ಈ ದೇವಸ್ಥಾನದಲ್ಲಿ ಒಂದು ರಾತ್ರಿ ಕಳೆದರೆ, ಅವರು ಕಲ್ಲಾಗಿ ಬಿಡುತ್ತಾರೆ!

Posted By: Arshad
Subscribe to Boldsky

ರಾಜಸ್ಥಾನದ ಬರ್ಮಾರ್ ಜಿಲ್ಲೆಯಲ್ಲಿರುವ ಜಿಲ್ಲಾಕೇಂದ್ರದಿಂದ ಸುಮಾರು ಮೂವತ್ತೈದು ಕಿ.ಮೀ ದೂರದಲ್ಲಿ ಮರುಭೂಮಿಯ ವಿಸ್ತಾರದ ನಡುವೆ ಎಲ್ಲೋ ಒಂದು ಚುಕ್ಕೆಯಂತಿರುವ ಕಿರಾಡು (ಹಿಂದೆ ಕಿರಾಡ್ ಕೋಟ್ ಎಂದು ಕರೆಯಲ್ಪಡುತ್ತಿತ್ತು) ಎಂಬ ಪ್ರದೇಶದಲ್ಲಿ ಪಂಚ ದೇವಾಲಯಗಳ ಸಮುಚ್ಛಯವೊಂದಿದೆ. ಅತ್ಯಂತ ಸುಂದರ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯಗಳಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ ನರಮನುಷ್ಯರ ಇರುವಿಕೆ ಸೊನ್ನೆಯಾಗುತ್ತದೆ!

ಕೆಟ್ಟ ಚಟಗಳನ್ನು ಓಡಿಸಿ, ಮಹಿಳೆಯರನ್ನು ಆರಾಧಿಸುವ ದೇಗುಲವಿದು!

ಅಂದರೆ ಯಾರಿಗೂ ರಾತ್ರಿಯ ಹೊತ್ತು ಈ ದೇವಾಲಯಗಳಿಗೆ ಪ್ರವೇಶಿಸುವ ಧೈರ್ಯವಿರುವುದಿಲ್ಲ. ಇದಕ್ಕೆ ಕಾರಣ ಈ ದೇವಾಲಯಕ್ಕೆ ತಟ್ಟಿರುವ ಶಾಪ. ರಾತ್ರಿ ಈ ಸ್ಥಳದಲ್ಲಿರುವ ಯಾರೇ ಆದರೂ ಬೆಳಿಗ್ಗೆದ್ದಾಗ ಕಲ್ಲಾಗಿಬಿಡುತ್ತಾರೆ ಎಂಬ ಶಾಪ. ಆದರೆ ಈ ಶಾಪಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಯಾವುದೇ ಶಾಸನ, ಕಥೆ ಅಥವಾ ಗ್ರಂಥದಲ್ಲಿ ಉಲ್ಲೇಖವಿಲ್ಲ..... ಮುಂದೆ ಓದಿ

ಭಾರತೀಯ ಇತಿಹಾಸದ ಕೆಲವು ಪ್ರಮುಖ ಶಾಪಗ್ರಸ್ತ ಸ್ಥಳಗಳು

ಭಾರತೀಯ ಇತಿಹಾಸದ ಕೆಲವು ಪ್ರಮುಖ ಶಾಪಗ್ರಸ್ತ ಸ್ಥಳಗಳು

ವಾರಣಾಸಿಯ ಕಾಶಿ ವಿಶ್ವನಾಥನ ದೇವಾಲಯಕ್ಕೆ ಭಗವಂತ ಶಿವನೇ ನೀಡಿರುವ ವರ, ಪುಣೆಯ ಖ್ಯಾತ ಶನೀಶ್ವರವಾಡಾ ದೇವಾಲಯಕ್ಕೆ ತಟ್ಟಿರುವ ಶಾಪ, ಭಂಗರ್ತ್ ಕೋಟೆಯ ನಿಗೂಢ ಕಥೆಗಳು, ವೃಂದಾವನ ನಿಧಿರಥದ ಬಗ್ಗೆ ಇನ್ನೂ ಬಗೆಹರಿಯದ ರಹಸ್ಯ, ಇಂತಹ ಹಲವಾರು ಸ್ಥಳಗಳು ಭಾರತದಲ್ಲಿವೆ.

ಮನುಷ್ಯರನ್ನು ರಾತ್ರೋರಾತ್ರಿ ಕಲ್ಲಾಗಿಸುವ ಶಾಪ!

ಮನುಷ್ಯರನ್ನು ರಾತ್ರೋರಾತ್ರಿ ಕಲ್ಲಾಗಿಸುವ ಶಾಪ!

ರಾಜಸ್ಥಾನದ ಈ ದೇವಾಲಯಕ್ಕೆ ತಟ್ಟಿರುವ ಶಾಪ ಎಷ್ಟು ಪ್ರಬಲವಾಗಿದೆ ಎಂದರೆ ರಾತ್ರಿ ಹೊತ್ತು ಈ ದೇವಾಲಯವನ್ನು ಪ್ರವೇಶಿಸಿ ಇಡಿಯ ರಾತ್ರಿ ಇರಬಯಸುವವರು ಕಲ್ಲಾಗುತ್ತಾರೆ!

ಕಿರಾಡು ಬಗ್ಗೆ ಇರುವ ಕಥೆಗಳು

ಕಿರಾಡು ಬಗ್ಗೆ ಇರುವ ಕಥೆಗಳು

ಈ ದೇವಾಲಯಗಳಿರುವ ಪ್ರದೇಶ ಎಷ್ಟು ಸುಂದರವಾಗಿದೆ ಎಂದರೆ ಇಲ್ಲಿ ಬಂದವರು ಇನ್ನೂ ಹೆಚ್ಚು ಕಾಲ ಇರಬಯಸುತ್ತಾರೆ. ಆದರೆ ರಾತ್ರಿಯ ಶಾಪದ ಬಗ್ಗೆ ಇರುವ ಮಾಹಿತಿ ಎಷ್ಟು ಪ್ರಬಲವಾಗಿದೆ ಎಂದರೆ ಯಾರೂ ರಾತ್ರಿ ಇಲ್ಲಿ ಉಳಿಯುವ ಪ್ರಯತ್ನ ಮಾಡುವುದಿಲ್ಲ.

ನಿಮ್ಮಲ್ಲಿ ಸಾಕಷ್ಟು ಕುತೂಹಲ ಮೂಡಿಸುವ ದೇವಾಲಯವಿದು!

ನಿಮ್ಮಲ್ಲಿ ಸಾಕಷ್ಟು ಕುತೂಹಲ ಮೂಡಿಸುವ ದೇವಾಲಯವಿದು!

ಈ ಸ್ಥಳಕ್ಕೆ ತಲುಪಲು ರಸ್ತೆಯ ವ್ಯವಸ್ಥೆಯನ್ನು ಈಗ ಕಲ್ಪಿಸಲಾಗಿದೆ. ಆದರೆ ಈ ಸ್ಥಳವನ್ನು ತಲುಪಿದ ಬಳಿಕ ಈ ದೇವಾಲಯದ ಅಕ್ಕ ಪಕ್ಕ ಯಾವುದೇ ಗಿಡಮರಗಳಾಗಲೀ, ನೀರಿನ ಸೆಲೆಯಾಗಲೀ, ಮಾನವರ ವಾಸಸ್ಥಳವಾಗಲೀ ಇಲ್ಲದೇ ಇರುವುದು ಮೊತ್ತ ಮೊದಲಿಗೆ ನಿಮ್ಮಲ್ಲಿ ಕುತೂಹಲ ಹುಟ್ಟಿಸುತ್ತದೆ. ಈ ದೇವಾಲಯದ ಆವರಣವನ್ನು ಪ್ರವೇಶಿಸಲು ದೊಡ್ಡದಾದ ಪ್ರವೇಶದ್ವಾರವನ್ನು ಸ್ಥಾಪಿಸಿದ್ದರೂ ಇದನ್ನು ಶತಮಾನಗಳ ಹಿಂದೆಯೇ ಬೀಗ ಹಾಕಲಾಗಿದೆ.

ದೇವಾಲಯಕ್ಕೆ ಪ್ರವೇಶ ಪಡೆಯಬಯಸುವವರು ಪಕ್ಕದ ಚಿಕ್ಕ ದ್ವಾರದ ಮೂಲಕವೇ ಒಬ್ಬೊಬ್ಬರಾಗಿ ಒಳಗಡಿಯಿಡಬೇಕು.

Image Courtesy

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ ಕಿರಾಡು ಹಿಂದೆ ಕಿರಾಡ್ಕೋಟ್ ಎಂದು ಕರೆಯಲ್ಪಡುತ್ತಿತ್ತು. ಈ ಪ್ರದೇಶವನ್ನು ಆರನೆಯ ಶತಮಾನದಿಂದ ರಾಜಪೂತ ವಂಶದ ಕಿರಾಡು ಮನೆತನದವರು ಆಳುತ್ತಿದ್ದರು. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನದಲ್ಲಿ ಈ ಆಳ್ವಿಕೆ ಸೋಮೇಶ್ವರ ರಾಜನದ್ದಾಗಿತ್ತು

Image Courtesy

ಭಗವಂತ ಶಿವ ಹಾಗೂ ಶಿವದೇವಾಲಯಗಳು

ಭಗವಂತ ಶಿವ ಹಾಗೂ ಶಿವದೇವಾಲಯಗಳು

ಈ ಪ್ರದೇಶದ ಜನರು ಶಿವಭಕ್ತರಾಗಿದ್ದು ಆ ಸಮಯದಲ್ಲಿ ಈ ಪ್ರದೇಶ ಸಮೃದ್ಧವಾಗಿತ್ತು. ಪರಿಣಾಮವಾಗಿ ಈ ಪ್ರದೇಶದಲ್ಲಿ ಹಲವಾರು ಶಿವದೇವಾಲಯಗಳು ನಿರ್ಮಾಣಗೊಂಡವು.

ಕಿರಾಡ್ ಮನೆತನ ಹಾಗೂ ರಾಜ್ಯಕ್ಕೆ ಎದುರಾದ ಸಂಕಷ್ಟ

ಕಿರಾಡ್ ಮನೆತನ ಹಾಗೂ ರಾಜ್ಯಕ್ಕೆ ಎದುರಾದ ಸಂಕಷ್ಟ

ಹನ್ನೊಂದು ಮತ್ತು ಹನ್ನೆರಡನೇ ಶತಮಾನದ ನಡುವೆ ಈ ಪ್ರದೇಶದ ಆಳ್ವಿಕೆ ನಡೆಸಿದ್ದ ರಾಜ ಸೋಮೇಶ್ವರ ನಾಡಿನ ಅಭ್ಯುದಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ. ಈ ಕಾರಣದಿಂದ ಈ ಪ್ರದೇಶ ಸುಭಿಕ್ಷವಾಗಿದ್ದು ಇದು ನೆರೆಯ ತುರುಷ್ಕರು ಎಂಬ ಪಂಗಡದ ಆಸೆ ಕೆರಳಿಸಿತ್ತು. ಈ ಸಮೃದ್ಧತೆಯನ್ನು ಕೊಳ್ಳೆ ಹೊಡೆಯಲು ದಂಡೆತ್ತಿ ಬಂದ ತುರುಷ್ಕರು ಕಿರಾಡು ಪ್ರದೇಶಕ್ಕೆ ಭಾರೀ ಪ್ರಮಾಣದ ಅನಾಹುತ ಎಸಗಿದ್ದರು.

Image Courtesy

ವಿದೇಶೀಯರ ಆಕ್ರಮಣ

ವಿದೇಶೀಯರ ಆಕ್ರಮಣ

ಮರುಭೂಮಿಯ ಬೆಟ್ಟಗಳ ತಪ್ಪಲಿನಲ್ಲಿರುವ ಈ ಪ್ರದೇಶವನ್ನು ಎಷ್ಟು ಸುಲಭವಾಗಿ ತುರುಷ್ಕರು ಕೊಳ್ಳೆ ಹೊಡೆದು ಹೋದ ಬಳಿಕ ಇನ್ನೂ ಹೆಚ್ಚಿನ ಅನಾಹುತ ಎದುರಾಗಬಹುದು, ವಿದೇಶೀಯರೂ ದಂಡೆತ್ತಿ ಬರಬಹುದು ಎಂಬ ದೂರಾಲೋಚನೆ ಮಾಡಿದ ರಾಜ ಸೋಮೇಶ್ವರ ತನ್ನ ರಾಜ್ಯವನ್ನು ರಕ್ಷಿಸಲು ಸಾಧು ಸಂತರ ಸಲಹೆಯನ್ನು ಪಡೆಯಲು ಹಲವಾರು ಸಾಧು ಸಂತರನ್ನು ಆಹ್ವಾನಿಸಿದ.

Image Courtesy

ರಾಜ್ಯದ ಸುಭಿಕ್ಷತೆಯನ್ನು ಕಾಪಾಡಲು ಆಗಮಿಸಿದ ಸಂತ

ರಾಜ್ಯದ ಸುಭಿಕ್ಷತೆಯನ್ನು ಕಾಪಾಡಲು ಆಗಮಿಸಿದ ಸಂತ

ರಾಜನ ಆಹ್ವಾನದ ಮೇರೆಗೆ ಖ್ಯಾತ ಸಂತರೊಬ್ಬರು ತಮ್ಮ ಅನುಯಾಯಿಗಳೊಡನೆ ಆಗಮಿಸಿ ಹಲವಾರು ಕ್ರಮಗಳನ್ನು ಕೈಗೊಂಡರು. ಪರಿಣಾಮವಾಗಿ ರಾಜ್ಯ ಮತ್ತೊಮ್ಮೆ ಸುಭಿಕ್ಷವಾಯಿತು. ಈ ಸುಭಿಕ್ಷತೆ ಹೀಗೇ ಇರುವಂತೆ ನೋಡಿಕೊಳ್ಳಲು ತಮ್ಮ ಅನುಯಾಯಿಯೊಬ್ಬರನ್ನು ಇಲ್ಲಿಯೇ ಬಿಟ್ಟು ಸಂತರು ತಮ್ಮ ಊರಿಗೆ ತೆರಳಿದರು. ರಾಜ್ಯ ಸುಭಿಕ್ಷತೆಯಿಂದ ತುಂಬಿ ತುಳುಕುತ್ತಿದ್ದ ಕಾರಣ ಜನರು ಕ್ರಮೇಣ ಸಂತರ ಅನುಯಾಯಿಯನ್ನು ಮರೆತೇ ಬಿಟ್ಟರು.

Image Courtesy

ತಮ್ಮದೇ ಜನಗಳ ನಿರ್ಲಕ್ಷ್ಯ

ತಮ್ಮದೇ ಜನಗಳ ನಿರ್ಲಕ್ಷ್ಯ

ಒಂದು ದಿನ, ಈ ಅನುಯಾಯಿ ಅನಾರೋಗ್ಯಪೀಡಿತರಾದರು. ಇವರ ಆರೈಕೆಗೆ ಕುಂಬಾರನೊಬ್ಬರ ಪತ್ನಿಯ ಹೊರತಾಗಿ ಯಾರೂ ಮುಂದೆ ಬರಲಿಲ್ಲ. ಆದರೆ ಈಕೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಚಿಕಿತ್ಸೆ ಒದಗಿಸಿದರು. ಮುಂದೊಂದು ದಿನ ಈ ಸಂತರು ಹಿಂದಿರುಗಿದಾಗ ತಮ್ಮ ಅನುಯಾಯಿಯನ್ನು ತಮ್ಮ ಜನರೇ ಹೇಗೆ ನಿರ್ಲಕ್ಷ್ಯಗೊಳಿಸಿದರು ಎಂಬುದನ್ನು ಕಣ್ಣಾರೆ ಕಂಡರು.

Image Courtesy

ಸಂತರ ಶಾಪ

ಸಂತರ ಶಾಪ

ಇದನ್ನು ಕಂಡ ಸಂತರ ಕೋಪ ನೆತ್ತಿಗೇರಿತು. ಇದಕ್ಕೆ ಕಾರಣವಾದ ಇಡಿಯ ರಾಜ್ಯವನ್ನೇ ಶಪಿಸಿದ ಇವರು "ಯಾವ ರಾಜ್ಯದಲ್ಲಿ ಮಾನವತೆಯೇ ಇಲ್ಲವೋ, ಅಲ್ಲಿ ಮಾನವರೂ ಇರಕೂಡದು" ಎಂದು ಶಾಪ ನೀಡಿದರು.

Image Courtesy

ಇಡಿಯ ರಾಜ್ಯವೇ ಕಲ್ಲಾಗಿ ಹೋಗಿತ್ತು

ಇಡಿಯ ರಾಜ್ಯವೇ ಕಲ್ಲಾಗಿ ಹೋಗಿತ್ತು

ಈ ಶಾಪದ ಪರಿಣಾಮವಾಗಿ ಕುಂಬಾರನ ಹೆಂಡತಿಯ ಹೊರತಾಗಿ ಇಡಿಯ ರಾಜ್ಯದ ಜನತೆ ಅಲ್ಲಿಯೇ ಕಲ್ಲಾಗಿ ಹೋದರು. ಸಂತರ ಅನುಯಾಯಿಗೆ ಆಕೆ ನೀಡಿದ ಆರೈಕೆ ಆಕೆಯನ್ನು ಕಾಪಾಡಿತ್ತು.

Image Courtesy

ಹಿಂದಿರುಗಿ ನೋಡದೇ ಹೊರನಡೆಯಲು ಹೇಳಿದ ಸಂತ

ಹಿಂದಿರುಗಿ ನೋಡದೇ ಹೊರನಡೆಯಲು ಹೇಳಿದ ಸಂತ

ಕುಂಬಾರನ ಹೆಂಡತಿಗೆ ಈ ಪ್ರದೇಶವನ್ನು ಹಿಂದಿರುಗಿ ನೋಡದೆ ಹೊರನಡೆಯುವಂತೆ ಸಂತರು ತಿಳಿಸಿದರು. ನೋಡಿದರೆ ನೀನೂ ಕಲ್ಲಾಗಿ ಹೋಗುವಿ ಎಂಬ ಎಚ್ಚರಿಕೆಯನ್ನೂ ನೀಡಿದರು.

ಕಿರಾಡುವಿನ ಕಲ್ಲುಗಳು

ಕಿರಾಡುವಿನ ಕಲ್ಲುಗಳು

ಸಂತರು ಹೇಳಿದಂತೆಯೇ ನಡೆದುಕೊಂಡ ಆಕೆ ರಾಜ್ಯದ ಗಡಿಯವರೆಗೂ ಹಿಂದಿರುಗಿ ನೋಡದೇ ನಡೆದೇ ನಡೆದಳು. ರಾಜ್ಯದ ಗಡಿ ದಾಟಿದ ಬಳಿಕ ಕುತೂಹಲದಿಂದ ತನ್ನ ಕತ್ತನ್ನು ತಿರುಗಿಸಿ ಹಿಂದೆ ನೋಡಿದ್ದೇ ತಡ, ಆಕೆಯೂ ಕಲ್ಲಾಗಿ ಹೋದಳು.

ಕಿರಾಡುವಿನ ಈ ಕಥೆಗೆ ಯಾವುದೇ ಆಧಾರವಿಲ್ಲ!

ಕಿರಾಡುವಿನ ಈ ಕಥೆಗೆ ಯಾವುದೇ ಆಧಾರವಿಲ್ಲ!

ಕಿರಾಡುವಿನ ಬಗ್ಗೆ ದಂತಕತೆಯಾಗಿ ಬಂದಿರುವ ಈ ಕಥೆಗೆ ಯಾವುದೇ ವೈಜ್ಞಾನಿಕ ಅಥವಾ ಶಾಸನಾಧಾರಿತ ಆಧಾರವಿಲ್ಲ. ಆದರೆ ಜನರಿಂದ ಜನರಿಗೆ ಶತಮಾನಗಳಿಂದ ಹೇಳಲ್ಪಡುತ್ತಾ ಬಂದಿರುವ ಈ ಕಥೆ ಎಷ್ಟು ಪ್ರಬಲವೆಂದರೆ ಇಂದಿಗೂ ಈ ದೇವಾಲಯಗಳನ್ನು ರಾತ್ರಿ ಹೊತ್ತು ಪ್ರವೇಶಿಸಲು ಯಾರೂ ಮುಂದೆ ಬರುವುದಿಲ್ಲ. ಅಷ್ಟಕ್ಕೂ, ಬದುಕುಳಿದ ಏಕಮಾತ್ರ ಮನುಷ್ಯಳಾದ ಕುಂಬಾರನ ಹೆಂಡತಿಯೂ ಕಲ್ಲಾದ ಬಳಿಕ ಈ ಕಥೆಯನ್ನು ಹೇಳಿದವರಾದರೂ ಯಾರು? ಈ ಪ್ರಶ್ನೆಗೂ ಉತ್ತರವಿಲ್ಲ.

Image Courtesy

For Quick Alerts
ALLOW NOTIFICATIONS
For Daily Alerts

    English summary

    Curse on Rajasthan's Kiradu Temple that turns humans into stones!

    Somewhere in the deserted land of Kiradu (once Kiradkot), are five temples where no one dares to stay overnight… reason? These temples are cursed to turn any human into stone! You will barely find any religious or historical construction in India from the ancient time that has no reference to any curse, scary tale or a blissful story behind it.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more