For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಶಾಂತಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಲು, ದೇವರ ಕೋಣೆಯ ಎದುರು ತೆಂಗಿನಕಾಯಿ ಇಟ್ಟು ಪೂಜೆ ಮಾಡಿ!

|

ಇಂದಿನ ಆಧುನಿಕ ಯುಗದಲ್ಲಿ ಮಂತ್ರ ತಂತ್ರಗಳು, ಪೂಜೆ ಪುನಸ್ಕಾರಗಳನ್ನು ಯಾರೂ ಹೆಚ್ಚಿನ ಪ್ರಮಾಣದಲ್ಲಿ ನಂಬುತ್ತಿಲ್ಲ. ಆದರೆ ಕೆಲವೊಂದು ನೀತಿ ನಿಯಮಗಳು ನಮ್ಮ ಜೀವನಕ್ಕೆ ಅತೀ ಅಗತ್ಯ ಎಂದೆನಿಸಿದ್ದು ಈ ನಿಯಮಗಳು ಇಲ್ಲ ಎಂದಾದರೆ ನಾವು ಶಾಂತಿಯುತ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಇಂದಿನ ಲೇಖನದಲ್ಲಿ ಕಲ್ಪವೃಕ್ಷ ಎಂದೇ ಕರೆಯಲ್ಪಡುವ ತೆಂಗಿನ ಗುಣಗಳನ್ನು ಅರಿತುಕೊಳ್ಳಲಿದ್ದೇವೆ. ಈ ತೆಂಗು ನಮ್ಮ ಜೀವನದಲ್ಲಿ ಅತ್ಯದ್ಭುತ ಪರಿಣಾಮಗಳನ್ನು ಉಂಟುಮಾಡಲು ಕಾರಣವಾಗಿವೆ.

Coconut pooja that can bring you wealth and prosperity!

ಮನೆಯಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ಇರಲಿ ತೆಂಗಿನಕಾಯಿ ಬೇಕೇ ಬೇಕು. ಇದನ್ನು ಮಂಗಳ ಶುಭ ಎಂದು ನಂಬಲಾಗುತ್ತದೆ. ತೆಂಗಿನ ಕಾಯಿಯನ್ನು ಕಲಶದ ಮೇಲಿರಿಸಿ ಪೂಜೆಯನ್ನು ಮಾಡಲಾಗುತ್ತದೆ. ಇದರಲ್ಲಿ ದೇವರನ್ನು ಸ್ಥಾಪಿಸಿ ಹೋಮ ಹವನಗಳನ್ನು ನಡೆಸುತ್ತಾರೆ. ಇಂದಿನ ಲೇಖನದಲ್ಲಿ ಕಲ್ಪವೃಕ್ಷದ ಇನ್ನಷ್ಟು ಅದ್ಭುತ ಪರಿಣಾಮಗಳು ನಮ್ಮ ಜೀವನದಲ್ಲಿ ಏಕೆ ಅವಶ್ಯಕ ಎಂಬುದನ್ನು ಅರಿತುಕೊಳ್ಳೋಣ...

ನಿಮ್ಮ ಜೀವನವನ್ನು ತೆಂಗಿನಕಾಯಿ ಹೇಗೆ ಉತ್ತಮಗೊಳಿಸುತ್ತದೆ

ನಿಮ್ಮ ಜೀವನವನ್ನು ತೆಂಗಿನಕಾಯಿ ಹೇಗೆ ಉತ್ತಮಗೊಳಿಸುತ್ತದೆ

ಹಿಂದೂ ಧರ್ಮದಲ್ಲಿ ತೆಂಗಿನ ಕಾಯಿಯನ್ನು ಪವಿತ್ರ ಮತ್ತು ಮಂಗಳಕರ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಶುಭ ಸಮಾರಂಭದಲ್ಲಿ ತೆಂಗಿನ ಕಾಯಿಯ ಬಳಕೆಯನ್ನು ಮಾಡುತ್ತಾರೆ. ಮನೆಯ ಗೃಪ್ರವೇಶ ಆಗಿರಬಹುದು ಇಲ್ಲವೇ ಹವನವಾಗಿರಬಹುದು, ಪೂಜೆಯಾಗಿರಬಹುದು ತೆಂಗಿನ ಕಾಯಿ ಬೇಕೇ ಬೇಕು.

Most Read: ಪೂಜಾ ಕೋಣೆಯಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!

ಜೀವನದಲ್ಲಿ ಯಶಸ್ಸು ಸಾಧಿಸಲು

ಜೀವನದಲ್ಲಿ ಯಶಸ್ಸು ಸಾಧಿಸಲು

ನಿಮ್ಮ ಯಾವುದಾದರೂ ಸಮಸ್ಯೆಗಳು ಕೋರ್ಟ್‌ನಲ್ಲಿ ಇದ್ದರೆ ಮನೆಯಲ್ಲಿ ತೆಂಗಿನ ಕಾಯಿಯ ಪೂಜೆಯನ್ನು ಮಾಡಿ. ತೆಂಗಿನ ಕಾಯಿಯ ಮೇಲೆ ಕೆಂಪು ಹೂವನ್ನು ಇರಿಸಿ ಮನೆ ಬಿಡುವ ಮೊದಲು ಹೀಗೆ ಮಾಡಬೇಕು, ನಿಮ್ಮೊಂದಿಗೆ ಹೂವನ್ನು ತೆಗೆದುಕೊಂಡು ಹೋಗಿ. ಇದರಿಂದ ನ್ಯಾಯ ನಿಮ್ಮ ಪಾಲಾಗುತ್ತದೆ.

ಕೆಟ್ಟ ದೃಷ್ಟಿ

ಕೆಟ್ಟ ದೃಷ್ಟಿ

ಬೇರೆಯವರ ಕೆಟ್ಟ ದೃಷ್ಟಿಯಿಂದ ನಿಮ್ಮ ಜೀವನದಲ್ಲಿ ಸುಧಾರಣೆಯಾಗುತ್ತಿಲ್ಲವೇ? ಅರ್ಧ ಮೀಟರ್ ಬಟ್ಟೆಯಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಯಾರ ಮೇಲೆ ದೃಷ್ಟಿ ದೋಷವುಂಟಾಗಿದೆಯೇ ಅವರ ಮೇಲೆ ಸುತ್ತಿ. ನಂತರ ಆ ತೆಂಗಿನ ಕಾಯಿಯನ್ನು ಹನುಮಂತನ ಕಾಲ ಬಳಿ ಇರಿಸಿ.

ಕಾರ್ಯ ಸಾಧಿಸಲು

ಕಾರ್ಯ ಸಾಧಿಸಲು

ನಿಮ್ಮ ಜೀವನದಲ್ಲಿ ಹೆಚ್ಚಿನ ತೊಂದರೆ ಇದೆ ಎಂದಾದರೆ ರಾತ್ರಿ ಪೂರ್ತಿ ತೆಂಗಿನ ಕಾಯಿಯನ್ನು ನಿಮ್ಮ ಪಕ್ಕದಲ್ಲಿರಿಸಿ. ಬೆಳಗ್ಗೆ, ಇತರ ಪೂಜಾ ಸಾಮಾಗ್ರಿಗಳೊಂದಿಗೆ ಆ ತೆಂಗಿನ ಕಾಯಿಯನ್ನು ಗಣೇಶ ದೇವಸ್ಥಾನಕ್ಕೆ ನೀಡಿ.

ಆರ್ಥಿಕ ನಷ್ಟ

ಆರ್ಥಿಕ ನಷ್ಟ

ನೀವು ಯಾವುದಾದರೂ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ತೆಂಗಿನ ಕಾಯಿಯನ್ನು ಹನುಮಂತನ ದೇವಸ್ಥಾನಕ್ಕೆ ಕೊಂಡೊಯ್ಯಿರಿ. ಹನುಮಂತನ ಮೂರ್ತಿಯಲ್ಲಿರುವ ಕುಂಕುಮವನ್ನು ತೆಗೆದುಕೊಂಡು ಸ್ವಸ್ತಿ ಆಕಾರವನ್ನು ಬರೆಯಿರಿ. ನಂತರ ದೇವಸ್ಥಾನದಲ್ಲಿ ಕುಳಿತು 8 ವಾರಗಳ ಕಾಲ ಹನುಮಾನ್ ಚಾಲೀಸವನ್ನು ಪಠಿಸಿ.

Most Read: ನೀವು ಅರಿಯದೇ ಇರುವ ಹಣಗಳಿಕೆಯ 7 ಸೂತ್ರಗಳು ಇಲ್ಲಿದೆ ನೋಡಿ

ವ್ಯಾಪಾರದಲ್ಲಿ ನಷ್ಟ

ವ್ಯಾಪಾರದಲ್ಲಿ ನಷ್ಟ

ನೀವು ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಹೀಗೆ ಮಾಡಿ. ಗುರುವಾರ ಒಂದುವರೆ ಮೀಟರ್‌ನಷ್ಟು ಹಳದಿ ಬಟ್ಟೆಯನ್ನು ತೆಗೆದುಕೊಂಡು ಹಳದಿ ಬಣ್ಣದ ಸಿಹಿತಿಂಡಿಗಳೊಂದಿಗೆ ವಿಷ್ಣುವಿನ ದೇವಸ್ಥಾನದಲ್ಲಿ ನೀಡಿ.

ಸಮಸ್ಯೆಗಳು

ಸಮಸ್ಯೆಗಳು

ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದೀರಿ ಎಂದಾದಲ್ಲಿ ತೆಂಗಿನ ಕಾಯಿ ತೆಗೆದುಕೊಳ್ಳಿ ಕೆಲವು ಕೆಂಪು ಹೂವು ತೆಗೆದುಕೊಳ್ಳಿ ಮತ್ತು ಕರ್ಪೂರವನ್ನು ತೆಗೆದುಕೊಂಡು ದುರ್ಗಾ ಮಾತೆಯ ಮುಂದಿರಿಸಿ. ನಿತ್ಯವೂ ಪ್ರಾರ್ಥಿಸಿ.

ಬಡತನ

ಬಡತನ

ತೀರಾ ಹೆಚ್ಚಿನ ಬಡತನವನ್ನು ನೀವು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ತೆಂಗಿನ ಕಾಯಿಯನ್ನು ತೆಗೆದುಕೊಂಡು ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ. ಈ ತೆಂಗಿನ ಕಾಯಿಯನ್ನು ಲಾಕರ್‌ನಲ್ಲಿ ಇರಿಸಿ. ನಿಮ್ಮ ಬಡತನ ನಿವಾರಣೆಯಾಗುತ್ತದೆ.

ಶನಿಯನ್ನು ಪ್ರೀತ್ಯರ್ಥಪಡಿಸಲು

ಶನಿಯನ್ನು ಪ್ರೀತ್ಯರ್ಥಪಡಿಸಲು

ನಿಮ್ಮ ಶನಿ ಕುಂಡಲಿ ದುರ್ಬಲವಾಗಿದೆ ಎಂದಾದಲ್ಲಿ ಪ್ರತಿ ಶನಿವಾರ ಪವಿತ್ರ ಜಲದಲ್ಲಿ ತೆಂಗಿನ ಕಾಯಿಯನ್ನು ಮುಳುಗಿಸಿ ಅಂದರೆ ಗಂಗಾ ಮತ್ತು ಯಮುನಾದಂತಹ ನದಿಯಲ್ಲಿ. ಹೀಗೆ ಮಾಡುವಾಗ "ಓಂ ರಾಮದೂತಾಯ ನಮಃ ಎಂಬ ಮಂತ್ರವನ್ನು ಪಠಿಸಿ.

Most Read: ಇಂತಹ ವಸ್ತುಗಳನ್ನು ಆದಷ್ಟು ಬೇಗ ಬೆಡ್-ರೂಮ್‌ನಿಂದ ಹೊರಹಾಕಿ- ಇಲ್ಲಾಂದ್ರೆ ಕ್ಯಾನ್ಸರ್ ಬರಬಹುದು!!

7 ಬಾರಿ

7 ಬಾರಿ

ಹೀಗೆ 7 ಬಾರಿ ಸತತವಾಗಿ ಮಾಡಿ ಮತ್ತು ಶನಿ ದೋಷ ನಿವಾರಣೆಯಾಗುತ್ತದೆ ನಿಮ್ಮ ಮೇಲೆ ಹನುಮಂತನ ಅನುಗ್ರಹ ಕೂಡ ಉಂಟಾಗುತ್ತದೆ.

ಕಾಳಸರ್ಪ ದೋಷ

ಕಾಳಸರ್ಪ ದೋಷ

ಕಾಳಸರ್ಪ ದೋಷದಿಂದ ಬಳಲುತ್ತಿರುವವರು ಬಡವರಿಗೆ ಒಣ ತೆಂಗಿನ ಕಾಯಿ ಮತ್ತು ಬ್ಲಾಂಕೆಟ್ ಅನ್ನು ನೀಡಬೇಕು. ಇದರಿಂದ ದೋಷ ನಿವಾರಣೆಯಾಗುತ್ತದೆ.

ಅದೃಷ್ಟಕ್ಕಾಗಿ

ಅದೃಷ್ಟಕ್ಕಾಗಿ

ಉತ್ತಮ ಅದೃಷ್ಟಕ್ಕಾಗಿ ಪವಿತ್ರ ಜಲದಲ್ಲಿ ತೆಂಗಿನ ಕಾಯಿಯನ್ನು ಮುಳುಗಿಸಿ ಹೀಗೆ ಮಾಡುವ ಮುನ್ನ ನಿಮ್ಮ ಇಷ್ಟದೇವರನ್ನು ನೆನೆಯಿರಿ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ.

ಏಕಾಶಿ ತೆಂಗಿನ ಕಾಯಿ

ಏಕಾಶಿ ತೆಂಗಿನ ಕಾಯಿ

ಮೂರು ಕಣ್ಣಿನ ತೆಂಗಿನಕಾಯಿಯನ್ನು ನೀವು ಹೊಂದಿದಲ್ಲಿ, ಇದು ಅದೃಷ್ಟ ಎಂದು ನಂಬಲಾಗುತ್ತದೆ. ಇದನ್ನು ಏಕಾಶಿ ತೆಂಗಿನಕಾಯಿ ಎಂದು ಕರೆಯಲಾಗುತ್ತದೆ ಮತ್ತು ಇದಕ್ಕೆ ಪೂಜೆ ಮಾಡಬೇಕು.

ಲಕ್ಷ್ಮೀ ಅವತಾರ

ಲಕ್ಷ್ಮೀ ಅವತಾರ

ಈ ತೆಂಗಿನಕಾಯಿಯನ್ನು ಲಕ್ಷ್ಮೀ ಅವತಾರ ಎಂದು ಕರೆಯುತ್ತಾರೆ. ದೀಪಾವಳಿಯಂದು ಇಂತಹ ತೆಂಗಿನಕಾಯಿಯನ್ನು ನೀವು ಪೂಜಿಸಬೇಕು ಇದರಿಂದ ಯಾವುದೇ ಆರ್ಥಿಕ ಸಂಕಷ್ಟ ನಿಮಗೆ ಒದಗುವುದಿಲ್ಲ.

ಇತರ ಬಳಕೆಗಳು

ಇತರ ಬಳಕೆಗಳು

ಇದಲ್ಲದೆ ಏಕಾಶಿ ತೆಂಗಿನ ಕಾಯಿಯ ಇನ್ನೊಂದು ಪ್ರಯೋಜನವಿದೆ - ಶನಿವಾರದಂದು ಕಂಚಿನ ತಟ್ಟೆಯಲ್ಲಿ ತೆಂಗಿನ ಕಾಯಿ ಇರಿಸಿ ಇದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಗರ್ಭಿಣಿ ಸ್ತ್ರೀಯರು

ಗರ್ಭಿಣಿ ಸ್ತ್ರೀಯರು

ಗರ್ಭಿಣಿ ಸ್ತ್ರೀಯರು ಕೂಡ ಏಕಾಶಿ ತೆಂಗಿನ ಕಾಯಿಯನ್ನು ಪೂಜಿಸಬಹುದು, ಇದರಿಂದ ಸಂಕಷ್ಟಗಳಿಲ್ಲದ ಹೆರಿಗೆ ಅವರದಾಗುತ್ತದೆ.

ಮಹಿಳೆಯರು ಏಕೆ ತೆಂಗಿನ ಕಾಯಿ ಒಡೆಯಬಾರದು?

ಮಹಿಳೆಯರು ಏಕೆ ತೆಂಗಿನ ಕಾಯಿ ಒಡೆಯಬಾರದು?

ನಿಮಗೆ ಆಶ್ವರ್ಯವಾಗಬಹುದು, ಮಹಿಳೆಯರು ಏಕೆ ತೆಂಗಿನ ಕಾಯಿ ಒಡೆಯಬಾರದೆಂದು ಇಲ್ಲಿದೆ ಉದಾಹರಣೆ

Most Read: ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ

ಬೀಜ

ಬೀಜ

ತೆಂಗಿನ ಕಾಯಿಯಂತಹ ಫಲ ತಾಯಿಯ ಗರ್ಭದಿಂದ (ಮರದಿಂದ) ಜನ್ಮತಾಳುತ್ತದೆ. ಅಂತೆಯೇ ಹೆಣ್ಣು ಕೂಡ ತನ್ನ ಗರ್ಭದಲ್ಲಿ ಭ್ರೂಣವನ್ನು ಒಂಭತ್ತು ತಿಂಗಳ ಕಾಲ ಹೊರುತ್ತಾಳೆ. ಆದ್ದರಿಂದ ನಿಸರ್ಗದ ನಿಯಮಕ್ಕೆ ಇದು ವಿರುದ್ಧವಾಗಿರುವುದರಿಂದ ಹೆಣ್ಣು ತೆಂಗಿನ ಕಾಯಿಯನ್ನು ಒಡೆಯಬಾರದು.

ತೆಂಗಿನ ಕಾಯಿಯನ್ನು ಒಡೆಯುವುದು

ತೆಂಗಿನ ಕಾಯಿಯನ್ನು ಒಡೆಯುವುದು

ತೆಂಗಿನ ಕಾಯಿಯ ಹೊರಭಾಗ ಗಟ್ಟಿಯಾಗಿರುತ್ತದೆ ಮತ್ತು ಒಳಭಾಗ ಮೃದುವಾಗಿರುತ್ತದೆ. ಆದ್ದರಿಂದ ನೀವು ತೆಂಗಿನ ಕಾಯಿಯನ್ನು ಒಡೆಯುವಾಗ, ನೀವು ಪ್ರಾರ್ಥಿಸು ದೇವರ ಪಾದ ಬುಡದಲ್ಲಿ ತೆಂಗಿನ ನೀರು ಬೀಳುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹವನ ಪೂಜಾ ಬಳಕೆ

ಹವನ ಪೂಜಾ ಬಳಕೆ

ಹವನ ಪೂಜೆಯ ಸಮಯದಲ್ಲಿ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಹವನದ ಸಮಯದಲ್ಲಿ ತೆಂಗಿನ ಕಾಯಿಯನ್ನು ಬಳಸುವುದರಿಂದ ಹವನದ ಧನಾತ್ಮಕ ಅಂಶ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ನಾವು ನೀಡಿರುವ ಯಾವುದೇ ಸಲಹೆಗಳು ವೈಜ್ಞಾನಿಕ ಅಂಶಗಳನ್ನು ಆಧರಿಸಿಲ್ಲ ಅದ್ದರಿಂದ ನೀವು ಇವುಗಳನ್ನು ಬಳಸಬಹುದು. ಜ್ಯೋತಿಷ್ಯರನ್ನು ಸಂಧಿಸಿದ ನಂತರವಷ್ಟೇ ಈ ಪರಿಹಾರಗಳನ್ನು ಪ್ರಯತ್ನಿಸಿ.

English summary

Coconut Pooja That Can Bring You Wealth and Prosperity!

A coconut is considered to very auspicious in Hindu mythology --- on every special occasion, a coconut is made use of; whether it is entering into a new house or a "havan" at home, a coconut is always considered auspicious --- here are different ways through which a coconut can make your life better.
X
Desktop Bottom Promotion