For Quick Alerts
ALLOW NOTIFICATIONS  
For Daily Alerts

ಈ ಗಿಡಗಳು ಮನೆಯಲ್ಲಿದ್ದರೆ ಏರ್‌ ಫ್ಯೂರಿಫೈಯರ್ ಬೇಕಾಗಿಲ್ಲ

|

ಆಧುನಿಕತೆ ಬೆಳೆಯುತ್ತಿದ್ದಂತೆ ಕಾಡುಗಳು ಮರೆಯಾಗುತ್ತಿವೆ, ನಗರ ಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗ ಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧ ಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯು ಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆ ಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.

ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ. ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ. ಶುದ್ಧ ಗಾಳಿಗಾಗಿ ಏರ್‌ ಫ್ಯೂರಿಫೈಯರ್ ತಂದಿಡುವ ಬದಲು ಕೆಲವೊಂದು ಗಿಡಗಳನ್ನು ಬೆಳೆಸಿದರೆ ಸಾಕು, ಶುದ್ಧವಾದ ಗಾಳಿಯನ್ನು ಉಸಿರಾಡಬಹುದು. ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ, ಅವುಗಳನ್ನು ಹೂ ಕುಂಡಗಳಲ್ಲಿ ಬೆಳೆಯಬಹುದಾಗಿದ್ದು, ಇದನ್ನು ಮನೆಯ ಮುಂಭಾಗದಲ್ಲಿ ಇಟ್ಟರೆ ಸಾಕು ಶುದ್ಧವಾದ ಗಾಳಿ ಸೇವಿಸಬಹುದು ನೋಡಿ.

1. ಸ್ಪೈಡರ್ ಪ್ಲಾಂಟ್

1. ಸ್ಪೈಡರ್ ಪ್ಲಾಂಟ್

ಇದು ನೋಡಲು ಸ್ವಲ್ಪ ಜೇಡರ ಬಲೆ ರೀತಿ ಇರುವುದರಿಂದ ಇದನ್ನು ಸ್ಪೈಡರ್ ಪ್ಲಾಂಟ್ ಎಮದು ಕರೆಯುತ್ತಾರೆ. ಇದನ್ನು ಮನೆಯ ಒಳಗಡೆ, ಹೊರಗಡೆ ಅಷ್ಟೇ ಏಕೆ ನಿಮ್ಮ ಆಫೀಸ್‌ನ ಟೇಬಲ್‌ ಬಳಿಯೂ ಇಟ್ಟುಕೊಳ್ಳಬಹುದು. ಇದನ್ನು ಬೆಳೆಯಲು ಚಿಕ್ಕ ಹೂ ಕುಂಡ ಸಾಕು, ಅದರಲ್ಲಿ ಮಣ್ಣು ತುಂಬಿ ಈ ಗಿಡ ನೆಟ್ಟು ಎರಡು ದಿನಕ್ಕೊಮ್ಮೆ ನೀರು ಹಾಕಿದರು ಸಾಕಾಗುತ್ತದೆ. ಇದನ್ನು ನೇರವಾಗಿ ಬಿಸಿಲು ಬೀಳುವ ಕಡೆ ಇಡಬೇಡಿ. ಇದನ್ನು ನೆರಳು ಇರುವ ಕಡೆ ಇಟ್ಟು 15 ದಿನಕ್ಕೊಮ್ಮೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಟ್ಟರೆ ಸಾಕು. ಒಣಗಿದ ಎಲೆಗಳನ್ನು ತೆಗೆಯಿರಿ, ಇದರಿಂದ ಹೊಸ ಎಲೆಗಳು ಬೆಳೆಯುತ್ತವೆ. ಈ ಗಿಡವನ್ನು ಮನೆಯ ಒಳಗಡೆ ಇಟ್ಟರೆ ಸಾಕು ಕಡಿಮೆ ಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುವುದರಿಂದ ಶುದ್ಧ ಗಾಳಿ ದೊರೆಯುವುದು.

2. ಲೋಳೆಸರ

2. ಲೋಳೆಸರ

ಲೋಳೆಸರದ ಅನೇಕ ಆರೋಗ್ಯಕರ ಗುಣಗಳ ಬಗ್ಗೆ ನಿಮಗೇ ಗೊತ್ತೇ ಇರುತ್ತದೆ. ಇದನ್ನು ಕೂದಲು, ತ್ವಚೆಯ ಆರೈಕೆಯಲ್ಲಿ ಬಳಸುತ್ತಾರೆ, ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಇದನ್ನು ಬೆಳೆಯುವುದು ಕೂಡ ಕಷ್ಟವೇನಿಲ್ಲ. ಒಂದು ಗಿಡದಲ್ಲಿ ಸ್ವಲ್ಪ ಮಣ್ಣು ಹಾಕಿ ಮೂರು ದಿನಕೊಮ್ಮೆ ಸ್ವಲ್ಪ ನೀರು ಹಾಕಿದರೂ ಗಿಡ ತುಂಬಾ ಸೊಗಸಾಗಿ ಬೆಳೆಯುವುದು. ಒಂದು ವಾರ ನೀರು ಹಾಕದಿದ್ದರೂ ಗಿಡ ಒಣಗುವುದಿಲ್ಲ. ಈ ಗಿಡ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಫಾರ್ಮುಲಾಡಿಹೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶುದ್ಧಗಾಳಿ ದೊರೆಯುತ್ತದೆ.

3. ಶತಾವರಿ

3. ಶತಾವರಿ

ಆಯುರ್ವೇದದಲ್ಲಿ ಶತಾವರಿ ಬಳಸಿ ಅನೇಕ ಮದ್ದುಗಳನ್ನು ತಯಾರಿಸುತ್ತಾರೆ. ನರ ಸಂಬಂಧಿತ ರೋಗ, ಗ್ಯಾಸ್ಟ್ರಿಕ್, ಅಲ್ಸರ್‌ ಮುಂತಾದ ಕಾಯಿಲೆಗಳನ್ನು ಗುಣಪಡಿಸಲು ಶತಾವರಿ ಬಳಸಲಾಗುವುದು. ಇನ್ನು ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಇದನ್ನು ನೀಡಲಾಗುವುದು. ಈ ಎಲ್ಲಾ ಅರೋಗ್ಯಗರ ಗುಣಗಳ ಜತೆಗೆ ಇದು ಗಾಳಿಯನ್ನು ಶುದ್ಧೀಕರಿಸುವ ಕಾರ್ಯ ಮಾಡುತ್ತದೆ. ಇದು ಮನೆ ಮುಂದೆ ಇದ್ದರೆ ಬ್ಯಾಕ್ಟಿರಿಯಾ ಹಾಗೂ ಸೋಂಕಾಣುಗಳನ್ನು ಕೊಲ್ಲುತ್ತದೆ.

4. ತುಳಸಿ

4. ತುಳಸಿ

ಮನೆ ಮುಂದೆ ತುಳಸಿ ಗಿಡವಿದ್ದರೆ ಅದರಿಂದ ಆರೋಗ್ಯಕರ ಗುಣಗಳನ್ನು ಪಡೆಯುವುದರ ಜತೆಗೆ ಮನೆಯ ಪರಿಸರದ ಗಾಳಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬಹುದು. ತುಳಸಿ ಗಿಡ ಗಾಳಿಯಲ್ಲಿರುವ ಇಂಗಾಲದ ಡೈಯಾಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ರಂಜಕದ ಡೈಯಾಕ್ಸೈಡ್‌ ಹೀರಿಕೊಂಡು ಆಮ್ಲಜನಕವನ್ನು ಹೊರಸೂಸುವುದು, ಇದರಿಮದ ಮನೆಯೊಳಗಿನ ಗಾಳಿ ಶುದ್ಧವಾಗಿರುತ್ತದೆ. ಇನ್ನು ಈ ಗಿಡ ಮನೆಯ ಸಮಿಪ ಇದ್ದರೆ ಸೊಳ್ಳೆಕಾಟವೂ ತಪ್ಪುವುದು. ಇದನ್ನು ಮನೆ ಆವರಣ ಸ್ವಲ್ಪ ವಿಸ್ತಾರವಾಗಿದ್ದರೆ ಅಲ್ಲಿಡಬಹುದು.

 5. ಜೆರಬೆರಾ ಗಿಡ ಅಥವಾ ಜೆರ್ಬೆರಾ ಡೈಸಿ

5. ಜೆರಬೆರಾ ಗಿಡ ಅಥವಾ ಜೆರ್ಬೆರಾ ಡೈಸಿ

ಸುಮಾರು 30ಕ್ಕೂ ಅಧಿಕ ಬಣ್ಣದಲ್ಲಿ ಜೆರಬೆರಾ ಗಿಡಗಳು ದೊರೆಯುತ್ತದೆ. ಇದನ್ನು ಮನೆಯೊಳಗೆ ಸುಲಭವಾಗಿ ಬೆಳೆಸಬಹುದು. ಹೂ ಕುಂಡದಲ್ಲಿ ಇದರ ಬೀಜ ಹಾಕಿದರೆ ಸಾಕು ಗಿಡಗಳು ಬೆಳೆಯುತ್ತದೆ. ಆದರೆ ಈ ಗಿಡವನ್ನು ತುಂಬಾ ನೆರಳಿರುವ ಕಡೆ ಇಡುವುದಕ್ಕಿಂತ ಸ್ವಲ್ಪ ಬಿಸಿಲು ಬೀಳುವ ಕಡೆ ಇಡಬೇಕು. ಇನ್ನು ಈ ಗಿಡಕ್ಕೆ ಚಳಿಗಾಲದಲ್ಲಿ ಸ್ವಲ್ಪ ಕಡಿಮೆ ಹಾಕಿದರೆ ಸಾಕಾಗುತ್ತದೆ. ಈ ಗಿಡ ಮನೆಯೊಳಗಿನ ಹಾಗೂ ಮನೆಯ ಸುತ್ತಮುತ್ತಲಿನ ಗಾಳಿಯನ್ನು ಶುದ್ಧಗೊಳಿಸುತ್ತದೆ ಹಾಗೂ ಗಿಡ ಹೂ ಬಿಟ್ಟಾಗ ಕಣ್ಣಿಗೆ ಸೊಗಸು, ಮನಸ್ಸಿಗೆ ಖುಷಿಯಾಗುವುದು.

6. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್‌

6. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್‌

ನೋಡಲು ಹಾವಿನಂತೆ ಕಾಣುವ ಈ ಸಸ್ಯವನ್ನು ಮನೆಯೊಳಗೆ ಬೆಳೆಸಲು ಸೂಕ್ತವಾಗಿದೆ. ಈ ಸಸ್ಯವಿದ್ದ ಕಡೆ ಹಾವು ಕೂಡ ಬರುವುದಿಲ್ಲ. ಕಡಿಮೆ ಬೆಳಕು ಬೀಳುವ, ತೇವಾಂಶ ಇರುವ ಕಡೆ ಕೂಡ ಈ ಗಿಡ ಇಡಬಹುದಾಗಿದೆ. ಇದನ್ನು ಬಾತ್‌ರೂಂನಲ್ಲೂ ಇಡಬಹುದು, ಬೆಡ್‌ರೂಂನಲ್ಲೂ ಇಡಬಹುದು. ಇದನ್ನು ಮನೆಯೊಳಗೆ ಇಟ್ಟರೆ ಗಾಳಿಯಲ್ಲಿರುವ ಕಲುಷಿತವನ್ನು ಹೀರಿಕೊಂಡು ನಿಮಗೆ ಶುದ್ಧ ಗಾಳಿ ನೀಡುವುದು.

7. ಸೇವಂತಿಗೆ ಹೂ

7. ಸೇವಂತಿಗೆ ಹೂ

ಸೇವಂತಿಗೆ ಹೂವಿನ ಚೆಲುವು ನೋಡುಗರ ಮನ ಸೆಳೆಯುವುದಂತು ದಿಟ. ಈ ಹೂವಿನಲ್ಲಿ ಹಲವಾರು ಬಗೆಗಳಿವೆ. ಸೇವಂತಿಗೆ ಗಿಡವನ್ನು ಬೆಳೆಯಲು ಚಿಕ್ಕ ಹೂ ಕುಂಡ ಸಾಕಾಗುತ್ತದೆ. ಈ ಗಿಡವನ್ನು ಮನೆಯ ಮುಂದುಗಡೆ ಸ್ವಲ್ಪ ಬಿಸಿಲು ಬೀಳುವ ಕಡೆ ಇಟ್ಟರೆ ಸಾಕು ಚೆನ್ನಾಗಿ ಬೆಳೆದು ಸುಂದರವಾದ ಹೂಗಳನ್ನು ಬಿಡುತ್ತದೆ. ಈ ಗಿಡ ಸಿಗರೇಟ್‌ ಹೊಗೆಯನ್ನು ಹೊರದೂಡಿ ಪರಿಸರದಲ್ಲಿ ಶುದ್ಧಗಾಳಿ ಓಡಾಡುವಂತೆ ಮಾಡುತ್ತದೆ.

8. ಡ್ರ್ಯಾಗನ್ ಗಿಡ

8. ಡ್ರ್ಯಾಗನ್ ಗಿಡ

ಇದು ಆಫೀಸ್‌ನಲ್ಲಿ ಹೆಚ್ಚಾಗಿ ಇಡಲಾಗುವುದು. ಈ ಗಿಡ ನೋಡಲು ತುಂಬಾ ಆಕರ್ಷಕವಾಗಿದ್ದು ಆಫೀಸ್‌ ಹಾಗೂ ಮನೆಗೆ ವಿಶೇಷ ಕಳೆ ನೀಡುವುದು, ಈ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಕಾರಿನಿಂದ ಹೊರಸೂಸುವ ಹೊಗೆ, ಪೇಯಿಂಟ್ ವಾಸನೆ, ಸಿಗರೇಟ್ ಹೊಗೆ ಈ ರೀತಿಯ ಕಲುಷಿತ ಗಾಳಿಯಿಂದ ಮುಕ್ತಿ ಪಡೆಯಬಹುದು. ಈ ಗಿಡವನ್ನು ಸುಲಭವಾಗಿ ಬೆಳೆಯಬಹುದಾಗಿದ್ದು ಹೆಚ್ಚಿನ ಆರೈಕೆಯ ಅಗ್ಯತವಿಲ್ಲ.

English summary

Plants That Purify Indoor Air

Air pollution is responsible for a various health problem. To avoid air pollution you have to grow plant. If you don't have place to grow plant no worry, there are various plants which can improve indoor air quality and give you fresh air.
Story first published: Tuesday, November 5, 2019, 16:08 [IST]
X
Desktop Bottom Promotion