For Quick Alerts
ALLOW NOTIFICATIONS  
For Daily Alerts

ಟಿಪ್ಸ್: ಫ್ರಿಡ್ಜ್‌ ಇಲ್ಲದೆಯೂ ಪಾನೀಯ ತಂಪಾಗಿ ಇರಿಸುವುದು ಹೇಗೆ?

|

ಬಿಸಿಲಿನ ತಾಪ ಹೆಚ್ಚಾದಾಗ ತಣ್ಣನೆಯ ನೀರು ಕುಡಿಯಬೇಕು ಅನಿಸುತ್ತದೆ, ಆಗ ತಕ್ಷಣ ನೆನಪಾಗುವುದು ಫ್ರಿಡ್ಜ್‌. ಇನ್ನು ಉಳಿದ ಆಹಾರ ಕೆಡದಂತೆ ಇಡಲು ಪಾನೀಯಗಳು ತಂಪಾಗಿ ಇರಲಿ ಎಂದು ಫ್ರಿಡ್ಜ್‌ನಲ್ಲಿ ಇಡುತ್ತೇವೆ.

w Keep drinks cold without fridge

ಆದರೆ ಫ್ರಿಡ್ಜ್‌ನಲ್ಲಿಟ್ಟ ಆಹಾರ ಹಾಗೂ ಪಾನೀಯ ಆರೋಗ್ಯಕ್ಕೆ ಒಳ್ಳೆಯದಲ್ಲ. ತಣ್ಣನೆಯ ವಸ್ತುಗಳನ್ನು ತಿನ್ನುವುದರಿಂದ ಶೀತ-ಕೆಮ್ಮು ಮುಂತಾದ ಸಮಸ್ಯೆ ಕೂಡ ಕಾಡುವುದುಂಟು.

ನಾವಿಲ್ಲಿ ಫ್ರಿಡ್ಜ್‌ ಇಲ್ಲದೆ ಆಹಾರ ವಸ್ತುಗಳನ್ನು ತಂಪಾಗಿ ಇರಿಸಲು ಕೆಲವೊಂದು ಟಿಪ್ಸ್ ನೀಡಿದ್ದೇವೆ ನೋಡಿ.

ತಣ್ಣನೆಯ ಉಪ್ಪು ನೀರಿನಲ್ಲಿ ಪಾನೀಯ ಇಡುವುದು

ತಣ್ಣನೆಯ ಉಪ್ಪು ನೀರಿನಲ್ಲಿ ಪಾನೀಯ ಇಡುವುದು

ಒಂದು ಪಾತ್ರೆಯಲ್ಲಿ ತಣ್ಣನೆಯ ನೀರಿದ್ದರೆ ಅದರಲ್ಲಿ ಉಪ್ಪು ಹಾಕಿಡಿ, ನಂತರ ಆ ನೀರಿನಲ್ಲಿ ಬಾಟಲಿಯಲ್ಲಿ ನೀರು ಅಥವಾ ಇತರ ಪಾನೀಯ ತುಂಬಿಟ್ಟರೆ ಅದು ತಣ್ಣಗೆ ಇರುತ್ತದೆ.

ನಿಮಗೆ ಫ್ರಿಡ್ಜ್‌ನಷ್ಟು ತಣ್ಣಗಾದ ನೀರು ಸಿಗದಿದ್ದರೂ ಕುಡಿಯಲು ಹಿತವಾದ ತಂಪು ಆ ಪಾನೀಯಕ್ಕಿರುತ್ತದೆ. ಫ್ರಿಡ್ಜ್‌ ಇಲ್ಲದಿದ್ದರೆ ಬೇಸಿಗೆಯಲ್ಲಿ ಈ ವಿಧಾನ ಟ್ರೈ ಮಾಡಬಹುದು.

ತಣ್ಣನೆಯ ಬಟ್ಟೆ ಪಾನೀಯ ಹಾಕಿದ ಬಾಟಲಿಗೆ ಸುತ್ತಿಡಿ

ತಣ್ಣನೆಯ ಬಟ್ಟೆ ಪಾನೀಯ ಹಾಕಿದ ಬಾಟಲಿಗೆ ಸುತ್ತಿಡಿ

ಇದೊಂದು ಪುರಾತನ ವಿಧಾನವಾಗಿದೆ. ಮಜ್ಜಿಗೆ, ಮೊಸರು ಇವುಗಳನ್ನು ತಣ್ಣಗೆ ಇಡಲು ಅದರ ಮಡಿಕೆಗೆ ತಣ್ಣನೆಯ ಬಟ್ಟೆ ಸುತ್ತಿ ಇಡಲಾಗುವುದು. ಕೆಲವರು ಮದ್ಯದ ಬಾಟಲಿ ತಣ್ಣನೆ ಇಡಲು ಕೂಡ ಈ ವಿಧಾನ ಬಳಸುತ್ತಾರೆ.

ಪಾನೀಯ ಬಾಟಲಿ ಸುತ್ತ ಬಟ್ಟೆ ಸುತ್ತಿಟ್ಟರೆ ನೀರು ಆವಿಯಾಗುವ ವಿಧಾನದಲ್ಲಿ ಮೊದಲಿಗೆ ಬಟ್ಟೆಯ ದ್ರವ ಹೀರಿಕೊಳ್ಳುತ್ತದೆ, ಇದರಿಂದ ಬಾಟಲಿ ಅಥಾ ಮಡಿಕೆ ತಣ್ಣಗೆ ಇರುತ್ತದೆ.

 ರಾತ್ರಿ ಹೊತ್ತು ಹೊರಗಡೆ ಇಡುವುದು

ರಾತ್ರಿ ಹೊತ್ತು ಹೊರಗಡೆ ಇಡುವುದು

ನೀವು ತಣ್ಣಗೆ ಇಡಬೇಕಾದ ವಸ್ತುನ್ನು ಹೊರಗಡೆ ಇಟ್ಟು ನಂತರ ಸೂರ್ಯ ಉದಯಿಸುವ ಮುನ್ನ ಒಳಗೆ ತಂದು ಅದನ್ನು ತಂದು ನೆನೆಸಿದ ಬೆಡ್‌ಶೀಟ್‌ನಿಂದ ಮುಚ್ಚಿಟ್ಟು ಬಿಸಿಲು ಬೀಳದ ಕಡೆ ಇಟ್ಟರೆ ತಣ್ಣಗೆ ಇರುತ್ತದೆ.

ಇನ್ನು ನೆಲಮಾಳಿಗೆ ಇದ್ದರೆ ಅಲ್ಲಿಟ್ಟರೂ ತಂಪಾಗಿ ಇರುತ್ತದೆ.

ವಾಶಿಂಗ್ ಮೆಷಿನ್

ವಾಶಿಂಗ್ ಮೆಷಿನ್

ಕೆಲವೊಮ್ಮೆ ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದರೆ ಆಗ ಪಾನೀಯ ತಂಪಾಗಿ ಇಡಲು ವಾಶಿಂಗ್ ಮೆಷಿನ್ ಬಸಬಹುದು. ವಾಶಿಂಗ್ ಮೆಷಿನ್ ಒಳಗಡೆ ಸ್ವಲ್ಪ ಮಂಜುಗಡ್ಡೆ ಹಾಕಿ ಅದರಲ್ಲಿ ಪಾನೀಯಗಳ ಬಾಟಲಿ ಇಟ್ಟು ಮೆಷಿನ್ ಮುಚ್ಚಳ ಹಾಕಿಟ್ಟರೆ ತಂಪಾಗಿಯೇ ಇರುತ್ತದೆ. ನಂತರ ಅವುಗಳನ್ನು ತೆಗೆದ ಬಳಿಕ ಒಮ್ಮೆ ಮೆಷಿನ್ ಚಾಲೂ ಮಾಡಿದರೆ ಐಸ್‌ ಎಲ್ಲಾ ಹೋಗುತ್ತೆ.

 ತಣ್ಣನೆಯ ಕಬ್ಬಿಣದ ಬಿಂದಿಗೆಯಲ್ಲಿ

ತಣ್ಣನೆಯ ಕಬ್ಬಿಣದ ಬಿಂದಿಗೆಯಲ್ಲಿ

ತಣ್ಣನೆಯ ಕಬ್ಬಿಣದ ಪೆಟ್ಟಿಗೆ ಅಥವಾ ಬಿಂದಿಗೆಯಲ್ಲಿ ಪಾನೀಯ ಇಟ್ಟು ರಾತ್ರಿ ಹೊತ್ತು ಹೊರಗಡೆ ಇಟ್ಟರೆ ಕೂಲ್ ಆಗಿರುತ್ತೆ. ಬಾಟಲಿ ಇಡುವಾಗ ಅವುಗಳ ಮಧ್ಯೆ ನ್ಯೂಸ್‌ ಪೇಪರ್‌ ಇಡಿ.

ಮಣ್ಣಲ್ಲಿ ಹುಡುಗಿ ಇಡುವುದು

ಮಣ್ಣಲ್ಲಿ ಹುಡುಗಿ ಇಡುವುದು

ಇದೊಂದು ಹಳೆಯ ವಿಧಾನವಾಗಿದೆ.

ಮದ್ಯದ ಬಾಟಲಿ, ಮತ್ತಿತರ ಪಾನೀಯ ತಣ್ಣಗೆ ಇಡಲು ಬಯಸಿದರೆ ಅದನ್ನು ಟವಲ್‌ನಿಂದ ಸುತ್ತಿ, ಮಣ್ಣಿನ ಅಡಿಯಲ್ಲಿ ಮುಚ್ಚಿಟ್ಟರೆ ಅವು ತಂಪಾಗಿ ಇರುತ್ತದೆ. ಬೇಕಾದಾಗ ತೆಗೆದು ಬಳಸಬಹುದು.

ಇನ್ನು ತಣ್ಣನೆಯ ಉಪ್ಪು ನೀರಿನಲ್ಲಿ ಐಸ್‌ಕ್ಯೂಬ್ಸ್ ಹಾಕಿಡುವುದು

ಇನ್ನು ತಣ್ಣನೆಯ ಉಪ್ಪು ನೀರಿನಲ್ಲಿ ಐಸ್‌ಕ್ಯೂಬ್ಸ್ ಹಾಕಿಡುವುದು

ಬೀದಿ ಬದಿಯ ವ್ಯಾಪಾರಿಗಳಿಗೆ ಈ ಐಡಿಯಾ ತುಂಬಾನೇ ವರ್ಕ್ ಆಗುತ್ತೆ. ತಣ್ಣನೆಯ ಉಪ್ಪು ನೀರಿಗೆ ದೊಡ್ಡ ಮಂಜುಗಡ್ಡೆ ಕೊಂಡು ಹಾಕಿಡಿ, ಅದರಲ್ಲಿ ಮಜ್ಜಿಗೆ, ಮೊಸರು ಪ್ಯಾಕೆಟ್ ಹಾಕಿಟ್ಟರೆ ತಂಪಾಗಿ ಇರುತ್ತದೆ.

English summary

How To Keep Drinks Cold Without Fridge In Kannada

Here are tips keep drinks cold without fridge, have a look,
X
Desktop Bottom Promotion