For Quick Alerts
ALLOW NOTIFICATIONS  
For Daily Alerts

ಚೈತ್ರ ನವಮಿ 2022: ಈ ಆಚರಣೆಗೂ ಶ್ರೀರಾಮನಿಗೂ ನಂಟಿದೆ, ಈ ಆಚರಣೆಯ ಮಹತ್ವವೇನು?

|

ಚೈತ್ರ ಮಾಸದಲ್ಲಿ 9 ದಿನಗಳ ನವರಾತ್ರಿ ಆಚರಣೆಯಲ್ಲಿ ದುರ್ಗೆಯನ್ನು ಆರಾಧಿಸಲಾಗುವುದು. ಈ ಆಚರಣೆ ನಮ್ಮ ಕರ್ನಾಟಕದಲ್ಲಿ ಅಷ್ಟಾಗಿ ಇಲ್ಲ, ಆದರೆ ಉತ್ತರ ಭಾರತದ ಕಡೆ ಇದು ತುಂಬಾ ದೊಡ್ಡ ಆಚರಣೆಯಾಗಿದೆ.

ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಈ ದಿನಗಳಲ್ಲಿ ಉಪವಾಸವಿದ್ದು ದುರ್ಗೆಯನ್ನು ಆರಾಧಿಸುತ್ತಾರೆ. ಚೈತ್ರ ನವರಾತ್ರಿಯನ್ನು ವಸಂತ ನವರಾತ್ರಿ ಎಂದೂ ಕರೆಯಲಾಗುವುದು. ಈ ಚೈತ್ರ ನವರಾತ್ರಿ ಚೈತ್ರ ಶುದ್ಧ ಪಾಡ್ಯದಿಂದ ಈ ನವರಾತ್ರಿ ಆಚರಣೆ ಶ್ರೀರಾಮ ಜನಿಸಿದ ದಿನವಾದ ಚೈತ್ರ ಶುದ್ಧ ನವಮಿಯವರೆಗೂ ಇರುತ್ತದೆ. ಆದ್ದರಿಂದ ಶ್ರೀರಾಮ ಜಯಂತಿಗೂ ಚೈತ್ರ ನವಮಿಗೂ ನಂಟಿದೆ.

ನವರಾತ್ರಿಯ ಹಬ್ಬವನ್ನು ವರ್ಷದಲ್ಲಿ 4 ಬಾರಿ ಆಚರಿಸಲಾಗುತ್ತದೆ ಆದರೆ ಇವುಗಳಲ್ಲಿ ಪ್ರಮುಖವಾದವು ಚೈತ್ರ ಮತ್ತು ಶಾರದೀಯ ನವರಾತ್ರಿ.

ಚೈತ್ರ ನವರಾತ್ರಿ ಯಾವಾಗ?

ಚೈತ್ರ ನವರಾತ್ರಿ ಯಾವಾಗ?

ಈ ಬಾರಿ ಚೈತ್ರ ನವರಾತ್ರಿಯು ಏಪ್ರಿಲ್ 2 ರಂದು ಶನಿವಾರ ಪ್ರಾರಂಭವಾಗುತ್ತಿದೆ. ಇದು ಏಪ್ರಿಲ್ 11 ರಂದು ಅಣದರೆ ಚೈತ್ರ ಶುದ್ಧ ನವಮಿಗೆ ಕೊನೆಗೊಳ್ಳುತ್ತದೆ. ಭಕ್ತರು ನವರಾತ್ರಿಯ ಸಮಯದಲ್ಲಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಒಂಬತ್ತು ದಿನಗಳವರೆಗೆ ಮಾತೆ ದುರ್ಗೆಯನ್ನು ಪೂರ್ಣ ಭಕ್ತಿಯಿಂದ ಪೂಜಿಸುತ್ತಾರೆ. ನವರಾತ್ರಿಯ ಮೊದಲ ದಿನದಂದು ಘಟಸ್ಥಾಪನೆಗೆ ವಿಶೇಷ ಮಹತ್ವವಿದೆ. ಅಮ್ಮನವರ ವಿಶೇಷ ವಾಹನಕ್ಕೂ ಈ ದಿನ ಹೆಚ್ಚಿನ ಮಹತ್ವವಿದೆ. ಪ್ರತಿ ನವರಾತ್ರಿಯಲ್ಲಿ ದುರ್ಗೆ ಮಾತೆಯು ತನ್ನ ವಿವಿಧ ವಾಹನಗಳಲ್ಲಿ ಆಗಮಿಸುತ್ತಾಳೆ ಎಂದು ನಂಬಲಾಗಿದೆ.

ಈ ವರ್ಷ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ

ಈ ವರ್ಷ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ

ಚೈತ್ರ ನವರಾತ್ರಿಯಲ್ಲಿ ಮಾ ನವದುರ್ಗೆಯನ್ನು ಆಹ್ವಾನಿಸಲಾಗುತ್ತದೆ. ಪ್ರತಿ ನವರಾತ್ರಿಯಂದು ನವ ದುರ್ಗೆಯರು ವಿವಿಧ ವಾಹನಗಳ ಮೇಲೆ ಸವಾರಿ ಮಾಡುತ್ತಾರೆ ಮತ್ತು ಬೀಳ್ಕೊಡುವ ಸಮಯದಲ್ಲಿ ತಾಯಿಯ ವಾಹನವು ವಿಭಿನ್ನವಾಗಿರುತ್ತದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ ಮಾತೆ ದುರ್ಗೆಯ ಆಗಮನವು ಮುಂಬರುವ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ.

ಈ ಚೈತ್ರ ನವರಾತ್ರಿಯಂದು ದುರ್ಗೆಯು ಕುದುರೆಯ ಮೇಲೆ ಬರುತ್ತಾಳೆ. ಭಾನುವಾರ ಅಥವಾ ಸೋಮವಾರದಿಂದ ನವರಾತ್ರಿ ಆರಂಭವಾದರೆ ದುರ್ಗಾ ಮಾತೆ ಆನೆಯ ಮೇಲೆ ಬರುತ್ತಾಳೆ. ಮಂಗಳವಾರ ಅಥವಾ ಶನಿವಾರದಿಂದ ನವರಾತ್ರಿ ಆರಂಭವಾದರೆ, ದೇವಿಯು ಕುದುರೆಯ ಮೇಲೆ ಬರುತ್ತಾಳೆ. ಅದೇ ಸಮಯದಲ್ಲಿ, ಗುರುವಾರ ಅಥವಾ ಶುಕ್ರವಾರ ನವರಾತ್ರಿ ಪ್ರಾರಂಭವಾದರೆ ತಾಯಿಯು ಪಲ್ಲಕ್ಕಿಯಲ್ಲಿ ಸವಾರಿ ಮಾಡುತ್ತಾಳೆ. ಶನಿವಾರದಿಂದ ಈ ಬಾರಿ ಚೈತ್ರ ನವರಾತ್ರಿ ಆರಂಭವಾಗುತ್ತಿದ್ದು, ಈ ಬಾರಿ ಅಮ್ಮನವರ ವಾಹನ ಕುದುರೆಯಾಗಿದೆ.

ಕಲಶ ಸ್ಥಾಪನೆಗೆ ಶುಭ ಮುಹೂರ್ತ

ಕಲಶ ಸ್ಥಾಪನೆಗೆ ಶುಭ ಮುಹೂರ್ತ

ಚೈತ್ರ ನವರಾತ್ರಿಯ ಮೊದಲ ದಿನದಂದು ಘಟಸ್ಥಾಪನೆ ಮಾಡಲಾಗುತ್ತದೆ ಮತ್ತು ಅದರ ನಂತರ ಪ್ರತಿದಿನ ದೇವಿಯ 9 ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ಘಟಸ್ಥಾಪನೆಯನ್ನು ಕಲಶ ಸ್ಥಾಪನೆ ಎಂದೂ ಕರೆಯುತ್ತಾರೆ. ಈ ಬಾರಿ ಏಪ್ರಿಲ್ 2 ರಂದು ಬೆಳಗ್ಗೆ 06:10 ರಿಂದ 08:29 ರವರೆಗೆ ಕಲಶ ಸ್ಥಾಪನೆಗೆ ಶುಭ ಮುಹೂರ್ತವಿದೆ. ಶುಭ ಮುಹೂರ್ತದ ಒಟ್ಟು ಅವಧಿ 2 ಗಂಟೆ 18 ನಿಮಿಷಗಳು.

ಕಲಶ ಸ್ಥಾಪನೆ ನಿಯಮಗಳು:

ಕಲಶ ಸ್ಥಾಪನೆ ನಿಯಮಗಳು:

* ಕಲಶ ಸ್ಥಾಪನೆಗೆ ಮೊದಲು ಬೆಳಗ್ಗೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು.

* ನಂತರ ದೇವರ ಕೋಣೆಯನ್ನು ಸ್ವಚ್ಛ ಮಾಡಿ ಬಿಳಿ ಅಥವಾ ಕೆಂಪು ವಸ್ತ್ರ ಹಾಸಿ.

* ಈಗ ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಅದರ ಮೇಲೆ ಮಣ್ಣನ್ನು ಹಾಕಿ, ತದನಂತರ ಧಾನ್ಯ ಬೀಜಗಳನ್ನು ಹರಡಿ, ಅದರ ಮೇಲೆ ಮಣ್ಣಿನ ಎರಡನೇ ಪದರವನ್ನು ಸೇರಿಸಿ, ಅದನ್ನು ಹೊಂದಿಸಲು ಸ್ವಲ್ಪ ನೀರನ್ನು ಸಿಂಪಡಿಸಿ. ಕಲಶದ ಚೊಂಬಿನ ಕುತ್ತಿಗೆಗೆ ಪವಿತ್ರ ದಾರವನ್ನು ಕಟ್ಟಿ, ಅದಕ್ಕೆ ಪವಿತ್ರ ನೀರನ್ನು ತುಂಬಿಸಿ. ವೀಳ್ಯದೆಲೆ, ಸುಗಂಧ ದ್ರವ್ಯ, ಗರಿಕೆ ಹುಲ್ಲು, ಅಕ್ಷತೆ ಮತ್ತು ನಾಣ್ಯಗಳನ್ನು ಆ ನೀರಿಗೆ ಹಾಕಿ. ಕಲಶದ ಅಂಚಿನಲ್ಲಿ ಅಶೋಕ ಅಥವಾ ಮಾವಿನ 5 ಎಲೆಗಳನ್ನು ಹಾಕಿ ಮುಚ್ಚಳದಿಂದ ಮುಚ್ಚಿ. ಒಂದು ತೆಂಗಿನಕಾಯಿಗೆ ಕೆಂಪು ಬಟ್ಟೆಯನ್ನು ಸುತ್ತಿ, ಅದನ್ನು ದಾರದಿಂದ ಕಟ್ಟಿ, ಕಲಶದ ಮೇಲೆ ಇರಿಸಿ. ದುರ್ಗಾದೇವಿಯನ್ನು ಆವಾಹಿಸಲು ಕಲಶ ಇದೀಗ ಸಿದ್ಧವಾಗಿದ್ದು, ದುರ್ಗಾ ದೇವಿಯನ್ನು ಆಹ್ವಾನಿಸಿ, ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ, ನವರಾತ್ರಿಯ ಒಂಬತ್ತು ದಿನಗಳು ಕಲಶದಲ್ಲಿ ವಾಸಿಸುವಂತೆ ವಿನಂತಿಸಿ.

English summary

Chaitra Navratri 2022 April: Date, History, Puja Muhurat and Significance in Kannada

Chaitra Navratri 2022 April: Date, History, Puja Muhurat and Significance in Kannada, read on...
Story first published: Friday, March 4, 2022, 18:05 [IST]
X
Desktop Bottom Promotion