For Quick Alerts
ALLOW NOTIFICATIONS  
For Daily Alerts

ಮಹಾಲಯ ಅಮಾವಾಸ್ಯೆಯಂದು ತಪ್ಪಿಯೂ ಈ ಕೆಲಸ ಮಾಡಬೇಡಿ, ಈ ವಸ್ತುಗಳನ್ನು ತರಬೇಡಿ

|

ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ವಾದ ಮಹತ್ವವಿದೆ. ಆ ದಿನ ಗತಿಸಿದ ಹಿರಿಯರಿಗೆ ಪೂಜೆಯನ್ನು ಸಲ್ಲಿಸಿ, ಅವರಿಗೆ ಮೋಕ್ಷ ಸಿಗಲು ಹಾಗೂ ಪಿತೃ ದೋಷದಿಂದ ಮುಕ್ತರಾಗಲು ಶ್ರಾದ್ಧ ಮಾಡುವ ಪದ್ಧತಿ ಇದೆ.

ಮಹಾಲಯ ಅಮಾವಾಸ್ಯೆ ದಿನ ದೈವಾಧೀನರಾದ ಹಿರಿಯರನ್ನು ಸ್ಮರಿಸಿ ಅವರಿಗೆ ತರ್ಪಣ ನೀಡಲಾಗುವುದು. ಅವರಿಗೆ ತರ್ಪಣ ನೀಡುವುದರಿಂದ ಹಿಡಿದಿದ್ದ ದೋಷಗಳು ನಿವಾರಣೆಯಾಗುತ್ತದೆ, ಸಂತಾನ ಅಭಿವೃದ್ಧಿಯಾಗುತ್ತದೆ, ಆರೋಗ್ಯ, ಸಂಪತ್ತು ವೃದ್ಧಿಯಾಗುವುದು, ಕುಟುಂಬದಲ್ಲಿ ಶಾಂತಿ, ಸಂತೋಷ, ನೆಮ್ಮದಿ ಸಿಗುವುದು ಎಂಬ ನಂಬಿಕೆ ನಮ್ಮಲ್ಲಿದೆ.

ನಮ್ಮ ಪಿತೃದೋಷ ನಿವಾರಣೆ ಈ ಮಹಾಲಯ ಅಮಾವಾಸ್ಯೆ ತುಂಬಾ ಮಹತ್ವವಾದ ದಿನವಾದರು ಈ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು, ಮಾಡಿದರೆ ಅನಿಷ್ಟ ಉಂಟಾಗುವುದು ಎಂದು ಹಿರಿಯರು ಹೇಳುತ್ತಾರೆ. ಆ ಕಾರ್ಯಗಳೇನು ಎಂದು ನೋಡೋಣ:

ಕೋಪ ಮಾಡಿಕೊಳ್ಳಬಾರದು

ಕೋಪ ಮಾಡಿಕೊಳ್ಳಬಾರದು

ಪಿತೃಪಕ್ಷದ ದಿನ ಗತಿಸಿದ ಹಿರಿಯರಿಗೆ ಪೂಜೆ ಕಾರ್ಯಗಳನ್ನು ಮಾಡುವಾಗ ಶ್ರದ್ಧೆ ಭಕ್ತಿಯಿಂದ ಮಾಡಬೇಕು. ಅಲ್ಲದೆ ಆ ದಿನ ಮನೆಯಲ್ಲಿ ಯಾರೂ ಕೋಪಿಸಿಕೊಳ್ಳುವುದಾಗಲಿ, ಜಗಳವಾಡುವುದಾಗಲಿ ಮಾಡಬಾರದು. ಈ ದಿನ ಕೋಪಿಸಿಕೊಳ್ಳುವುದರಿಂದ ಕೆಡಕು ದೃಷ್ಟಿಯ ಪ್ರಭಾವಕ್ಕೆ ಒಳಗಾಗುವಿರಿ. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು.

ಒಂಟಿಯಾಗಿ ದೂರ ಪ್ರಯಾಣ ಮಾಡಬೇಡಿ

ಒಂಟಿಯಾಗಿ ದೂರ ಪ್ರಯಾಣ ಮಾಡಬೇಡಿ

ಸಾಮಾನ್ಯವಾಗಿ ಅಮಾವಾಸ್ಯೆ ದಿನ ರಾತ್ರಿ ಹೊತ್ತು ಹೊರಗಡೆ ಓಡಾಡುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದರಲ್ಲೂ ಮಹಾಲಯ ಅಮಾವಾಸ್ಯೆ ದಿನ ಒಂಟಿಯಾಗಿ ರಾತ್ರಿ ಹೊತ್ತು ದೂರ ಪ್ರಯಾಣ ಮಾಡುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಹೀಗೆ ಹೇಳುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳು ಇಲ್ಲವಾದರು ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ.

ಮಹಾಲಯ ಅಮಾವಾಸ್ಯೆ ದಿನ ಸ್ಮಶಾನ ಬಳಿ ಹೋಗಬೇಡಿ

ಮಹಾಲಯ ಅಮಾವಾಸ್ಯೆ ದಿನ ಸ್ಮಶಾನ ಬಳಿ ಹೋಗಬೇಡಿ

ನೆಗೆಟಿವ್ ಎನರ್ಜಿ ಎಂಬುವುದು ಇದೆ ಎಂಬುವುದನ್ನು ಜ್ಯೋತಿಷ್ಯ ಶಾಸ್ತ್ರ ಮಾತ್ರವಲ್ಲ, ವಿಜ್ಞಾನವೂ ಹೇಳುತ್ತದೆ. ಆದರೆ ವಿಜ್ಞಾನವು ಅದನ್ನು ಹೇಳುವ ರೀತಿ ಭಿನ್ನವಾಗಿದೆ. ಶಾಸ್ತ್ರಗಳ ಪ್ರಕಾರ ಮಹಾಲಯ ಅಮಾವಾಸ್ಯೆ ದಿನ ಸ್ಮಶಾನದಲ್ಲಿ ನೆಗೆಟಿವ್ ಎನರ್ಜಿ (ಋಣಾತ್ಮಕ ಶಕ್ತಿ ಅಧಿಕವಿರುತ್ತದೆ), ಇದು ಮನುಷ್ಯನ ಮೇಲೆ ಕೆಡಕು ಉಂಟು ಮಾಡುವುದು. ಇದು ಕೂಡ ಅಷ್ಟೇ ನಂಬುವುದು, ಬಿಡುವುದು ನಿಮ್ಮ ವೈಚಾರಿಕ ನಿಲುವಿಗೆ ಬಿಟ್ಟದ್ದು.

 ಮಾಂಸಾಹಾರ ಹಾಗೂ ಮದ್ಯ ಸೇವಿಸಬಾರದು

ಮಾಂಸಾಹಾರ ಹಾಗೂ ಮದ್ಯ ಸೇವಿಸಬಾರದು

ಮಹಾಲಯ ಅಮಾವಸ್ಯೆ ದಿನ ಮಾಂಸಾಹಾರ ಸೇವನೆ ಮಾಡಬಾರದು ಅಲ್ಲದೆ ತರ್ಪಣ ನೀಡುವ ಆಹಾರದಲ್ಲಿ ಮಾಂಸಾಹಾರ ಇರಬಾರದು.

ಶ್ರಾದ್ಧ ಮಾಡುವಾಗ ಯಾವ ಪಾತ್ರೆ ಬಳಸಬಾರದು

ಶ್ರಾದ್ಧ ಮಾಡುವಾಗ ಯಾವ ಪಾತ್ರೆ ಬಳಸಬಾರದು

ಶ್ರಾದ್ಧ ಕಾರ್ಯದಲ್ಲಿ ತರ್ಪಣ ನೀಡುವಾಗ ಸ್ಟೀಲ್, ಕಬ್ಬಿಣ, ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳನ್ನು ಬಳಸಬಾರದು. ಅಲ್ಲದೆ ಪೂಜೆಯಲ್ಲಿ ಘಂಟೆ ಬಳಸಬಾರದು.

ಹಿರಿಯರನ್ನು ಗೌರವಿಸಿ

ಹಿರಿಯರನ್ನು ಗೌರವಿಸಿ

ಪೂಜೆಗೆ ಹಾಗೂ ವ್ಯಕ್ತಿ ಪೂಜೆ ಮಾಡುವಾಗ ಯಾವುದೇ ಅಡಚಣೆ ಉಂಟು ಮಾಡಬಾರದು. ಅಲ್ಲದೆ ಮನೆಯಲ್ಲಿ ಹಿರಿಯರನ್ನು ಗೌರವಿಸಬೇಕು ಹಾಗೂ ಅವರ ಮನಸ್ಸಿಗೆ ಯಾವುದೇ ಕಾರಣಕ್ಕೆ ನೋವುಂಟು ಮಾಡಬಾರದು.

ಬಡವರನ್ನು ನಿಂದಿಸಬೇಡಿ

ಬಡವರನ್ನು ನಿಂದಿಸಬೇಡಿ

ಮಹಾಲಯ ಅಮಾವಾಸ್ಯೆ ದಿನ ಬಡವರನ್ನು ನಿಂದಿಸಬೇಡಿ, ನಿಂದಿಸಿದರೆ ಶನಿಯ ವಕ್ರದೃಷ್ಟಿ ಬಿದ್ದು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಯಾವ ವಸ್ತು ಮನೆಗೆ ತರಬಾರದು

ಯಾವ ವಸ್ತು ಮನೆಗೆ ತರಬಾರದು

ಮಹಾಲಯ ಅಮಾವಾಸ್ಯೆ ದಿನ ಕಬ್ಬಿಣದ ವಸ್ತುಗಳು, ಕಪ್ಪು ವಸ್ತ್ರ, ಉಪ್ಪು, ಚಪ್ಪಲಿ, ಶೂ ಇಂಥ ವಸ್ತುಗಳನ್ನು ಮನೆಗೆ ತರಬಾರದು.

ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ವಸ್ತುಗಳನ್ನು ತರಬೇಡಿ

ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ವಸ್ತುಗಳನ್ನು ತರಬೇಡಿ

ಮಹಾಲಯ ಅಮಾವಾಸ್ಯೆ ದಿನ ಪೆನ್ನು, ಪುಸ್ತಕ ಹೀಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅಲ್ಲದೆ ಕತ್ತರಿ, ಚಾಕು, ಕಪ್ಪು ಎಳ್ಳು ಇಂಥ ವಸ್ತುಗಳನ್ನು ತರಬಾರದು ಎಂಬ ನಂಬಿಕೆ ಇದೆ.

English summary

Don't Do These Mistakes On Mahalaya Amavasya In Kannada

There is a belief that on Mahalaya Amavasya day should not do certain things, here are more information about that...
Story first published: Monday, September 14, 2020, 18:00 [IST]
X