Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಓಣಂ 2019: ಓಣಂ ಹಬ್ಬಕ್ಕೆ ಇಲ್ಲಿದೆ ಅತ್ಯುತ್ತಮ ಪೂಕಲಂ ವಿನ್ಯಾಸಗಳು
ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬ. ಯಾವುದೇ ಜಾತಿಗೆ ಸೀಮಿತವಾಗದ ಈ ಹಬ್ಬವನ್ನು ವಿಶ್ವಾದ್ಯಂತ ನೆಲೆಸಿರುವ ಕೇರಳಿಗರು ಮಲಯಾಳಂ ಕ್ಯಾಲೆಂಡರ್ ಅನ್ವಯ ಆಚರಿಸುತ್ತಾರೆ. ಇದನ್ನು ಕೊಲ್ಲ ವರ್ಷ ಎಂದು ಸಹ ಕರೆಯುತ್ತಾರೆ.

ಓಣಂ ಹಬ್ಬದಲ್ಲಿ ದೇವಾರಾಧನೆ, ಮಹಿಳೆಯರು ಉಡುವ ಚಿನ್ನದ ಅಂಚಿನ ಬಿಳಿ ಸೀರೆ, ಆಭರಣಗಳು, ಭಕ್ಷ್ಯ ಬೋಜನಗಳು, ಹಳ್ಳಗಳಲ್ಲಿ ಸುಗ್ಗಿಯ ವಾತಾವರಣ ಅಬ್ಬಾ ಹಬ್ಬವನ್ನು ಸವಿಯುವುದೇ ಚೆಂದ. ಆದರೆ ಇದಕ್ಕೂ ಮುಖ್ಯವಾಗಿ ಓಣಂ ಹಬ್ಬದ ಆಕರ್ಷಣೆಗಳ ಕೇಂದ್ರಬಿಂದು ಪೂಕುಳಂ (ರಂಗೋಲಿ).
ವಿವಿಧ ಬಣ್ಣದ, ವಿವಿಧ ತೆರನಾದ ಹೂಗಳ ದಳಗಳನ್ನು ವಿನ್ಯಾಸಗೊಳಿಸಿ ಮನೆಯೊಳಗೆ, ಮನೆಯ ಮುಂದೆ ರಚಿಸುವ ರಂಗೋಲಿ ಮನೆ ಕಣ್ಮನ ಸೆಳೆಯುವಂತಿರುತ್ತದೆ. ಓಣಂನ ಪ್ರತಿಯೊಂದು ದಿನದಂದು ಹೊಸ ಹೊಸ ಹೂಗಳ ಪದರವನ್ನು ನಿರ್ಮಿಸಲಾಗುತ್ತದೆ. ಕೇರಳದ ವಿವಿಧ ಭಾಗಗಳಲ್ಲಿ ಪೂಕಳಂ ಅನ್ನು ಸ್ಪರ್ಧೆಯ ರೂಪದಲ್ಲಿ ಕೂಡ ಕೊಂಡಾಡುತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಹಬ್ಬದ ಸಂದರ್ಭದಲ್ಲಿ ರಚಿಸಲು ಆಕರ್ಷಕ ಪೂಕುಳಂ ವಿನ್ಯಾಸಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ.
ನಕ್ಷತ್ರಾಕಾರದ ವಿನ್ಯಾಸ ಹೊಂದಿರುವ ಇದು ನಾಲ್ಕು ಪದರಗಳಲ್ಲಿ ವಿವಿಧ ಬಣ್ಣದ ಹೂಗಳಿಂದ ಬಿಡಿಸಲಾಗಿದೆ.
ಸರಳವಾದ ವಿನ್ಯಾಸವಿದ್ದರೂ, ಬಣ್ಣಗಳ ವ್ಯತ್ಯಾಸದಿಂದ ಆಕರ್ಷಣೆ ಹೆಚ್ಚಿದೆ. ಇದನ್ನು ಐದು ಪದರಗಳಲ್ಲಿ ಬಿಡಿಸಲಾಗಿದೆ.
ಆರು ಎಳೆಗಳಲ್ಲಿ ಬಿಡಿಸಿರುವ ಈ ಚಿತ್ತಾರವನ್ನು ನಿತ್ಯ ಸಿಗುವ ಹೂಗಳಿಂದಲೇ, ಹೆಚ್ಚಾಗಿ ಚೆಂಡು ಹೂ ಬಳಸಿ ವಿನ್ಯಾಸಗೊಳಿಸಲಾಗಿದೆ.
ಸಾಮಾನ್ಯ ವಿನ್ಯಾಸಕ್ಕಿಂತ ಈ ಪೂಕುಳಂ ಸಾಕಷ್ಟು ಭಿನ್ನತೆ ಹೊಂದಿದೆ. ಕೇರಳದ ಸಾಂಸ್ಕೃತಿಕತೆಯನ್ನು ಬಿಂಬಿಸುತ್ತಿರುವ ಕಥಕಳಿಯ ಕಿರೀಟ, ಆನೆಯ ಸೊಂಡಿಲನ್ನು ಬಿಡಿಸಿ, ಹೂವಿನಿಂದಲೇ ಹಬ್ಬದ ಶುಭ ಕೋರಿದ್ದಾರೆ.
ಈ ವಿನ್ಯಾಸಕ್ಕೆ ಬೃಹತ್ ಸ್ಥಳದ ಅವಶ್ಯಕತೆ ಇದೆ. ಇದರ ವಿಶೇಷತೆ ಬಣ್ಣಗಳ ವಿನ್ಯಾಸ ಜತೆಗೆ, ಕೇರಳದ ಸಾಂಪ್ರಾದಾಯಿಕ ನೃತ್ಯ ಕಥಕಳಿಯ ಮುಖವನ್ನು ಹಸಿರು ಬಣ್ಣಗಳಿಂದ ಚಿತ್ತಾರಗೊಳಿಸಿರುವುದು ಆಕರ್ಷಣೆಯ ಕೇಂದ್ರವಾಗಿದೆ.
ಸರಳವಾಗಿ ಮನೆಯ ಒಳಗೆ ಇರುವ ಚಿಕ್ಕ ಸ್ಥಳಗಳಲ್ಲಿ ಸಹ ಈ ವಿನ್ಯಾಸವನ್ನು ಬಿಡಿಸಬಹುದು.
ಬೃಹತ್ ಜಾಗದಲ್ಲಿ ಚಿತ್ತಾರಗೊಳಿಸಿರುವ ಈ ವಿನ್ಯಾಸ ಎಲ್ಲರ ಕಣ್ಸೆಳೆಯುವಂತಿದೆ. ಕೇರಳದ ಶಾಸ್ತ್ರೀಯ ನೃತ್ಯ ಕಥಕಳಿ ಹಾಗೂ ಮೋಹಿನಿ ಅಟ್ಟಂ ಅನ್ನು ಬಿಂಬಿಸುತ್ತಿರುವ ಈ ಪೂಕುಳಂ ಓಣಂಗೆ ಹೇಳಿಮಾಡಿಸಿದಂತಿದೆ. ಇದೇ ವಿನ್ಯಾಸವನ್ನು ಚಿಕ್ಕದಾಗಿ ಸಹ ಮನೆಗಳಲ್ಲಿ ಬಿಡಿಸಬಹುದು.
ವಿನ್ಯಾಸ ಸರಳವಾಗಿದ್ದರೂ ಹೂವಿನ ವಿವಿಧ ಬಣ್ಣಗಳಲ್ಲೇ ಆಟವಾಡಿರುವ ಪರಿ ಆಕರ್ಷಕತೆಯನ್ನು ಹೆಚ್ಚಿಸಿದ್ದು, ಶ್ರೀಮಂತವಾಗಿ ಕಾಣುತ್ತಿದೆ.
ಈ ವಿನ್ಯಾಸ ಕಥಕಳಿಯ ಮುಖವನ್ನೇ ಮುಖ್ಯ ಕಾನ್ಸೆಪ್ಟ್ ಮಾಡಿಕೊಂಡು ರಚಿಸಲಾಗಿದೆ.
ಕೇರಳದ ಕಡಲ ತೀರ, ಅಂಬಿಗ, ಕಥಕಳಿಯ ವಿನ್ಯಾಸವನ್ನೇ ಮುಖ್ಯವಾಗಿಸಿ ರಚಿಸಿರುವ ಈ ವಿನ್ಯಾಸದ ಅಂಚಿಗೆ ಬಿಡಿಸಿರುವ ಹೂವಿನ ದಳದ ಚಿತ್ತಾರ ಪೂಕುಳಂಗೆ ಇನ್ನಷ್ಟು ಪುಷ್ಠಿ ನೀಡಿದೆ.



Click it and Unblock the Notifications

