For Quick Alerts
ALLOW NOTIFICATIONS  
For Daily Alerts

ಶೈಕ್ಷಣಿಕವಾಗಿ ಉತ್ತಮವಾಗಿರಲು ಜ್ಯೋತಿಷ್ಯದ ಪರಿಹಾರಗಳು

|

ಶಿಕ್ಷಣವೆನ್ನುವುದು ಜೀವನದಲ್ಲಿ ಅತೀ ಅಗತ್ಯವಾಗಿ ಬೇಕೇಬೇಕು. ಶಿಕ್ಷಣವಿಲ್ಲದ ವ್ಯಕ್ತಿಯನ್ನು ಸಮಾಜದಲ್ಲಿ ಕೂಡ ಕಡೆಗಣಿಸಲಾಗುತ್ತದೆ. ಹೀಗಾಗಿ ಶಿಕ್ಷಣವಿದ್ದರೆ ಆಗ ಸ್ವತಂತ್ರವಾಗಿ ಬದುಕಬಹುದು. ಶಿಕ್ಷಣವೆಂದರೆ ಇಂದಿನ ದಿನಗಳಲ್ಲಿ ಅದು ಐಷಾರಾಮಿ ಜೀವನದಂತೆ ಆಗಿದೆ. ಸಾಕಷ್ಟು ದುಡ್ಡು ಖರ್ಚು ಮಾಡಿದರೆ ಆಗ ಒಳ್ಳೆಯ ಶಿಕ್ಷಣ ಸಿಗಲು ಸಾಧ್ಯವಿದೆ. ಅಷ್ಟು ಸುಲಭವಾಗಿ ಜೀವನದಲ್ಲಿ ಏನೂ ಸಿಗದು ಮತ್ತು ಜೀವನದಲ್ಲಿ ಯಾವುದನ್ನೂ ನಾವು ಲಘುವಾಗಿ ಪರಿಗಣಿಸಬಾರದು. ಇದರಿಂದಾಗಿ ಕಠಿಣ ಪರಿಶ್ರಮ ಎನ್ನುವುದು ಅತೀ ಅಗತ್ಯವಾಗಿರುವುದು. ಇದರೊಂದಿಗೆ ಶಿಕ್ಷಣದಲ್ಲಿ ಮುಂದುವರಿಯಬೇಕು ಎನ್ನುವ ಬದ್ಧತೆ ಕೂಡ ಇರಬೇಕು. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳಿಗೆ ಹಿರಿಯರು ಹೇಳುತ್ತಿರುತ್ತಾರೆ. ಅದೇ ರೀತಿಯಾಗಿ ಯಶಸ್ಸಿಗೆ ಸ್ವಲ್ಪ ಮಟ್ಟದ ಅದೃಷ್ಟವು ಬೇಕು ಎಂದು ಹಿರಿಯರು ಹೇಳುವುದಿಲ್ಲವೇ?

ಕೆಲವೊಂದು ಸಲ ಕಠಿಣ ಪರಿಶ್ರಮವಿದ್ದರೂ ಅದರಿಂದ ಯಶಸ್ಸು ಸಿಗುವುದಿಲ್ಲ. ಯಾಕೆಂದರೆ ವಿದ್ಯಾರ್ಥಿಗೆ ತಾನು ಕಲಿತಿರುವುದು ಪರೀಕ್ಷೆ ವೇಳೆಗೆ ಮರೆತು ಹೋಗಿರುವುದು. ತುಂಬಾ ಚುರುಕಾಗಿರುವಂತಹ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳುವರು. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಆರಂಭದ ವರ್ಷಗಳಲ್ಲಿ ಹೆಚ್ಚಿನ ಆಸಕ್ತಿಯು ಇರುವುದಿಲ್ಲ. ಆದರೆ ಪದವಿ ಕೊನೆಗೊಳ್ಳುತ್ತಿರುವಂತೆ ಅವರಲ್ಲಿ ಆಸಕ್ತಿ ಬಂದು ಇನ್ನಷ್ಟು ಪರಿಶ್ರಮ ವಹಿಸುವರು.

Good Academic Performance

ಇದರ ಹಿಂದೆ ಹಲವಾರು ರೀತಿಯ ಕಾರಣಗಳು ಇರಬಹುದು. ಮುಖ್ಯವಾಗಿ ಸುತ್ತಲಿನ ವಾತಾವರಣ, ಸ್ನೇಹಿತರ ಬಳಗ ಅಥವಾ ಶಿಕ್ಷಕರು ಹಾಗೂ ವಿದ್ಯಾರ್ಥಿ ನಡುವಿನ ಹೊಂದಾಣಿಕೆ ಹೀಗೆ ಹಲವಾರು. ಅದಾಗ್ಯೂ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ಸಲ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಇರುವಂತಹ ಗ್ರಹಗತಿಯ ಪರಿಣಾಮವಾಗಿ ವಿದ್ಯಾಭ್ಯಾಸದಲ್ಲಿ ಆಸಕ್ತಿಯು ಕಡಿಮೆಯಾಗುವುದು ಮತ್ತು ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಲು ಕಾರಣವಂತೆ.

ಇದಕ್ಕೆ ಪರಿಹಾರ ಏನು ಎನ್ನುವ ಪ್ರಶ್ನೆಯು ಖಂಡಿತವಾಗಿಯೂ ಬರುವುದು. ಇದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಈ ಲೇಖನದಲ್ಲಿ ಕೊಟ್ಟಿರುವ ಕೆಲವೊಂದು ಕ್ರಮಗಳನ್ನು ನೀವು ಪಾಲಿಸಿಕೊಂಡು ಹೋದರೆ ಆಗ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬರುವುದು ಅಥವಾ ವಿದ್ಯಾರ್ಥಿಯ ಪ್ರದರ್ಶನವು ಸುಧಾರಣೆಯಾಗುವುದು. ಇದರ ಬಗ್ಗೆ ನೀವು ಮುಂದಕ್ಕೆ ಓದಿಕೊಳ್ಳಿ.

ಸರಸ್ವತಿ ದೇವಿಯನ್ನು ಪೂಜಿಸಿ

ಸರಸ್ವತಿ ದೇವಿಯನ್ನು ಪೂಜಿಸಿ

ನೀವು ಓದಲು ಕುಳಿತುಕೊಳ್ಳುವ ಮೊದಲು ಸರಸ್ವತಿ ದೇವಿಯ ಫೋಟೊದ ಎದುರು ಅಗರಬತ್ತಿ ಹಚ್ಚಿಟ್ಟು ಪ್ರಾರ್ಥನೆ ಮಾಡಿ. ಇದೇ ವೇಳೆ ನೀವು ಓಂ ಐಮ್ ಸರಸ್ವತಿಯೇ ನಮಃ ಮಂತ್ರ ಪಠಿಸಿ.

ಗುರುವಿಗೆ ಗೌರವ ನೀಡಿ

ಗುರುವಿಗೆ ಗೌರವ ನೀಡಿ

ಗುರು ಗ್ರಹವನ್ನು ಗುರು ಎಂದು ಕರೆಯಲಾಗುತ್ತದೆ ಮತ್ತು ಇದು ಬೃಹಸ್ಪತಿ ದೇವರಿಗೆ ಸಂಬಂಧಿಸಿದ್ದಾಗಿದೆ. ನಾವು ಗುರು(ಶಿಕ್ಷಕ)ವಿಗೆ ಗೌರ ಸಲ್ಲಿಸಿದರೆ ಆಗ ಬ್ರಹಸ್ಪತಿ ದೇವರು ಕೂಡ ಒಲಿಯುವರು ಎಂದು ನಂಬಲಾಗಿದೆ. ಗುರು ಗ್ರಹವು ಸಾಮಾಜಿಕ ಗೌರವ ಮತ್ತು ಅದೃಷ್ಟ ಪಡೆಯಲು ನೆರವಾಗುವುದು.

ಗಾಯತ್ರಿ ಮಂತ್ರ ಪಠಿಸಿ

ಗಾಯತ್ರಿ ಮಂತ್ರ ಪಠಿಸಿ

ಗಾಯತ್ರಿ ಮಂತ್ರವು ತುಂಬಾ ಶಕ್ತಿಶಾಲಿ ಮಂತ್ರವಾಗಿದೆ. ಇದನ್ನು ನೀವು ನಿಯಮಿತವಾಗಿ ಪಠಿಸಿದರೆ ಆಗ ಏಕಾಗ್ರತೆ ಮತ್ತು ನೆನಪಿನ ಶಕ್ತಿಯು ಹೆಚ್ಚಾಗುವುದು.

Most Read: ಭಾರತದ ಈ ಐದು ಸ್ಥಳಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ!

ಅಶ್ವಗಂಧದ ಬೇರು ಬಳಸಿ

ಅಶ್ವಗಂಧದ ಬೇರು ಬಳಸಿ

ಪರೀಕ್ಷೆಗೆ ಮೊದಲು ಹೆಚ್ಚಿನ ವಿದ್ಯಾರ್ಥಿಗಳಿಗೆ ಆತಂಕವು ಕಾಡುವುದು. ಇಂತಹ ವಿದ್ಯಾರ್ಥಿಗಳು ಅಶ್ವಗಂಧದು ಬೇರನ್ನು ತೆಗೆದುಕೊಂಡು ಅದನ್ನು ಕುತ್ತಿಗೆ ಅಥವಾ ಮೊಣಕೈ ಭಾಗಕ್ಕೆ ಕಟ್ಟಿಕೊಳ್ಳಬೇಕು. ಪರೀಕ್ಷೆಗೆ 21 ದಿನಕ್ಕೆ ಮೊದಲು ನೀವು ಹೀಗೆ ಮಾಡಬೇಕು.

ಹಸಿರು ದಾರ ಕಟ್ಟಿಕೊಳ್ಳಿ

ಹಸಿರು ದಾರ ಕಟ್ಟಿಕೊಳ್ಳಿ

ಹಸಿರು ಬಣ್ಣವು ನೆನಪಿನ ಶಕ್ತಿ ಹೆಚ್ಚು ಮಾಡುವುದು. ಹೀಗಾಗಿ ಹಸಿರು ಬಣ್ಣದ ದಾರವನ್ನು ಹೆಬ್ಬೆರಳಿನ ಸುತ್ತಲು ಕಟ್ಟಿಕೊಂಡರೆ ಅದರಿಂದ ನೆನಪಿನ ಶಕ್ತಿಯು ಸುಧಾರಣೆ ಆಗುವುದು.

ಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿ

ಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿ

ಹಸಿರು ಬಣ್ಣದ ಬಟ್ಟ ತೆಗೆದುಕೊಳ್ಳಿ. 21 ಗರಿಕೆ ಹುಲ್ಲು, ಸ್ವಲ್ಪ ಹೆಸರು ಬೇಳೆ ಮತ್ತು ಐದು ಹಸಿರು ಏಲಕ್ಕಿ ತೆಗೆದುಕೊಳ್ಳಿ ಮತ್ತು ಅದನ್ನು ಎಲ್ಲವನ್ನು ಜತೆಯಾಗಿ ಸೇರಿಸಿ, ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಇದನ್ನು ಬುಧವಾರ ಗಣಪತಿ ಮಂದಿರಕ್ಕೆ ಹೋಗಿ ಅರ್ಪಣೆ ಮಾಡಿ.

ಕರ್ಪೂರ ಮತ್ತು ಪಟಿಕವನ್ನು ಕಿಸೆಯಲ್ಲಿ ಇಟ್ಟುಕೊಳ್ಳಿ

ಕರ್ಪೂರ ಮತ್ತು ಪಟಿಕವನ್ನು ಕಿಸೆಯಲ್ಲಿ ಇಟ್ಟುಕೊಳ್ಳಿ

ಸುತ್ತಲಿನ ನಕಾರಾತ್ಮಕ ಶಕ್ತಿಯು ಅಡೆತಡೆ ಉಂಟು ಮಾಡುವುದು ಮತ್ತು ಪರೀಕ್ಷೆಯ ಹಾಲ್ ನಲ್ಲಿ ಸರಿಯಾಗಿ ಗಮನ ಕೇಂದ್ರೀಕರಿಸಲು ಬಿಡುವುದಿಲ್ಲ. ಇದಕ್ಕೆ ಪರಿಹಾರವಾಗಿ ವಿದ್ಯಾರ್ಥಿಯು ಕಿಸೆಯಲ್ಲಿ ಕರ್ಪೂರ ಮತ್ತು ಪಟಿಕವನ್ನು ಇಟ್ಟುಕೊಳ್ಳಬೇಕು. ಇದು ನಕಾರಾತ್ಮಕತೆ ದೂರ ಮಾಡಿ, ಏಕಾಗ್ರತೆ ತಂದುಕೊಡುವುದು.

ಬುಧವಾರ ಗೋವಿಗೆ ಆಹಾರ ನೀಡಿ

ಬುಧವಾರ ಗೋವಿಗೆ ಆಹಾರ ನೀಡಿ

ಬುಧವಾರದಂದು ಗೋವಿಗೆ ಒಂದು ಕೆಜಿ ಹಸಿರು ಮೇವನ್ನು ಆಹಾರವಾಗಿ ನೀಡಿ. ಸತತ ಮೂರು ವಾರಗಳ ತನಕ ನೀವು ಇದನ್ನು ಗೋವಿಗೆ ನೀಡಿ.

Most Read: ಇವೆಲ್ಲಾ ಅದೃಷ್ಟವನ್ನೇ ಬದಲಾಯಿಸುವ ಸಂಖ್ಯೆ!, ನಿಮ್ಮದೂ ಪರಿಶೀಲಿಸಿಕೊಳ್ಳಿ

ಓದುವ ಕೊಠಡಿಯ ಗೋಡೆಗಳಿಗೆ ಬಣ್ಣ ಹಚ್ಚಿಕೊಳ್ಳಿ

ಓದುವ ಕೊಠಡಿಯ ಗೋಡೆಗಳಿಗೆ ಬಣ್ಣ ಹಚ್ಚಿಕೊಳ್ಳಿ

ಹಳದಿ, ಕಿತ್ತಳೆ ಅಥವಾ ಹಸಿರು ಬಣ್ಣವನ್ನು ಓದು ಕೊಠಡಿಗೆ ಹಚ್ಚಿ. ಇದು ಏಕಾಗ್ರತೆಗೆ ಒಳ್ಳೆಯದು.

ಮೂಗುತಿ ಧರಿಸಿ

ಮೂಗುತಿ ಧರಿಸಿ

ಮೂಗಿಗೆ ಯಾವುದೇ ರೀತಿಯ ಲೋಹದ ಆಭರಣ ಅಥವಾ ಮೂಗಿಗೆ ರಿಂಗ್ ನ್ನು ಧರಿಸುವುದು ಅತೀ ಅಗತ್ಯವಾಗಿದೆ. ಇದರಿಂದ ರಾಶಿಚಕ್ರಗಳು ಒಳ್ಳೆಯ ಫಲಿತಾಂಶ ನೀಡುವುದು. ಹುಡುಗರು ಗಾಜಿನ ಬಾಟಲಿಯಲ್ಲಿ ಬೆಳ್ಳಿ ದಾರ ಇಡಹುದು ಅಥವಾ ಇದನ್ನು ಯಾವಾಗಲೂ ತಮ್ಮಲ್ಲಿ ಇಟ್ಟುಕೊಳ್ಳಬಹುದು. ಇಂತಹ ಕ್ರಮ ಕೈಗೊಳ್ಳುವ ಮೊದಲು ನೀವು ಜ್ಯೋತಿಷಿಯ ಸಲಹೆ ಪಡೆದುಕೊಳ್ಳಿ.

ಓದುವ ಟೇಬಲ್ ಮೇಲೆ ಮಣ್ಣಿನ ಮಡಕೆ ಇಟ್ಟುಕೊಳ್ಳಿ

ಓದುವ ಟೇಬಲ್ ಮೇಲೆ ಮಣ್ಣಿನ ಮಡಕೆ ಇಟ್ಟುಕೊಳ್ಳಿ

ಒಂದು ಮಣ್ಣಿನ ಮಡಕೆಯನ್ನು ಇಟ್ಟುಕೊಳ್ಳಿ ಮತ್ತು ಅದನ್ನು ಹುಡಿ ಸಕ್ಕರೆ ಹಾಕಿ ತುಂಬಿಸಿ. ಇದನ್ನು ನೀವು ಓದುವ ಟೇಬಲ್ ಮೇಲೆ ಇಟ್ಟುಕೊಳ್ಳಿ. ಇರುವೆ ಅಥವಾ ಬೇರೆ ಯಾವುದೇ ಕೀಟಗಳು ಇದರತ್ತ ಬರದಂತೆ ನೋಡಿಕೊಳ್ಳಿ.

ಈ ದೋಹಾ ಮತ್ತು ಮಂತ್ರಗಳನ್ನು ಪಠಿಸಿ

ಈ ದೋಹಾ ಮತ್ತು ಮಂತ್ರಗಳನ್ನು ಪಠಿಸಿ

ಈ ಕೆಳಗಿನ ಮಂತ್ರವನ್ನು ಪ್ರತಿನಿತ್ಯ ಅಥವಾ ಬುಧವಾರ 108 ಮಣಿಗಳ ಜಪಮಾಲೆ ಹಿಡಿದುಕೊಂಡು ಪಠಿಸಿ.

ಓಂ ಬೂಮ್ ಬುದ್ಧಾಯೆ ನಮಃ

ಪ್ರತೀ ಬುಧವಾರದಂತೆ ನೀವು ಮಲಗುವ ಮೊದಲು 108 ಸಲ ದೋಹಾವನ್ನು ಪಠಿಸಬೇಕು.

ಛಿತಿ ಪವಕ ಗಗನ್ ಸಮೀರಾ, ಪಂಚ ರಚಿತ್ ಅತಿ ಅಧಮ್ ಸರೀಸಾ

ತುಳಸಿಯ 108 ದಳಗಳನ್ನು ಬಳಸಿಕೊಂಡು ಪ್ರತಿಯೊಂದು ಬುಧವಾರ ನೀವು ಈ ಕೆಳಗಿನ ಮಂತ್ರವನ್ನು ಪಠಿಸಬೇಕು.

ಗುರು ಗ್ರೇಹ ಗಯೆ ಪಧಾನ್ ರಘು ರಾಯಿ, ಅಲ್ಪ ಕಾಲ ವಿದ್ಯಾ ಸಬ್ ಪಾಯಿ.

English summary

Astrological Remedies For Good Academic Performance

Nothing good comes easy in life. These are the words of the wise, motivating us to work hard in order to achieve success in all endeavours in life. However, does hard work alone do it all, or does luck play a role as well? Well, astrologers say that the planetary positions on the birth chart should also be checked once.
X
Desktop Bottom Promotion