For Quick Alerts
ALLOW NOTIFICATIONS  
For Daily Alerts

ಧನತ್ರಯೋದಶಿ 2021: ಲಕ್ಷ್ಮಿ ಪೂಜೆಗೆ ಶುಭ ಸಮಯ ಯಾವಾಗ? ಫುಜಾ ವಿಧಿಗಳೇನು?

|

ಚಿನ್ನವೆಂಬುವುದು ಒಂದು ಸಂಪತ್ತು. ಈ ಚಿನ್ನವನ್ನು ಕೆಲವೊಂದು ವಿಶೇಷ ದಿನಗಳಲ್ಲಿ ಖರೀದಿ ಮಾಡಿದರೆ ಚಿನ್ನದ ಸಂಪತ್ತು ನಮ್ಮ ಮನೆಯಲ್ಲಿ ವೃದ್ಧಿಯಾಗುವುದು ಎಂಬ ನಂಬಿಕೆ. ಆದ್ದರಿಂದಲೇ ಚಿನ್ನವನ್ನು ಅಕ್ಷಯ ತೃತೀಯ, ಧನ್‌ತೆರೇಸ್‌ ಅಥವಾ ಧನತ್ರಯೋದಶಿ ಈ ದಿನಗಳಲ್ಲಿ ಕೊಳ್ಳಲಾಗುವುದು.

ಧನತ್ರಯೋದಶಿ ದೀಪಾವಳಿ ಸಂದರ್ಭದಲ್ಲಿ ಬರುವುದು. ಈ ವರ್ಷ ನವೆಂಬರ್‌ 2ರಂದು ಬಂದಿದೆ. ಈ ದಿನ ಚಿನ್ನ, ಬೆಳ್ಳಿ ಹಾಗೂ ಹೊಸ ಪಾತ್ರೆಗಳನ್ನು ಕೊಳ್ಳುವುದರಿಂದ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.

ಧನತ್ರಯೋದಶಿ ದಿನ ಪೂಜಾ ಮುಹೂರ್ತ, ತಿಥಿ ಪ್ರಾರಂಭ, ತಿಥಿ ಮುಕ್ತಾಯ ಯಾವ ಸಮಯದಲ್ಲಿ ಚಿನ್ನ ತೆಗೆದರೆ ಒಳ್ಳೆಯದು ಎಂಬೆಲ್ಲಾ ಮಾಹಿತಿ ತಿಳಿಯೋಣ:

ಧನತ್ರಯೋದಶಿ ಪೂಜಾ ಮುಹೂರ್ತ

ಧನತ್ರಯೋದಶಿ ಪೂಜಾ ಮುಹೂರ್ತ

ಯಮ ದೀಪಂ: ನವೆಂಬರ್ 2, 2021 ಮಂಗಳವಾರ

ಸಂಜೆ 06:48ರಿಂದ 08:29ರವರೆಗೆ

ಪ್ರದೋಷ ಕಾಲ: ಸಂಜೆ 06:01 ರಿಂದ 08:29ರವರೆಗೆ

ವೃಷಭ ಕಾಲ: ಸಂಜೆ 06:48 ರಿಂದ ರಾತ್ರಿ 08:51ರವರೆಗೆ

ತ್ರಯೋದಶಿ ತಿಥಿ ಪ್ರಾರಂಭ: ನವೆಂಬರ್ 2 ಬೆಳಗ್ಗೆ 11:31ರಿಂದ

ತ್ರಯೋದಶಿ ತಿಥಿ ಮುಕ್ತಾಯ: ನವೆಂಬರ್ 3, ಬೆಳಗ್ಗೆ 09:02ಕ್ಕೆ

2021 ಧನ್‌ತೆರೇಸ್‌ ಇತಿಹಾಸ ಹಾಗೂ ಪೂಜಾ ವಿಧಿ

2021 ಧನ್‌ತೆರೇಸ್‌ ಇತಿಹಾಸ ಹಾಗೂ ಪೂಜಾ ವಿಧಿ

ದೀಪಾವಳಿಯ ಮೊದಲ ದಿನವೇ ಧನ್‌ತೆರೇಸ್‌ ಅಥವಾ ಧನತ್ರಯೋದಶಿ. ದೀಪಾವಳಿ ಎಂಬುವುದು 5 ದಿನಗಳ ಆಚರಣೆ. ಮೊದಲನೇ ದಿನ ಅಂದರೆ ಧನ್‌ತ್ರಯೋದಶಿಯಂದು ಕ್ಷೀರ ಸಮುದ್ರದಿಂದ ಲಕ್ಷ್ಮಿ ಹುಟ್ಟಿ ಬಂದಳು ಎಂಬ ಪೌರಾಣಿಕ ಕತೆಯಿದೆ. ಈ ದಿನ ಲಕ್ಷ್ಮಿ ಜೊತೆ ಕುಬೇರನನ್ನು ಕೂಡ ಪೂಜಿಸಲಾಗುವುದು. ತ್ರಯೋದಶಿಯಂದು ಲಕ್ಷ್ಮಿ ಪೂಜೆ ಮಾಡಿದರೆ ಶುಭ ಎಂದು ಹೇಳಲಾಗುವುದು. ಆದರೆ ಧನತ್ರಯೋದಶಿ ಬಳಿಕ ಬರುವ ಅಮವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಿದರೆ ಹೆಚ್ಚು ಶುಭಕರ ಎಂದು ಪರಿಗಣಿಸಲಾಗಿದೆ.

ಲಕ್ಷ್ಮಿ ಪೂಜೆಯನ್ನು ಈ ಸಮಯದಲ್ಲಿ ಮಾಡಿ

ಲಕ್ಷ್ಮಿ ಪೂಜೆಯನ್ನು ಈ ಸಮಯದಲ್ಲಿ ಮಾಡಿ

ಧನ್‌ತೆರೇಸ್‌ ಅಥವಾ ಧನತ್ರಯೋದಶಿಯಂದು ಲಕ್ಷ್ಮಿ ಪೂಜೆಯನ್ನು ಪ್ರದೋಷ ಕಾಲದಲ್ಲಿ ಮಾಡಬೇಕು. ಪ್ರದೋಷ ಕಾಲ ಸೂರ್ಯಾಸ್ತದ ಬಳಿಕ ಪ್ರಾರಂಭವಾಗುವುದು. ಈ ಸಮಯ 2 ಗಂಟೆ 24 ನಿಮಿಷ ಇರುತ್ತದೆ.

ಯಾವ ಸಮಯದಲ್ಲಿ ಮಾಡಬಾರದು?

ಯಾವ ಸಮಯದಲ್ಲಿ ಮಾಡಬಾರದು?

ಲಕ್ಷ್ಮಿ ಪೂಜೆಯನ್ನು ಚೋಘಾಡ್ಯ ಮುಹೂರ್ತದಲ್ಲಿ ಮಾಡಬಾರದು. ಈ ಸಮಯ ಏನಿದ್ದರೂ ಪ್ರಯಾಣ ಮಾಡೋಕೆ ಅಷ್ಟೇ ಸೂಕ್ತ. ಲಕ್ಷ್ಮಿ ಪೂಜೆಯನ್ನು ಸ್ಥಿರ ಲಗ್ನದಲ್ಲಿ ಮಾಡಬೇಕು. ಆಗ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾಗುವುದು. ಆದ್ದರಿಂದ ಲಕ್ಷ್ಮಿ ಪೂಜೆ ಪ್ರದೋಷ ಕಾಲದಲ್ಲಿ ಮಾಡಬೇಕು.

English summary

Dhanteras 2021 Date, Time, Tithi, Puja Vidhi, Shubh Muhurat, History, Story and Significance

Dhanteras 2021 Date, Time, Tithi, Puja Vidhi, Shubh Muhurat, History, Story and Significance...
X
Desktop Bottom Promotion