For Quick Alerts
ALLOW NOTIFICATIONS  
For Daily Alerts

ಹನುಮಾನ್ ಚಾಲೀಸಾ ಪಠಿಸಿ ಕಷ್ಟಗಳಿಂದ ಮುಕ್ತಿ ಪಡೆದುಕೊಳ್ಳಿ

|

ಹನುಮಾನ್ ಚಾಲೀಸಾವು ರಾಮ ಭಂಟ, ಅಪ್ರತಿಮ ಸಾಹಸಿ, ಅದಮ್ಯ ಚೇತನ ಹನುಮನ ಲೀಲೆಗಳನ್ನು ಮತ್ತು ಆತನ ಖ್ಯಾತಿಯನ್ನು ಸಾರುವ ಒಂದು ಜನಪ್ರಿಯ ಕೃತಿಯಾಗಿದೆ. ಭಕ್ತಿಯ ಪರಾಕಾಷ್ಠೆಗೆ ನಮ್ಮನ್ನು ಕೊಂಡೊಯ್ಯುವ ಈ ಅದ್ಭುತ ಕೃತಿಯನ್ನು ರಚಿಸಿದವರು ಶ್ರೀ ರಾಮಚಂದ್ರನ ಪರಮ ಭಕ್ತರಾದ ತುಳಸಿದಾಸರು.

ತುಳಸಿದಾಸರು ಶ್ರೀ ರಾಮ ಚಂದ್ರನ ಪರಮ ಭಕ್ತರು ಎಂದು ಕರೆಯಲು ಒಂದು ಕಾರಣವಿದೆ. ಅವರು ತಮ್ಮ ದಿವ್ಯ ತಪಸ್ಸಿನಿಂದ ಶ್ರೀರಾಮನನ್ನು ಒಲಿಸಿಕೊಂಡು ತುಳಸಿ ರಾಮಾಯಣವನ್ನು ರಚಿಸಿದವರು. ಹನುಮಾನ್ ಚಾಲೀಸಾದೊ೦ದಿಗೆ ನಿಗೂಢ ಸ್ವರೂಪದ ದೈವತ್ವವು ತಳುಕುಹಾಕಿಕೊ೦ಡಿದೆ ಎ೦ಬ ನ೦ಬಿಕೆಯು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ವಯೋಮಿತಿಯ ಅಡೆತಡೆಗಳಿಲ್ಲದೆ, ದೈವೀಸ್ವರೂಪವಾಗಿರುವ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಯಾರು ಬೇಕಾದರೂ ಪಠಿಸಬಹುದು.

ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ. ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಮಂಗಳವಾರವನ್ನು ಹನುಂತನನ್ನು ನೆನೆಯಲು ವಿಶೇಷ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು ಭಕ್ತಿಯಿಂದ ಹನುಮಂತನನ್ನು ನೆನೆದರೆ ಮತ್ತು ಅವರನ್ನು ಪೂಜಿಸಿದರೆ ಹನುಮಂತನ ಕೃಪೆಗೆ ನಾವು ಪಾತ್ರರಾಗುತ್ತೇವೆ ಎಂದು ವೇದಗಳು ತಿಳಿಸುತ್ತವೆ.

ಅಂತೆಯೇ ಈ ದಿನಂದು ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಕೂಡ ಹನುಮಂತನು ನಮ್ಮನ್ನು ಸರ್ವ ವಿಘ್ನಗಳಿಂದ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಹನುಮಾನ್ ಚಾಲೀಸಾವು ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆಗೆ ಕೂಡ ಕಾರಣವಾಗಿದೆ. ಅಂತೆಯೇ ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ತರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಹನುಮಾನ್ ಚಾಲೀಸಾದ ಕುರಿತು ಇನ್ನಷ್ಟು ರೋಚಕ ಮಾಹಿತಿಗಳನ್ನು ತಿಳಿದುಕೊಳ್ಳೋಣ....

ದುಷ್ಟ ಶಕ್ತಿಗಳ ದಿಗ್ಬಂಧನ

ದುಷ್ಟ ಶಕ್ತಿಗಳ ದಿಗ್ಬಂಧನ

ಹನುಮಾನ್ ಚಾಲೀಸವು ಹೆಚ್ಚು ಶಕ್ತಿಶಾಲಿ ಮಂತ್ರವಾಗಿದ್ದು, ದೆವ್ವ, ಪಿಶಾಚಿ ಅಂತೆಯೇ ದುಷ್ಟಶಕ್ತಿಗಳ ದಿಗ್ಬಂಧನ ಮಾಡುತ್ತದೆ. ಹನುಮಂತ ದೇವರು ಈ ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತಾರೆ. ಅಂತೆಯೇ ಮನದಲ್ಲಿರುವ ಭಯ ತರುವ ವಿಚಾರಗಳನ್ನು ಈ ಮಂತ್ರವು ತೊಡೆದು ಹಾಕುತ್ತದೆ. ಆದ್ದರಿಂದಲೇ ಮಕ್ಕಳಿಗೆ ಈ ಮಂತ್ರವನ್ನು ಪಠಿಸಲು ಹಿರಿಯರು ಹೇಳುತ್ತಾರೆ.

ಶನಿ ದೋಷ ನಿವಾರಣೆ

ಶನಿ ದೋಷ ನಿವಾರಣೆ

ಶನಿ ದೇವರನ್ನು ಸಂಪ್ರೀತಿಗೊಳಿಸುವ ಒಂದು ವಿಧಾನವೆಂದರೆ ಹನುಮಂತನನ್ನು ನೆನೆಯುವುದಾಗಿದೆ. ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆಗೆ ಕೂಡ ಈ ಮಂತ್ರ ಕಾರಣವಾಗಿದೆ. ಒಂದು ದಂತಕಥೆಯ ಪ್ರಕಾರ ಹನುಮಂತನು ಶನಿ ದೇವರನ್ನು ರಕ್ಷಿಸಿದ್ದರಿಂದಾಗಿ, ಶನಿ ದೇವರು ಹನುಮನ ಭಕ್ತರ ಮೇಲೆ ತಾನು ಹಾನಿ ಮಾಡುವುದಿಲ್ಲ ಎಂದು ಮಾತುಕೊಟ್ಟಿರುತ್ತಾರೆ.

ಪಾಪಗಳ ನಿವಾರಣೆ

ಪಾಪಗಳ ನಿವಾರಣೆ

ನಮಗೆ ತಿಳಿದೋ ತಿಳಿಯದೆಯೋ ನಾವು ತಪ್ಪುಗಳನ್ನು ಮಾಡುತ್ತೇವೆ. ಹನುಮಾನ್ ಚಾಲೀಸವನ್ನು ಪಠಿಸುವುದರ ಮೂಲಕ ನಾವು ತಪ್ಪಿಗೆ ಕ್ಷಮೆಯಾಚಿಸಬಹುದು. ರಾತ್ರಿ ಹೊತ್ತು 8 ಬಾರಿ ಈ ಮಂತ್ರವನ್ನು ಪಠಿಸುವುದರಿಂದ ನೀವು ಮಾಡಿರುವ ಪಾಪ ಕೃತ್ಯಗಳು ನಿವಾರಣೆಯಾಗುತ್ತವೆ.

ಒತ್ತಡದಿ೦ದ ಮುಕ್ತಿ ಹೊ೦ದಲು

ಒತ್ತಡದಿ೦ದ ಮುಕ್ತಿ ಹೊ೦ದಲು

ಬೆಳಗ್ಗೆ ಎದ್ದು, ಸ್ನಾನವನ್ನು ಪೂರೈಸಿದ ಬಳಿಕ ಪ್ರಥಮತ: ಹನುಮಾನ್ ಚಾಲೀಸಾವನ್ನೇ ಪಠಿಸುವುದರಿ೦ದ ನಿಮ್ಮ ಆ ಇಡಿಯ ದಿನವು ಸುಸೂತ್ರವಾಗಿ ಸಾಗುವ೦ತಾಗುತ್ತದೆ. ಪ್ರಾತ:ಕಾಲದಲ್ಲಿ ಕೈಗೊಳ್ಳುವ ಹನುಮಾನ್ ಚಾಲೀಸಾದ ಪಠಣದಿ೦ದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಹಾಗೂ ನೀವು ನಿಮ್ಮ ಜೀವನದ ಸ೦ಪೂರ್ಣ ನಿಯ೦ತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರನ್ನು ದೈವಿಕ ಅನುಗ್ರಹದಿ೦ದ ಸ೦ಪನ್ನಗೊಳಿಸುತ್ತದೆ.

ಕಷ್ಟಗಳನ್ನು ದೂರ ಮಾಡುತ್ತದೆ

ಕಷ್ಟಗಳನ್ನು ದೂರ ಮಾಡುತ್ತದೆ

ರಾತ್ರಿ ಸಮಯದಲ್ಲಿ ಈ ಮಂತ್ರವನ್ನು ಪಠಿಸುವುದರಿಂದ ಹನುಮಂತನ ಕೃಪೆ ಆ ಭಕ್ತರ ಮೇಲೆ ಉಂಟಾಗುತ್ತದೆ. ಅಂತೆಯೇ ಅವರ ಕಷ್ಟಗಳು ಪರಿಹಾರಗೊಳ್ಳುತ್ತವೆ. ಹನುಮಾನ್ ಚಾಲೀಸದ ಕೆಲವೊಂದು ಮಹತ್ವಗಳನ್ನು ನಾವು ಮೇಲೆ ಪಟ್ಟಿ ಮಾಡಿದ್ದೇವೆ. ನೀವು ನಿತ್ಯವೂ ಈ ಮಂತ್ರವನ್ನು ಪಠಿಸುವುದರಿಂದ ಹನುಮಂತನ ಕೃಪೆಗೆ ಪಾತ್ರರಾಗ ಬಹುದು ಮತ್ತು ಕಷ್ಟಗಳ ನಿವಾರಣೆಯನ್ನು ಮಾಡಿ ಕೊಳ್ಳಬಹುದಾಗಿದೆ.

ಎಂಟು ಬಾರಿ ಪಠಿಸಿ

ಎಂಟು ಬಾರಿ ಪಠಿಸಿ

ಪ್ರತಿ ರಾತ್ರಿ ಮಲಗುವ ಮುನ್ನ ಹನುಮಾನ್ ಚಾಲೀಸಾ ಪ್ರಥಮ ಅಧ್ಯಾಯಗಳನ್ನು ಎಂಟು ಬಾರಿ ಪಠಿಸುವ ಮೂಲಕ ಅಂದಿನ ದಿನ ನಿಮಗೆ ಅರಿವಿದ್ದೋ, ಅರಿವಿರದೆಯೋ ಯಾರ ಮನಸ್ಸನ್ನು ನೋಯಿಸಿದ್ದರೆ ಆ ಪಾಪ ಇಲ್ಲವಾಗುತ್ತದೆ.

ಸಂಕಷ್ಟಗಳು ದೂರ

ಸಂಕಷ್ಟಗಳು ದೂರ

ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು. ವಿಶೇಷವಾಗಿ ರಾತ್ರಿ ನಿದ್ದೆಯಲ್ಲಿ ಹೆದರುವ ಮಕ್ಕಳು ಈ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ಏಕೆಂದರೆ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳು ಇಲ್ಲವಾಗಿ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ.

ಆಂಜನೇಯ ದೇವರ ರಕ್ಷಣೆ ನಿಮ್ಮ ಮೇಲಿರುತ್ತದೆ

ಆಂಜನೇಯ ದೇವರ ರಕ್ಷಣೆ ನಿಮ್ಮ ಮೇಲಿರುತ್ತದೆ

ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಆಂಜನೇಯ ದೇವರ ರಕ್ಷಣೆಯನ್ನು ಪಡೆಯಬಹುದು. ಅಲ್ಲದೇ ದೇವರ ಅನುಗ್ರಹದಿಂದ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳು ಇಲ್ಲವಾಗಿ ಜೀವನದ ಗುರಿಯನ್ನು ಸುಲಭವಾಗಿ ತಲುಪಬಹುದು.

1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ....

1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ....

ಜೀವನದಲ್ಲಿ ಮಹತ್ತರವಾದ ಗುರಿಯನ್ನು ಸಾಧಿಸುವ ಇಚ್ಛೆಯುಳ್ಳವರು ತಮ್ಮ ಗುರಿ ಸಾಧನೆಯ ಅವಧಿಯಲ್ಲಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಅಥವಾ ಮೂಲಾ ನಕ್ಷತ್ರದ ರಾತ್ರಿ ಒಟ್ಟು 1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಹನುಮದೇವರ ಅನುಗ್ರಹ ಪಡೆಯಬಹುದು.

 ಋಣಾತ್ಮಕ, ದುಷ್ಟ ಶಕ್ತಿಗಳನ್ನು ತೊಡೆದುಹಾಕುವುದಕ್ಕಾಗಿ

ಋಣಾತ್ಮಕ, ದುಷ್ಟ ಶಕ್ತಿಗಳನ್ನು ತೊಡೆದುಹಾಕುವುದಕ್ಕಾಗಿ

ಹನುಮಾನ್ ಚಾಲೀಸಾದ ಶ್ಲೋಕಗಳ ಪೈಕಿ ಒ೦ದು ಹೀಗಿದೆ, "ಭೂತ್ ಪಿಶಾಚ್ ನಿಕಟ್ ನಹಿ ಆವೇ, ಮಹಾವೀರ್ ಜಬ್ ನಾಮ್ ಸುನಾವೇ". ಇದರ ಭಾವಾನುವಾದವು ಹೀಗಿದೆ: ಭಗವಾನ್ ಹನುಮ೦ತನ ನಾಮಧೇಯವನ್ನು ಹಾಗೂ ಹನುಮಾನ್ ಚಾಲೀಸಾದ ಪಠಣವನ್ನು ಅತ್ಯುಚ್ಚ ಸ್ವರದಲ್ಲಿ ಕೈಗೊಳ್ಳುವ ಯಾವುದೇ ವ್ಯಕ್ತಿಯನ್ನೂ ಸಹ ಯಾವುದೇ ದುಷ್ಟ ಶಕ್ತಿಯು ಏನೂ ಮಾಡಲಾಗದು. ಹನುಮಾನ್ ಚಾಲೀಸಾವು ಕುಟು೦ಬದ ಸದಸ್ಯರ ಮನಸ್ಸು ಹಾಗೂ ಆತ್ಮಗಳಿ೦ದ ಎಲ್ಲಾ ಬಗೆಯ ಋಣಾತ್ಮಕ ಭಾವಗಳನ್ನು ತೊಡೆದುಹಾಕುವುದರ ಮೂಲಕ, ಸ೦ಸಾರದಲ್ಲಿ ಶಾ೦ತಿ, ನೆಮ್ಮದಿ, ಹಾಗೂ ಸಾಮರಸ್ಯವನ್ನು ಸ್ಥಾಪಿಸುತ್ತದೆ.

ಹನುಮಾನ ಚಾಲೀಸಾ ಮಂತ್ರ

ಹನುಮಾನ ಚಾಲೀಸಾ ಮಂತ್ರ

ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ

ರಾಮದೂತ ಆತುಲಿತ ಬಲಧಮಾ

ಅಂಜನೀಪ್ರತ್ರ- ಪವನಸುತ ನಾಮಾ

ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ

ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ

English summary

Benefits Of Reciting Hanuman Chalisa

It is believed that reciting Hanuman Chalisa is very powerful as it helps reduce the effects of Sade Sati, and also bring good health and prosperity. Moreover, Hanuman Chalisa recitation can also help ward off spirits. The best time to recite Hanuman Chalisa is in the morning and at night. Those under the evil influences of the Saturn should chant the Hanuman Chalisa at night 8 times on Saturdays for better results. Here are some benefits of reciting the powerful Hanuman Chalisa.
X
Desktop Bottom Promotion