For Quick Alerts
ALLOW NOTIFICATIONS  
For Daily Alerts

ಈ ಚಿಕ್ಕ-ಚಿಕ್ಕ ಕಾರ್ಯಗಳಿಂದ ಗ್ಯಾಸ್‌ ಉಳಿತಾಯ ಮಾಡಬಹುದು ನೋಡಿ

|

ಎಲ್‌ಪಿಜಿ ಗ್ಯಾಸ್‌ ಬೆಲೆ ತಿಂಗಳಿನಿಂದ-ತಿಂಗಳಿಗೆ ಏರುತ್ತಿರುವುದರನ್ನು ನೋಡಿ ಪರಿಸ್ಥಿತಿ ಹೀಗೇ ಹೋದರೆ ಅಡುಗೆ ಬೇಯಿಸುವುದು ಹೇಗೆ ಎಂಬ ಚಿಂತೆ ಜನರನ್ನು ಕಾಡಲಾರಂಭಿಸಿದೆ. ಈ ಎಲ್‌ಪಿಜಿ ಗ್ಯಾಸ್‌ ಬೆಲೆ ಅಂತೂ ಬಡ ಜನರಿಗೆ, ಮಧ್ಯಮ ಜನರಿಗೆ ತುಂಬಾನೇ ಹೊರೆಯಾಗಿದೆ. ಎಲ್‌ಪಿಜಿ ಗ್ಯಾಸ್‌ ಬೆಲೆ ಅಧಿಕವಾಗಿದೆ ಎಂದು ಕೊಳ್ಳದೆ ಇರಲು ಸಾಧ್ಯವಿಲ್ಲ, ಏಕೆಂದರೆ ಕೆಲ ಮನೆಗಳಲ್ಲಷ್ಟೇ ಗೋಬರ್‌ ಗ್ಯಾಸ್ ಇದೆ. ಇನ್ನು ಅಡುಗೆಯನ್ನು ಕರೆಂಟ್‌ ಬಳಸಿ ಮಾಡಬಹುದಾದರೂ ಅದರ ಬಿಲ್‌ ಎಲ್‌ಪಿಜಿ ಗ್ಯಾಸ್‌ಗಿಂತಲೂ ದುಪ್ಪಟ್ಟು ಆಗುವುದರಿಂದ ಎಲ್‌ಪಿಜಿ ಅನಿಲ ತುಂಬುದಿರಷ್ಟೇ ಮನೆಯಲ್ಲಿ ಆಹಾರ ಬೇಯುವುದು.

ಈಗ ಗ್ಯಾಸ್‌ನ ಬೆಲೆ ಹೆಚ್ಚಾಗುತ್ತಿರುವುದರಿಂದ ಗ್ಯಾಸ್‌ ಮಿತ ಬಳಕೆಯಾಗಲು ಯಾವ ಟಿಪ್ಸ್‌ಗಳಿವೆ ಎಂದು ಜನರು ಹುಡುಕುತ್ತಿದ್ದಾರೆ. ನಾವಿಲ್ಲಿ ಕಿಚನ್‌ನಲ್ಲಿ ಗ್ಯಾಸ್‌ ಉಳಿಸುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಲೀಕ್‌ ಇದೆಯೇ ಎಂದು ಪರೀಕ್ಷಿಸಿ

ಲೀಕ್‌ ಇದೆಯೇ ಎಂದು ಪರೀಕ್ಷಿಸಿ

ನಿಮ್ಮ ಗ್ಯಾಸ್‌ನ ಪೈಪ್ಸ್, ಬರ್ನರ್‌, ರೆಗ್ಯೂಲೇಟರ್‌ನಲ್ಲಿ ಏನಾದರೂ ಲೀಕ್ಸ್ ಇದೆಯೇ ಎಂದು ಪರೀಕ್ಷಿಸಿ. ಒಂದು ಚಿಕ್ಕ ಲೀಕ್ ಇದ್ದರೆ ಸಾಕು ಅದರ ಮೂಲಕ ಗ್ಯಾಸ್‌ ಹೋಗಿ ನಿಮ್ಮ ಗ್ಯಾಸ್‌ ಸಿಲಿಂಡರ್ ಬೇಗನೆ ಖಾಲಿಯಾಗಬಹುದು. ಎಲ್‌ಪಿಜಿ ಗ್ಯಾಸ್‌ ಉಳಿಸಲು ಇವೆಲ್ಲಾ ಸರಿಯಾಗಿದೆಯೇ ಎಂದು ಪರೀಕ್ಷಿಸಿ.

ನಿಮ್ಮ ಪ್ಯಾನ್ ಅಥವಾ ಪಾತ್ರೆಯನ್ನು ಒರೆಸಿ ಇಡಿ

ನಿಮ್ಮ ಪ್ಯಾನ್ ಅಥವಾ ಪಾತ್ರೆಯನ್ನು ಒರೆಸಿ ಇಡಿ

ಅದರ ತಳದಲ್ಲಿ ಅಥವಾ ಒಳಗಡೆ ಸ್ವಲ್ಪ ನೀರು ಇದ್ದರೆ ಅದು ಆವಿಯಾಗುವವರೆಗೆ ಬಿಸಿ ಮಾಡಿ ನಂತರ ಎಣ್ಣೆ ಹಾಕುತ್ತೀರಿ ತಾನೇ? ಅಷ್ಟು ಗ್ಯಾಸ್‌ ಸುಮ್ಮನೆ ವ್ಯರ್ಥವಾಗುವುದು. ಅದರ ಬದಲಿಗೆ ಪಾತ್ರೆಯ ತಳ ಹಾಗೂ ಒಳಗಡೆ ಒರೆಸಿ ಇಡಿ, ಆಗ ಅಷ್ಟು ಗ್ಯಾಸ್‌ ವ್ಯರ್ಥವಾಗುವುದನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಯೋಚಿಸಿಯೇ ಇರಲಿಕ್ಕಿಲ್ಲ ಅಲ್ವಾ?

ತುಂಬಾ ಬೇಯಿಸಬೇಡಿ

ತುಂಬಾ ಬೇಯಿಸಬೇಡಿ

ಈಗ ಗ್ಯಾಸ್‌ ವ್ಯರ್ಥ ಆಗದಂತೆ ಸಾಕಷ್ಟು ಜಾಗ್ರತೆವಹಿಸಬೇಕಾಗಿದೆ. ಪಾತ್ರೆ ಗ್ಯಾಸ್‌ ಉರಿ ಮೇಲೆ ಇಟ್ಟು ಸಾಮಗ್ರಿಗಳಿಗೆ ಹುಡುಕಾಡಬೇಡಿ, ಇನ್ನು ತುಂಬ ಹೊತ್ತು ಬೇಯಿಸಬೇಡಿ. ಆಹಾರ ಬೆಂದ ತಕ್ಷಣ ಆಫ್‌ ಮಾಡಿ. ಇನ್ನು ಪಾತ್ರೆಯಲ್ಲಿ ಬೇಯಿಸುವುದಕ್ಕಿಂತ ಕುಕ್ಕರ್‌ನಲ್ಲಿ ಬೇಯಿಸಿದಾಗ ಬೇಗನೆ ಬೇಯುವುದರಿಂದ ಆದಷ್ಟು ಕುಕ್ಕರ್ ಬಳಸಿ.

ಆಹಾರವನ್ನು ಮುಚ್ಚಿ ಬೇಯಿಸಿ

ಆಹಾರವನ್ನು ಮುಚ್ಚಿ ಬೇಯಿಸಿ

ಪಾತ್ರೆಯ ಬಾಯಿ ತೆಗೆದಿಟ್ಟು ಬೇಯಿಸಿದರೆ ಬೇಯಲು ತುಂಬಾ ಹೊತ್ತು ಬೇಕು, ಅದೇ ಮುಚ್ಚಿ ಬೇಯಿಸಿದರೆ ಬೇಗ ಬೇಯುತ್ತದೆ. ಆದ್ದರಿಂದ ಆಹಾರವನ್ನು ಮುಚ್ಚಿ ಬೇಯಸಿದರೆ ಸ್ವಲ್ಪ ಗ್ಯಾಸ್ ಉಳಿಸಬಹುದು.

ಹಾಟ್‌ ಬಾಕ್ಸ್‌, ಥರ್ಮೋಸ್ ಪ್ಲಾಸ್ಕ್ ಬಳಸಿ

ಹಾಟ್‌ ಬಾಕ್ಸ್‌, ಥರ್ಮೋಸ್ ಪ್ಲಾಸ್ಕ್ ಬಳಸಿ

ನೀರನ್ನು ಕುದಿಸಿ ಫ್ಲಾಸ್ಕ್‌ನಲ್ಲಿಡಿ. ಆಹಾರವನ್ನು ಬೇಯಿಸಿ ಹಾಟ್‌ ಬಾಕ್ಸ್‌ನಲ್ಲಿ ಇಡಿ. ಇದರಿಂದ ಆಗಾಗ ಬಿಸಿ ಮಾಡುವುದು ತಪ್ಪುತ್ತೆ.

 ಕಡಿಮೆ ಉರಿಯಲ್ಲಿ ಬೇಯಿಸಿ

ಕಡಿಮೆ ಉರಿಯಲ್ಲಿ ಬೇಯಿಸಿ

ಅಧಿಕ ಉರಿಯಲ್ಲಿ ಬೇಯಿಸುವುದರಿಂದ ಎಂಜೈಮ್ಸ್, ಪೋಷಕಾಂಶಗಳು, ವಿಟಮಿನ್ಸ್‌ ಇವುಗಳನ್ನು ನಾಶ ಮಾಡುತ್ತೆ. ಆದ್ದರಿಂದ ಕಡಿಮೆ ಉರಿಯಲ್ಲಿ ಬೇಯಿಸಿ.

ಮತ್ತೊಂದು ಸಲಹೆಯೆಂದರೆ ISI ಮುದ್ರೆಯಿರುವ ಗ್ಯಾಸ್‌ ಸ್ಟೌವ್ ಬಳಸಿ. ಇದು ಶೇ. 15ರಷ್ಟು ಗ್ಯಾಸ್‌ ಉಳಿಸಲು ಸಹಕಾರಿಯಾಗಿದೆ.

ಬೇಯಲು ತಕ್ಕ ನೀರು ಹಾಕಿ

ಬೇಯಲು ತಕ್ಕ ನೀರು ಹಾಕಿ

ಕೆಲವೊಮ್ಮೆ ಅಗ್ಯತಕ್ಕಿಂತ ಹೆಚ್ಚು ನೀರು ಹಾಕುತ್ತೇವೆ. ಹೀಗೆ ಮಾಡುವುದರಿಂದ ಅಷ್ಟು ಹೊತ್ತು ನೀರು ಕುದಿಯಲು ತೆಗೆದುಕೊಳ್ಳುವ ಗ್ಯಾಸ್‌ ವ್ಯರ್ಥ ಆದಂತೆ. ಆದ್ದರಿಂದ ಬೇಯಲು ತಕ್ಕ ನೀರು ಹಾಕಿ, ಇನ್ನು ಬೇಯಿಸಲು ಮೊದಲೇ ಹೇಳಿದಂತೆ ಪ್ರೆಶರ್ ಕುಕ್ಕರ್ ಬಳಸಿ.

ಧಾನ್ಯಗಳು, ಅಕ್ಕಿ ಇವುಗಳನ್ನು ನೆನೆ ಹಾಕಿ ಬೇಯಿಸಿ

ಧಾನ್ಯಗಳು, ಅಕ್ಕಿ ಇವುಗಳನ್ನು ನೆನೆ ಹಾಕಿ ಬೇಯಿಸಿ

ದಾನ್ಯಗಳು, ಕಾಳುಗಳು, ಅಕ್ಕಿ ಅವುಗಳನ್ನು ತೊಳೆದು ಹಾಗೇ ಬಳಸುವ ಬದಲಿಗೆ ಸ್ವಲ್ಪ ನೆನೆ ಹಾಕಿದ್ದರೆ ಬೇಗನೆ ಬೇಯುತ್ತವೆ. ಈ ಟೆಕ್ನಿಕ್‌ ಆಹಾರ ಬೇಗನೆ ಬೇಯಿಸಲು ಮಾತ್ರವಲ್ಲ ಗ್ಯಾಸ್‌ ಉಳಿತಾಯಕ್ಕೆ ಕೂಡ ಸಹಕಾರಿ.

ಚಿಕ್ಕ ಹಾಗೂ ದೊಡ್ಡ ಬರ್ನರ್ ಬಳಸಿ

ಚಿಕ್ಕ ಹಾಗೂ ದೊಡ್ಡ ಬರ್ನರ್ ಬಳಸಿ

ನೀವು ಚಿಕ್ಕ ಹಾಗೂ ದೊಡ್ಡ ಬರ್ನರ್‌ ಬಳಸುವುದರಿಂದಲೂ ಸ್ವಲ್ಪ ಗ್ಯಾಸ್‌ ಉಳಿತಾಯ ಮಾಡಬಹುದು. ಹೆಚ್ಚಾಗಿ ಚಿಕ್ಕ ಬರ್ನರ್ ಬಳಸಿ, ಅಗ್ಯತವಿದ್ದಾಗ ಮಾತ್ರ ದೊಡ್ಡ ಬರ್ನರ್ ಬಳಸಿ.

ಫ್ರಿಡ್ಜ್‌ನಲ್ಲಿಟ್ಟ ಆಹಾರ ಸ್ವಲ್ಪ ಹೊತ್ತು ಹೊರ ಇಟ್ಟು ಬಳಸಿ

ಫ್ರಿಡ್ಜ್‌ನಲ್ಲಿಟ್ಟ ಆಹಾರ ಸ್ವಲ್ಪ ಹೊತ್ತು ಹೊರ ಇಟ್ಟು ಬಳಸಿ

ಫ್ರಿಡ್ಜ್‌ನಲ್ಲಿಟ್ಟ ಆಹಾರ (ಮಸಾಲೆ ಮಿಕ್ಸ್ ಮಾಡಿಟ್ಟ ಮೀನು, ಮಾಂಸಾಹಾರ, ಕೆಲ ತರಕಾರಿ) ನೇರವಾಗಿ ಬಳಸುವ ಬದಲು ಫ್ರಿಡ್ಜ್‌ನಿಂದ ತೆಗೆದು ರೂಂನ ಉಷ್ಣತೆಗೆ ಇಡಿ, ಇದರಿಂದ ಗ್ಯಾಸ್‌ನಲ್ಲಿಟ್ಟಾಗ ಬಿಸಿಯಾಗಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ.

ಎಲ್ಲರೂ ಜೊತೆಯಾಗಿ ತಿನ್ನಿ

ಎಲ್ಲರೂ ಜೊತೆಯಾಗಿ ತಿನ್ನಿ

ಮನೆಯಲ್ಲಿ ಎಲ್ಲರೂ ಜೊತೆಯಾಗಿ ಕೂತು ತಿನ್ನುವುದರಿಂದ ಮನೆಯವರ ನಡುವಿನ ಬಾಂಧವ್ಯ ಹೆಚ್ಚಾಗುವುದು. ಎಲ್ಲರೂ ಒಟ್ಟಾಗಿ ಕೂತು ತಿನ್ನುವಾಗ ಒಂದು ಖುಷಿ ಇರುತ್ತದೆ, ಜೊತೆಗೆ ಒಬ್ಬೊಬ್ಬರಿಗೆ ಆಹಾರ ಬಿಸಿ ಮಾಡಬೇಕಾಗಿಲ್ಲ, ಹೀಗಾಗಿ ಗ್ಯಾಸ್ ಉಳಿತಾಯ ಕೂಡ ಆಗುವುದು.

English summary

Useful Tips to Save Cooking Gas at home in kannada

Useful Tips to Save Cooking Gas at home in kannada, Read on...
X
Desktop Bottom Promotion