For Quick Alerts
ALLOW NOTIFICATIONS  
For Daily Alerts

Easter 2020 : ಈಸ್ಟರ್‌ ಆಚರಣೆ ಹಾಗೂ ಈಸ್ಟರ್ ಮೊಟ್ಟೆಯ ವಿಶೇಷತೆ

|

ಹ್ಯಾಪಿ ಈಸ್ಟರ್ 2020: ಈಸ್ಟರ್ ನ ಹಿಂದಿನ ಕಥೆಯು ಬೈಬಲ್ ನ ಹೊಸ ಒಡಂಬಡಿಕೆಯಲ್ಲಿದೆ, ಇದು ಯೇಸುವನ್ನು ದೇವರ ಮಗನೆಂದು ಕರೆಸಿಕೊಂಡಿದ್ದರಿಂದ, ರೋಮನ್ ಅಧಿಕಾರಿಗಳು ಅವನನ್ನು ಹೇಗೆ ಬಂಧಿಸಿದರು ಮತ್ತು ನಂತರ ಶಿಲುಬೆಗೇರಿಸಿದರು ಎಂಬುದನ್ನು ವಿವರಿಸುತ್ತದೆ. ಮೂರು ದಿನಗಳ ನಂತರ ಅವನ ಪುನರುತ್ಥಾನವು ಈ ಈಸ್ಟರ್ ಸಂದರ್ಭವನ್ನು ಸೂಚಿಸುತ್ತದೆ.

Easter Clebration 2020 Significance And History

ಈಸ್ಟರ್‌ ಕ್ರೈಸ್ತ ಸಮುದಾಯದವರು ಯೇಸುಕ್ರಿಸ್ತನು ಪುನಃ ಹುಟ್ಟಿಬಂದ ದಿನವನ್ನು ಸಂಭ್ರಮಿಸುವ ಆಚರಿಣೆಯಾಗಿದೆ. ಬೈಬಲ್ ನ ಹೊಸ ಒಡಂಬಡಿಕೆಯ/ ನಂಬಿಕೆಯ ಪ್ರಕಾರ, ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಈಸ್ಟರ್ ಸಂಭವಿಸುತ್ತದೆ. ಈಸ್ಟರ್ "ಪ್ಯಾಷನ್ ಆಫ್ ಕ್ರೈಸ್ಟ್ (ಕ್ರಿಸ್ತನ ಜೀವನದ ಕೊನೆಯ ದಿನಗಳು) ಕೊನೆಗೊಳಿಸಿ "ಲೆಂಟ್" ಎಂದು ಕರೆಯಲಾಗುವ ನಲವತ್ತು ದಿನಗಳ ಉಪವಾಸದ ಅವಧಿಯನ್ನು ಈ ವಾರ ಕೊನೆಗೊಳಿಸುತ್ತದೆ. ಶುಭ ಗುರುವಾರ (ಏಸು ಕ್ರಿಸ್ತನ ಕೊನೆಯ ರಾತ್ರಿ) ಮತ್ತು ಶುಭ ಶುಕ್ರವಾರ (ಗುಡ್ ಫ್ರೈಡೇ) ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ ಈ ವಾರದ ಭಾಗವಾಗಿದ್ದು ಇದು ಈಸ್ಟರ್ ಭಾನುವಾರದಂದು ಕೊನೆಗೊಳ್ಳುತ್ತದೆ.

ಇತಿಹಾಸ

ಇತಿಹಾಸ

ಈಸ್ಟರ್ ನ ಹಿಂದಿನ ಕಥೆ ಬೈಬಲ್ ನ ಹೊಸ ಒಡಂಬಡಿಕೆಯಲ್ಲಿದ್ದು ಇದು ಏಸು ತಾನು ದೇವರ ಮಗ ಎಂದು ಹೇಳಿದ್ದಕ್ಕಾಗಿ ಹೇಗೆ ರೋಮನ್ ಅಧಿಕಾರಿಗಳು ಏಸುವನ್ನು ಬಂಧಿಸಿದರು ಎಂಬುದರ ಬಗ್ಗೆ ವಿವರಣೆ ನೀಡುತ್ತದೆ. ಇದರ ನಂತರ ಏಸುವನ್ನು ರೋಮ್ ನ ದೊರೆ ಪೊಂಟಿಯಸ್ ಪಿಲಾತನ ಆದೇಶದ ಮೇರೆಗೆ ಶಿಲುಬೆಗೇರಿಸುವ ಮೂಲಕ ಮರಣದಂಡನೆಗೆ ಗುರಿಪಡಿಸಲಾಯಿತು. ಇದಾದ ಮೂರು ದಿನಗಳ ನಂತರ ಏಸುವಿನ ಪುನರುತ್ಥಾನವು ಯಹೂದಿಗಳ ಹಬ್ಬ ಪಾಸ್ ಓವರ್ ನ ಜೊತೆಗೂ ನಿಕಟ ಸಂಬಂಧ ಹೊಂದಿದೆ.

ಈಸ್ಟರ್ ಮೊಟ್ಟೆಗಳು

ಈಸ್ಟರ್ ಮೊಟ್ಟೆಗಳು

ಚಾಕೋಲೇಟ್ ನಿಂದ ಅಥವಾ ಸಿಹಿತಿನಿಸುಗಳಿಂದ ತುಂಬಿದ ಆಕರ್ಷಕ ಬಣ್ಣಗಳಿಂದ ಕೂಡಿದ ಮೊಟ್ಟೆಗಳು ಈಸ್ಟರ್ ನ ಸಮಯದ ಸಾಮಾನ್ಯವಾದ ಉಡುಗೊರೆಗಳಾಗಿವೆ. ಈಸ್ಟರ್ ನ ಕೊನೆಯ ವಾರ ಲೆಂಟ್ ನ ನಲವತ್ತು ದಿನಗಳ ಉಪವಾಸದ ಅವಧಿಯ ನಂತರ ಬರುವ ಕಾರಣ ಜನಗಳು ಮನಸ್ಸು ಬಿಚ್ಚಿ ಖರ್ಚು ಮಾಡುತ್ತಾರೆ.

ಈ ಅವಧಿಯ ಧಾರ್ಮಿಕ ಅಲ್ಲದ ಕೆಲವು ಆಚರಣೆಗಳೆಂದರೆ ಈಸ್ಟರ್ ಮೊಟ್ಟೆಗಳ ನಿಧಿ ಹುಡುಕಾಟ, ಮೊಟ್ಟೆಗಳ ಉರುಳಿಸುವಿಕೆ ಮತ್ತು ಮೊಟ್ಟೆಗಳ ಅಲಂಕಾರ.

ನಿಮಗಿದು ಗೊತ್ತೇ?

ನಿಮಗಿದು ಗೊತ್ತೇ?

ಗುಪ್ತ ಸಂದೇಶಗಳು ಅಥವಾ ಚಲನಚಿತ್ರಗಳಲ್ಲಿ, ಅಂತರ್ಜಾಲ ಆಟಗಳಲ್ಲಿ ಅಥವಾ ಇನ್ನಿತರ ಆಟಗಳಲ್ಲಿ ಇರುವ ಪಾಪ್ ಸಂಸ್ಕೃತಿಯ ಉಲ್ಲೇಖಗಳನ್ನೂ ಈಸ್ಟರ್ ಮೊಟ್ಟೆಗಳೆಂದೇ ಕರೆಯಲಾಗುತ್ತದೆ. ಇದಕ್ಕೆ ಕಾರಣ ಈಸ್ಟರ್ ಮೊಟ್ಟೆಗಳು ಈಸ್ಟರ್ ಹಬ್ಬದ ಅವಧಿಯಲ್ಲಿ ಮೊಟ್ಟೆಗಳ ಬೇಟೆಯ ಯೋಚನೆಯನ್ನು ಪ್ರತಿನಿಧಿಸುತ್ತದೆ.

ಮೊಟ್ಟೆಯಲ್ಲಿ ಅಡಗಿರುತ್ತವೆ ಸಂದೇಶಗಳು

ಮೊಟ್ಟೆಯಲ್ಲಿ ಅಡಗಿರುತ್ತವೆ ಸಂದೇಶಗಳು

ಮೊಟ್ಟೆಗಳಲ್ಲಿ ಅಡಗಿರುವ ಸಂದೇಶಗಳಾಗಿರಬಹುದು, ಪಾತ್ರಗಳಾಗಿರಬಹುದು ಅಥವಾ ಚಿತ್ರಗಳಾಗಿರಬಹುದು. ಇವುಗಳು ಸಾಫ್ಟ್ ವೇರ್ ಪ್ರೋಗ್ರಾಮರ್ ಗಳು ಅಥವಾ ನಿರ್ದೇಶಕರುಗಳು ಹಂಚಿಕೊಳ್ಳಬೇಕಾಗಿರುವ ಕೆಲವು ರಹಸ್ಯಗಳಾಗಿದ್ದು ಅವನ್ನು ವಿವೇಚನೆಯಿಂದ ಹಂಚಲಾಗುತ್ತದೆ. ಈ ಮೊಟ್ಟೆಗಳ ಹುಡುಕಾಟದಿಂದ ಆ ಪಾತ್ರಗಳ ಮತ್ತು ಕಥಾಸಾರದ ಬಗ್ಗೆ ಇನ್ನಷ್ಟು ವಿಷಯಗಳು ತಿಳಿಯುವುದರಿಂದ ಈ ಈಸ್ಟರ್ ಮೊಟ್ಟೆಗಳ ಮಹತ್ವ ಬಹಳ.

English summary

Easter Clebration 2020 Significance And History

Easter is around the corner and is very well known as the festival of eggs. Why are Easter eggs associated with this Christian festival? Before celebrating Easter, find out the history of Easter eggs.
X
Desktop Bottom Promotion