For Quick Alerts
ALLOW NOTIFICATIONS  
For Daily Alerts

'ಎ' ಅಕ್ಷರದಿಂದ ಆರಂಭವಾಗುವ ಹೆಸರಿನವರ ನಡವಳಿಕೆ ಹೀಗಿರುತ್ತದೆ ನೋಡಿ...

|
ನಿಮ್ಮ ಹೆಸರು ಎ ಅಕ್ಷರದಿಂದ ಶುರುವಾಗುತ್ತಾ? ಹಾಗಿದ್ರೆ ಈ ವಿಡಿಯೋ ನೋಡಿ | Oneindia Kannada

ನಿಮ್ಮ ಹೆಸರನ್ನು ನೋಡಿಯೇ ನೀವು ಎಂತವರು ಮತ್ತು ಯಾವ ರೀತಿಯ ನಡವಳಿಕೆ ಹೊಂದಿರುವ ವ್ಯಕ್ತಿ ಎಂದು ಹೇಳಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ನಿಮ್ಮ ಹೆಸರಿನ ಅಕ್ಷರವನ್ನು ನೋಡಿ, ನಿಮ್ಮ ಜಾತಕ ಬಿಟ್ಟಿಡಬಹುದು. ನಿಮ್ಮ ಹೆಸರಿನ ಮೊದಲ ಅಕ್ಷರದ ಉಚ್ಛಾರವು ರಾಶಿಚಕ್ರದ ಪರಿಣಾಮವನ್ನು ಪ್ರತಿಫಲಿಸುತ್ತದೆ ಎಂದು ಇದು ವೈದಿಕ ಜ್ಯೋತಿಷ್ಯವು ಹೇಳುತ್ತದೆ.

ಇದರಿಂದಾಗಿ ಭಾರತೀಯರು ಹೆಸರುಗಳು ಮತ್ತು ರಾಶಿಗಳು ವೈದಿಕ ಜ್ಯೋತಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ಅಕ್ಷರಕ್ಕೂ ಅದರದ್ದೇ ಆಗಿರುವಂತಹ ಅಂಕೆಯ ಮೌಲ್ಯವಿದ್ದು, ಇದರಿಂದ ವ್ಯಕ್ತಿಯ ವ್ಯಕ್ತಿತ್ವ ತಿಳಿಯಬಹುದು. ಇದು ವ್ಯಕ್ತಿಯ ಆಲೋಚನೆ, ಆಯ್ಕೆ ಮತ್ತು ನಿರ್ಧಾರದ ಮೇಲೆ ಪರಿಣಾಮ ಬೀರುವುದು. ಎ ಅಕ್ಷರದಿಂದ ಆರಂಭವಾಗುವಂತಹ ವ್ಯಕ್ತಿಗಳ ವ್ಯಕ್ತಿತ್ವವು ಹೇಗಿರಲಿದೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ.

ಪ್ರಾಯೋಗಿಕ

ಪ್ರಾಯೋಗಿಕ

ಎ ಅಕ್ಷರಿಂದ ಆರಂಭವಾಗುವಂತಹ ಹೆಸರಿನವರು ಯಾವಾಗಲೂ ತುಂಬಾ ಪ್ರಾಯೋಗಿಕವಾಗಿರುವರು ಎಂದು ಹೇಳಲಾಗುತ್ತದೆ. ಇವರು ತಮ್ಮ ಕಿವಿಯಲ್ಲಿ ಕೇಳಿದ ಅಥವಾ ಹೇಳಿದ ಮಾತನ್ನು ಹಾಗೆ ನಂಬುವುದಿಲ್ಲ. ಇವರು ತಮ್ಮ ಬುದ್ಧಿ ಉಪಯೋಗಿ ಮತ್ತೆ ನಿರ್ಧಾರ ಮಾಡುವರು. ಈಗಾಗಲೇ ಇರುವಂತಹ ಕೆಲವೊಂದು ನಿಯಮಗಳನ್ನು ಅವರು ನಂಬಲೇಬೇಕೆಂದಿಲ್ಲ ಮತ್ತು ನಿಯಮವನ್ನು ಉಲ್ಲಂಘಿಸುವಂತಹ ಕೆಲಸವು ಕೆಲವೊಮ್ಮೆ ನಡೆಯಬಹುದು. ಬೇರೆಯವರು ಹೇಳಿರುವ ವಿಚಾರವನ್ನು ನಂಬಲು ಅವರು ತುಂಬಾ ವಿಶ್ಲೇಷಣೆ ಮಾಡುವರು. ಇದರಿಂದಾಗಿ ಅವರು ತುಂಬಾ ಪ್ರಾಯೋಗಿಕವಾಗಿರುವರು.

ಬದ್ಧತೆ

ಬದ್ಧತೆ

ಇವರು ಒಮ್ಮೆ ಗುರಿಯ ಬಗ್ಗೆ ನಿರ್ಧರಿಸಿದರೆ, ಅದರಿಂದ ವಿಮುಖರಾಗುವ ಅಥವಾ ಬದಲಾಯಿಸುವ ಪ್ರಶ್ನೆಯೇ ಇಲ್ಲ. ತಮ್ಮ ಗುರಿ ಸಾಧಿಸಿದ ಬಳಿಕ ಅವರು ನಿಲ್ಲುವರು. ಯಾಕೆಂದರೆ ಇವರು ತುಂಬಾ ಬದ್ಧತೆ ಪ್ರದರ್ಶಿಸುವರು. ಈ ಕಾರಣದಿಂದಾಗಿ ತಮ್ಮ ಗುರಿ ಸಾಧಿಸಲು ಇವರಿಗೆ ಹೆಚ್ಚಿನ ಆತ್ಮವಿಶ್ವಾಸವಿರುವುದು. ಕೆಲವೊಂದು ಸಲ ಬದ್ಧತೆಯು ಅತಿಯಾದಾಗ ಇವರು ತುಂಬಾ ಹಠ ಮಾರಿಯಾಗುವರು.

Most Read: ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

ತಾಳ್ಮೆ

ತಾಳ್ಮೆ

ಇವರಲ್ಲಿ ತಾಳ್ಮೆಯು ತುಂಬಾ ಒಳ್ಳೆಯ ಗುಣವಾಗಿರುವುದು. ಎ ಅಕ್ಷರದಿಂದ ಹೆಸರು ಆರಂಭವಾಗುವಂತಹವರಲ್ಲಿ ಬೇರೆಯವರಿಗಿಂತ ಹೆಚ್ಚಿನ ತಾಳ್ಮೆ ಇರುವುದು. ಇವರು ಒಂದು ಸಲ ಕಠಿಣ ಪರಿಶ್ರಮ ವಹಿಸಿದ ಬಳಿಕ ಫಲಿತಾಂಶಕ್ಕಾಗಿ ಕಾಯುವರು. ಯಾಕೆಂದರೆ ಒಳ್ಳೆಯ ವಿಚಾರಗಳಿಗೆ ಸಮಯಬೇಕಾಗುತ್ತದೆ ಎಂದು ಅವರಿಗೆ ತಿಳಿದಿದೆ. ಒಳ್ಳೆಯ ಆಹಾರ ತಯಾರಿಸುತ್ತೇವೆಂದು ಹೇಳಿದರೆ ಆಗ ಅವರು ಎಷ್ಟು ಸಮಯ ಬೇಕಿದ್ದರೂ ಕಾಯಬಹುದು. ಇವರು ತಾಳ್ಮೆಯಿಂದಾಗಿ ಕೆಲವೊಂದು ಸಲ ಇವರನ್ನು ಆಲಸಿ ಎಂದು ಕರೆಯುವುದು ಇದೆ.

Most Read: ಸಕ್ಕರೆ ಬಾಯಿಗೆ ಸಿಹಿ ಮಾತ್ರವಲ್ಲ, ಡ್ಯಾಂಡ್ರಫ್ ಕೂಡ ನಿವಾರಿಸುವುದು!

ಸಭ್ಯ

ಸಭ್ಯ

ನೀವು ಭೇಟಿಯಾಗಿರುವಂತಹ ವ್ಯಕ್ತಿಯು ಅವರ ಸಭ್ಯತೆಯಿಂದಾಗಿ ನಿಮ್ಮನ್ನು ಆಕರ್ಷಿಸಿದ್ದಾರೆಯಾ? ನಿಮಗೆ ಹೀಗೆ ಆಗಿದ್ದರೆ ಆಗ ಖಂಡಿತವಾಗಿಯೂ ಆತನ ಹೆಸರು ಎ ಅಕ್ಷರದಿಂದ ಆರಂಭವಾಗುತ್ತಿರಬೇಕು. ಎ ಅಕ್ಷರದಿಂದ ಹೆಸರು ಆರಂಭವಾಗುವಂತಹ ವ್ಯಕ್ತಿಗಳು ತುಂಬಾ ಸಭ್ಯರಾಗಿರುವರು. ಅವರ ಒಳಮನಸ್ಸಿನಲ್ಲಿ ನಿಮ್ಮ ಬಗ್ಗೆ ಹಲವಾರು ತೀರ್ಪು ಮತ್ತು ಅಭಿಪ್ರಾಯಗಳಿರುವುದು. ಆದರೆ ಇದನ್ನು ಹೇಳದೆ ತುಂಬಾ ಸಭ್ಯವಾಗಿ ವರ್ತಿಸುವರು.

ಮುಕ್ತ ಮನಸ್ಸಿನವರು

ಮುಕ್ತ ಮನಸ್ಸಿನವರು

ಎ ಅಕ್ಷರದಿಂದ ಆರಂಭವಾಗುವ ಹೆಸರಿನವರ ಪ್ರಶಂಸೆ ಮಾಡಬಹುದಾದ ಮತ್ತೊಂದು ಒಳ್ಳೆಯ ನಡತೆಯೆಂದರೆ ಇವರು ಮುಕ್ತ ಮನಸ್ಸಿನವರು. ಇವರು ಸಮಾಜದ ಬಗ್ಗೆ ಚಿಂತೆ ಮಾಡಲ್ಲ, ಇವರು ಯಾರ ಬಗ್ಗೆಯೂ ತೀರ್ಪು ನೀಡಲ್ಲ ಮತ್ತು ಸಮಾಜದಲ್ಲಿನ ವ್ಯವಸ್ಥೆ ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ. ಇವರಿಗೆ ತಮ್ಮದೇ ಆಗಿರುವ ಅಭಿಪ್ರಾಯವಿದ್ದು, ಉದಾರವಾದಿಯಂತೆ ಕಾಣುವರು. ಪ್ರತಿಯೊಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಬದುಕುವ ಹಕ್ಕಿದೆ ಎಂದು ನಂಬಿರುವವರು. ಇವರು ತಮ್ಮ ಸಂಗಾತಿಗೆ ಕೆಲವೊಂದು ಕಟ್ಟಪಾಡುಗಳನ್ನು ವಿಧಿಸುವರು. ಆದರೆ ಇವರು ಸರಿಯಾಗಿ ಅರ್ಥ ಮಾಡಿಕೊಳ್ಳುವರು. ಇವರು ತುಂಬಾ ಪ್ರೋತ್ಸಾಹ ನೀಡುವಂತಹ ವ್ಯಕ್ತಿತ್ವದವರು.

English summary

Does Your Name Start With The Letter 'A' ?

Astrology can tell about the personality of a person through the name of the person just by knowing the first letter of the word. According to Vedic astrology, the initial letter of the name determines the effect of a particular zodiac on the person. Based on numerology too, we can find out about his personality.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more