Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ- ಇಷ್ಟಾರ್ಥ ನೆರವೇರುವುದು
ಶಿವನನ್ನು ಆರಾಧಿಸಲು ಅಥವಾ ಪ್ರಾರ್ಥನೆ ಮಾಡಲು ಶ್ರಾವಣ ಮಾಸ ಅತ್ಯಂತ ಮಂಗಳಕರವಾದ ತಿಂಗಳು ಎಂದು ಪರಿಗಣಿಸಲಾಗುವುದು. ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದು ಸಾಮಾನ್ಯ ದಿನದಲ್ಲಿ ಆರಾಧಿಸುವುದಕ್ಕಿಂತ ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಹಾಗೂ ಶಿವನಿಗಾಗಿ ಉಪವಾಸವನ್ನು ಕೈಗೊಳ್ಳುವುದನ್ನು ನಾವು ಕಾಣಬಹುದು. ಶಿವನ ವಿಶೇಷ ಆರಾಧನೆಗಾಗಿ ಶ್ರಾವಣ ಸೋಮವಾರ ವ್ರತ ಆಚರಣೆ, ಅಭಿಷೇಕ, ರುದ್ರಾಕ್ಷಿ ಮಣಿಯನ್ನು ಧರಿಸುವುದರ ಮೂಲಕ ಶಿವನನ್ನು ಜಪಿಸಲಾಗುವುದು.
ಉಳಿದ ಸಮಯದಲ್ಲಿ ಶಿವನ ಪೂಜೆ ಮಾಡುವುದಕ್ಕಿಂತ ಶ್ರಾವಣ ಮಾಸದಲ್ಲಿ ಕೈಗೊಳ್ಳುವ ಶಿವನ ಆರಾಧನೆಯು 108 ಪಟ್ಟು ಹೆಚ್ಚು ಶಕ್ತಿಶಾಲಿಯಾದದ್ದು ಎಂದು ಹೇಳಲಾಗುವುದು. ಹಿಂದೂ ಧರ್ಮದಲ್ಲಿ ಭಗವಾನ್ ಶಿವನನ್ನು ಸೃಷ್ಟಿಯ ಲಯ ಕರ್ತ ಎಂದು ಪರಿಗಣಿಸಲಾಗಿದೆ. ಜೊತೆಗೆ ಅತ್ಯಂತ ಶಕ್ತಿಯುತವಾದ ದೇವರು ಎಂದು ಸಹ ಕರೆಯಲಾಗುವುದು. ಶಿವನ ಆರಾಧನೆ ಮಾಡುವುದರ ಮೂಲಕ ಜೀವನವನ್ನು ಪಾವನಗೊಳಿಸಿಕೊಳ್ಳಬಹುದು. ಜೊತೆಗೆ ಅನೇಕ ಸಮಸ್ಯೆಗಳು ನಮ್ಮಿಂದ ದೂರವಾಗುವುದು ಎಂದು ನಂಬಲಾಗುತ್ತದೆ. ಶಿವನ ಆರಾಧನೆಯಿಂದ ಯಾವ ಬಗೆಯ ಪುಣ್ಯ ಲಭಿಸುವುದು ಎನ್ನುವುದರ ಕುರಿತು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.
ಶಿವನಿಗೆ ಶ್ರಾವಣ ಮಾಸದ ಪೂಜೆ ಶ್ರೇಷ್ಠವಾದ್ದು
ಹಿಂದೂ ಪಂಚಾಗದ ಪ್ರಕಾರ ಪ್ರತಿ ವರ್ಷ ಆಷಾಢ ಮಾಸದ ಬಳಿಕ ಬರುವ ತಿಂಗಳು ಶ್ರಾವಣ ಮಾಸ. ಈ ಶ್ರಾವಣ ಮಾಸದಲ್ಲಿ ಅನೇಕ ಹಬ್ಬಗಳು ಹಾಗೂ ವ್ರತಾಚರಣೆಗಳು ಬರುತ್ತವೆ. ಒಂದು ವಿಧದಲ್ಲಿ ಹಿಂದೂಗಳ ಹಬ್ಬಗಳ ಪ್ರಾರಂಭವಾಗುವ ತಿಂಗಳು ಎಂದು ಸಹ ಹೇಳಬಹುದು. ಈ ತಿಂಗಳನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ತಿಂಗಳಲ್ಲಿ ಶಿವನ ಆರಾಧನೆ, ಜಪ, ವ್ರತ ಕೈಗೊಂಡರೆ ಶಿವನ ಆಶೀರ್ವಾದ ಲಭಿಸುವುದು. ಅಲ್ಲದೆ ಉಳಿದ ದಿನದಲ್ಲಿ ಮಾಡುವ ಶಿವನ ಆರಾಧನೆಗಿಂತ ಶ್ರಾವಣ ಮಾಸದಲ್ಲಿ ಮಾಡುವ ಆರಾಧನೆ 108 ಪಟ್ಟು ಹೆಚ್ಚು ಶ್ರೇಷ್ಠ ಹಾಗೂ ಶಕ್ತಿಯುತವಾದದ್ದು ಎಂದು ಹೇಳಲಾಗುವುದು. ಹಾಗಾಗಿಯೇ ಶ್ರಾವಣ ತಿಂಗಳಲ್ಲಿ ಮಧ್ಯಾಹ್ನ ಪೂಜೆ, ಸೋಮವಾರ ವ್ರತ ಹಾಗೂ ಶಿವನ ಆರಾಧನೆ ಮಾಡುವುದು ಮಂಗಳಕರವಾದದ್ದು ಎಂದು ನಂಬಲಾಗಿದೆ.
ಶ್ರಾವಣ ತಿಂಗಳು ಶಿವನಿಗೆ ಅಚ್ಚುಮೆಚ್ಚು ಯಾಕೆ ಗೊತ್ತೇ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
ಸಮೃದ್ಧಿ ದೊರೆಯುವುದು
ತುಂಬು ಮನಸ್ಸಿನಿಂದ ಅಥವಾ ನಿಷ್ಕಲ್ಮಶವಾದ ಹೃದಯದಿಂದ ಶಿವನ ಪೂಜೆಯನ್ನು ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಶನಿದೋಶವು ನಿವಾರಣೆಯಾಗುವುದು. ಯಾವುದೇ ಗ್ರಹಗಳ ದೋಷವಿದ್ದರೂ ಪರಿಹಾರವಾಗುವುದು. ಶ್ರಾವಣ ಸೋಮವಾರದಂದು ರುದ್ರಾಭಿಷೇಕ ಪೂಜೆ ಮಾಡುವುದರಿಂದ ದೈಹಿಕ ಆರೋಗ್ಯ ಸುಧಾರಣೆಗೆ ಅನುಕೂಲವಾಗುವುದು. ಜೇನುತುಪ್ಪ, ಕಬ್ಬು ಸೇರಿದಂತೆ ಇನ್ನಿತರ ಮಂಗಳಕರವಾದ ರುದ್ರಾಭಿಷೇಕ ಮಾಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯು ಉಂಟಾಗುವುದು.
ನೀಲ ಕಂಠ
ಹಿಂದೂ ಪುರಾಣಗಳ ಪ್ರಕಾರ ಸಮುದ್ರ ಮಂಥನದ ಕಾಲದಲ್ಲಿ ರಾಕ್ಷಸರು ಮತ್ತು ದೇವರ ನಡುವೆ ಒಂದು ಸಮರ ಉಂಟಾಯಿತು. ಈ ಸಂದರ್ಭದಲ್ಲಿ ಸಮುದ್ರದಿಂದ 14 ಅಂಶಗಳು ಮೇಲೆ ಬಂದವು. ಅದರಲ್ಲಿ ಒಂದು ಮಾರ ವಿಷವು ಒಂದಾಗಿತ್ತು. ಆ ವಿಷದಿಂದ ಜಗತ್ತು ನಾಶವಾಗುವುದು ಎಂದು ಹೇಳಲಾಯಿರು. ಆ ಸಂದರ್ಭದಲ್ಲಿ ಆ ಹಾಲಾಹಲವನ್ನು ಶಿವನು ಕುಡಿದು, ತನ್ನ ಗಂಟಲಿನಲ್ಲಿ ಇಟ್ಟುಕೊಂಡನು. ಇದರ ಪರಿಣಾಮವಾಗಿ ಶಿವನ ಕುತ್ತಿಗೆಯು ನೀಲಿ ಬಣ್ಣಕ್ಕೆ ತಿರುಗಿತು. ಈ ಸಂಗತಿಯು ಶ್ರಾವಣ ಮಾಸದಲ್ಲಿಯೇ ಸಂಭವಿಸಿತ್ತು ಎಂದು ಹೇಳಲಾಗುವುದು.
ಆಸೆಯನ್ನು ಈಡೇರಿಸುವನು
ಶಿವನನ್ನು ಒಬ್ಬ ಶ್ರೇಷ್ಠ ದೈವ ಶಕ್ತಿ ಎಂದು ಪರಿಗಣಿಸಲಾಗುವುದು. ಶಿವ ಪುರಾಣದ ಪ್ರಕಾರ ಶ್ರಾವಣ ಮಾಸದ ಸಮಯದಲ್ಲಿ ಅವಿವಾಹಿತ ಮಹಿಳೆಯರು ಶಿವನನ್ನು ಆರಾಧಿಸುವುದು, ಉಪವಾಸ ಕೈಗೊಳ್ಳುವುದರಿಂದ ಶಿವನ ಕೃಪೆಗೆ ಒಳಗಾಗುತ್ತಾರೆ ಎಂದು ಹೇಳಲಾಗುವುದು. ಜೊತೆಗೆ ಅವರ ಮನದಾಸೆಯಂತಹ ವರನೊಂದಿಗೆ ವಿವಾಹವಾಗುವುದು ಎಂದು ಹೇಳಲಾಗುವುದು.
ಆರೋಗ್ಯ ಸುಧಾರಣೆ
ಶಿವನ ಪೂಜೆಯನ್ನು ಕೈಗೊಳ್ಳುವುದು ಮತ್ತು ಪಾಲ್ಗೊಳ್ಳುವುದರಿಂದ ಆರೋಗ್ಯದಲ್ಲಿ ತೀವ್ರವಾದ ಬದಲಾವಣೆಯನ್ನು ನೋಡಬಹುದು. ಪೂಜೆ ಕೈಗೊಂಡರೆ ಆರೋಗ್ಯ ಸುಧಾರಣೆಗೆ ಸಹಾಯವಾಗುವುದು. ಪ್ರಾಣಾಂತಿಕ ರೋಗಗಳಿಂದ ರಕ್ಷಿಸಲಾಗುವುದು. ಈ ತಿಂಗಳಲ್ಲಿ ಪಿತೃ ದೋಷ, ಕಾಳಸರ್ಪ ದೋಷ, ಮಂಗಳ ದೋಷ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದ ಪೂಜೆಯನ್ನು ಸಹ ಕೈಗೊಳ್ಳಬಹುದು. ಆಗ ಶಿವನು ಸಮಸ್ಯೆಯನ್ನು ನಿವಾರಿಸುವನು.
ಮೃತ್ಯುಂಜಯ ಜಪ
ಶ್ರಾವಣ ಮಾಸದಲ್ಲಿ ಮಹಾ ಮೃತ್ಯುಂಜಯ ಜಪ ಅಥವಾ ಮಂತ್ರಗಳನ್ನು ಪಠಿಸುವುದರಿಂದ ಅಪಾಯಗಳನ್ನು ಹಾಗೂ ಅಕಾಲಿಕ ಮರಣದಿಂದ ಪಾರಾಗಬಹುದು. ರುದ್ರಸೂಕ್ತದೊಂದಿದಗೆ ಪೂಜೆ ಮಾಡುವುದರಿಂದ ಅತ್ಯುತ್ತಮ ಪರಿಣಾಮ ದೊರೆಯುವುದು. ಈ ತಿಂಗಳಲ್ಲಿ ರುದ್ರಾಕ್ಷಿ ಸರವನ್ನು ಧರಿಸುವುದರಿಂದಲೂ ಉತ್ತಮ ಪ್ರಯೋಜನ ದೊರೆಯುವುದು.
ಶನಿದೋಷ ಇದ್ದವರು ಶ್ರಾವಣ ಶನಿವಾರ ಶನಿ ಹಾಗೂ ಶಿವನಿಗೆ ಪೂಜೆ ಮಾಡಿ- ಎಲ್ಲವೂ ಒಳ್ಳೆಯದಾಗುವುದು
ಮೃತ್ಯುಂಜಯ ಜಪ
ಶ್ರಾವಣ ಮಾಸದಲ್ಲಿ ಮಹಾ ಮೃತ್ಯುಂಜಯ ಜಪ ಅಥವಾ ಮಂತ್ರಗಳನ್ನು ಪಠಿಸುವುದರಿಂದ ಅಪಾಯಗಳನ್ನು ಹಾಗೂ ಅಕಾಲಿಕ ಮರಣದಿಂದ ಪಾರಾಗಬಹುದು. ರುದ್ರಸೂಕ್ತದೊಂದಿದಗೆ ಪೂಜೆ ಮಾಡುವುದರಿಂದ ಅತ್ಯುತ್ತಮ ಪರಿಣಾಮ ದೊರೆಯುವುದು. ಈ ತಿಂಗಳಲ್ಲಿ ರುದ್ರಾಕ್ಷಿ ಸರವನ್ನು ಧರಿಸುವುದರಿಂದಲೂ ಉತ್ತಮ ಪ್ರಯೋಜನ ದೊರೆಯುವುದು.
ಶ್ರೀಮಂತ ಜೀವನ
ದಂತ ಕಥೆಗಳ ಪ್ರಕಾರ ಭಗವಾನ್ ಶಿವನನ್ನು ಈ ಮಾಸದಲ್ಲಿ ಪೂಜಿಸಿದರೆ ಆತ್ಮ ಮತ್ತು ಮೋಕ್ಷವು ನಿಮಗೆ ದೊರೆಯುವುದು. ಶ್ರಾವಣ ಮಾಸದ ಶಿವನ ಪೂಜೆಯಿಂದ ಆರೋಗ್ಯಕರ ಮತ್ತು ಶ್ರೀಮಂತ ಜೀವನ ಲಭಿಸುವುದು.
ಜ್ಯೋತಿರ್ಲಿಂಗದ ದರ್ಶನದ ಭಾಗ್ಯ
ಪ್ರಾಚೀನ ನಂಬಿಕೆಯ ಪ್ರಕಾರ ಶ್ರಾವಣ ಮಾಸದಲ್ಲಿ ಮಧ್ಯಾಹ್ನ ಉಪವಾಸ ಕೈಗೊಳ್ಳುವುದರಿಂದ ಸಂತೋಷ ಹಾಗೂ ಪ್ರಪಂಚದ ಎಲ್ಲಾ ಸುಖವು ಲಭ್ಯವಾಗುವುದು. ಶಿವನು ನಮ್ಮ ಎಲ್ಲಾ ಆಸೆಗಳನ್ನು ಪೂರ್ಣಗೊಳಿಸುವನು. ಈ ತಿಂಗಳಲ್ಲಿ ಮಾಡಿದ ದಾನದಿಂದ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದಷ್ಟು ಪುಣ್ಯ ಲಭಿಸುವುದು.
ಸಂತೃಪ್ತ ಜೀವನ
ಶ್ರಾವಣ ಮಾಸದ ಸೋಮವರ ವ್ರತ ಹಾಗೂ ಉಪವಾಸ ಕೈಗೊಳ್ಳುವುದರಿಂದ ಸಂತೋಷಭರಿತ ವಿವಾಹ ಜೀವನ, ಮಕ್ಕಳಿಂದ ಸಂತೋಷ, ಸಮೃದ್ಧಿ, ಸಂಪತ್ತು, ಐಷಾರಾಮಿ ಜೀವನ ಹಾಗೂ ಪೀಳಿಗೆಯ ಅಭಿವೃದ್ಧಿಯುಂಟಾಗುವುದು. ಶ್ರಾವಣ ಸೋಮವಾರದಂದು ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಬೇಕು. ಶಿವನು ಬಿಲ್ವ ಪತ್ರೆಯ ಬೇರುಗಳಲ್ಲಿ ವಾಸಿಸುತ್ತಾನೆ ಎನ್ನುವ ನಂಬಿಕೆಯಿದೆ. ಹೀಗೆ ಮಾಡುವುದರಿಂದ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದಷ್ಟು ಸಂತೋಷ ಲಭ್ಯವಾಗುವುದು.
ಪತಿಯ ಆಯುಷ್ಯ ಹೆಚ್ಚುವುದು
ಶಿವನಿಗೆ ಶ್ರಾವಣ ಮಾಸದ ಪೂಜೆ ವಿಶೇಷವಾದದ್ದು. ಈ ತಿಂಗಳಲ್ಲಿ ಬರುವ 4 ಸೋಮವಾರಗಳು ಬಹಳ ಮಂಗಳಕರವಾದದ್ದು. ಅಂದು ವಿವಾಹಿತ ಮಹಿಳೆಯರು ಉಪವಾಸ ಹಾಗೂ ಶಿವನ ಆರಾಧನೆ ಕೈಗೊಳ್ಳುವುದರಿಂದ ಪತಿಯ ಆಯುಷ್ಯ ಹಾಗೂ ಆರೋಗ್ಯ ಹೆಚ್ಚುವುದು. ಅಲ್ಲದೆ ದೀರ್ಘಾವಧಿಯ ಸಂತೋಷದ ವೈವಾಹಿಕ ಜೀವನ ಲಭ್ಯವಾಗುವುದು.
ವಿಶೇಷ ಉಪವಾಸ
ಶ್ರಾವಣ ಮಾಸದಲ್ಲಿ ಕೆಲವರು ತಿಂಗಳ ಪೂರ್ತಿ ವಿಶೇಷ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ತಿಂಗಳ ಪೂರ್ತಿ ಕೇವಲ ಹಣ್ಣು ಹಾಗೂ ಸಾಬಕ್ಕಿಯ ಆಹಾರ ಸೇವಿಸುವರು. ಶಿವನ ಆರಾಧನೆಯಲ್ಲಿಯೇ ತಲ್ಲೀನರಾಗುವರು. ಜೊತೆಗೆ ತಿಂಗಳಲ್ಲಿ ಒಂದೇ ಬಾರಿ ಊಟವನ್ನು ಮಾಡುವರು. ಇವರು ಕೈಗೊಳ್ಳುವ ಉಪವಾಸದ ಸಮಯದಲ್ಲಿ ಉಪ್ಪನ್ನು ತಿನ್ನುವುದಿಲ್ಲ.
ಶನಿ ದೋಷ ನಿವಾರಣೆ
ಶ್ರಾವಣ ಮಾಸದಲ್ಲಿ ಶ್ರಾವಣ ಶನಿವಾರ ಎಂದು ಆಚರಣೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುವುದು. ಶನಿವಾರದಂದು ಶನಿ ದೇವರ ಪೂಜೆ, ಎಣ್ಣೆಯ ಅಭಿಷೇಕ, ಉಪವಾಸ ವ್ರತ ಕೈಗೊಳ್ಳುವುದರಿಂದ ಶನಿಯ ದೋಷವು ನಿರ್ಮೂಲನೆ ಹೊಂದುವುದು.
ಶ್ರಾವಣ ಮಾಸದ ಹುಣ್ಣಿಮೆ
ಶ್ರಾವಣ ಮಾಸದ ಹುಣ್ಣಿಮೆಯು ಶಿವನಿಗೆ ವಿಶೇಷವಾದ ದಿನ. ಅಂದು ಶಿವನ ಆರಾಧನೆ ಹಾಗೂ ಅಭಿಷೇಕವನ್ನು ಕೈಗೊಳ್ಳುವುದರಿಂದ ಶಿವನು ಪ್ರಸನ್ನನಾಗುವನು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಗುವುದು.
ಆತ್ಮ ಶುದ್ಧಿಯಾಗುವುದು
ಶ್ರಾವಣ ಮಾಸವು ಅತ್ಯಂತ ಮಂಗಳಕರವಾದ ತಿಂಗಳು. ಈ ಮಾಸದಲ್ಲಿ ಶಿವನ ಪೂಜೆ ಮಾಡುವುದರ ಮೂಲಕ ಅನೇಕ ಲಾಭವನ್ನು ಪಡೆದುಕೊಳ್ಳಬಹುದು. ಅಲ್ಲದೆ ಶಿವನ ಜಪದಿಂದ ಮನಸ್ಸು, ಇಂದ್ರಿಯಗಳು, ದೇಹ ಮತ್ತು ಆತ್ಮವು ಶುದ್ಧಿಗೊಳ್ಳುವುದು. ಶಿವ ತತ್ವಗಳಿಂದ ಜೀವನ ಪಾವನವಾಗುವುದು.
ಶಿವನ ಆರಾಧನೆಯಲ್ಲಿ ಮಗ್ನರಾಗಿ
ಪವಿತ್ರವಾದ ಈ ತಿಂಗಳಲ್ಲಿ ಶಿವನ ಆರಾಧನೆ, ಧ್ಯಾನ, ಜಪ, ವ್ರತ, ಪ್ರಾರ್ಥನೆ ಕೈಗೊಳ್ಳುವುದು ಮತ್ತು ದೇವಾಲಯಗಳಿಗೆ ಭೇಟಿನೀಡಿ, ಶಿವನ ಆರಾಧನೆ ಮಾಡುವುದರಿಂದ ಶಿವನು ಪ್ರಸನ್ನನಾಗುವನು. ಜೊತೆಗೆ ನಿಮ್ಮ ಜೀವನವು ಸಂತೋಷದಿಂದ ಕೂಡಿರುವುದು.