For Quick Alerts
ALLOW NOTIFICATIONS  
For Daily Alerts

ಲಕ್ಷ್ಮೀ ದೇವಿ ಚಂಚಲೆ ಅಂತ ಎಲ್ಲರಿಗೂ ಗೊತ್ತು! ಆದರೆ ಇವಳ ಜನನದ ಕಥೆ ಗೊತ್ತೇ?

|

ಸಂಪತ್ತು ಯಾರಿಗೆ ತಾನೇ ಬೇಡ ಹೇಳಿ? ಪ್ರತಿಯೊಬ್ಬರಿಗೂ ಬೇಕು. ಕೇವಲ ವೈರಾಗಿಗಳು ಮಾತ್ರ ಇದನ್ನು ಬೇಡವೆನ್ನುವರು. ಆದರೆ ಇಂತಹ ಸಂಪತ್ತು ಹಾಗೂ ಸಮೃದ್ಧಿ ಬೇಕೆಂದರೆ ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸಬೇಕು ಎಂದು ಹೇಳುವರು. ಲಕ್ಷ್ಮೀ ದೇವಿಯು ಒಲಿದವರಿಗೆ ಸಂಪತ್ತು ಹಾಗೂ ಸಮೃದ್ಧಿಯು ದೊರಕುವುದು ಎಂದು ಹಿಂದೂ ಧರ್ಮಿಯರ ನಂಬಿಕೆ.

ಕೇವಲ ಸಂಪತ್ತು ಮಾತ್ರವಲ್ಲದೆ, ಯಶಸ್ಸು ಹಾಗೂ ಸಮಾಜದಲ್ಲಿ ಗೌರವವು ಪ್ರಾಪ್ತಿಯಾಗುವುದು. ಲಕ್ಷ್ಮೀ ದೇವಿಯು ಒಬ್ಬ ವ್ಯಕ್ತಿಯ ಮನೆಯನ್ನು ಬಿಟ್ಟುಹೋದರೆ ಆಗ ಆತನಿಗೆ ಬಡತನ ಬರುವುದು. ಆತನ ದೈನಂದಿನ ಖರ್ಚಿಗೂ ಹಣವಿಲ್ಲದಂತೆ ಆಗುವುದು. ಲಕ್ಷ್ಮೀ ದೇವಿಯು ತುಂಬಾ ಸೂಕ್ಷ್ಮ ಹಾಗೂ ಚಂಚಲೆ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯು ಹೇಗೆ ಹುಟ್ಟಿದರು ಎನ್ನುವ ಕಥೆಯನ್ನು ಇಲ್ಲಿ ಓದಿ...

ದೂರ್ವಾಸ ಮುನಿಗಳ ಶಾಪಕ್ಕೊಳಗಾದ ಇಂದ್ರ

ದೂರ್ವಾಸ ಮುನಿಗಳ ಶಾಪಕ್ಕೊಳಗಾದ ಇಂದ್ರ

ಇಂದ್ರ ಪುರಾಣದ ಪ್ರಕಾರ ಋಷಿ ದೂರ್ವಾಸರು ಇಂದ್ರ ದೇವನಿಗೆ ಪುಷ್ಪಮಾಲೆಯೊಂದನ್ನು ಅರ್ಪಿಸುವರು. ಆದರೆ ಇಂದ್ರದೇವನು ತುಂಬಾ ಅಂಹಕಾರದಿಂದ ವರ್ತಿಸಿ, ದೂರ್ವಾಸ ಮುನಿಗಳಿಗೆ ಅಪಮಾನ ಮಾಡುವರು. ತನಗಾದ ಅಪಮಾನವನ್ನು ಸಹಿಸಲು ಆಗದೆ ದೂರ್ವಾಸ ಮುನಿಗಳು ಇಂದ್ರನಿಗೆ ಶಾಪ ನೀಡುವರು. ಲಕ್ಷ್ಮೀ ದೇವಿಯು ಕರುಣಿಸುವಂತಹ ಸಮೃದ್ಧಿಯಾಗಿರುವ ಶ್ರೀ ಶ್ರೀಯು ದಕ್ಕದೆ ಇರಲಿ ಎಂದು ದೂರ್ವಾಸ ಮುನಿಗಳು ಇಂದ್ರನಿಗೆ ಶಾಪ ನೀಡುವರು.

ಶಾಪದ ಪ್ರಭಾವ

ಶಾಪದ ಪ್ರಭಾವ

ಶಾಪದ ಪ್ರಭಾವದಿಂದಾಗಿ ಲಕ್ಷ್ಮೀ ದೇವಿಯು ಇಂದ್ರನನ್ನು ಬಿಟ್ಟು ಮಹಾಲಕ್ಷ್ಮೀಗೆ ಗೆ ತೆರಳುವರು. ಇಂದ್ರನು ದೇವಲೋಕದ ರಾಜನಾಗಿರುವನು. ಇದರಿಂದ ಲಕ್ಷ್ಮೀ ದೇವಿಯು ಬಿಟ್ಟುಹೋದ ಪರಿಣಾಮ ಸಂಪೂರ್ಣ ಸ್ವರ್ಗಲೋಕ ಮತ್ತು ಮೃತ್ಯುಲೋಕ ಕೂಡ ಸಮಸ್ಯೆಗೆ ಒಳಗಾಗುತ್ತದೆ.

ದೇವತೆಗಳು ಬ್ರಹ್ಮದೇವರ ಮೊರೆ ಹೋದರು

ದೇವತೆಗಳು ಬ್ರಹ್ಮದೇವರ ಮೊರೆ ಹೋದರು

ಸ್ವರ್ಗಲೋಕದ ಪರಿಸ್ಥಿತಿಯನ್ನು ನೋಡಿ ಏನೂ ತೋಚದೆ ಇಂದ್ರದೇವನು ಇತರ ದೇವದೇವತೆಗಳೊಂದಿಗೆ ಬ್ರಹ್ಮದೇವರನ್ನು ಭೇಟಿಯಾಗಲು ಹೋಗುವರು. ಬ್ರಹ್ಮದೇವರು ಇವರನ್ನು ವಿಷ್ಣು ದೇವರು ನೆಲೆಸಿರುವಂತಹ ವೈಕುಂಠಕ್ಕೆ ಕರೆದುಕೊಂಡು ಹೋಗುವರು. ವಿಷ್ಣುವಿಗೆ ದೇವಲೋಕದ ಸಮಸ್ಯೆ ಬಗ್ಗೆ ತಿಳಿದಾಗ, ಅಸುರರ ನೆರವಿನೊಂದಿಗೆ ಕ್ಷೀರಸಾಗರವನ್ನು ಮಂಥನ ಮಾಡುವಂತೆ ಸಲಹೆ ನೀಡುವರು. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಸಿಂಧು ಕನ್ಯೆಯಾಗಿ ಅವರಿಗೆ ಸಿಗುವರು ಎಂದು ವಿಷ್ಣು ದೇವರು ಹೇಳುವರು.

ಅಸುರರೊಂದಿಗೆ ದೇವತೆಗಳ ಮಾತುಕತೆ

ಅಸುರರೊಂದಿಗೆ ದೇವತೆಗಳ ಮಾತುಕತೆ

ದೇವತೆಗಳು ಅಸುರರ ಬಳಿಗೆ ಹೋಗಿ ಕ್ಷೀರಸಾಗರದಲ್ಲಿ ದೊಡ್ಡ ಮಟ್ಟದ ಖಜಾನೆ ಇರುವುದಾಗಿ ಹೇಳುವರು. ಮಂಥನ ಮಾಡಿದರೆ ಆಗ ಖಜಾನೆಯು ಮೇಲೆ ಬರುವುದು ಎಂದು ಅಸುರರನ್ನು ದೇವತೆಗಳು ನಂಬಿಸುವರು. ಅಲ್ಲೊಂದು ಕಲಶವು ಇದ್ದು, ಅದರಲ್ಲಿ ಅಮೃತವಿದೆ ಮತ್ತು ಇದನ್ನು ಸೇವಿಸಿದರೆ ಅಮರರಾಗುವರು ಎಂದು ಅಸುರರಿಗೆ ದೇವತೆಗಳು ತಿಳಿಸುವರು. ಇದನ್ನು ಕೇಳಿದ ಅಸುರರು ದೇವತೆಗಳೊಂದಿಗೆ ಸೇರಿಕೊಂಡು ಸಮುದ್ರ ಮಂಥನ ಮಾಡಲು ತಯಾರಾಗುವರು.

ಸಮುದ್ರ ಮಂಥನ

ಸಮುದ್ರ ಮಂಥನ

ಎಲ್ಲಾ ದೇವತೆಗಳು ಹಾಗೂ ಅಸುರರು ಸೇರಿಕೊಂದು ಕ್ಷೀರಸಾಗರದ ಮಂಥನ ಆರಂಭಿಸಿದರು. ಇದಕ್ಕಾಗಿ ಅವರು ಮಂಡ್ರಾಚಲ ಬೆಟ್ಟವನ್ನು ಬಳಸಿಕೊಂಡರು. ಆದರೆ ಇದು ಮುಳುಗುತ್ತಿರುವುದನ್ನು ಕಂಡರು. ಈ ವೇಳೆ ವಿಷ್ಣುವು ತನ್ನ ಕೂರ್ಮಾವತಾರ ತಾಳಿ ತನ್ನ ಬೆನ್ನ ಮೇಲೆ ಪರ್ವತವನ್ನು ಇರಿಸಿಕೊಂಡ. ಸರ್ಪಗಳ ರಾಜನಾಗಿರುವಂತಹ ವಾಸುಕಿಯನ್ನು ಈ ಬೆಟ್ಟಕ್ಕೆ ಕಟ್ಟಲಾಯಿತು. ವಾಸುಕಿಯ ಮುಖದ ಭಾಗವನ್ನು ದೇವತೆಗಳು ಹಿಡಿಕೊಂಡರೆ, ಬಾಲವನ್ನು ಅಸುರರು ಹಿಡಿದುಕೊಂಡರು. ಇದರ ಬಳಿಕ ಅಸುರರು ಮುಖದ ಭಾಗವನ್ನು ಹಿಡಿಯಬೇಕೆಂದು ಹೇಳಿದರು. ಈ ವೇಳೆ ಸ್ಥಳ ಬದಲಾಯಿಸಲಾಯಿತು.

ಶಿವನು ವಿಷಕಂಠನಾದ

ಶಿವನು ವಿಷಕಂಠನಾದ

ಕ್ಷೀರಸಾಗರವನ್ನು ಮಂಥನ ಮಾಡುತ್ತಿರುವ ವೇಳೆ ಮೊದಲು ಬಂದ ವಸ್ತುವೇ ಕಠೋರ ವಿಷವಾಗಿರುವಂತಹ ಹಾಲಹಲ. ಈ ವೇಳೆ ಹಾಲಹಲವು ಭೂಮಿಯನ್ನು ನಷ್ಟ ಮಾಡಲಿದೆಯೆಂದು ತಿಳಿದ ಈಶ್ವರನು ಇದನ್ನು ಕುಡಿದು ತನ್ನ ಕಂಠದಲ್ಲಿ ಇರಿಸಿಕೊಂಡ. ಇದರಿಂದಾಗಿ ಆತ ನೀಲಕಂಠನಾದ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.ಕ್ಷೀರಸಾಗರವನ್ನು ಮಂಥನ ಮಾಡುವಂತಹ ವೇಳೆ 14 ಅಮೂಲ್ಯ ರತ್ನಗಳ ಸಹಿತ ಹಲವಾರು ವಸ್ತುಗಳು ಬಂದಿವೆ ಎಂದು ಪುರಾಣಗಳು ಹೇಳಿವೆ.

ಲಕ್ಷ್ಮೀ ದೇವಿಯು ಜನಿಸಿದಳು

ಲಕ್ಷ್ಮೀ ದೇವಿಯು ಜನಿಸಿದಳು

ಅಂತಿಮವಾಗಿ ಲಕ್ಷ್ಮೀ ದೇವಿಯು ಪ್ರತ್ಯಕ್ಷರಾದರು. ದೇವದೇವತೆಗಳು ಹಾಗೂ ಅಸುರರು ಲಕ್ಷ್ಮೀ ದೇವಿಯ ಸೌಂದರ್ಯವನ್ನು ನೋಡಿ ಮೂಕವಿಸ್ಮಿತರಾದರು. ವಿಷ್ಣು ದೇವರು ಲಕ್ಷ್ಮೀ ದೇವಿಗೆ ತನ್ನ ಪವಿತ್ರ ಸಿಂಹಾಸನ ನೀಡುವರು. ವಿಶ್ವಕರ್ಮ ದೇವರು ಲಕ್ಷ್ಮೀದೇವಿಗೆ ತಾವರೆ ಹೂ ನೀಡುವರು ಮತ್ತು ಸಮುದ್ರರಾಜನು ಬಂಗಾರದ ಬಣ್ಣದ ಬಟ್ಟೆ ನೀಡುವನು. ಲಕ್ಷ್ಮೀ ದೇವಿಯು ಎಲ್ಲವನ್ನು ಪಡೆದುಕೊಂಡ ಬಳಿಕ ಆಕೆಯ ಕಣ್ಣುಗಳು ವಿಷ್ಣು ದೇವರನ್ನು ಹುಡುಕುತ್ತಲಿತ್ತು. ಆಕೆ ಅಂತಿಮವಾಗಿ ವಿಷ್ಣು ದೇವರನ್ನು ನೋಡುವರು ಮತ್ತು ಪುಷ್ಪಮಾಲೆಯನ್ನು ವಿಷ್ಣುವಿಗೆ ಅರ್ಪಿಸುವರು.

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ

ಪುರಾಣಗಳ ಪ್ರಕಾರ ಲಕ್ಷ್ಮೀ ದೇವಿಯು ಋಷಿ ಭರಿಗು ಮತ್ತು ಖಯಾತಿ ದೇವಿಯ ಪುತ್ರಿ. ಪಾರ್ವತಿ ದೇವಿಯ ತಂದೆ ರಾಜ ದಕ್ಷ ಮತ್ತು ಋಷಿ ಭರಿಗು ಸೋದರರು. ಪಾರ್ವತಿ ದೇವಿಯು ಈಶ್ವರನನ್ನು ಮದುವೆಯಾಗಲು ಬಯಸಿದಂತೆ, ಲಕ್ಷ್ಮೀ ದೇವಿಯು ವಿಷ್ಣು ದೇವರನ್ನು ಮದುವೆಯಾದರು. ಆಕೆ ಸಮುದ್ರ ಮಧ್ಯದಲ್ಲಿ ವಿಷ್ಣುವಿನ ಪೂಜೆ ಮಾಡುವರು. ಇದರ ಬಳಿಕ ವಿಷ್ಣು ದೇವರು ಲಕ್ಷ್ಮೀ ದೇವಿಯನ್ನು ಮದುವೆಯಾಗಲು ಒಪ್ಪಿಕೊಳ್ಳುವರು. ಇದು ಲಕ್ಷ್ಮೀ ದೇವಿಯು ಹುಟ್ಟಿದ ಕಥೆ ಮತ್ತು ಅವರು ಸಂಪತ್ತಿನ ದೇವತೆಯಾಗಿರುವುದು.

English summary

Birth Story of Goddess Lakshmi

It is known about Goddess Lakshmi that she is the goddess of wealth, and that whosoever she favors, would be blessed with prosperity throughout the life. Not only money, but success and respect in the society too go on favoring him. Similarly, if she decides to leave, the person might become devoid of everything, even the basic needs. Well, do you know how this deity, who is so sensitive, was born? Here is the story behind the birth of Goddess Lakshmi, read on.
X
Desktop Bottom Promotion