For Quick Alerts
ALLOW NOTIFICATIONS  
For Daily Alerts

ಭೀಮನ ಅಮವಾಸ್ಯೆ ಈ ಬಾರಿ ಶನಿವಾರ ಬಂದಿದೆ, ಹಾಗಾಗಿ ಶನಿ ದೇವರ ಪೂಜೆಯೂ ಮಾಡಿ

By Hemanth
|

ಅಮವಾಸ್ಯೆಯು ಬಂದಿದೆ, ಈ ವರ್ಷ ಭೀಮನ ಅಮವಾಸ್ಯೆಯನ್ನು ಅಗಸ್ಟ್ 11, 2018ರಂದು ಆಚರಿಸಲಾಗುತ್ತಿದೆ. ಈ ವರ್ಷ ಭೀಮನ ಅಮವಾಸ್ಯೆಯು ಅಶ್ಲೇಷ ನಕ್ಷತ್ರದಲ್ಲಿ ಸಿಂಹ ರಾಶಿಯಲ್ಲಿ ಬರುತ್ತಲಿದೆ. ಇದೇ ದಿನ ಸೂರ್ಯಗ್ರಹಣ ಕೂಡ ಸಂಭವಿಸಲಿದ್ದು, ಆ.11ರಂದು ಬೆಳಗ್ಗೆ 8 ಗಂಟೆಯಿಂದ 9.46ರ ತನಕ ಗ್ರಹಣವಿರಲಿದೆ.

ಈ ಅಮವಾಸ್ಯೆಗೆ ಇರುವ ಬೇರೆ ಬೇರೆ ಹೆಸರುಗಳು ಈ ಅಮವಾಸ್ಯೆಯನ್ನು ಶ್ರಾವಣಿ ಅಮವಾಸ್ಯೆ, ಭೀಮಾ ಅಮವಾಸ್ಯೆ, ಭೀಮನ ಅಮವಾಸ್ಯೆ, ಶನಿ ಅಮವಾಸ್ಯೆ ಮತ್ತು ಶನಿಸಂಚಾರಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ....

ಈ ಅಮವಾಸ್ಯೆಗೆ ಇರುವ ಬೇರೆ ಬೇರೆ ಹೆಸರುಗಳು

ಈ ಅಮವಾಸ್ಯೆಗೆ ಇರುವ ಬೇರೆ ಬೇರೆ ಹೆಸರುಗಳು

ಈ ಅಮವಾಸ್ಯೆಯನ್ನು ಶ್ರಾವಣಿ ಅಮವಾಸ್ಯೆ, ಭೀಮಾ ಅಮವಾಸ್ಯೆ, ಭೀಮನ ಅಮವಾಸ್ಯೆ, ಶನಿ ಅಮವಾಸ್ಯೆ ಮತ್ತು ಶನಿಸಂಚಾರಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ.

ಅಮವಾಸ್ಯೆ ಮಹತ್ವ ಮತ್ತು ಜೋತಿಷ್ಯದ ಪರಿಹಾರ

ಅಮವಾಸ್ಯೆ ಮಹತ್ವ ಮತ್ತು ಜೋತಿಷ್ಯದ ಪರಿಹಾರ

ಭೀಮನ ಅಮವಾಸ್ಯೆಯು ಈ ವರ್ಷ ಶನಿವಾರದಂದು ಬಂದಿದೆ. ಶನಿವಾರ ಈ ಅಮವಾಸ್ಯೆಯು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಶನಿ ಅಮವಾಸ್ಯೆ ಅಥವಾ ಶನಿಸಂಚಾರಿ ಅಮವಾಸ್ಯೆ ಎಂದು ಕರೆಯಲಾಗುತ್ತದೆ. ಹಲವಾರು ಕಾರಣಗಳಿಂದ ಈ ಅಮವಾಸ್ಯೆಯು ತುಂಬಾ ಮಹತ್ವ ಪಡೆದುಕೊಂಡಿದೆ ಮತ್ತು ಇದಕ್ಕೆ ಜೋತಿಷ್ಯದ ಪರಿಹಾರಗಳು ಇಲ್ಲಿದೆ.

ಪೂರ್ವಜರಿಗೆ ಗೌರವ ಸಲ್ಲಿಸುವುದು

ಪೂರ್ವಜರಿಗೆ ಗೌರವ ಸಲ್ಲಿಸುವುದು

ಪ್ರತಿ ಅಮವಾಸ್ಯೆಯಂದು ಪೂರ್ವಜರಿಗೆ ಗೌರವ ಸೂಚಿಸಲಾಗುತ್ತದೆ. ನಮ್ಮ ಹಿರಿಯರ ಫೋಟೊದ ಮುಂದೆ ನಿಂತುಕೊಂಡು ಪ್ರಾರ್ಥಿಸಬೇಕು. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲು ಕೆಲವರು ಪವಿತ್ರ ಸ್ನಾನ ಮಾಡುವರು. ಹಿಂದೂಗಳ ನಂಬಿಕೆಯ ಪ್ರಕಾರ ನಮ್ಮನ್ನು ಅಗಲಿದ ಹಿರಿಯರ ಶಕ್ತಿಯು ಕುಟುಂಬಕ್ಕೆ ಬೆಂಬಲವಾಗಿ ದೀರ್ಘಕಾಲ ಇರುವುದು ಮತ್ತು ಕೆಲವೊಂದು ಸಂದರ್ಭಗಳಲ್ಲಿ ಇದು ಅಂತಿಮ ಕ್ಷಣದವರೆಗೂ ಇರುವುದು ಎಂದು ನಂಬಲಾಗಿದೆ. ಪೂರ್ವಜರಿಗೆ ಅಮವಾಸ್ಯೆ ದಿನ ಪ್ರಾರ್ಥನೆ ಮಾಡಲಾಗುತ್ತದೆ.

ಪ್ರಾಣಿಪಕ್ಷಿಗಳಿಗೆ ಮತ್ತು ಬಡಬಗ್ಗರಿಗೆ ಆಹಾರ ನೀಡಿ

ಪ್ರಾಣಿಪಕ್ಷಿಗಳಿಗೆ ಮತ್ತು ಬಡಬಗ್ಗರಿಗೆ ಆಹಾರ ನೀಡಿ

ಈ ದಿನದಂದು ಕಾಗೆಗಳು, ಗೋವುಗಳು ಮತ್ತು ನಾಯಿಗಳಿಗೆ ಆಹಾರ ನೀಡಬೇಕು. ಬಡವರು ಮತ್ತು ಶನಿ ದೇವಾಲಯದ ಹೊರಗೆ ಕುಳಿತಿರುವ ನಿರ್ಗತಿಕರಿಗೆ ಆಹಾರ ನೀಡಬೇಕು. ಈ ಆಹಾರದಲ್ಲಿ ಉಪ್ಪು ಇರಲಿ. ಅಂಗವೈಕಲ್ಯ ಹೊಂದಿರುವವರಿಗೆ ಆಹಾರ ನೀಡಿದರೆ ಆಶೀರ್ವಾದ ಸಿಗುವುದು. ಇದರಿಂದ ನಿಮಗೆ ಶನಿ ಒಲಿಯುವನು.

ಶಿವ ದೇವರನ್ನು ಆರಾಧಿಸುವ ಮಹತ್ವ

ಶಿವ ದೇವರನ್ನು ಆರಾಧಿಸುವ ಮಹತ್ವ

ಶ್ರಾವಣ ತಿಂಗಳಲ್ಲಿ ಬಂದಿರುವ ಕಾರಣದಿಂದಾಗಿ ಈ ಅಮವಾಸ್ಯೆಯು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಈ ತಿಂಗಳು ಶಿವ ದೇವರ ತಿಂಗಳಾಗಿದೆ. ಶಿವ ದೇವರನ್ನು ಶನಿ ಕೂಡ ಪೂಜಿಸುತ್ತಾನೆ. ಇದರಿಂದ ಶಿವನ ಪೂಜೆ ಮಾಡಿದರೆ ಶನಿ ದೇವರ ಆಶೀರ್ವಾದವು ಸಿಗುವುದು. ಶಿವ ದೇವರಿಗೆ ಅಭಿಷೇಕ ಮಾಡಬೇಕು. ಅಭಿಷೇಕವೆಂದರೆ ಶಿವಲಿಂಗಕ್ಕೆ ನೀರನ್ನು ಅರ್ಪಿಸುವುದು.

 ಶನಿ ದೇವರ ಪೂಜೆ ಮತ್ತು ದೋಷ ನಿವಾರಣೆ ಪೂಜೆಗಳು

ಶನಿ ದೇವರ ಪೂಜೆ ಮತ್ತು ದೋಷ ನಿವಾರಣೆ ಪೂಜೆಗಳು

ಶನಿ ಅಮವಾಸ್ಯೆಯು ಶನಿ ದೇವರ ಪೂಜೆಗೆ ಮಹತ್ವದ್ದಾಗಿದೆ. ಶನಿದೇವರನ್ನು ಪೂಜಿಸಲು ಇಂದು ಹಲವಾರು ರೀತಿಯ ಪೂಜೆಗಳನ್ನು ಮಾಡಬಹುದು ಎಂದು ನಂಬಲಾಗಿದೆ. ಜಾತಕದಲ್ಲಿ ಶನಿಯ ಸ್ಥಾನವು ಸರಿಯಾಗಿಲ್ಲದೆ ಇದ್ದರೆ ಆಗ ಅದನ್ನು ದೋಷವೆಂದು ಕರೆಯಲಾಗುತ್ತದೆ. ಶನಿ ಅಮವಾಸ್ಯೆಯಂದು ಪೂಜೆ ಮಾಡಿದರೆ ದೋಷ ನಿವಾರಣೆ ಮಾಡಬಹುದು. ಈ ದಿನದ ಪೂಜೆಯಿಂದ ಜಾತಕದಲ್ಲಿರುವ ಕಾಳಸರ್ಪ ದೋಷ ನಿವಾರಣೆ ಮಾಡಬಹುದು.

 ಶನಿ ಮಂದಿರಕ್ಕೆ ಭೇಟಿ ನೀಡಿ

ಶನಿ ಮಂದಿರಕ್ಕೆ ಭೇಟಿ ನೀಡಿ

ಜಾತಕದಲ್ಲಿ ಶನಿಯು ನೀಚ ಸ್ಥಾನದಲ್ಲಿ ಇರುವಂತಹವರು ಶನಿ ಮಂದಿರಕ್ಕೆ ಭೇಟಿ ನೀಡಿ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಕಪ್ಪು ಬಟ್ಟೆ, ಉದ್ದಿನ ಬೇಳೆ, ಸಿಹಿ, ತೆಂಗಿನಕಾಯಿ, ಕಬ್ಬಿಣದ ಸಣ್ಣ ತುಂಡು ಮತ್ತು ಸ್ವಲ್ಪ ಹೂವನ್ನು ಶನಿ ದೇವರಿಗೆ ಅರ್ಪಿಸಬೇಕು.

ಇತರ ರೀತಿಯ ದಾನ ಮಾಡಿ

ಇತರ ರೀತಿಯ ದಾನ ಮಾಡಿ

ಶನಿ ಅಮವಾಸ್ಯೆಯ ದಿನದಂದು ಮನೆಗೆ ಬರುವಂತಹ ಭಿಕ್ಷುಕರನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು. ಯಾರಾದರೂ ಹಾವನ್ನು ಹಿಡಿದಿದ್ದರೆ ಆಗ ನೀವು ಅದನ್ನು ಹಿಡಿದವರಿಗೆ ಹಣ ನೀಡಿ ಅಥವಾ ಬೇರೆ ರೀತಿಯಿಂದ ಅದನ್ನು ಬಂಧಮುಕ್ತಗೊಳಿಸಬೇಕು. ಮೀನನ್ನು ಹಿಡಿದಿದ್ದರೆ ಆಗ ಅದನ್ನು ನೀವು ಮತ್ತೆ ನೀರಿಗೆ ಹಾಕಬೇಕು. ಏಳು ರೀತಿಯ ಧಾನ್ಯಗಳನ್ನು ದಾನ ಮಾಡಿದರೆ ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ.

English summary

Astrological Remedies On Bheeman Shani Amavasya

Bheemavati Shani Amavasya also known as Bheemana Amavasya is observed on August 11, 2018. This year it being a Saturday, it can also be called a Shanishacharai Amavasya and becomes a significant for the worship of Lord Shiva, Shani Dev and the ancestors. A number of astrological remedies and tips can also be adopted on this day.
X
Desktop Bottom Promotion