ಅಶ್ವತ್ಥ ಮರದಲ್ಲಿ ಹಲವು ದೇವತೆಗಳ ವಾಸ... ತಪ್ಪದೇ ಪೂಜಿಸಿ

By: manu
Subscribe to Boldsky

ನಮ್ಮ ಹಿಂದೂ ಸಂಸ್ಕೃತಿಯ ಆಚಾರ-ವಿಚಾರಗಳಿಗೆ ತನ್ನದೇ ಆದ ಶ್ರೇಷ್ಠತೆ ಹಾಗೂ ಹಿನ್ನೆಲೆಗಳಿವೆ. ಅಲ್ಲದೆ ಕೆಲವು ಗಿಡ ಮರಗಳಿಗೆ ಆಧ್ಯಾತ್ಮಿ ಶಕ್ತಿ ಇರುವುದನ್ನು ಸಹ ನಾವು ಕಾಣಬಹುದು. ಅಂತಹವುಗಳಲ್ಲಿ ಅಶ್ವತ್ಥ ಮರವೂ ಒಂದು. ಈ ಮರದಲ್ಲಿ ದೇವತೆಗಳು ವಾಸಿಸುತ್ತಾರೆ. ಹಾಗಾಗಿ ಎಲ್ಲಾ ಸಮಯದಲ್ಲೂ ಈ ಮರದ ಬಳಿ ಇರಬಾರದು ಎನ್ನುವ ಪ್ರತೀತಿ ಇದೆ. ಈ ನಂಬಿಕೆಗೆ ಸಾಕ್ಷಿಯಾಗಿ ಒಂದು ಕಥೆ ಇರುವುದನ್ನು ನಾವು ನೋಡಬಹುದು.

ಬ್ರಹ್ಮ ಪುರಾಣದ ಪ್ರಕಾರ, ದುಷ್ಟ ಶಕ್ತಿಗಳು ಆಗಾಗ ದೇವತೆಗಳ ವಿರುದ್ಧ ದಂಗೆ ಏಳುತ್ತಿದ್ದವು. ದುಷ್ಟ ಶಕ್ತಿಗಳಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಉದ್ದೇಶದಿಂದ, ಭಗವಂತನಾದ ವಿಷ್ಣುವು ಎಲ್ಲಾ ದೇವತೆಗಳಿಗೆ ಅಶ್ವತ್ಥ ಮರದ ಹಿಂದೆ ಅಡಗಿ ಕೊಳ್ಳಲು ಹೇಳಿದನು. ವಿಷ್ಣುವಿನ ಮಾತಿನಂತೆ ಎಲ್ಲಾ ದೇವತೆಗಳು ಮರದ ಒಂದೊಂದು ಭಾಗದಲ್ಲಿ ಒಬ್ಬೊಬ್ಬರಂತೆ ಅವಿತು ಕುಳಿತರು. 

ಇತಿಹಾಸ ಪುರಾಣಗಳಲ್ಲಿಯೇ 'ವೃಕ್ಷಾರಾಧನೆ' ಬೇರೂರಿದೆ...

ಆದರೆ ಲಕ್ಷ್ಮಿ ಮಾತ್ರ ಮರದ ಬುಡದಲ್ಲಿ ಕುಳಿತಳು. ಹಾಗಾಗಿಯೇ ಈ ಮರದ ಆರಾಧನೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತದೆ. ಶಾಸ್ತ್ರವು ಅಶ್ವತ್ಥ ಮರದ ಬಳಿ ಹೋಗುವುದು ಮತ್ತು ಅದರ ಪೂಜೆ ಮಾಡುವುದಕ್ಕೆ ನಿಗದಿತ ಸಮಯವನ್ನು ಹೇಳುತ್ತದೆ. ಹಾಗಾದರೆ ಅದು ಯಾವ ಸಮಯ ಎನ್ನುವ ವಿಚಾರ ಇಲ್ಲಿದೆ....   

ಪದ್ಮ ಪುರಾಣ

ಪದ್ಮ ಪುರಾಣ

ಪದ್ಮ ಪುರಾಣದ ಪ್ರಕಾರ ಸೂರ್ಯೋದಯಕ್ಕಿಂತ ಮುಂಚೆ ಅಶ್ವತ್ಥ ಮರದ ಬಳಿ ಹೋಗಬಾರದು. ಹಾಗೊಮ್ಮೆ ಹೋದರೆ ಜೀವನದಲ್ಲಿ ಬಡತನ ಎದುರಾಗುವುದು. ಈ ಮರದ ಪೂಜೆಗೆ ಸೂಕ್ತ ಕಾಲವೆಂದರೆ ಸೂರ್ಯೋದಯದ ನಂತರದ ಕಾಲ. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ಇಲ್ಲಿಯೇ ನೆಲೆಸುತ್ತಾಳೆ. ಆ ವೇಳೆ ಪೂಜಿಸಿದವರಿಗೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.

ಶ್ರೀಕೃಷ್ಣನ ಸ್ಥಾನ

ಶ್ರೀಕೃಷ್ಣನ ಸ್ಥಾನ

ಋಷಿ ಮುನಿಗಳ ನಡುವೆ ನಾರದ ಮಹರ್ಷಿಗಳು ಇರುವಂತೆ, ಶ್ರೀಕೃಷ್ಣನು ಅಶ್ವತ್ಥಮರದಲ್ಲಿ ನೆಲೆಸಿದ್ದಾನೆ. ಹಾಗಾಗಿ ಈ ಮರವನ್ನು ಆರಾಧಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು.

ಸ್ಕಂದ ಪುರಾಣ

ಸ್ಕಂದ ಪುರಾಣ

ಶನಿ ದೇವರಿಗೆ ಸಂಬಂಧಿಸಿದಂತೆ ವ್ಯಕ್ತಿಗೆ ಸಾಡೇ ಸಾತಿ ಸಂಧಿ ನಡೆಯುತ್ತಿದ್ದರೆ, ಪ್ರತಿ ಶನಿವಾರ ಸಂಜೆ ಮರವನ್ನು ಪ್ರದಕ್ಷಿಣೆ ಹಾಕಿ ಪೂಜಿಸಬೇಕು. ಆಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ...

'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

ಪುಣ್ಯ ಪ್ರಾಪ್ತಿ

ಪುಣ್ಯ ಪ್ರಾಪ್ತಿ

ಈ ಮರದ ಆರಾಧನೆ ಕೇವಲ ಕಲ್ಪನೆ ಅಥವಾ ನಂಬಿಕೆಗೆ ಸೀಮಿತವಾಗಿಲ್ಲ. ಇದರ ಆರಾಧನೆಯಿಂದ ಆರೋಗ್ಯ ಮತ್ತು ಇತರ ಒಳ್ಳೆಯ ಪ್ರಯೋಜನಗಳು ಉಂಟಾಗುವುದು ಎನ್ನಲಾಗುತ್ತದೆ.

English summary

Do Not Go Near A Peepal Tree During This Time Of The Day

According to Brahma Purana, Lord Vishnu is said to have hidden in the Peepal tree when the demons had defeated all the Gods. His consort, goddess Lakshmi sits under the tree, thus increasing the significance of its worship.
Subscribe Newsletter