿಪತಿ. ಯಾವುದೇ ಶುಭ ಸಮಾರಂಭ ಅಥವಾ ಯಾವುದೇ ಒಳ್ಳೆ ಕಾರ್ಯ ಮಾಡುವ ಮೊದಲು ಗಣೇಶನನ್ನೇ ಮೊದಲು ನೆನೆಯುವುದು, ಅವನನ್ನೇ ಮೊದಲ ಪೂಜಿಸುವುದು. ಏಕೆಂದರೆ ಯಾವುದೇ ವಿಘ್ನಗಳು ಬರದೇ ಇರುವಂತೆ ಕಾಪಾಡುತ್ತಾನೆಂಬ ನಂಬಿಕೆ.

ಈ ವರ್ಷ ಸೆಪ್ಟಂಬರ್ 10ರಂದು ಗಣೇಶ ಚತುರ್ಥಿ ಆರಂಭ. ಈ ದಿನ ಗಣನಾಯಕನನ್ನು ಆತನ ನೆಚ್ಚಿನ ಹೂವು-ಹಣ್ಣುಗಳಿಂದ ಪೂಜಿಸಿದರೆ, ಇಷ್ಟಾರ್ಥ ಸಿದ್ಧಿಯಾಗುವುದು. ಹಾಗಾದರೆ ಡೊಳ್ಳು ಹೊಟ್ಟೆ ಗಣಪನಿಗೆ ಯಾವ್ಯಾವ ಹೂವು-ಹಣ್ಣುಗಳು ಇಷ್ಟ ಎಂದು ಯೋಚನೆ ಮಾಡುತ್ತಿರುವವರಿಗಾಗಿ ನಾವಿಂದು ಮಾಹಿತಿ ನೀಡಲಿದ್ದೇವೆ.

ಗಣೇಶನಿಗೆ ಪ್ರಿಯವಾದ ಹೂವುಗಳು ಹಾಗೂ ಹಣ್ಣುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಗಣಪನಿಗೆ ಪ್ರಿಯವಾದ ಹೂವುಗಳು:

ಗಣಪನಿಗೆ ಪ್ರಿಯವಾದ ಹೂವುಗಳು:

ಗಜಾನನಿಗೆ ಎಲ್ಲ ಹೂವುಗಳಿಗಿಂತಲೂ ಪ್ರಿಯವಾದುದ್ದು ಎಂದರೆ, ಗರಿಕೆ ಹುಲ್ಲು. ತನ್ನೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಈ ಹುಲ್ಲನ್ನು ನೀಡಿ, ಬೇಡಿಕೊಂಡರೆ ಸಾಕು, ಆತ ತೃಪ್ತನಾಗುತ್ತಾನೆ. ಇದನ್ನು ಹೊರತುಪಡಿಸಿ, ಗಣೇಶನಿಗೆ ಇಷ್ಟವಾದ ಹೂವುಗಳ ಬಗ್ಗೆ ಇಲ್ಲಿದೆ ನೋಡಿ.

ಕೆಂಪು ದಾಸವಾಳ:

ಕೆಂಪು ದಾಸವಾಳ:

ಇದು ಗಣೇಶನ ನೆಚ್ಚಿನ ಹೂವಾಗಿದ್ದು, ಇದನ್ನು ಸಂಸ್ಕೃತದಲ್ಲಿ ಜಪಕುಸುಮ ಎಂದು ಕರೆಯಲಾಗುತ್ತದೆ. ಚೌತಿಯಂದು, ಗಣೇಶ ವಿಗ್ರಹಗಳಿಗೆ ಈ ಕೆಂಪು ದಾಸವಾಳ ಇಡುವುದನ್ನು ಎಲ್ಲಿಯೂ ತಪ್ಪಿಸುವುದಿಲ್ಲ. ಶತ್ರುಗಳ ಸಮೃದ್ಧಿ ಮತ್ತು ವಿನಾಶಕ್ಕಾಗಿ ಇದನ್ನು ಅರ್ಪಿಸಲಾಗುತ್ತದೆ.

ನಿತ್ಯ ಮಲ್ಲಿಗೆ:

ನಿತ್ಯ ಮಲ್ಲಿಗೆ:

ಈ ಹೂವುಗಳು ವರ್ಷಪೂರ್ತಿ ಲಭ್ಯವಿದ್ದು, ಗಣೇಶನಿಗೆ ಪ್ರಿಯವಾದ ಪುಷ್ಪಗಳಲ್ಲಿ ಒಂದಾಗಿದೆ. ಕುಟುಂಬದ ಐಕ್ಯತೆಗಾಗಿ ಇದನ್ನು ಗಣಪನಿಗೆ ಸಮರ್ಪಿಸಲಾಗುತ್ತದೆ.

ಗಿರಿಕರ್ಣಿಕೆ:

ಗಿರಿಕರ್ಣಿಕೆ:

ಈ ಹೂವನ್ನು ಶಂಖಪುಷ್ಪ, ಅಪರಾಜಿತ ಪುಷ್ಪ ಅಂತಲೂ ಕರೆಯುತ್ತಾರೆ. ವಿವಿಧ ಬಣ್ಣಗಳಲ್ಲಿ ಬರುವ ಈ ಹೂವಿನಲ್ಲಿ ಗಣೇಶನಿಗೆ ನೀಲಿ ಬಣ್ಣದ ಗಿರಿಕರ್ಣಿಕೆ ತುಂಬಾ ಇಷ್ಟ. ಬೇಗ ಮದುವೆ ಆಗಬೇಕು ಎನ್ನುವವರು ಗಣೇಶನಿಗೆ ಈ ಹೂವನ್ನು ನೀಡಬಹುದು.

ಚೆಂಡುಹೂ:

ಚೆಂಡುಹೂ:

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಈ ಹೂವನ್ನು ಸಾಮಾನ್ಯ ಭಾಷೆಯಲ್ಲಿ ಚೆಂಡು ಹೂ ಎಂದು ಕರೆಯಲಾಗುತ್ತದೆ. ಉತ್ತಮ ಆರೋಗ್ಯ ಪ್ರಾಪ್ತಿಗಾಗಿ ಗಣೇಶನಿಗೆ ಈ ಹೂವನ್ನು ನೀಡಬಹುದು.

ಹಳದಿ ಸೇವಂತಿಗೆ:

ಹಳದಿ ಸೇವಂತಿಗೆ:

ಗಣಪನಿಗೆ ಸೇವಂತಿಯಂದರೂ ಬಹಳ ಇಷ್ಟವಾಗಿದ್ದು, ಕೆಟ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳ ಕೆಟ್ಟ ಪರಿಣಾಮಗಳನ್ನು ತೆಗೆದುಹಾಕಲು ಹಳದಿ ಸೇವಂತಿಗೆಗಳನ್ನು ಗಣೇಶನಿಗೆ ಅರ್ಪಿಸಿ.

ಪಾರಿಜಾತ:

ಪಾರಿಜಾತ:

ಇದನ್ನು ಹವಳ ಮಲ್ಲಿಗೆ ಎಂದೂ ಕರೆಯುತ್ತಾರೆ. ಇದು ರಾತ್ರಿ ಅರಳಿ, ಹಗಲಿನಲ್ಲಿ ತನ್ನ ದಳಗಳನ್ನು ಉದುರಿಸುತ್ತದೆ. ವಿಶಿಷ್ಟವಾದ ಪರಿಮಳವನ್ನು ಹೊಂದಿರುವ ಈ ಪಾರಿಜಾತ ಹೂವನ್ನು ಮಕ್ಕಳ ಜೀವನ ಉತ್ತಮವಾಗಿರಲೆಂದು ಗಣೇಶನಿಗೆ ಅರ್ಪಿಸಬಹುದು.

ಗಣಪನಿಗೆ ಪ್ರಿಯವಾದ ಹಣ್ಣುಗಳು:

ಗಣಪನಿಗೆ ಪ್ರಿಯವಾದ ಹಣ್ಣುಗಳು:

ಬಾಳೆಹಣ್ಣು:

ಎಲ್ಲಾ ದೇವತೆಗಳಿಗೂ ಇಷ್ಟವಾಗುವ ಈ ಹಣ್ಣು ಗಣೇಶನಿಗೂ ತುಂಬಾ ಪ್ರಿಯವಾದುದ್ದು. ಪೂಜೆಯ ಸಂದರ್ಭದಲ್ಲಿ ಬಾಳೆಹಣ್ಣನ್ನು ಗಣೇಶನಿಗ ಅರ್ಪಿಸುವುದರಿಂದ ಆತ ಸಂತೋಷಗೊಳ್ಳುತ್ತಾನೆ.

ಹಲಸಿನ ಹಣ್ಣು:

ಹಲಸಿನ ಹಣ್ಣು:

ಗಣೇಶನ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಒಂದಾಗಿದ್ದು, ಸಂಪೂರ್ಣವಾಗಿ ಮಾಗಿದ ಹಣ್ಣನ್ನು ಅರ್ಪಿಸಲಾಗುತ್ತದೆ. ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯವನ್ನು ಕರುಣಿಸಲೆಂದು ನೀಡುವ ಹಣ್ಣು ಇದು.

ಮಾವಿನಹಣ್ಣು:

ಮಾವಿನಹಣ್ಣು:

ಇದು ಕೇವಲ ಗಣೇಶನಿಗೆ ಇಷ್ಟವಾದ ಹಣ್ಣು ಮಾತ್ರವಲ್ಲ, ಹೆಚ್ಚಿನ ಪೂಜಾ ಕಾರ್ಯಗಳಲ್ಲಿ ದೇವರಿಗೆ ಅರ್ಪಿಸಲಾಗುತ್ತದೆ. ಗಣೇಶನ ಪೂಜೆ ಮಾಡುವಾಗ ತಾಂಬೂಲದಲ್ಲಿ ಮಾವನ್ನು ಸಹ ಇಡಲಾಗುತ್ತದೆ.

ದಾಳಿಂಬೆ:

ದಾಳಿಂಬೆ:

ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಹಣ್ಣು ಗಣೇಶನ ಪ್ರಿಯವಾದ ಹಣ್ಣುಗಳಲ್ಲಿ ಒಂದು. ಆಕಾರ, ಗಾತ್ರ, ಬಣ್ಣ ಮತ್ತು ಬೀಜಗಳು ಜೀವನದ ವಿವಿಧ ಅಂಶಗಳನ್ನು ಬಿಂಬಿಸುತ್ತವೆ. ಆದ್ದರಿಂದ ಇದನ್ನು ದೀರ್ಘಾಯುಷ್ಯ, ವಿವಾಹ, ಸಂತಾನಭಾಗ್ಯದ ಸಂಕೇತವಾಗಿ ಗಣೇಶನಿಗೆ ಅರ್ಪಿಸಲಾಗುವುದು.

ತೆಂಗಿನ ಕಾಯಿ:

ತೆಂಗಿನ ಕಾಯಿ:

ತೆಂಗಿನಕಾಯಿ ಒಡೆಯದೆ ಯಾವುದೇ ಶುಭ ಕಾರ್ಯಗಳನ್ನು ಆರಂಭಿಸುವುದಿಲ್ಲ. ಇದರಿಂದ ದುಷ್ಟಶಕ್ತಿಗಳನ್ನು ದೂರಮಾಡಲಾಗುವುದು ಎಂದು ನಂಬಲಾಗಿದೆ. ಆದ್ದರಿಂದ ಈ ಮಂಗಳಕರವಾದ ಹಣ್ಣು ಗಣೇಶನಿಗೂ ಬಹಳ ಇಷ್ಟ.

English summary

Ganesha Chaturthi 2021: Favorite Flowers and Fruits of Lord Ganesha

Here we talking about Ganesha Chaturthi: Favorite Flowers and Fruits of Lord Ganesha, read on
X
Desktop Bottom Promotion